Love Mocktail 3 Box Office Day 7:7ನೇ ದಿನ ಲವ್ ಮಾಕ್ಟೇಲ್ ಕಲೆಕ್ಷನ್ ಎಷ್ಟು? ₹10 ಕೋಟ ಕ್ಲಬ್ ಸೇರಿತೇ?
ಕಳೆದ ಕೆಲವು ದಿನಗಳಿಂದ 'ಲವ್ ಮಾಕ್ಟೇಲ್ 3' ಸಿನಿಮಾ ಬಗ್ಗೆನೇ ಹೆಚ್ಚು ಚರ್ಚೆಯಾಗುತ್ತಿದೆ. ಒಂದ್ಕಡೆ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳು ಕೇಳುವುದಕ್ಕೆ ಸಿಕ್ಕರೆ, ಇನ್ನೊಂದು ಕಡೆ ವಿವಾದಗಳಿಂದ ಸದ್ದು ಮಾಡುತ್ತಿದೆ. ಕಳೆದೆರಡು ದಿನಗಳಿಂದ ಡಾರ್ಲಿಂಗ್ ಕೃಷ್ಣ ಈ ಸಿನಿಮಾ ಸೆಕೆಂಡ್ ಹಾಫ್ ಕಥೆ ಕದ್ದಿದ್ದಾರೆ ಅನ್ನೋ ಆರೋಪ ಮಾಡಲಾಗುತ್ತಿದೆ. ಅದಕ್ಕೆ ಉತ್ತರ-ಪ್ರತ್ಯುತ್ತರ ಕೊಡುವ ಕೆಲಸ ಇನ್ನೊಂದು ಕಡೆ ನಡೆಯುತ್ತಲೇ ಇದೆ.
ವಿವಾದವನ್ನು ಪಕ್ಕಕ್ಕಿಟ್ಟು 'ಲವ್ ಮಾಕ್ಟೇಲ್ 3' ನೋಡುವುದಾರೇ, ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆಗಿದೆ. ಯುಗಾದಿ ಹಬ್ಬಕ್ಕೆ ಗ್ರ್ಯಾಂಡ್ ಆಗಿ ಕರ್ನಾಟಕದಾದ್ಯಂತ ಸಿನಿಮಾ ರಿಲೀಸ್ ಆಗಿತ್ತು. ಸುಮಾರು 430ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಲವ್ ಮಾಕ್ಟೇಲ್ 3' ಸಿನಿಮಾ ಪ್ರದರ್ಶನ ಕಾಣುತ್ತಿದೆ. ನಿರ್ದೇಶಕರಾಗಿ ಡಾರ್ಲಿಂಗ್ ಕೃಷ್ಣ ಮತ್ತೊಮ್ಮೆ 'ಲವ್ ಮಾಕ್ಟೇಲ್ 3' ಗೆದ್ದಿದ್ದಾರೆ.

ಈ ಸಿನಿಮಾ ಮೊದಲ ನಾಲ್ಕು ದಿನ ಕೋಟಿ ಮೇಲೆ ಕಲೆಕ್ಷನ್ ಆಗಿತ್ತು. ಆದರೆ, ವೀಕ್‌ಡೇಸ್‌ನಲ್ಲಿ ಕೊಂಚ ಮಟ್ಟಿಗೆ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ಆದರೂ, 'ಧುರಂಧರ್ 2' ಸಿನಿಮಾದ ಅಬ್ಬರ ನಡುವೆ ಇಷ್ಟು ಕಲೆಕ್ಷನ್ ಆಗುತ್ತಿರೋದು ಉತ್ತಮ ಎಂದೇ ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ಹಾಗಿದ್ದರೆ, 'ಲವ್ ಮಾಕ್ಟೇಲ್ 3' 7ನೇ ದಿನ ಗಳಿಸಿದ್ದೆಷ್ಟು? ಒಂದು ವಾರದಲ್ಲಿ ಕಲೆಕ್ಷನ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಲವ್ ಮಾಕ್ಟೇಲ್ 3' 7ನೇ ದಿನದ ಕಲೆಕ್ಷನ್
ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ 'ಲವ್ ಮಾಕ್ಟೇಲ್ 3' ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಕನ್ನಡ ಸಿನಿಮಾಗಳು ರಿಲೀಸ್ ಆಗದೇ ಇರುವ ಸಮಯದಲ್ಲಿಯೇ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಸಂಜೀವಿನಿಯಂತೆ ಸಿಕ್ಕಿದೆ. ಬಾಕ್ಸಾಫೀಸ್ ಅಂಕಿ-ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್.ಕಾಮ್ 'ಲವ್ ಮಾಕ್ಟೇಲ್ 3' ಸಿನಿಮಾ 7ನೇ ದಿನದ ಕಲೆಕ್ಷನ್ ಅನ್ನು ರಿವೀಲ್ ಮಾಡಿದೆ. ಇದರ ಪ್ರಕಾರ, 7ನೇ ದಿನ 64 ಲಕ್ಷ ರೂಪಾಯಿ (Gross) ಕಲೆಕ್ಷನ್ ಮಾಡಿದೆ.
