Love Mocktail 3 Box Office Day 2:2ನೇ ದಿನ 'ಲವ್ ಮಾಕ್ಟೇಲ್ 3' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಗೆದ್ದರೇ ಡಾರ್ಲಿಂಗ್ ಕೃಷ್ಣ?

ಯುಗಾದಿ ಹಬ್ಬಕ್ಕೆ ಅನಿರೀಕ್ಷಿತವಾಗಿ ತೆರೆಕಂಡವ ಸಿನಿಮಾ 'ಲವ್ ಮಾಕ್ಟೇಲ್ 3'. ಯಶ್ ಸಿನಿಮಾ 'ಟಾಕ್ಸಿಕ್' ಮಾರ್ಚ್ 19ರಂದು ರಿಲೀಸ್ ಆಗಬೇಕಿತ್ತು. ಆದರೆ, ರಿಲೀಸ್ ಪೋಸ್ಟ್‌ಪೋನ್ ಆಗಿದ್ದರಿಂದ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಲವ್ ಮಾಕ್ಟೇಲ್ 3' ನಿರೀಕ್ಷೆಗಿಂತ ಮೊದಲೇ ರಿಲೀಸ್ ಮಾಡಲಾಗಿದೆ. ಕಳೆದ ಎರಡು ಸೀಕ್ವೆಲ್‌ಗಳು ಹಿಟ್ ಆಗಿದ್ದರಿಂದ 3ನೇ ಸೀಕ್ವೆಲ್ ಬಗ್ಗೆನೂ ನಿರೀಕ್ಷೆ ದುಪ್ಪಟ್ಟಿತ್ತು.

'ಲವ್ ಮಾಕ್ಟೇಲ್ 3'ಗೆ ಫಸ್ಟ್ ಡೇ ಫಸ್ಟ್ ಶೋಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ಭಾರತದಾದ್ಯಂತ ಭಾರೀ ಕ್ರೇಜ್ ಹುಟ್ಟಾಕಿದ್ದ 'ಧುರಂಧರ್ 2' ಸಿನಿಮಾ ಮುಂದೆ ರಿಲೀಸ್‌ಗೆ ಮುಂದಾಗಿತ್ತು. ಹೀಗಾಗಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಯಾವ ರೀತಿ ಸದ್ದು ಮಾಡುತ್ತೋ? 'ಧುರಂಧರ್ 2' ಮುಂದೆ ಗೆದ್ದು ಬೀಗುತ್ತಾ? ಅನ್ನೋ ಪ್ರಶ್ನೆ ಎದುರಾಗಿತ್ತು.

Darling Krishna movie Love Mocktail 3 box office impressive start here is day 2 collection report

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಇಬ್ಬರೂ 'ಧುರಂಧರ್ 2' ಎದುರು ರಿಲೀಸ್‌ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಮೊದಲ ಎರಡು ದಿನ ಸಿನಿಮಾದ ಕಲೆಕ್ಷನ್ ಉತ್ತಮವಾಗಿದೆ. ದಿನದಿಂದ ದಿನಕ್ಕೆ 'ಲವ್ ಮಾಕ್ಟೇಲ್ 3' ಸಿನಿಮಾ ಕ್ರೇಜ್ ಹೆಚ್ಚಾಗುತ್ತಿದೆ. ಈ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಿದ್ದರೆ, 'ಲವ್ ಮಾಕ್ಟೇಲ್ 3' ಸಿನಿಮಾ 2ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಇಲ್ಲಿವರೆಗೆ ಎಷ್ಟು ಕಲೆಕ್ಷನ್ ಆಗಿದೆ? ಸಿನಿಮಾದ ಮುಂದಿನ ಭವಿಷ್ಯವೇನು? ತಿಳಿಯುವುದಕ್ಕೆ ಮುಂದೆ ಓದಿ.

'ಲವ್ ಮಾಕ್ಟೇಲ್ 3' 2ನೇ ದಿನ ಗಳಿಸಿದ್ದೆಷ್ಟು?

