Brat Box Office Day 6: 6ನೇ ದಿನವೂ ಸಿನಿಮಾ ಮಂದಿ ಚಮಕ್ ಕೊಟ್ಟ 'ಬ್ರ್ಯಾಟ್' ಕಲೆಕ್ಷನ್
'ಕಾಂತಾರ ಚಾಪ್ಟರ್ 1' ಬಳಿಕ ಕನ್ನಡದ ಮತ್ತೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅದುವೇ ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಕಾಂಬಿನೇಷನ್ ಸಿನಿಮಾ 'ಬ್ರ್ಯಾಟ್'. ಪ್ಯೂರ್ ಕರ್ನಾಟಕದ ಬಾಕ್ಸಾಫೀಸ್ ಅನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಕ್ರಿಕೆಟ್ ಬೆಟ್ಟಿಂಗ್ ಹಿನ್ನೆಲೆಯ ಕಥೆಯಾಗಿದ್ದರೂ, ತಂದೆ-ಮಗನ ನಡುವಿನ ಎಮೋಷನ್ಸ್ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ.
ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಕಾಂಬಿನೇಷನ್‌ನಲ್ಲಿ ಈ ಹಿಂದೆ ಬಂದಿದ್ದ 'ಕೌಸಲ್ಯ ಸುಪ್ರಜಾ ರಾಮ' ಯಶಸ್ಸು ಕಂಡಿತ್ತು. ಹೀಗಾಗಿ ಈ ಜೋಡಿ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸಿನಿಮಾ ನೋಡಿದವರಿಗೆಲ್ಲ ಇಷ್ಟ ಆಗಿದೆ. ಆದರೆ, ಥಿಯೇಟರ್‌ಗೆ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಬರಬೇಕು ಅನ್ನೋದು ಅಷ್ಟೇ ಸತ್ಯ.

'ಬ್ರ್ಯಾಟ್' ಕಲೆಕ್ಷನ್ ವೀಕೆಂಡ್‌ನಲ್ಲಿ ಸ್ಟಡಿಯಾಗಿದೆ. ಇದು ಚಿತ್ರತಂಡಕ್ಕೆ ಸಮಾಧಾನ ಕೊಟ್ಟಿದೆ. ಈ ಸಿನಿಮಾ ರಿಲೀಸ್ ಆಗಿ ಇಂದಿಗೆ (ನವೆಂಬರ್ 6) 7ನೇ ದಿನ. ಕಳೆದ ಆರು ದಿನಗಳಲ್ಲಿ ಕಲೆಕ್ಷನ್ ಸ್ಟಡಿಯಾಗಿದ್ದು, ಬಿಗ್ ಕಲೆಕ್ಷನ್ ಅನ್ನು ಎದುರು ನೋಡುತ್ತಿದೆ. ಹಾಗಿದ್ದರೆ, 6ನೇ ದಿನ ಬ್ರ್ಯಾಟ್ ಸಿನಿಮಾದ ಕಲೆಕ್ಷನ್ ಎಷ್ಟು? ವೀಕೆಂಡ್ ಭವಿಷ್ಯವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
6ನೇ ದಿನ ಕಲೆಕ್ಷನ್ ಎಷ್ಟು?
ಡಾರ್ಲಿಂಗ್ ಕೃಷ್ಣ, ಮನಿಷಾ ಕುಂದಕೂರು ಜೋಡಿ ತೆರೆಮೇಲೆ ಮೋಡಿ ಮಾಡಿದೆ. ಹಾಗೇ ಅಚ್ಯುತ್ ಕುಮಾರ್ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಟೋಬರ್ 31ಕ್ಕೆ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ 6 ದಿನಕ್ಕೆ ₹2.50 ಕೋಟಿ ಸಮೀಪದಲ್ಲಿದೆ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ 6ನೇ ದಿನ ₹26 ಲಕ್ಷ (Net) ಕಲೆಕ್ಷನ್ ಮಾಡಿದೆ. ವೀಕ್‌ಡೇಸ್‌ನಲ್ಲಿ ರಜೆಗಳಿಲ್ಲದ ಸಮಯದಲ್ಲಿ ಕಳೆದ ಮೂರು ದಿನಗಳಿಂದ ಸ್ಟಡಿಯಾಗಿ ಮುನ್ನುಗ್ಗುತ್ತಿದೆ.
