Devil Box Office: ದರ್ಶನ್ ಜೈಲ್‌ನಲ್ಲಿ ಇದ್ರೂ 'ಡೆವಿಲ್' ಭರ್ಜರಿ ಕಲೆಕ್ಷನ್; ಮೊದಲ ದಿನದ ಬಾಕ್ಸಾಫೀಸ್ ಲೆಕ್ಕಾಚಾರವೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ಕ್ಷಣಗಳು ಉಳಿದಿವೆ. ಬೆಳ್ಳಂಬೆಳಗ್ಗೆ ಆರು ಗಂಟೆಯಿಂದಲೇ ದರ್ಶನ್ ಅಭಿಮಾನಿಗಳಿಗಾಗಿ ಶೋ ಆರಂಭ ಆಗುತ್ತಿದೆ. ಮೊದಲ ದಿನವೇ ಆರಕ್ಕೂ ಅಧಿಕ ಶೋಗಳು ಪ್ರದರ್ಶನ ಕಾಣುತ್ತಿವೆ. ಹೀಗಾಗಿ 'ಡೆವಿಲ್' ಮೊದಲ ಎಷ್ಟು ಕಲೆಕ್ಷನ್ ಮಾಡಬಹುದೆಂಬ ಲೆಕ್ಕಾಚಾರಗಳು ಶುರುವಾಗಿವೆ.
ಎಲ್ಲವೂ ಸರಿಯಾಗಿ ಇದ್ದಿದ್ದರೆ, ಇಷ್ಟೊತ್ತಿಗಾಗಲೇ 'ಡೆವಿಲ್' ಸಿನಿಮಾ ರಿಲೀಸ್ ಆಗಬೇಕಿತ್ತು. 'ಕಾಟೇರ' ಯಶಸ್ಸಿನ ಜೋಷ್‌ನಲ್ಲಿಯೇ ಮತ್ತೊಂದು ಸಿನಿಮಾ ಮೆಗಾ ಹಿಟ್ ಮಾಡುವ ಜೋಷ್‌ನಲ್ಲಿ ಇದ್ದರು. ಅಷ್ಟರಲ್ಲೇ ರೇಣುಕಾಸ್ವಾಮಿ ಪ್ರಕರಣದಲ್ಲಿ 2ನೇ ಆರೋಪಿಯಾಗಿ ಜೈಲು ಸೇರಿದ್ದಾರೆ. ಕೊನೆಗೂ ಹೇಗೋ ಕಷ್ಟಪಟ್ಟು ಸಿನಿಮಾವನ್ನಂತೂ ಮುಗಿಸಿಕೊಟ್ಟಿದ್ದರು. ಹೀಗಾಗಿ ನಿರ್ದೇಶಕ ಮಿಲನ ಪ್ರಕಾಶ್ ಈ ಸಿನಿಮಾವನ್ನು ದರ್ಶನ್ ಅನುಪಸ್ಥಿತಿಯಲ್ಲಿಯೇ ರಿಲೀಸ್ ಮಾಡುವುದಕ್ಕೆ ಹೊರಟಿದ್ದಾರೆ.

ಈ ಹಿಂದೆ ದರ್ಶನ್ ಜೈಲು ಸೇರಿದ್ದಾಗ 'ಸಾರಥಿ' ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನೇ ಬರೆದಿತ್ತು. ಈಗಲೂ ಅಂತಹದ್ದೇ ಒಂದು ಮೆಗಾ ಸಕ್ಸಸ್ ಸಿಗಬಹುದೇ? ಎನ್ನುವುದನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಅಡ್ವಾನ್ಸ್ ಬುಕಿಂಗ್ ಹಾಗೂ ನಾಳೆ ಟಿಕೆಟ್‌ಗಳು ಸೇಲ್ ಆಗುವ ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿತರಕರ ವಲಯ ಮೊದಲ ದಿನದ 'ಡೆವಿಲ್' ಗಳಿಕೆಯನ್ನು ಅಂದಾಜು ಹಾಕಿದೆ. ಅದರ ಡಿಟೈಲ್ಸ್ ಇಲ್ಲಿದೆ.
ಫಸ್ಟ್ ಡೇ 'ಡೆವಿಲ್' ಶೋ ಎಷ್ಟು?
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡೆವಿಲ್' ಸಿನಿಮಾ ಮೇಲೆ ಇಡೀ ಚಿತ್ರರಂಗವೇ ಕಣ್ಣಿಟ್ಟಿದೆ. ದರ್ಶನ್ ಜೈಲಿನಲ್ಲಿರುವಾಗಲೇ ರಿಲೀಸ್ ಆಗುತ್ತಿರುವ ಸಿನಿಮಾಗೆ ಹೊರಗಡೆ ಹೇಗೆ ರೆಸ್ಪಾನ್ಸ್ ಸಿಗುತ್ತೆ? ಅನ್ನೋ ಕುತೂಹಲವಿದೆ. ಅದಕ್ಕಿಂತ ಮುನ್ನ ಮೊದಲ ದಿನ 'ಡೆವಿಲ್'ಗೆ ಎಷ್ಟು ಶೋ ಸಿಕ್ಕಿದೆ? ಅನ್ನೋದನ್ನು ನೋಡುವುದಾರೇ, 'ಡೆವಿಲ್' ಸಿನಿಮಾ ಮೊದಲ ದಿನ ಸುಮಾರು 2120 ಶೋಗಳು ಪ್ರದರ್ಶನ ಕಾಣಲಿವೆ. ಈಗಾಗಲೇ ಮೊದಲ ದಿನ ಬಹುತೇಕ ಶೋಗಳು ಕೂಡ ಹೌಸ್‌ಫುಲ್ ಆಗಿವೆ ಎಂಬ ಮಾತುಗಳು ಕೂಡ ಕೇಳುವುದಕ್ಕೆ ಸಿಗುತ್ತಿದೆ.
'ಡೆವಿಲ್' ಎಲ್ಲೆಲ್ಲಿ ಎಷ್ಟು ಶೋ?
ದರ್ಶನ್ ಸಿನಿಮಾ 'ಡೆವಿಲ್' ಸಿನಿಮಾ ಪ್ರದರ್ಶನ ಮಾಡುವುದಕ್ಕೆ ಥಿಯೇಟರ್ ಮಾಲೀಕ ಸಿಕ್ಕಾಪಟ್ಟೆ ಆಸಕ್ತಿ ತೋರಿಸಿದಂತೆ ಇದೆ. ಮೊದಲ ದಿನದ ಪ್ರತಿಕ್ರಿಯೆ ನೋಡಿಕೊಂಡು ಇನ್ನಷ್ಟು ಸ್ಕ್ರೀನ್‌ಗಳನ್ನು ಏರಿಕೆ ಮಾಡುವ ಸಾಧ್ಯತೆ ಕೂಡ ಇದೆ. ಬೆಂಗಳೂರು, ಕೋಲಾರ, ತುಮಕೂರು (BKT) ಏರಿಯಾಗಳಲ್ಲಿ ಸುಮಾರು 800 ಶೋಗಳು ಪ್ರದರ್ಶನ ಕಾಣುತ್ತಿವೆ. ಉಳಿದ ಭಾಗಗಳಲ್ಲಿ ಎಷ್ಟು ಶೋ ಪ್ರದರ್ಶನ ಆಗುತ್ತಿದೆ ಎಂದು ನೋಡುವುದಾರೇ,
ಬೆಂಗಳೂರು, ಕೋಲಾರ, ತುಮಕೂರು - 800 ಶೋಗಳು
ಮಂಡ್ಯ, ಮೈಸೂರು, ಕೊಡಗು ಹಾಸನ್-300 ಶೋಗಳು
ಚಿತ್ರದುರ್ಗ-ದಾವಣಗೆರೆ -220 ಶೋಗಳು
ಶಿವಮೊಗ್ಗ-ಮಂಗಳೂರು -250 ಶೋಗಳು
ಹುಬ್ಬಳ್ಳಿ -350 ಶೋಗಳು
ಹೈದರಾಬಾದ್ ಕರ್ನಾಟಕ -200 ಶೋಗಳು
ಒಟ್ಟು 2120 ಶೋಗಳು

ಮೊದಲ ದಿನ ಕಲೆಕ್ಷನ್ ಲೆಕ್ಕಾಚಾರವೇನು?
'ಡೆವಿಲ್' ಸಿನಿಮಾವನ್ನು ದೊಡ್ಡ ಮಟ್ಟಕ್ಕೆ ರಿಲೀಸ್ ಮಾಡುತ್ತಿರುವುದರಿಂದ ಕಲೆಕ್ಷನ್ ಕೂಡ ಅಷ್ಟೇ ದೊಡ್ಡದಾಗಿರುತ್ತೆ ಅನ್ನೋದು ಕರ್ನಾಟಕದ ವಿತರಕರ ಲೆಕ್ಕಾಚಾರ. ಫಸ್ಟ್ ಡೇ ಈ ಸಿನಿಮಾದ ಅಂದಾಜು ಗಳಿಕೆ ₹12 ಕೋಟಿಗೂ ಅಧಿಕ ಆಗಬಹುದೆಂದು ವಿತರಕರು ಲೆಕ್ಕ ಹಾಕಿದ್ದಾರೆ. ಹಾಗಿದ್ದರೆ, ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಎಂದು ನೋಡುವುದಾರೇ,
ಬೆಂಗಳೂರು, ಕೋಲಾರ, ತುಮಕೂರು - ₹6 ಕೋಟಿ
ಮಂಡ್ಯ, ಮೈಸೂರು, ಕೊಡಗು ಹಾಸನ್- ₹2 ಕೋಟಿ
ಚಿತ್ರದುರ್ಗ-ದಾವಣಗೆರೆ - ₹1 ಕೋಟಿ
ಶಿವಮೊಗ್ಗ-ಮಂಗಳೂರು - ₹1 ಕೋಟಿ
ಹುಬ್ಬಳ್ಳಿ - ₹1.25 ಕೋಟಿ
ಹೈದರಾಬಾದ್ ಕರ್ನಾಟಕ - ₹60 ಲಕ್ಷ
ಒಟ್ಟು - 11.85 ಕೋಟಿ


Click it and Unblock the Notifications










