Devil Advance Booking: ದರ್ಶನ್ 'ಡೆವಿಲ್' ಮೊದಲ ದಿನ ಅಡ್ವಾನ್ಸ್ ಬುಕಿಂಗ್‌ನಿಂದ ಆದ ಕಲೆಕ್ಷನ್ ಎಷ್ಟು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಉಳಿದುಕೊಂಡಿವೆ. ದರ್ಶನ್ ಇಲ್ಲದೆಯೇ ಸಿನಿಮಾ ಭರ್ಜರಿ ಪ್ರಚಾರವನ್ನು ಆರಂಭಿಸಿದೆ. ಇಡೀ ಸಿನಿಮಾ ತಂಡ ಪ್ರಚಾರದಲ್ಲಿ ಭಾಗಿಯಾಗಿದೆ. ಈ ಮಧ್ಯೆ ಇಂದಿನಿಂದ (ಡಿಸೆಂಬರ್ 6) 'ಡೆವಿಲ್' ಸಿನಿಮಾ ಅಡ್ವಾನ್ಸ್ ಬುಕಿಂಗ್ ಕೂಡ ಓಪನ್ ಆಗಿದೆ. ಬುಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಆಗಿವೆ.

ಮಿಲನಾ ಪ್ರಕಾಶ್ ನಿರ್ದೇಶಿಸಿರುವ 'ಡೆವಿಲ್' ಸಿನಿಮಾ ಟ್ರೈಲರ್ ಕೂಡ ಇತ್ತೀಚೆಗೆ ರಿಲೀಸ್ ಆಗಿತ್ತು. ಆ ಟ್ರೈಲರ್‌ಗೂ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿ ಇರುವುದರಿಂದ ಅವರ ಅನುಪಸ್ಥಿತಿಯಲ್ಲಿಯೇ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಈ ಕಾರಣಕ್ಕೆ ಜನರಿಂದ ಹೇಗೆ ರೆಸ್ಪಾನ್ಸ್ ಸಿಗಬಹುದು ಅನ್ನೋ ಕುತೂಹಲ ಚಿತ್ರತಂಡಕ್ಕೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

Darshan Devil movie Advance Booking day 1 box office collection report and screen details

'ಡೆವಿಲ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಇಂದು (ಡಿಸೆಂಬರ್ 6) ಮಧ್ಯಾಹ್ನ 1 ಗಂಟೆಯಿಂದ ಆರಂಭ ಆಗಿತ್ತು. ಸಂಜೆ ಸುಮಾರು ಎಂಟು ಗಂಟೆಯವರೆಗೂ ಅಡ್ವಾನ್ಸ್ ಬುಕಿಂಗ್‌ನಿಂದ ಎಷ್ಟು ಕಲೆಕ್ಷನ್ ಆಗಿದೆ? ಎಷ್ಟು ಸ್ಕ್ರೀನ್‌ಗಳಲ್ಲಿ ಓಪನಿಂಗ್ ಆಗಿತ್ತು? ಯಾವ ಏರಿಯಾದಲ್ಲಿ ಹೇಗಿದೆ ರೆಸ್ಪಾನ್ಸ್? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಅಡ್ವಾನ್ಸ್ ಬುಕಿಂಗ್‌ಗೆ ರೆಸ್ಪಾನ್ಸ್ ಹೇಗಿದೆ?

