Brat Box Office Day 8: ವೀಕೆಂಡ್‌ನಲ್ಲಿ 'ಬ್ರ್ಯಾಟ್' ಕಲೆಕ್ಷನ್ ಏರಿಕೆ ಆಯ್ತಾ? 8ನೇ ದಿನ ಗಳಿಸಿದ್ದು ಎಷ್ಟು?

ಕಳೆದ ವಾರ ರಿಲೀಸ್ ಆಗಿರುವ 'ಬ್ರ್ಯಾಟ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮೊದಲ ಮೂರು ದಿನ ಸಿನಿಮಾದ ಕಲೆಕ್ಷನ್ ಕೂಡ ಚೆನ್ನಾಗಿತ್ತು. ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಕಾಂಬಿನೇಷನ್ ಸಿನಿಮಾ ಇನ್ನೊಂದು ಹಿಟ್ ಕೊಡಬಹುದೆಂಬ ನಿರೀಕ್ಷೆನೂ ಹುಟ್ಟಿಸಿತ್ತು. ಈ ಹಿಂದೆ ಇದೇ ಜೋಡಿ 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾ ಮಾಡಿ ಗೆದ್ದಿತ್ತು. ಈಗ 'ಬ್ರ್ಯಾಟ್' ರಿಲೀಸ್ ಆಗಿದ್ದು, 9ನೇ ದಿನಕ್ಕೆ ಕಾಲಿಟ್ಟಿದೆ.

ಲವ್ ಸ್ಟೋರಿ, ಸೆಂಟಿಮೆಂಟ್ ಕಥೆಗಳನ್ನೇ ತೆರೆಮೇಲೆ ತರುತ್ತಿದ್ದ ಶಶಾಂಕ್ ಈ ಬಾರಿ ಕ್ರಿಕೆಟ್ ಬೆಟ್ಟಿಂಗ್ ಸ್ಟೋರಿಯನ್ನು ಹೇಳಿದ್ದಾರೆ. ಇದು ಇಲ್ಲಿವರೆಗೂ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಆದರೆ, ಇದು ಮೌತ್ ಪಬ್ಲಿಸಿಟಿ ಆಗಿ ಬದಲಾಗಿಲ್ಲ. ಹೀಗಾಗಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿಲ್ಲ. ನಿನ್ನೆ (ನವೆಂಬರ್ 7) ಅಂದರೆ 8ನೇ ದಿನವೂ ಸಿನಿಮಾ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿಲ್ಲ.

Darling Krishna Shashank movie Brat Day 8 Box Office Collection Report

ಎಮೋಷನಲ್‌ ಸ್ಟೋರಿಗಳನ್ನು ಹೇಳುವುದರಲ್ಲಿ ಶಶಾಂಕ್ ನಿಸ್ಸೀಮರು. ಹಾಗೇ 'ಬ್ರ್ಯಾಟ್'ನಲ್ಲೂ ಶಶಾಂಕ್ ಎಮೋಷನ್‌ ಸೀನ್‌ಗಳನ್ನು ಇಟ್ಟಿದ್ದಾರೆ. ಸಿನಿಮಾ ನೋಡಿದವರೂ ಚೆನ್ನಾಗಿದೆ ಅನ್ನೋ ಅಭಿಪ್ರಾಯವನ್ನು ಕೊಟ್ಟಿದ್ದಾರೆ. ಹೀಗಿದ್ದರೂ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವಲ್ಲಿ ಹಿಂದೆ ಬೀಳುತ್ತಿದೆ. ಹಾಗಿದ್ದರೆ, 8ನೇ ದಿನ 'ಬ್ರ್ಯಾಟ್' ಕಲೆಕ್ಷನ್ ಎಷ್ಟು? ಮೂರು ಕೋಟಿ ಗಡಿ ದಾಟಿತೇ? ತಿಳಿಯುವುದಕ್ಕೆ ಮುಂದೆ ಓದಿ.

