Brat Box Office Day 4: ಸೋಮವಾರದ ಪರೀಕ್ಷೆ ಗೆದ್ದಿತೇ 'ಬ್ರ್ಯಾಟ್'? 4ನೇ ದಿನದ ಕಲೆಕ್ಷನ್ ಎಷ್ಟು?

ಸೆನ್ಸಿಬಲ್ ಡೈರೆಕ್ಟರ್ ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿದ ಸಿನಿಮಾ 'ಬ್ರ್ಯಾಟ್' ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಲವ್‌ಸ್ಟೋರಿಗಳನ್ನು ಭಾವನಾತ್ಮಕವಾಗಿ ಕಟ್ಟಿಕೊಡುತ್ತಿದ್ದ ಶಶಾಂಕ್ ಈ ಬಾರಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. 'ಬ್ರ್ಯಾಟ್' ನಿರ್ದೇಶಕ ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಇಬ್ಬರಿಗೂ ಹೊಸ ಪ್ರಯತ್ನವೇ. ಹೀಗಾಗಿ ಸಿನಿಮಾ ಮಂದಿಗಿಂತ ಕುತೂಹಲದಿಂದ ನೋಡುತ್ತಿದ್ದವರು ಇವರಿಬ್ಬರೇ.

ಫಸ್ಟ್ ಡೇ ಫಸ್ಟ್ ಶೋ 'ಬ್ರ್ಯಾಟ್' ಸಿನಿಮಾಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಸಿನಿಮಾ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಹಿಟ್ ಅಂತ ಸಾಬೀತಾಗಬಹುದೆಂದು ನಿರ್ಧರಿಸಲಾಗಿತ್ತು. ಕ್ರಿಕೆಟ್ ಬೆಟ್ಟಿಂಗ್ ಹಿನ್ನೆಲೆಯನ್ನು ಇಟ್ಟುಕೊಂಡು ಶಶಾಂಕ್ ಕಾಮಿಡಿ ಕಮ್ ಎಮೋಷನಲ್ ಸ್ಟೋರಿಯನ್ನು ಹೆಣೆದಿದ್ದರು. ಇದು ಇಲ್ಲಿವರೆಗೂ ಸಿನಿಮಾ ನೋಡಿದವರಿಗೆ ಇಷ್ಟ ಆಗಿದೆ. ಇಲ್ಲಿವರೆಗೂ ಆಗಿರುವ ಕಲೆಕ್ಷನ್ ಆವರೇಜ್ ಎನಿಸಿದ್ದು, ಇನ್ನೂ ಹೆಚ್ಚು ಗಳಿಸುವ ಸಾಧ್ಯತೆಯಿದೆ.

Darling Krishna director Shashank Kannada movie Brat Day 4 Box Office Collection Report

ಮೌತ್ ಪಬ್ಲಿಸಿಟಿ ಕೆಲಸ ಮಾಡಿದರೆ, 'ಬ್ರ್ಯಾಟ್' ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಥಿಯೇಟರ್‌ಗೆ ಬರೋದು ಗ್ಯಾರಂಟಿ. ಇನ್ನು ಮೊದಲ ಸೋಮವಾರ ಪ್ರತಿಯೊಂದು ಸಿನಿಮಾಗೂ ಅಗ್ನಿ ಪರೀಕ್ಷೆ ಇದ್ದಂತೆ. ಈ ಪರೀಕ್ಷೆಯಲ್ಲಿ ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಪಾಸ್ ಆದರೇ. ನಾಲ್ಕನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿವರೆಗೂ ಎಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

ಸೋಮವಾರದ ಪರೀಕ್ಷೆ ಗೆದ್ದಿತೇ 'ಬ್ರ್ಯಾಟ್'?

ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ ಸಿನಿಮಾದ ಕಲೆಕ್ಷನ್ ವೀಕೆಂಡ್‌ಗೆ ಹೋಲಿಸಿದರೆ, ಮೊದಲ ಸೋಮವಾರ ಡ್ರಾಪ್ ಆಗಿದೆ. ಈ ಇಳಿಕೆ ನಿರೀಕ್ಷೆ ಮಾಡಲಾಗಿತ್ತು. ಸ್ಯಾಕ್ನಿಲ್ಕ್ ವರದಿ ಪ್ರಕಾರ 'ಬ್ರ್ಯಾಟ್' ಮೊದಲ ಸೋಮವಾರ 24 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಕೇವಲ ಕರ್ನಾಟಕದಲ್ಲಷ್ಟೇ ರಿಲೀಸ್ ಆಗಿದ್ದ ಈ ಸಿನಿಮಾದ (Gross) ಕಲೆಕ್ಷನ್ ₹2 ಕೋಟಿ ದಾಟಿದೆ ಎಂದು ವರದಿ ಮಾಡಿದೆ.

Darling Krishna director Shashank Kannada movie Brat Day 4 Box Office Collection Report

4 ದಿನಗಳ 'ಬ್ರ್ಯಾಟ್' ಕಲೆಕ್ಷನ್ ಎಷ್ಟು?

'ಬ್ರ್ಯಾಟ್' ನೋಡಿದವರಿಗೆಲ್ಲ ಸಿನಿಮಾ ಇಷ್ಟ ಆಗಿದೆ. ಆದರೆ, ಥಿಯೇಟರ್‌ಗೆ ಜನರನ್ನು ಇನ್ನೂ ಸೆಳೆಯಬೇಕಿದೆ. ಪ್ರೇಕ್ಷಕರು ವೀಕೆಂಡ್‌ನಲ್ಲಿ ಮಾತ್ರ ಸಿನಿಮಾ ನೋಡುವಂತಾದರೆ, ದೊಡ್ಡ ಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡುವುದು ಅಸಾಧ್ಯ. ಹೀಗಾಗಿ ಈ ವಾರ ತುಂಬಾನೇ ಮುಖ್ಯ. ಹೀಗಾಗಿ ಕಳೆದ ನಾಲ್ಕು ದಿನಗಳಲ್ಲಿ ಈ ಸಿನಿಮಾ 2 ಕೋಟಿಯ ಗಡಿ ದಾಟಿದ್ದು, ಪ್ರತಿ ದಿನ ಗಳಿಸಿದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

4 ದಿನಗಳ ಕಲೆಕ್ಷನ್ ರಿಪೋರ್ಟ್

1ನೇ ದಿನ ₹42 ಲಕ್ಷ
2ನೇ ದಿನ ₹71 ಲಕ್ಷ
3ನೇ ದಿನ ₹51 ಲಕ್ಷ
4ನೇ ದಿನ ₹24 ಲಕ್ಷ
ಒಟ್ಟು ₹1.89 ಕೋಟಿ (Net)

ವಾರಾಂತ್ಯಕ್ಕೆ ಎಷ್ಟಾಗಬಹುದು ಕಲೆಕ್ಷನ್?

ಈ ವಾರದ ಅಂತ್ಯಕ್ಕೆ 'ಬ್ರ್ಯಾಟ್' ಕಲೆಕ್ಷನ್ ಕಮ್ಮಿ ಅಂದರೂ ₹5 ಕೋಟಿ ಆದರೆ ಉತ್ತಮವೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ಎರಡು ವಾರಗಳ ಅಂತರದಲ್ಲಿ ₹10 ಕೋಟಿ ಕ್ಲಬ್ ಸೇರಿದರೆ, ಸ್ಯಾಂಡಲ್‌ವುಡ್‌ನ ಮತ್ತೊಂದು ಹಿಟ್ ಸಿನಿಮಾ ಆಗುವುದರಲ್ಲಿ ಅನುಮಾನವಿಲ್ಲ. ಡಾರ್ಲಿಂಗ್ ಕೃಷ್ಣ ಹಾಗೂ ಅಚ್ಯುತ್ ಕುಮಾರ್ ಕಾಂಬಿನೇಷನ್ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಮೌತ್‌ ಪಬ್ಲಿಸಿಟಿಯಿಂದ ಪ್ರೇಕ್ಷಕರು ಥಿಯೇಟರ್‌ಗೆ ಬರಬಹುದೆಂಬ ನಿರೀಕ್ಷೆಯಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Darling Krishna director Shashank Kannada movie Brat Day 4 Box Office Collection Report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X