'ಡೆವಿಲ್' ಸಿನಿಮಾದ ಅಡ್ವಾನ್ಸ್ ಬುಕಿಂಗ್‌ಗೆ ನಿರೀಕ್ಷೆ ಮಾಡದಷ್ಟು ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ಬಹುತೇಕ ಸಿಂಗಲ್ ಸ್ಕ್ರೀನ್‌ನಲ್ಲಿ ಅಷ್ಟೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿತ್ತು. ಸುಮಾರು 80 ಸಿಂಗಲ್ ಸ್ಕ್ರೀನ್‌ಗಳಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿತ್ತು. ಇವುಗಳಲ್ಲಿ ಶೇ.90ರಷ್ಟು ಸ್ಕ್ರೀನ್‌ಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಬೆಂಗಳೂರು, ಕೋಲಾರ, ತುಮಕೂರು ಏರಿಯಾಗಳಿಂದ 57 ಸ್ಕ್ರೀನ್, ಮಂಡ್ಯ, ಮೈಸೂರು, ಕೊಡಗು, ಹಾಸನ ಏರಿಯಾಗಳಲ್ಲಿ 6 ಸ್ಕ್ರೀನ್, ಚಿತ್ರದುರ್ಗ-ದಾವಣಗೆರೆ ಏರಿಯಾದಿಂದ 4 ಸ್ಕ್ರೀನ್, ಶಿವಮೊಗ್ಗ-ಮಂಗಳೂರು 4 ಸ್ಕ್ರೀನ್, ಉತ್ತರ ಕರ್ನಾಟಕ 7 ಸ್ಕ್ರೀನ್ ಹಾಗೂ ಹೈದರಾಬಾದ್ ಕರ್ನಾಟಕದ 2 ಸ್ಕ್ರೀನ್‌ಗಳಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ.

ಮೊದಲ ದಿನದ ಕಲೆಕ್ಷನ್ ಎಷ್ಟು?

'ಡೆವಿಲ್' ಸಿನಿಮಾದ ಅಡ್ವಾನ್ ಬುಕಿಂಗ್‌ ಮಧ್ಯಾಹ್ನ 1 ಗಂಟೆಗೆ ಓಪನ್‌ ಮಾಡಲಾಗಿತ್ತು. ಅಲ್ಲಿಂದ ಸಂಜೆ 8 ಗಂಟೆಯವರೆಗೆ ಶೇ.80 ರಿಂದ 90ರಷ್ಟು ಸ್ಕ್ರೀನ್‌ಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಕರ್ನಾಟಕದ ವಿತರಕರ ವಲಯದಿಂದ ಸಿಕ್ಕಿರುವ ಅಂಕಿ-ಅಂಶಗಳ ಪ್ರಕಾರ 'ಡೆವಿಲ್' ಅಡ್ವಾನ್ಸ್ ಬುಕಿಂಗ್‌ನಿಂದ ಸುಮಾರು ₹79 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಈ ಅಂಕಿ-ಅಂಶಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯತೆ ಇದ್ದು, 12 ಗಂಟೆ ಒಳಗೆ ಕಲೆಕ್ಷನ್‌ನಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ.

Darshan Devil movie Advance Booking day 1 box office collection report and screen details

ಫಸ್ಟ್ ಕಲೆಕ್ಷನ್ ಲೆಕ್ಕಾಚಾರವೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದೆಂಬ ಕುತೂಹಲ ಕೂಡ ಹುಟ್ಟಿಕೊಂಡಿದೆ. ವಿತರಕರ ವಲಯದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ. ಇದರ ಪ್ರಕಾರ, 'ಡೆವಿಲ್' ಸಿನಿಮಾದ ಕಲೆಕ್ಷನ್ ಮೊದಲ ಅಂದಾಜು ₹8 ರಿಂದ ₹10 ಕೋಟಿಗಂತೂ ಕಮ್ಮಿಯಿಲ್ಲ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಇನ್ನೂ ಕಂಪ್ಲೀಟ್ ಆಗಿ ಬುಕಿಂಗ್ ಓಪನ್ ಆಗಿಲ್ಲ. ಮಲ್ಟಿಪ್ಲೆಕ್ಸ್‌ನಲ್ಲಿ ಸೋಮವಾರದಿಂದ ಬುಕಿಂಗ್ ಓಪನ್ ಆಗುವ ಸಾಧ್ಯತೆಯಿದೆ. ಆಗ ಇನ್ನಷ್ಟು ಕ್ಲಾರಿಟಿ ಸಿಗಬಹುದು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, ವಿತರಕರ ವಲಯ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Darshan Devil movie Advance Booking day 1 box office collection report and screen details.
Read more about: darshan devil kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X