Brat Box Office Day 3: ವೀಕೆಂಡ್‌ನಲ್ಲಿ 'ಬ್ರ್ಯಾಟ್' ಕಲೆಕ್ಷನ್ ಏನು? 3ನೇ ದಿನ ಗಳಿಸಿದ್ದೆಷ್ಟು?
ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಅದುವೇ 'ಬ್ರ್ಯಾಟ್'. ಡಾರ್ಲಿಂಗ್ ಕೃಷ್ಣ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ವಿಭಿನ್ನ ಕಥೆಯೊಂದಿಗೆ ಶಶಾಂಕ್ ಮರಳಿದ್ದಾರೆ. ಸಿನಿಮಾ ನೋಡಿದವರು ಫಸ್ಟ್ ಡೇ ಫಸ್ಟ್ ಶೋನೇ ಮೆಚ್ಚುಗೆಯನ್ನು ಸೂಚಿಸಿದ್ದರು. ಸಿನಿಮಾವನ್ನು ಮನಸಾರೆ ಮೆಚ್ಚಿಕೊಂಡಿದ್ದರು.
'ಬ್ರ್ಯಾಟ್' ಲೈಟ್ ಹಾರ್ಟೆಡ್ ಕಾಮಿಡಿ ಸಿನಿಮಾ ಅಂತ ಅನಿಸಿದರೂ, ಕೊನೆಯಲ್ಲಿ ಕಣ್ಣಲ್ಲಿ ನೀರು ತರಿಸುತ್ತೆ. ಹೀಗೆ ಪ್ರೇಕ್ಷಕರನ್ನು ಭಾವನಾತ್ಮಕ ಸನ್ನಿವೇಶಗಳಿಗೆ ತಳ್ಳುವುದರಲ್ಲಿ ನಿರ್ದೇಶಕ ಶಶಾಂಕ್ ಎತ್ತಿದ ಕೈ. ಈ ಸಾಲಿನಲ್ಲಿ 'ಬ್ರ್ಯಾಟ್' ಕೂಡ ಒಂದು. ಹೀಗಾಗಿ ಕನ್ನಡ ಚಿತ್ರರಂಗದ ಮತ್ತೊಂದು ಯಶಸ್ವಿ ಸಿನಿಮಾಗಳ ಸಾಲಿಗೆ ಸೇರಬಹುದೆಂಬ ನಿರೀಕ್ಷೆಯಲ್ಲಿ ಟ್ರೇಡ್ ಎಕ್ಸ್‌ಪರ್ಟ್‌ಗಳು ಇದ್ದಾರೆ.

ಮೊದಲ ಎರಡು ದಿನ 'ಬ್ರ್ಯಾಟ್' ಕಲೆಕ್ಷನ್ ತೃಪ್ತಿದಾಯಕವಾಗಿದೆ. ಡಾರ್ಲಿಂಗ್ ಕೃಷ್ಣ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸಿಗುವ ರೆಸ್ಪಾನ್ಸ್ ಮೇಲೆ ಈ ಸಿನಿಮಾ ಬಾಕ್ಸಾಫೀಸ್ ಲೆಕ್ಕಾಚಾರ ನಿಂತಿದೆ. ಹಾಗಿದ್ದರೆ, 'ಬ್ರ್ಯಾಟ್' ಸಿನಿಮಾ ಮೂರನೇ ದಿನ ಗಳಿಸಿದ್ದೆಷ್ಟು? ಇಲ್ಲಿವರೆಗೂ ಸಿನಿಮಾದ ಕಲೆಕ್ಷನ್ ತೃಪ್ತಿದಾಯಕವಾಗಿದೆಯೇ? ತಿಳಿಯುವುದಕ್ಕೆ ಮುಂದೆ ಓದಿ.
3ನೇ ದಿನದ ಕಲೆಕ್ಷನ್ ಏನು?
