Love Mocktail 3 Box Office Day 3:3ನೇ ದಿನ 'ಧುರಂಧರ್ 2', 'ಉಸ್ತಾದ್' ಎದುರು ಭರ್ಜರಿ ಗಳಿಕೆ ಕಂಡ 'ಲವ್ ಮಾಕ್ಟೇಲ್ 3'

ಯುಗಾದಿ ಹಬ್ಬಕ್ಕೆ ಎರಡು ಬಿಗ್ ಸಿನಿಮಾಗಳು ರಿಲೀಸ್ ಆಗಿದ್ದವು. ಒಂದು ಬಹು ನಿರೀಕ್ಷೆಯ 'ಧುರಂಧರ್ 2'. ಇನ್ನೊಂದು ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್'. ಈ ಎರಡೂ ಸಿನಿಮಾಗಳು ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದವು. ಈ ಎರಡು ಸಿನಿಮಾಗಳ ಜೊತೆ ಮತ್ತೊಂದು ಸಿನಿಮಾನೂ ರಿಲೀಸ್ ಆಗಿತ್ತು. ಅದು ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ 'ಲವ್ ಮಾಕ್ಟೇಲ್ 3'.

'ಧುರಂಧರ್ 2' ಹಾಗೂ 'ಉಸ್ತಾದ್ ಭಗತ್ ಸಿಂಗ್' ಈ ಎರಡು ಸಿನಿಮಾಗಳ ಮಧ್ಯೆ 'ಲವ್ ಮಾಕ್ಟೇಲ್ 3' ಕಳೆದು ಹೋಗುತ್ತೆ ಅಂತ ಕೆಲವರು ಭವಿಷ್ಯ ನುಡಿದಿದ್ದರು. ಆದರೆ, ಡಾರ್ಲಿಂಗ್ ಕೃಷ್ಣ ಈ ಎರಡು ಸಿನಿಮಾಗಳ ಮಧ್ಯೆನೇ 'ಲವ್ ಮಾಕ್ಟೇಲ್ 3' ರಿಲೀಸ್‌ಗೆ ಮುಂದಾಗಿದ್ದರು. ಈ ಅಪ್ಪಟ ಕನ್ನಡ ಸಿನಿಮಾವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ.

Darling Krishna movie Love Mocktail 3 Day 3 box office collection witnessed huge growth

ಮೊದಲ ದಿನವೇ ಸಿನಿಮಾ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಅದರಂತೆ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಉತ್ತಮವಾಗಿಯೇ ಆಗುತ್ತಿದೆ. ಮೊದಲ ದಿನದಿಂದ ಮೂರನೇ ದಿನದವರೆಗೂ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ಏರಿಕೆಯಾಗುತ್ತಲೇ ಇದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಮೂರನೇ 'ಲವ್ ಮಾಕ್ಟೇಲ್' ಸಿನಿಮಾದ ಕಲೆಕ್ಷನ್ ಗಣನೀಯವಾಗಿ ಏರಿಕೆ ಕಂಡಿದೆ. ಹಾಗಿದ್ದರೆ, 3ನೇ ದಿನ 'ಲವ್ ಮಾಕ್ಟೇಲ್ 3' ಗಳಿಸಿದ್ದೆಷ್ಟು? ಇಲ್ಲಿವರೆಗೂ ಎಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

3ನೇ ದಿನ 'ಲವ್ ಮಾಕ್ಟೇಲ್ 3' ಕಲೆಕ್ಷನ್

ಡಾರ್ಲಿಂಗ್ ಕೃಷ್ಣ ನಿರ್ದೇಶನಕ್ಕೆ ಮತ್ತೊಮ್ಮೆ ಕನ್ನಡಿಗರಿಂದ ಬಹುಪರಾಕ್ ಸಿಕ್ಕಿದೆ. 3ನೇ ದಿನ 'ಲವ್ ಮಾಕ್ಟೇಲ್ 3'ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನ ಬಹುತೇಕ ಚಿತ್ರಮಂದಿಗಳು ಶೇ.90ರಷ್ಟು ಫುಲ್ ಆಗಿದ್ದವು. ಬಾಕ್ಸಾಫೀಸ್‌ ಅಂಕಿ-ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ 'ಲವ್ ಮಾಕ್ಟೇಲ್ 3' ಮೂರನೇ ದಿನ ಕಲೆಕ್ಷನ್ ಅನ್ನು ರಿವೀಲ್ ಮಾಡಿದೆ. ಇದರ ಪ್ರಕಾರ ಮೂರನೇ ದಿನ ₹2 ಕೋಟಿಗೂ ಅಧಿಕ ಕಲೆಕ್ಷನ್ (Gross) ಆಗಿದೆ. ₹1.81 ಕೋಟಿ ಕಲೆಕ್ಷನ್ (Net) ಆಗಿದೆ ಎಂದು ಹೇಳಿದೆ.

Also Read
Love Mocktail 3 Box Office Day 2:2ನೇ ದಿನ 'ಲವ್ ಮಾಕ್ಟೇಲ್ 3' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಗೆದ್ದರೇ ಡಾರ್ಲಿಂಗ್ ಕೃಷ್ಣ?
Love Mocktail 3 Box Office Day 2:2ನೇ ದಿನ 'ಲವ್ ಮಾಕ್ಟೇಲ್ 3' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಗೆದ್ದರೇ ಡಾರ್ಲಿಂಗ್ ಕೃಷ್ಣ?

ಕರ್ನಾಟಕದ ವಿತರಕರ ವಲಯದ ಲೆಕ್ಕವೇನು?

ಇನ್ನು ಕರ್ನಾಟಕದ ವಿತರಕರ ವಲಯದ ಲೆಕ್ಕಾಚಾರಗಳು ಕೊಂಚ ಮಟ್ಟಿಗೆ ವಿಭಿನ್ನವಾಗಿದೆ. ಸುಮಾರು 431 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡಿದ್ದ 'ಲವ್ ಮಾಕ್ಟೇಲ್ 3' ಸಿನಿಮಾ ನಿನ್ನೆ (ಮಾರ್ಚ್ 22) ಒಳ್ಳೆಯ ಕಲೆಕ್ಷನ್ ಮಾಡಿದೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವೆಡೆ ಒಳ್ಳೆಯ ಕಲೆಕ್ಷನ್ ಮಾಡಿದೆ. ಕರ್ನಾಟಕದ ವಿತರಕರ ಪ್ರಕಾರ ಈ ಸಿನಿಮಾ ಬರೋಬ್ಬರಿ 2.50 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.

Darling Krishna movie Love Mocktail 3 Day 3 box office collection witnessed huge growth

3 ದಿನಗಳ ಒಟ್ಟು ಕಲೆಕ್ಷನ್

'ಲವ್‌ ಮಾಕ್ಟೇಲ್ 3' ಮೂರು ದಿನಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಮೊದಲ ದಿನದಿಂದ ಮೂರನೇ ದಿನದವರೆಗೂ ಕಲೆಕ್ಷನ್ ಸಖತ್ ಆಗಿಯೇ ಇದೆ. ಕರ್ನಾಟಕದ ವಿತರಕರ ಪ್ರಕಾರ ಮೊದಲ ಮೂರು ದಿನಗಳ ಕಲೆಕ್ಷನ್ 6 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

'ಲವ್ ಮಾಕ್ಟೇಲ್ 3' 2 ದಿನಗಳ ಕಲೆಕ್ಷನ್ ( ವಿತರಕರ ವಲಯದ ಲೆಕ್ಕ)

ಮೊದಲ ದಿನ ₹2 ಕೋಟಿ (ಅಂದಾಜು)
2ನೇ ದಿನ ₹1.5 ಕೋಟಿ (ಅಂದಾಜು)
3ನೇ ದಿನ ₹2.5 ಕೋಟಿ (ಅಂದಾಜು)
ಒಟ್ಟು ₹6 ಕೋಟಿ (Net)

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Darling Krishna movie Love Mocktail 3 Day 3 box office collection witnessed huge growth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X