Brat Box Office Day 2: ಡಾರ್ಲಿಂಗ್ ಕೃಷ್ಣ ಸಿನಿಮಾ 'ಬ್ರ್ಯಾಟ್' ಬಾಕ್ಸಾಫೀಸ್ ಪರ್ಫಾಮೆನ್ಸ್ ಹೇಗಿದೆ?
ಸಿನಿಮಾರಂಗದಲ್ಲಿ ಕೆಲವು ಕಾಂಬಿನೇಷನ್‌ಗಳು ಸಖತ್ ಆಗಿ ವರ್ಕ್ ಆಗುತ್ತವೆ. ಒಂದು ಸಿನಿಮಾ ಗೆದ್ದರೆ, ಅದೇ ಜೋಡಿ ಮತ್ತೊಂದು ಸಿನಿಮಾಗೆ ಕೈ ಹಾಕೋದು ಕಾಮನ್. ಇಂತಹದ್ದೇ ಒಂದು ಪ್ರಯತ್ನಕ್ಕೆ ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಮುಂದಾಗಿದ್ದಾರೆ. 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾದ ಬಳಿಕ 'ಬ್ರ್ಯಾಟ್'ಗೆ ಕೈ ಹಾಕಿದ್ದರು. ಆ ಸಿನಿಮಾ ಈಗ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ.
ಎರಡು ದಿನಗಳ ಹಿಂದಷ್ಟೇ ತೆರೆಕಂಡಿರುವ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಸಕ್ಸಸ್ ಕೊಡುತ್ತಾ? ಅಂತ ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕುತ್ತಿದ್ದಾರೆ. ಫಸ್ಟ್ ಡೇ ಫಸ್ಟ್ 'ಬ್ರ್ಯಾಟ್' ನೋಡಿದ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ಬೆಟ್ಟಿಂಗ್ ಅಂತಹ ಸಾಮಾಜಿಕ ಸಮಸ್ಯೆಯನ್ನು ಕಾಮಿಡಿ ಹಾಗೂ ಎಮೋಷನ್ಸ್ ಮೂಲಕ ಶಶಾಂಕ್ ತೆರೆದಿಟ್ಟಿದ್ದಾರೆ. ಸಿನಿಮಾದ ಉದ್ದಕ್ಕೂ ನಗುವ ಪ್ರೇಕ್ಷಕರು ಕೊನೆಯಲ್ಲಿ ಭಾವುಕರಾಗಿ ಹೊರಬರುವಂತೆ ಮಾಡಿದ್ದಾರೆ.

'ಬ್ರ್ಯಾಟ್' ಕನ್ನಡ ಮತ್ತೊಂದು ನೀಟ್ ಸಿನಿಮಾ. ಸಿನಿಮಾ ಉತ್ತಮ ಪ್ರತಿಕ್ರಿಯೆ ಏನೋ ಸಿಕ್ಕಿದೆ. ಆದರೆ, ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಹೇಗಾಗುತ್ತಿದೆ. ಈ ಜೋಡಿ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಬಹುದಾ? ಕನ್ನಡ ರಾಜ್ಯೋತ್ಸವದಂದು ಈ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿವರೆಗೂ ಎಷ್ಟು ಕೋಟಿ ಕಲೆಕ್ಷನ್ ಆಗಿದೆ? ಸಿನಿಮಾದ ಭವಿಷ್ಯವೇನು? ತಿಳಿಯುವುದಕ್ಕೆ ಮುಂದೆ ಓದಿ.
ರಾಜ್ಯೋತ್ಸವದಂದು ಕನ್ನಡ ಸಿನಿಮಾ ಗಳಿಸಿದ್ದೆಷ್ಟು?
ಕನ್ನಡ ರಾಜ್ಯೋತ್ಸವ ಕನ್ನಡಿಗರ ಹಬ್ಬ. ಅಲ್ಲದೆ ವೀಕೆಂಡ್‌ನಲ್ಲಿ ಬಂದಿದ್ದರಿಂದ ಸಿನಿಪ್ರಿಯರು ಥಿಯೇಟರ್ ಕಡೆಗೆ ಹೆಜ್ಜೆ ಹಾಕಿದ್ದಾರೆ. ಮೊದಲ ದಿನ ಕೊಂಚ ನಿಧಾನಗತಿಯ ಕಲೆಕ್ಷನ್ ಕಂಡಿದ್ದ 'ಬ್ರ್ಯಾಟ್' ಎರಡನೇ ದಿನ ಚೇತರಿಕೆ ಕಂಡಿದೆ. ಸ್ಯಾಕ್ನಿಲ್ಕ್ ವರದಿ ಮಾಡಿರುವ ಪ್ರಕಾರ ಡಾರ್ಲಿಂಗ್ ಕೃಷ್ಣ ನಟನೆಯ ಸಿನಿಮಾ ಎರಡನೇ ದಿನ ಶೇ. 80ಕ್ಕಿಂತಲೂ ಹೆಚ್ಚು ಏರಿಕೆ ಕಂಡಿದೆ. ನಿನ್ನೆ (ನವೆಂಬರ್ 2) ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹72 ಲಕ್ಷ ಕಲೆಕ್ಷನ್ ಮಾಡಿದೆ.