8ನೇ ದಿನ 'ಬ್ರ್ಯಾಟ್' ಕಲೆಕ್ಷನ್

ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ 'ಬ್ರ್ಯಾಟ್' ಬೆಂಗಳೂರು, ಮೈಸೂರು ಭಾಗಗಳಲ್ಲಿ ಕಲೆಕ್ಷನ್ ಆಗುತ್ತಿದೆ. ಆದರೆ, ಉಳಿದ ಭಾಗಗಳಲ್ಲಿ ಸಿನಿಮಾದ ಕಲೆಕ್ಷನ್ ಡ್ರಾಪ್ ಬಂದಿದೆ ಎನ್ನಲಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ 8ನೇ ದಿನ ಕೇವಲ ₹18 ಲಕ್ಷ ಕಲೆಕ್ಷನ್ ಮಾಡಿದೆ. ಈ ಎಂಟು ದಿನಗಳಲ್ಲಿ ಇದು ಅತ್ಯಂತ ಕಡಿಮೆ ಕಲೆಕ್ಷನ್ ಎಂದೇ ಹೇಳಬಹುದು. ಆದರೂ ಇಂದು (ನವೆಂಬರ್ 8) ಮತ್ತು ನಾಳೆ (ನವೆಂಬರ್ 9) ಮೇಲೆ ಚಿತ್ರತಂಡ ನಿರೀಕ್ಷೆಯನ್ನು ಇಟ್ಟುಕೊಂಡಿದೆ.


8 ದಿನಗಳಲ್ಲಿ ಗಳಿಸಿದ್ದೆಷ್ಟು?

'ಬ್ರ್ಯಾಟ್' ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿತ್ತು. ಮೊದಲ ದಿನ ₹42 ಲಕ್ಷ ಕಲೆಕ್ಷನ್ ಮಾಡಿದ್ದರೆ, 2ನೇ ದಿನ ಏರಿಕೆಯಾಗಿ ₹72 ಲಕ್ಷ ಆಗಿತ್ತು. ಹಾಗೇ 3ನೇ ದಿನ ₹51 ಲಕ್ಷ ಕಲೆಕ್ಷನ್ ಆಗಿತ್ತು. ಅಲ್ಲಿಂದ ಈ ಸಿನಿಮಾ ₹18 ಲಕ್ಷದಿಂದ ₹24 ಲಕ್ಷದ ಆಸುಪಾಸಿನಲ್ಲಿಯೇ ಕಲೆಕ್ಷನ್ ಆಗುತ್ತಿದೆ. 2ನೇ ವೀಕೆಂಡ್‌ನಲ್ಲಿ ಕೊಂಚ ಮಟ್ಟಿಗೆ ಕಲೆಕ್ಷನ್‌ನಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಈ ಎಂಟು ದಿನಗಳಲ್ಲಿ 'ಬ್ರ್ಯಾಟ್' ₹2.79 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು Gross ಕಲೆಕ್ಷನ್ ₹3.12 ಕೋಟಿ ಆಗಿದೆ.

8 ದಿನಗಳ ಕಲೆಕ್ಷನ್ ರಿಪೋರ್ಟ್

1ನೇ ದಿನ ₹42 ಲಕ್ಷ
2ನೇ ದಿನ ₹71 ಲಕ್ಷ
3ನೇ ದಿನ ₹51 ಲಕ್ಷ
4ನೇ ದಿನ ₹24 ಲಕ್ಷ
5ನೇ ದಿನ ₹27 ಲಕ್ಷ
6ನೇ ದಿನ ₹26 ಲಕ್ಷ
7ನೇ ದಿನ ₹19 ಲಕ್ಷ
8ನೇ ದಿನ ₹18 ಲಕ್ಷ
ಒಟ್ಟು ₹2.79 ಕೋಟಿ (Net)

Darling Krishna Shashank movie Brat Day 8 Box Office Collection Report
ವೀಕೆಂಡ್‌ ಕಲೆಕ್ಷನ್ ಲೆಕ್ಕಾಚಾರವೇನು?

ಸೋಮವಾರದಿಂದ ಶುಕ್ರವಾರದವರೆಗೂ 'ಬ್ರ್ಯಾಟ್' ಸಿನಿಮಾ ಪ್ರತಿದಿನ ಸರಾಸರಿ ₹20 ಲಕ್ಷದ ಆಸುಪಾಸಿನಲ್ಲಿಯೇ ಕಲೆಕ್ಷನ್ ಆಗುತ್ತಿದೆ. ಹೀಗಾಗಿ ವೀಕೆಂಡ್‌ನಲ್ಲಿ ₹30 ಲಕ್ಷದವರೆಗೂ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯನ್ನು ವಿತರಕರು ಇಟ್ಟುಕೊಂಡಿದ್ದಾರೆ. ಎರಡು ದಿನಗಳಲ್ಲಿ ಈ ಸಿನಿಮಾ ₹50 ರಿಂದ ₹60 ಲಕ್ಷ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Darling Krishna Shashank movie Brat Day 8 Box Office Collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X