Brat Box Office Day 5: 5ನೇ ದಿನ ಡಾರ್ಲಿಂಗ್ ಕೃಷ್ಣ 'ಬ್ರ್ಯಾಟ್' ಕಲೆಕ್ಷನ್‌ನಲ್ಲಿ ಏರಿಕೆ?
2025ನೇ ಸೆಕೆಂಡ್ ಹಾಫ್ ಕನ್ನಡ ಚಿತ್ರರಂಗ ಲಾಭ ಕಾಣುತ್ತಿದೆ. ಸಾಲು ಸಾಲು ಸಿನಿಮಾಗಳು ಹಿಟ್ ಲಿಸ್ಟ್ ಸೇರುತ್ತಿವೆ. 'ಮಾದೇವ' ಸಿನಿಮಾದಿಂದ ಆರಂಭವಾದ ಸಕ್ಸಸ್ ಜರ್ನಿ 'ಸು ಫ್ರಮ್ ಸೋ', 'ಕಾಂತಾರ ಚಾಪ್ಟರ್ 1' ಮೂಲಕ ಮತ್ತೆ ಕನ್ನಡ ಚಿತ್ರರಂಗ ಬಾಕ್ಸಾಫೀಸ್ ರೇಸ್‌ಗೆ ಮರಳಿತ್ತು. ಕಳೆದ ವಾರ 'ಬ್ರ್ಯಾಟ್' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗೆಲುವಿನ ನಗೆ ಬೀರುತ್ತಾ? ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಕಾಂಬಿನೇಷನ್ ಸಿನಿಮಾನಲ್ಲಿ ಬರುತ್ತಿರುವ 2ನೇ ಸಿನಿಮಾ 'ಬ್ರ್ಯಾಟ್'. ಈ ಸಿನಿಮಾವನ್ನು ಮಂಜುನಾಥ್ ಕಂದಕೂರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಈಗಾಗಲೇ 6ನೇ ದಿನಕ್ಕೆ ಕಾಲಿಟ್ಟಿದೆ. ಆಗಲೇ ಇಡೀ ತಂಡ ಯಶಸ್ಸಿನ ಸಂಭ್ರಮಾಚರಣೆ ಮಾಡಿದೆ. ಸಿನಿಮಾದ ಗಳಿಕೆ ಬಗ್ಗೆ ಮೆಚ್ಚುಗೆ ಹರ್ಷ ವ್ಯಕ್ತಪಡಿಸಿದೆ.

ಇನ್ನು ವೀಕೆಂಡ್‌ಗೆ ಹೋಲಿಕೆ ಮಾಡಿದರೆ, ಸೋಮವಾರದ ಪರೀಕ್ಷೆಯಲ್ಲಿ ಇಳಿಕೆ ಕಂಡಿತ್ತು. ಆದರೆ, 5ನೇ ದಿನವಾದ ನಿನ್ನೆ (ನವೆಂಬರ್ 4) 'ಬ್ರ್ಯಾಟ್' ಬಾಕ್ಸಾಫೀಸ್‌ನಲ್ಲಿ ಕೊಂಚ ಮಟ್ಟಿಗೆ ಏರಿಕೆ ಕಂಡಿದೆ. ಕೆಲವೇ ಲಕ್ಷಗಳಲ್ಲಿ ಏರಿಕೆ ಕಂಡಿದೆ. ಆದರೂ ಹೀಗೆ ಮುಂದುವರೆದರೆ, 2ನೇ ವೀಕೆಂಡ್‌ನಲ್ಲಿ ಉತ್ತಮ ಕಲೆಕ್ಷನ್ ಆಗಬಹುದು. ಹಾಗಿದ್ದರೆ, 5ನೇ ದಿನ ಕರ್ನಾಟಕದಾದ್ಯಂತ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
5ನೇ ದಿನ ಕಲೆಕ್ಷನ್ ಎಷ್ಟು?