6 ದಿನಗಳಲ್ಲಿ ಬ್ರ್ಯಾಟ್ ಗಳಿಸಿದ್ದೆಷ್ಟು?
'ಬ್ರ್ಯಾಟ್' ಕನ್ನಡಿಗರಿಗೆ ಹೊಸ ಕಾನ್ಸೆಪ್ಟ್. ಬೆಟ್ಟಿಂಗ್ ಹಿನ್ನೆಲೆಯುಳ್ಳ ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಆದರೂ, ಶಶಾಂಕ್ ಡೀಪ್ ಆಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇದರೊಳಗೆ ಕಾಮಿಡಿ ಹಾಗೂ ಎಮೋಷನ್ಸ್ ಅನ್ನು ಸೇರಿಸಿದ್ದಾರೆ. ಹೀಗಾಗಿ ಮಿಕ್ಸ್ ಎಮೋಷನ್ಸ್ ಇರುವ ಸಿನಿಮಾ ಆರು ದಿನಗಳಲ್ಲಿ ₹2.42 ಕೋಟಿ (Net) ಮೂಲಕ ಆವರೇಜ್ ಕಲೆಕ್ಷನ್ ಮಾಡಿದೆ. ಇನ್ನು 'ಬ್ರ್ಯಾಟ್'ನ 6 ದಿನಗಳ ಒಟ್ಟು ಗ್ರಾಸ್ ಕಲೆಕ್ಷನ್ ₹2.71 ಕೋಟಿ ಆಗಿದೆ. ಮುಂದಿನ ದಿನಗಳಲ್ಲಿ ಹೇಗಿರುತ್ತೋ ಅನ್ನೋದು ನೋಡಬೇಕಿದೆ. ಸದ್ಯ 6 ದಿನಗಳ ಕಲೆಕ್ಷನ್ ಹೀಗಿದೆ.
6 ದಿನಗಳ ಕಲೆಕ್ಷನ್ ರಿಪೋರ್ಟ್
1ನೇ ದಿನ ₹42 ಲಕ್ಷ
2ನೇ ದಿನ ₹71 ಲಕ್ಷ
3ನೇ ದಿನ ₹51 ಲಕ್ಷ
4ನೇ ದಿನ ₹24 ಲಕ್ಷ
5ನೇ ದಿನ ₹27 ಲಕ್ಷ
6ನೇ ದಿನ ₹26 ಲಕ್ಷ
ಒಟ್ಟು ₹2.42 ಕೋಟಿ (Net)

ತೆಲುಗಿಗೂ ಲಗ್ಗೆ ಇಡುತ್ತಾ 'ಬ್ರ್ಯಾಟ್'?
ಶಶಾಂಕ್ ಅಂಡ್ ಟೀಮ್ 'ಬ್ರ್ಯಾಟ್' ಸಿನಿಮಾವನ್ನು ತೆಲುಗಿನಲ್ಲೂ ರಿಲೀಸ್ ಮಾಡುವುದಕ್ಕೆ ಆಲೋಚನೆ ಮಾಡುತ್ತಿದೆ. ತೆಲುಗಿ ಮಂದಿ ಕಾಮಿಡಿ ಕಮ್ ಎಮೋಷನಲ್ ಸಿನಿಮಾಗಳನ್ನು ಇಷ್ಟ ಪಡುತ್ತಾರೆ. ಹೀಗಾಗಿ ತೆಲುಗು ಭಾಷೆಗೆ ಡಬ್ ಮಾಡಿ ಸಿನಿಮಾವನ್ನು ರಿಲೀಸ್ ಮಾಡುವ ಆಲೋಚನೆಯಿದೆಂದು ತಂಡವೇ ಹೇಳಿಕೊಂಡಿದೆ. ಯಾವಾಗ ರಿಲೀಸ್ ಆಗುತ್ತೆ ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಅತೀ ಶೀಘ್ರದಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