7 ದಿನಗಳಲ್ಲಿ ₹10 ಕೋಟಿ ಆಯ್ತೇ?
'ಲವ್ ಮಾಕ್ಟೇಲ್'ಗಿಂತ 'ಲವ್ ಮಾಕ್ಟೇಲ್ 2' ಭರ್ಜರಿ ಕಲೆಕ್ಷನ್ ಮಾಡಿತ್ತು. ಸುಮಾರು ಮೂರು ಪಟ್ಟು ಕಲೆಕ್ಷನ್ ಮಾಡಿತ್ತು. ಹಾಗೇ 'ಲವ್ ಮಾಕ್ಟೇಲ್ 3' ಕೂಡ ಕಮ್ಮಿ ಅಂದರೂ 25 ರಿಂದ 30 ಕೋಟಿ ಕಲೆಕ್ಷನ್ ಮಾಡಬೇಕು ಅನ್ನೋ ನಿರೀಕ್ಷೆಯಿದೆ. ಸದ್ಯ 7 ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ₹10 ಕೋಟಿಯ ಸಮೀಪದಲ್ಲಿದೆ. ಕರ್ನಾಟಕದ ವಿತರಕರ ವಲಯದಿಂದ ಸಿಕ್ಕಿರುವ ಲೆಕ್ಕದ ಪ್ರಕಾರ ಈ ಸಿನಿಮಾ ₹9 ರಿಂದ ₹9.5 ಕೋಟಿ ಕಲೆಕ್ಷನ್ ಆಗಿದೆ. ಆದರೆ, ಸ್ಯಾಕ್ನಿಲ್ಕ್.ಕಾಮ್ ಲೆಕ್ಕ ಬೇರೆನೇ ಇದೆ.
7 ದಿನಗಳ 'ಲವ್ ಮಾಕ್ಟೇಲ್ 3' ಕಲೆಕ್ಷನ್
ಮೊದಲ ದಿನ ₹1.40 ಕೋಟಿ
2ನೇ ದಿನ ₹1.18 ಕೋಟಿ
3ನೇ ದಿನ ₹1.65 ಕೋಟಿ
4ನೇ ದಿನ ₹1.65 ಕೋಟಿ
5ನೇ ದಿನ ₹0.75 ಕೋಟಿ
6ನೇ ದಿನ ₹0.69 ಕೋಟಿ
7ನೇ ದಿನ ₹0.64 ಕೋಟಿ
ಒಟ್ಟು ₹6.86 ಕೋಟಿ (Gross)

2ನೇ ವೀಕೆಂಡ್ ಮೇಲೆ ನೀರಿಕ್ಷೆ
'ಲವ್ ಮಾಕ್ಟೇಲ್ 3' ಸಿನಿಮಾ ವೀಕ್‌ಡೇಸ್‌ನಲ್ಲಿ ಕೊಂಚ ಮಟ್ಟಿಗೆ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ಆದರೆ, ವೀಕೆಂಡ್‌ನಲ್ಲಿ ಮತ್ತೆ ಒಳ್ಳೆಯ ಕಲೆಕ್ಷನ್ ಆಗುವ ನಿರೀಕ್ಷೆಯಿದೆ. ಇನ್ನೇನು 2ನೇ ವೀಕೆಂಡ್‌ಗೆ ಎಂಟ್ರಿ ಕೊಡುತ್ತಿರುವ ಸಿನಿಮಾ, ಮುಂದಿನ ಮೂರು ದಿನಗಳಲ್ಲಿ ಕಲೆಕ್ಷನ್ ಕೋಟಿ ದಾಟಬಹುದೆಂದು ನಿರೀಕ್ಷೆ ಮಾಡಲಾಗಿದೆ. ಹಾಗೇನಾದರೂ ಆದರೆ, ಸಿನಿಮಾದ ಕಲೆಕ್ಷನ್ ₹10 ಕೋಟಿಯನ್ನು ದಾಟಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