'ಕಾಂತಾರ ಚಾಪ್ಟರ್ 1' ನಂತರ ಮೆಗಾ ಸಕ್ಸಸ್ ಬಳಿಕ ಮತ್ತೆ ಜನರು ಪ್ಯಾನ್ ಇಂಡಿಯಾ ಸಿನಿಮಾವನ್ನೇ ಎದುರು ನೋಡುತ್ತಾರೆಂಬ ಭಯವಿತ್ತು. ಥಿಯೇಟರ್‌ಗಳಿಗೆ ಜನರು ಬರುವುದಕ್ಕೆ ಹಿಂದೇಟು ಹಾಕಬಹುದೆಂಬ ಆತಂಕ ಸಿನಿಮಾ ಮಂದಿಯಲ್ಲಿತ್ತು. 'ಬ್ರ್ಯಾಟ್' ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯದೇ ಹೋದರೂ, ಜನರು ಚಿತ್ರಮಂದಿರಗಳಿಗೆ ಬರುತ್ತಿರೋದು ಸಿನಿಮಾ ಮಂದಿಗೆ ಸಮಾಧಾನ ತಂದಿದೆ. ಇನ್ನು ಸ್ಯಾಕ್ನಿಲ್ಕ್ ವರದಿ ಮಾಡಿರುವ ಪ್ರಕಾರ, 'ಬ್ರ್ಯಾಟ್' 5ನೇ ದಿನದ ಕಲೆಕ್ಷನ್ 27 ಲಕ್ಷ ರೂಪಾಯಿ. ಈ ಮೂಲಕ 5 ದಿನಕ್ಕೆ 2.16 ಕೋಟಿ (Net) ದಾಟಿದೆ. ಒಟ್ಟು ಗ್ರಾಸ್ ಕಲೆಕ್ಷನ್ ₹2.46 ಕೋಟಿ ಎಂದು ಅಂಕಿ ಅಂಶಗಳನ್ನು ನೀಡಿದೆ.
5 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಬೆಟ್ಟಿಂಗ್ ವಿಷಯವನ್ನು ಇಟ್ಟುಕೊಂಡು ಶಶಾಂಕ್ ಹೆಣೆದಿರುವ ಕಥೆ ಸಿನಿಮಾ ನೋಡಿದವರಿಗೆ ಇಷ್ಟ ಆಗುತ್ತಿದೆ. ಡಾರ್ಲಿಂಗ್ ಕೃಷ್ಣ ಅವರ ಹೊಸ ಅವತಾರ ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಉಳಿದ ಏರಿಯಾಗಳಲ್ಲಿ ಒಳ್ಳೆಯ ಕಲೆಕ್ಷನ್ ಆದರೆ, ಸಿನಿಮಾ ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಪ್ರತಿದಿನ ಸಿನಿಮಾ ಗಳಿಸಿದ ಕಲೆಕ್ಷನ್ ಹೇಗಿದೆ? ಅನ್ನೋ ರಿಪೋರ್ಟ್ ಇಲ್ಲಿದೆ.
5 ದಿನಗಳ ಕಲೆಕ್ಷನ್ ರಿಪೋರ್ಟ್
1ನೇ ದಿನ ₹42 ಲಕ್ಷ
2ನೇ ದಿನ ₹71 ಲಕ್ಷ
3ನೇ ದಿನ ₹51 ಲಕ್ಷ
4ನೇ ದಿನ ₹24 ಲಕ್ಷ
5ನೇ ದಿನ ₹27 ಲಕ್ಷ
ಒಟ್ಟು ₹2.16 ಕೋಟಿ (Net)

'ಬ್ರ್ಯಾಟ್ 2' ಬರಬಹುದೇ?
'ಬ್ರ್ಯಾಟ್' ಸಿನಿಮಾದ ಕೊನೆಯಲ್ಲಿ ಪಾರ್ಟ್ 2 ಬಗ್ಗೆ ಚಿಕ್ಕದೊಂದು ಸುಳಿವು ನೀಡಲಾಗಿದೆ. ಆದರೆ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಆಗಬೇಕಿದೆ. ಹಾಗಿದ್ದರೆ, 'ಬ್ರ್ಯಾಟ್ 2' ಬಗ್ಗೆ ಶಶಾಂಕ್ ಯೋಚನೆ ಮಾಡಬಹುದು. ಸದ್ಯ ಸಿನಿಮಾ ಸ್ಟಡಿಯಾಗಿ ಮುನ್ನುಗ್ಗುತ್ತಿದೆ. ಈ ವಾರದ ಅಂತ್ಯದಲ್ಲಿ ದೊಡ್ಡ ಕಲೆಕ್ಷನ್ ಆದರೆ, ಸಿನಿಮಾ ಬಾಕ್ಸಾಫೀಸ್ ಹಿಟ್ ಲಿಸ್ಟ್ ಸೇರುತ್ತೆ. ಅದರಲ್ಲೂ 2ನೇ ವೀಕೆಂಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











