Love Mocktail 3 Box Office Day 4:4ನೇ ದಿನವೂ ಕಲೆಕ್ಷನ್ ಸೂಪರ್..'ಧುರಂಧರ್ 2' ಮುಂದೆ ಗೆದ್ದು ಬಿಡ್ತು 'ಲವ್ ಮಾಕ್ಟೇಲ್ 3'
ಕನ್ನಡ ಸಿನಿಮಾ 'ಲವ್ ಮಾಕ್ಟೇಲ್ 3'ಗೆ ಯುಗಾದಿ ಹಬ್ಬ ಲಕ್ಕಿ ಅಂತ ಸಾಬೀತಾಗಿದೆ. ರಿಲೀಸ್ ಆದ ದಿನದಿಂದ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. ರಣ್‌ವೀರ್ ಸಿಂಗ್ ನಟಿಸಿದ 'ಧುರಂಧರ್ 2' ಅಬ್ಬರದ ನಡುವೆಯೂ ಕನ್ನಡಿಗರು ಕನ್ನಡ ಸಿನಿಮಾವನ್ನು ಕೈ ಬಿಟ್ಟಿಲ್ಲ. ಮೊದಲ ದಿನದಿಂದ ಇಲ್ಲಿವರೆಗೂ ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಚೆನ್ನಾಗಿದೆ.
ಡಾರ್ಲಿಂಗ್ ಕೃಷ್ಣ ಮತ್ತೆ ನಿರ್ದೇಶನದಲ್ಲಿ ಗೆದ್ದಿದ್ದಾರೆ. ಕನ್ನಡಿಗರಿಗೆ ಬೇಕಾಗಿರೋ ಒಂದು ನೀಟ್ ಸಿನಿಮಾ ಮಾಡಿದ್ದಾರೆ. ಕಾಮಿಡಿ, ಸೆಂಟಿಮೆಂಟ್ ಎರಡನ್ನೂ ಕಥೆಯಲ್ಲಿ ತಂದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಈ ಸಿನಿಮಾ ನೋಡುವುದಕ್ಕೆ ಥಿಯೇಟರ್ ನುಗ್ಗಿತ್ತಿರೋದು 'ಲವ್ ಮಾಕ್ಟೇಲ್ 3' ಪಾಸಿಟಿವ್ ಆಗಿದೆ.

ಯುಗಾದಿ ಹಬ್ಬದ ಸಮಯದಲ್ಲಿ 'ಲವ್ ಮಾಕ್ಟೇಲ್ 3' ರಿಲೀಸ್ ಆಗಿದ್ದು ಡಾರ್ಲಿಂಗ್ ಕೃಷ್ಣ ಮತ್ತವರ ತಂಡಕ್ಕೆ ಲಾಭದಾಯಕವಾಗಿದೆ. ಸದ್ಯ 'ಧುರಂಧರ್ 2' ಅಬ್ಬರ, ಪರೀಕ್ಷೆ ಸಮಯದ ಹೊರತಾಗಿಯೂ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಅದರಲ್ಲೂ ವೀಕೆಂಡ್‌ನಲ್ಲಿ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗಿದೆ. ಹಾಗಿದ್ದರೆ, 4ನೇ ದಿನದ ಕಲೆಕ್ಷನ್ ಎಷ್ಟು? ಒಟ್ಟು ನಾಲ್ಕು ದಿನಗಳಲ್ಲಿ ಗಳಿಸಿದ್ದೆಷ್ಟು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಲವ್ ಮಾಕ್ಟೇಲ್ 3' 4ನೇ ದಿನದ ಕಲೆಕ್ಷನ್
ಮೊದಲ ದಿನದಿಂದಲೇ 'ಲವ್ ಮಾಕ್ಟೇಲ್ 3'ಗೆ ಮೌತ್ ಪಬ್ಲಿಸಿಟಿ ಸಿಕ್ಕಿತ್ತು. ಸೀಕ್ವೆಲ್ ಆಗಿದ್ದರಿಂದ ಸಿನಿಮಾ ನೋಡುವುದಕ್ಕೆ ಜನರು ಥಿಯೇಟರ್‌ಗೆ ನುಗ್ಗಿದ್ದರು. ಅವರಿಂದ ಪಾಸಿಟಿವ್ ರಿವ್ಯೂ ಬಂದಿದ್ದರಿಂದ ಸಿನಿಮಾ ವೀಕೆಂಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಹೇಳುವ ಸ್ಯಾಕ್ನಿಲ್ಕ್.ಕಾಮ್ 'ಲವ್ ಮಾಕ್ಟೇಲ್ 3' ಸಿನಿಮಾ 4ನೇ ದಿನ 1.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ.