Brat Movie Review: ದುಡ್ಡಿನ ಆಟದಲ್ಲಿ ಎಷ್ಟು ನಗುವಿದೆಯೋ.. ಅಷ್ಟೇ ಅಳುನೂ ಇದೆ
2 ದಿನಗಳಲ್ಲಿ ಕೋಟಿ ದಾಟಿತೇ?
'ಬ್ರ್ಯಾಟ್' ಸಿನಿಮಾಗೆ ಮೌತ್ ಪಬ್ಲಿಸಿಟಿಯ ಅಗತ್ಯವಿದೆ. ಮೊದಲೆರಡು ದಿನ ಸಿನಿಮಾ ನೋಡಿದವರು ಇಷ್ಟ ಪಟ್ಟಿದ್ದಾರೆ. ಇದು ಜನರಿಗೆ ತಲುಪುವುದಕ್ಕೆ ಇನ್ನಷ್ಟ ಸಮಯಬೇಕು. ದಿನಕ್ಕೆ ಕೋಟಿ ಲೆಕ್ಕದಲ್ಲಿ ಗಳಿಕೆ ಆದರೆ, ಒಂದೊಳ್ಳೆ ಕಲೆಕ್ಷನ್ ಆಗಬಹುದು. ನವೆಂಬರ್ ತಿಂಗಳಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರೋದ್ರಿಂದ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತದ ಕಲೆಕ್ಷನ್ ಮಾಡುವುದಕ್ಕೆ ಸುವರ್ಣಾವಕಾಶವಿದೆ. ಈ ಎರಡು ದಿನಗಳಲ್ಲಿ ಬ್ರ್ಯಾಟ್ ₹1.14 ಕೋಟಿ ಕಲೆಕ್ಷನ್ ಮಾಡಿದೆ.
2 ದಿನಗಳ ಕಲೆಕ್ಷನ್ ರಿಪೋರ್ಟ್
1ನೇ ದಿನ ₹42 ಲಕ್ಷ
2ನೇ ದಿನ ₹71 ಲಕ್ಷ
ಒಟ್ಟು ₹1.14 ಕೋಟಿ

ಸ್ಯಾಂಡಲ್‌ವುಡ್ ಲೆಕ್ಕಾಚಾರವೇನು?
ಸ್ಯಾಕ್ನಿಲ್ಕ್ ಪ್ರಕಾರ 'ಬ್ರ್ಯಾಟ್' ಸಿನಿಮಾದ ಎರಡು ದಿನಗಳ ಕಲೆಕ್ಷನ್ ₹1.14 ಕೋಟಿ ಆಗಿದೆ. ಆದರೆ, ಸ್ಯಾಂಡಲ್‌ವುಡ್ ಲೆಕ್ಕಾಚಾರ ಬೇರೆನೇ ಇದೆ. ವಿತರಕರ ವಲಯದಲ್ಲಿ ಹರಿದಾಡುತ್ತಿರುವ ಲೆಕ್ಕದ ಪ್ರಕಾರ, ಈ ಸಿನಿಮಾ ಎರಡು ದಿನಗಳಲ್ಲಿ ₹1.50 ಕೋಟಿಯಿಂದ ₹1.75 ಕೋಟಿ ಒಳಗೆ ಕಲೆಕ್ಷನ್ ಆಗಿದೆ. ಎರಡು ಲೆಕ್ಕಾಚಾರಗಳಲ್ಲಿ ಅಂತರವಿದೆ. ಅಷ್ಟಕ್ಕೂ ಕಲೆಕ್ಷನ್ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಅಂಕಿ ಅಂಶಗಳನ್ನು ರಿಲೀಸ್ ಮಾಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