ಡಾರ್ಲಿಂಗ್ ಕೃಷ್ಣ-ಶಶಾಂಕ್ ಕಾಂಬಿನೇಷನ್ ಸಿನಿಮಾ ಅಂದ್ಮೇಲೆ ನಿರೀಕ್ಷೆ ಇದ್ದೇ ಇರುತ್ತೆ. ಅದರಲ್ಲೂ ಕಿಚ್ಚ ಸುದೀಪ್ ಸಿನಿಮಾಗೆ ಬೆಂಬಲವಾಗಿ ನಿಂತಿದ್ದಾರೆ. ಹೀಗಾಗಿ ಸಿನಿಮಾ ಕಲೆಕ್ಷನ್ ಮೇಲೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಕಣ್ಣಿಟ್ಟಿದ್ದಾರೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ 'ಬ್ರ್ಯಾಟ್' 3ನೇ ದಿನ ಅಂದರೆ, ನಿನ್ನೆ ಭಾನುವಾರ ಕರ್ನಾಟಕದಾದ್ಯಂತ ₹51 ಕೋಟಿ (Net) ಕಲೆಕ್ಷನ್ ಮಾಡಿದೆ. ಕನ್ನಡ ರಾಜ್ಯೋತ್ಸವದಂದು ಗಳಿಸಿದ್ದಕ್ಕಿಂತ ಕೊಂಚ ಕಡಿಮೆ ಆಗಿದ್ದರೂ, ಟ್ರೇಡ್ ಎಕ್ಸ್‌ಪರ್ಟ್‌ಗಳು ಇದು ಉತ್ತಮ ಗಳಿಕೆ ಎಂದೇ ಹೇಳುತ್ತಿದ್ದಾರೆ.

3 ದಿನಗಳ ಕಲೆಕ್ಷನ್ ಏನು?
'ಬ್ರ್ಯಾಟ್' ಸಿನಿಮಾ ಮೊದಲ ಮೂರು ದಿನಗಳಲ್ಲಿ ಒಂದೂ ದಿನವೂ ಒಂದು ಕೋಟಿ ದಾಟುವುದಕ್ಕೆ ವಿಫಲವಾಗಿದೆ. ಆದರೂ ಕೇವಲ ಕರ್ನಾಟಕದಲ್ಲಿ ಲಿಮಿಟೆಡ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿರುವ ಸಿನಿಮಾ ಮೂರು ದಿನಗಳಲ್ಲಿ ₹1.65 ಕೋಟಿ (Net) ಕಲೆಕ್ಷನ್ ಆಗಿದೆ. ಹಾಗೇ ಗ್ರಾಸ್ ಕಲೆಕ್ಷನ್ ಸುಮಾರು ₹1.85 ಕೋಟಿ ಆಗಿದ್ದು, ಇಂದು (ನವೆಂಬರ್ 3) ₹2 ಕೋಟಿಯ ಗಡಿ ದಾಟುವ ಸಾಧ್ಯತೆಯಿದೆ.
3 ದಿನಗಳ ಕಲೆಕ್ಷನ್ ರಿಪೋರ್ಟ್
1ನೇ ದಿನ ₹42 ಲಕ್ಷ
2ನೇ ದಿನ ₹71 ಲಕ್ಷ
3ನೇ ದಿನ ₹51 ಲಕ್ಷ
ಒಟ್ಟು ₹1.65 ಕೋಟಿ (Net)
'ಬ್ರ್ಯಾಟ್' ಭವಿಷ್ಯವೇನು?
ಮೊದಲ ದಿನದ ಕಲೆಕ್ಷನ್ ತೃಪ್ತಿದಾಯಕವಾಗಿದೆ. ಸೋಮವಾರದಿಂದ ಅಸಲಿ ಕಲೆಕ್ಷನ್ ಹೊರಬೀಳಲಿದೆ. ಒಂದು ವೇಳೆ ಇನ್ನೊಂದು ವೀಕೆಂಡ್ ಬರುವವರೆಗೂ ಬ್ರ್ಯಾಟ್ ಕಲೆಕ್ಷನ್ ಸ್ಡಡಿಯಾಗಿಯೇ ಇದ್ದರೆ, ವಾರದ ಅಂತ್ಯದ ವೇಳೆಗೆ ನಾಲ್ಕೈದು ಕೋಟಿ ಕಲೆಕ್ಷನ್ ಮಾಡುವ ಮಾಡುವ ಸಾಧ್ಯತೆಯಿದೆ. ಇನ್ನು 'ಬ್ರ್ಯಾಟ್' ಸಿನಿಮಾ ₹10 ಕೋಟಿ ಕ್ಲಬ್ ಸೇರುತ್ತಾ? ಈ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