ಕರ್ನಾಟಕದ ವಿತರಕರ ಲೆಕ್ಕವೇನು?
ಇನ್ನು ಕರ್ನಾಟಕದ ವಿತರಕರ ವಲಯದಲ್ಲಿ 'ಲವ್ ಮಾಕ್ಟೇಲ್ 3' ಸಿನಿಮಾ ಲೆಕ್ಕ ಬೇರೆನೇ ಹರಿದಾಡುತ್ತಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿ, ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡಿರುವ ಈ ಸಿನಿಮಾ ಕರ್ನಾಟಕದಾದ್ಯಂತ ಫ್ಯಾಮಿಲಿ ಆಡಿಯನ್ಸ್ ಅನ್ನು ಸೆಳೆಯುತ್ತಿದೆ. ಅಲ್ಲೇ ನಿನ್ನೆ (ಮಾರ್ಚ್ 23) ಭಾನುವಾರ ಆಗಿದ್ದರಿಂದ ಸಿನಿಮಾದ ಕಲೆಕ್ಷನ್ ಉತ್ತಮವಾಗಿ ಆಗಿದೆ. ವಿತರಕರ ವಲಯದಲ್ಲಿ ಈ ಸಿನಿಮಾ ಸುಮಾರು 2 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನುತ್ತಿದ್ದಾರೆ.
4 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ಲವ್ ಮಾಕ್ಟೇಲ್ 3' 2 ದಿನಗಳ ಕಲೆಕ್ಷನ್ ( ವಿತರಕರ ವಲಯದ ಲೆಕ್ಕ)
ಮೊದಲ ದಿನ ₹2 ಕೋಟಿ (ಅಂದಾಜು)
2ನೇ ದಿನ ₹1.5 ಕೋಟಿ (ಅಂದಾಜು)
3ನೇ ದಿನ ₹2.5 ಕೋಟಿ (ಅಂದಾಜು)
4ನೇ ದಿನ ₹2 ಕೋಟಿ (ಅಂದಾಜು)
ಒಟ್ಟು ₹8 ಕೋಟಿ (Net)

ಸೋಮವಾರದ ಪರೀಕ್ಷೆ ಗೆಲ್ಲುತ್ತಾ?
ಯುಗಾದಿ ಹಾಗೂ ರಂಜಾನ್ ರಜೆಯಲ್ಲಿ ಜನರು ಥಿಯೇಟರ್‌ಗೆ ಬಂದು 'ಲವ್ ಮಾಕ್ಟೇಲ್ 3' ಸಿನಿಮಾವನ್ನು ನೋಡಿದ್ದಾರೆ. ಆದರೆ, ಸೋಮವಾರದಿಂದ ಮತ್ತೆ ಎಲ್ಲರಿಗೂ ಬ್ಯುಸಿ ಡೇ ಆಗಿದ್ದರಿಂದ ಕಲೆಕ್ಷನ್ ಡ್ರಾಪ್ ಆಗುವ ಸಾಧ್ಯತೆಯಿದೆ. ಒಂದು ವೇಳೆ ವೀಕ್ ಡೇಸ್‌ನಲ್ಲಿ ರೆಗ್ಯೂಲರ್ ಆಗಿ ಕಲೆಕ್ಷನ್ ಆದರೆ, ಒಂದು ವಾರದಲ್ಲಿ 10 ಕೋಟಿ ರೂಪಾಯಿ ಗಡಿ ದಾಟುವ ಸಾಧ್ಯತೆಯಿದೆ. ಆದಕ್ಕೆ ಸೋಮವಾರ ಕಲೆಕ್ಷನ್‌ನಿಂದ ಒಂದು ಅಂದಾಜು ಸಿಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications















