Brat Box Office Day 7: ಒಂದು ವಾರದ 'ಬ್ರ್ಯಾಟ್' ಕಲೆಕ್ಷನ್ ಹೇಗಿದೆ? ಹಿಟ್ Or ಫ್ಲಾಪ್?

ಸೆನ್ಸಿಬಲ್ ಸಿನಿಮಾಗಳನ್ನು ಮಾಡುವ ನಿರ್ದೇಶಕ ಶಶಾಂಕ್ ಬತ್ತಳಿಕೆಯಿಂದ ಮತ್ತೊಂದು ಸಿನಿಮಾ ಬಂದಿದೆ. ಈ ಬಾರಿ ಕೊಂಚ ಎಕ್ಸ್‌ಪೆರಿಮೆಂಟ್ ಮಾಡಿರುವ ಶಶಾಂಕ್ ಕನ್ನಡಿಗರನ್ನು 'ಕಾಂತಾರ' ಮೂಡಿನಿಂದ ಬೇರೆ ಕಡೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ಆ ಸಿನಿಮಾವೇ 'ಬ್ರ್ಯಾಟ್'. ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರದ ಮೂಲಕ ರಂಜಿಸಿದ್ದಾರೆ.

ತಮ್ಮ ಕಥೆಯಲ್ಲಿ ಭಾವನೆಗಳನ್ನು ಕಟ್ಟಿಕೊಡುವ ಶಶಾಂಕ್ ಬೆಟ್ಟಿಂಗ್ ಹಿಂದೆ ಹೀಗಿದ್ದರು. ಬೆಟ್ಟಿಂಗ್ ಬಗ್ಗೆ ಕಥೆ ಹೆಣೆದಿದ್ದರೂ, ಅಲ್ಲಲ್ಲಿ ಕಾಮಿಡಿ ಹಾಗೂ ಎಮೋಷನಲ್ ಸನ್ನಿವೇಶಗಳನ್ನು ಇಟ್ಟಿದ್ದರು. ಕ್ರಿಕೆಟ್ ಬೆಟ್ಟಿಂಗ್ ಜೊತೆಗೆ ತಂದೆ-ಮಗನ ನಡುವಿನ ಸಂಬಂಧವನ್ನು ಅಷ್ಟೇ ಅಚ್ಚು ಕಟ್ಟಾಗಿ ಕಟ್ಟಿಕೊಟ್ಟಿದ್ದರು. ಹೀಗಾಗಿ ಇದೂವರೆಗೂ ಸಿನಿಮಾ ನೋಡಿದವರು 'ಬ್ರ್ಯಾಟ್' ಅನ್ನು ಇಷ್ಟ ಪಟ್ಟಿದ್ದಾರೆ.

Darling Krishna Shashank movie Brat one week Box Office Collection Report

ಆದರೆ, 'ಬ್ರ್ಯಾಟ್' ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಿತ್ತು. ಕಳೆದ ಒಂದು ವಾರದಲ್ಲಿ ಚಿತ್ರತಂಡ ನಿರೀಕ್ಷೆ ಮಾಡಿದಷ್ಟು ಮಂದಿ ಬಂದು ಸಿನಿಮಾ ನೋಡಿಲ್ಲ. ಆದರೂ, 2ನೇ ವೀಕೆಂಡ್‌ನಲ್ಲಿ 'ಬ್ರ್ಯಾಟ್' ಕಲೆಕ್ಷನ್ ದುಪ್ಪಟ್ಟಾಗುವ ನಿರೀಕ್ಷೆಯಿದೆ. ಹಾಗಿದ್ದರೆ, 7ನೇ ದಿನದ ಕಲೆಕ್ಷನ್ ಎಷ್ಟು? ವೀಕೆಂಡ್‌ನಲ್ಲಿ ಏರಿಕೆ ಆಗಬಹುದೇ? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು? ತಿಳಿಯುವುದಕ್ಕೆ ಮುಂದೆ ಓದಿ.

'ಬ್ರ್ಯಾಟ್' 7ನೇ ದಿನ ಕಲೆಕ್ಷನ್ ಎಷ್ಟು?

ಕನ್ನಡ ಚಿತ್ರರಂಗದ ಮಟ್ಟಿಗೆ 'ಬ್ರ್ಯಾಟ್' ಹೊಸ ಪ್ರಯತ್ನ. ಈ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ಕುರಿತ ಸಿನಿಮಾ ಬಂದಿದ್ದರೂ, ಡಿಟೈಲ್‌ ಆಗಿ ಹೇಳುವ ಪ್ರಯತ್ನ ಮಾಡಿರಲಿಲ್ಲ. ಹೀಗಾಗಿ 'ಬ್ರ್ಯಾಟ್' ಕನ್ನಡದ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತೆ ಎಂದು ಹೇಳಬಹುದು. ಸ್ಯಾಕ್ನಿಲ್ಕ್ ಪ್ರಕಾರ, 'ಬ್ರ್ಯಾಟ್' 7ನೇ ದಿನ ₹19 ಲಕ್ಷ ಕಲೆಕ್ಷನ್ ಮಾಡಿದೆ. ಇದು ಇಲ್ಲಿವರೆಗಿನ ಅತೀ ಕಡಿಮೆ ಕಲೆಕ್ಷನ್ ಎಂದೇ ಹೇಳಬಹುದು.

7 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ಡಾರ್ಲಿಂಗ್ ಕೃಷ್ಣ, ಶಶಾಂಕ್ ಕಾಂಬಿನೇಷನ್ ಸಿನಿಮಾ 'ಬ್ರ್ಯಾಟ್' ಒಂದು ವಾರದಲ್ಲಿ ಐದು ಕೋಟಿ ದಾಟಬಹುದೆಂಬ ನಿರೀಕ್ಷೆಯಿತ್ತು. ಆದರೆ, ಸ್ಯಾಕ್ನಿಲ್ಕ್ ಲೆಕ್ಕಾಚಾರದ ಪ್ರಕಾರ ಏಳು ದಿನಗಳ ಕಲೆಕ್ಷನ್ 3 ಕೋಟಿ ಹತ್ತಿರ ಬಂದಿದೆ. 2ನೇ ವೀಕೆಂಡ್‌ನಲ್ಲಿ 'ಬ್ರ್ಯಾಟ್' ಸಿನಿಮಾ ಅದ್ಭುತ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ. 7 ದಿನಗಳ ಒಟ್ಟು ಕಲೆಕ್ಷನ್ ₹2.61 ಕೋಟಿ (Net) ಆಗಿದ್ದರೆ, Goss ಕಲೆಕ್ಷನ್ ₹2.92 ಕೋಟಿ ಆಗಿದೆ.

7 ದಿನಗಳ ಕಲೆಕ್ಷನ್ ರಿಪೋರ್ಟ್

1ನೇ ದಿನ ₹42 ಲಕ್ಷ
2ನೇ ದಿನ ₹71 ಲಕ್ಷ
3ನೇ ದಿನ ₹51 ಲಕ್ಷ
4ನೇ ದಿನ ₹24 ಲಕ್ಷ
5ನೇ ದಿನ ₹27 ಲಕ್ಷ
6ನೇ ದಿನ ₹26 ಲಕ್ಷ
7ನೇ ದಿನ ₹19 ಲಕ್ಷ
ಒಟ್ಟು ₹2.61 ಕೋಟಿ (Net)

Darling Krishna Shashank movie Brat one week Box Office Collection Report

2ನೇ ವೀಕೆಂಡ್‌ ಮೇಲೆ ಕಣ್ಣು

'ಬ್ರ್ಯಾಟ್' ಎರಡನೇ ವೀಕೆಂಡ್‌ಗೆ ಲಗ್ಗೆ ಇಟ್ಟಿದೆ. ಈ ಮೂರು ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಲೇ ಬೇಕಿದೆ. ಅಲ್ಲದೆ ಈ ವಾರ ಕೂಡ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿಲ್ಲ. ಹೀಗಾಗಿ 2ನೇ ವೀಕೆಂಡ್‌ನಲ್ಲಿ 'ಬ್ರ್ಯಾಟ್' ಕಲೆಕ್ಷನ್ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಮೂರು ದಿನಗಳಲ್ಲಿ 'ಬ್ರ್ಯಾಟ್' ನೋಡುವುದಕ್ಕೆ ದೊಡ್ಡ ಮಟ್ಟದಲ್ಲಿ ಜನರು ಬಂದರೆ, ಸಿನಿಮಾ ಕಲೆಕ್ಷನ್ ಐದು ಕೋಟಿ ದಾಟುವ ಸಾಧ್ಯತೆಯಿದೆ. ಇನ್ನೊಂದು ಕಡೆ ವಿತರಕರ ವಲಯದಲ್ಲಿ ಬೇರೆ ಲೆಕ್ಕವೇ ಇದೆ. ಅವರ ಪ್ರಕಾರ ಸಿನಿಮಾದ ಗ್ರಾಸ್ ಕಲೆಕ್ಷನ್ ₹4 ಕೋಟಿ ಎಂದು ಹೇಳುತ್ತಿದ್ದಾರೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Darling Krishna Shashank movie Brat one week Box Office Collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X