ಡಾರ್ಲಿಂಗ್ ಕೃಷ್ಣ ಮತ್ತೆ ನಿರ್ದೇಶನದಲ್ಲಿ ಗೆದ್ದಿದ್ದಾರೆ. ಕೇವಲ ನಟನೆಯಲ್ಲಿ ಅಷ್ಟೇ ಅಲ್ಲದೇ, ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನದಲ್ಲೂ ಮಿಂಚಿದ್ದಾರೆ. ಮೊದಲ ಎರಡು ಸೀಕ್ವೆಲ್‌ಗೆ ಸಿಕ್ಕಂತೆ 'ಲವ್ ಮಾಕ್ಟೇಲ್ 3' ಒಳ್ಳೆಯ ಓಪನಿಂಗ್ ಸಿಕ್ಕಿದೆ. ಸಿನಿಮಾಗಳ ಬಾಕ್ಸಾಫೀಸ್ ಲೆಕ್ಕಾಚಾರ ಕೊಡುವ ಸ್ಯಾಕ್ನಿಲ್ಕ್ 'ಲವ್ ಮಾಕ್ಟೇಲ್ 3'ಯ 2ನೇ ದಿನ ಕಲೆಕ್ಷನ್ ರಿಪೋರ್ಟ್ ಕೊಟ್ಟಿದೆ. ಇದರ ಪ್ರಕಾರ, 2ನೇ ದಿನ ಈ ಸಿನಿಮಾ 1.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

Also Read
Love Mocktail 3 Day 1 Box office: 'ಲವ್‌ ಮಾಕ್ಟೇಲ್ 3' ರೆಸ್ಪಾನ್ಸ್ ಹೇಗಿದೆ? ಮೊದಲ ದಿನದ ಕಲೆಕ್ಷನ್ ಎಷ್ಟು?
Love Mocktail 3 Day 1 Box office: 'ಲವ್‌ ಮಾಕ್ಟೇಲ್ 3' ರೆಸ್ಪಾನ್ಸ್ ಹೇಗಿದೆ? ಮೊದಲ ದಿನದ ಕಲೆಕ್ಷನ್ ಎಷ್ಟು?

ವಿತರಕರ ಲೆಕ್ಕಾಚಾರವೇನು?

ಕರ್ನಾಟಕದ ವಿತರಕರು ಹಾಕಿರುವ ಲೆಕ್ಕದಲ್ಲಿ ಸ್ವಲ್ಪ ವ್ಯತಾಸವಿದೆ. 2ನೇ ದಿನ ಸುಮಾರು 407 ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಯುಗಾದಿ ಹಬ್ಬದ ಮಾರನೇ ದಿನ ವರ್ಕಿಂಗ್ ಡೇ ಆಗಿದ್ದರಿಂದ ಸಿನಿಮಾದ ಕಲೆಕ್ಷನ್ ಸ್ವಲ್ಪ ಇಳಿಕೆ ಕಂಡಿದೆ. ಆದರೂ, 1.50 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ಕನ್ನಡ ಸಿನಿಮಾ ಮಟ್ಟಿಗೆ ಒಳ್ಳೆಯ ಕಲೆಕ್ಷನ್ ಎಂದೇ ಹೇಳಲಾಗುತ್ತಿದೆ.

'ಲವ್ ಮಾಕ್ಟೇಲ್ 3' 2 ದಿನಗಳ ಕಲೆಕ್ಷನ್ (ವಿತರಕರ ಲೆಕ್ಕ)

ಮೊದಲ ದಿನ ₹2 ಕೋಟಿ (ಅಂದಾಜು)
2ನೇ ದಿನ ₹1.5 ಕೋಟಿ (ಅಂದಾಜು)
ಒಟ್ಟು ₹3.5 ಕೋಟಿ (Net)

Darling Krishna movie Love Mocktail 3 box office impressive start here is day 2 collection report


ಆಕ್ಯೂಪೆನ್ಸಿ ಹೇಗಿದೆ?

'ಲವ್ ಮಾಕ್ಟೇಲ್ 3' ಮೊದಲ ಎರಡು ದಿನಗಳಿಗಿಂತ 3ನೇ ದಿನ ಆಕ್ಯೂಪೆನ್ಸಿ ಜೋರಾಗಿದೆ. ಬಹುತೇಕ ರಿಲೀಸ್ ಆದ ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಸಿನಿಮಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನ 314 ಶೋಗಳು, ಮೈಸೂರಿನಲ್ಲಿ 41 ಶೋಗಳು ಹಾಗೂ ತುಮಕೂರಿನಲ್ಲಿ 16 ಶೋಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Darling Krishna movie Love Mocktail 3 box office impressive start here is day 2 collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X