Devil Box Office Day 15: '45', 'ಮಾರ್ಕ್' ಭರ್ಜರಿ ಗಳಿಕೆ.. 15ನೇ ದಿನ 'ಡೆವಿಲ್' ಕಲೆಕ್ಷನ್ ಏನಾಯ್ತು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ಬಾಕ್ಸಾಫೀಸ್‌ ಕಲೆಕ್ಷನ್ ಮೇಲೆ ಟ್ರೇಡ್‌ ಎಕ್ಸ್‌ಪರ್ಟ್‌ಗಳು ಬಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ದರ್ಶನ್ ಜೈಲಿನಲ್ಲಿ ಇದ್ದರೂ, ಸಿನಿಮಾದ ಕಲೆಕ್ಷನ್ ಜೋರಾಗಿ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಮೊದಲ ವಾರ ಸಿನಿಮಾ ಕಲೆಕ್ಷನ್ ಅದ್ಭುತವಾಗಿತ್ತು. ನಂತರ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಡ್ರಾಪ್ ಕಾಣುವುದಕ್ಕೆ ಶುರುವಾಗಿತ್ತು.

ಹಾಗಂತ ಕಲೆಕ್ಷನ್ ಕಮ್ಮಿಯೇನು ಆಗಿಲ್ಲ. ಒಂದು ವೇಳೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲಿಗೆ ಹೋಗದೇ ಇದ್ದಿದ್ದರೆ, ಬಾಕ್ಸಾಫೀಸ್ ಕಲೆಕ್ಷನ್ ಇನ್ನಷ್ಟು ಏರಿಕೆ ಆಗುತ್ತಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಲ್ಲದೆ ಪ್ರಚಾರ ಮಾಡಲಾಗಿತ್ತು. ಹೀಗಿದ್ದರೂ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿತ್ತು.

Darshan Devil Movie Day 15 Collection after Kichcha Sudeep Mark and Shivarajkumar Upendra 45 release

ಆದರೆ, ಎರಡನೇ ವಾರದಿಂದ 'ಡೆವಿಲ್' ಸಿನಿಮಾ ಡ್ರಾಪ್ ಕಾಣುವುದಕ್ಕೆ ಶುರುವಾಗಿತ್ತು. ಈಗ ಸಿನಿಮಾ ರಿಲೀಸ್ ಆಗಿ 16ನೇ ದಿನಕ್ಕೆ ಕಾಲಿಟ್ಟಿದೆ. ಈ 15 ದಿನಗಳಲ್ಲಿ 'ಡೆವಿಲ್' ಕಲೆಕ್ಷನ್ ಹೇಗಿದೆ? 'ಮಾರ್ಕ್' ಹಾಗೂ '45' ಸಿನಿಮಾ ರಿಲೀಸ್ ಬಳಿಕ ದರ್ಶನ್ ಸಿನಿಮಾದ ಕಲೆಕ್ಷನ್ ಏನಾಯ್ತು? ಏರಿಕೆ ಆಯ್ತಾ? ಇಳಿಕೆ ಆಯ್ತಾ? ತಿಳಿಯುವುದಕ್ಕೆ ಮುಂದೆ ಓದಿ.

'ಡೆವಿಲ್' 15 ದಿನ ಗಳಿಸಿದ್ದೆಷ್ಟು?

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಕ್ರೇಜಿ ಫ್ಯಾನ್ಸ್ ಇದ್ದಾರೆ. ಈ ಬಾರಿ 'ಡೆವಿಲ್' ಸಿನಿಮಾವನ್ನು ಗೆಲ್ಲಿಸಲೇಬೇಕು ಅಂತ ಪಣ ತೊಟ್ಟು ನಿಂತಿದ್ದರು. ತಕ್ಕ ಮಟ್ಟಿಗೆ ಸಿನಿಮಾದ ಕಲೆಕ್ಷನ್ ಕೂಡ ಆಗಿದೆ. ಅದೇ ರೇಣುಕಾಸ್ವಾಮಿ ಕೇಸ್‌ನಲ್ಲಿ ಇರದೇ ಹೋಗಿದ್ದರೆ, ದರ್ಶನ್ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗುತ್ತಿತ್ತು. ಸ್ಯಾಕ್ನಿಲ್ಕ್ ಪ್ರಕಾರ ಡೆವಿಲ್ ಸಿನಿಮಾ 15ನೇ ದಿನ ₹24 ಲಕ್ಷ ಕಲೆಕ್ಷನ್ ಆಗಿದೆ.

15 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ದರ್ಶನ್ ಸಿನಿಮಾ 'ಡೆವಿಲ್' ರಿಲೀಸ್ ಆಗಿ 16ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 15 ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಸುಮಾರು ₹30 ಕೋಟಿ ದಾಟಿದೆ. 'ಡೆವಿಲ್' ಸಿನಿಮಾ ಮೊದಲ ದಿನ ಸುಮಾರು ₹13 ಕೋಟಿಗೂ ಅಧಿಕ ಕಲೆಕ್ಷನ್ ಆಗಿತ್ತು. ಹಾಗೇ ಮೊದಲ 3 ದಿನಗಳಲ್ಲಿ ಸುಮಾರು ₹23 ಕೋಟಿಗೂ ಅಧಿಕ ಕಲೆಕ್ಷನ್ ಆಗಿತ್ತು. 15 ದಿನಗಳಲ್ಲಿ ವಿಶ್ವದಾದ್ಯಂತ ₹33.83 ಕೋಟಿ ಕಲೆಕ್ಷನ್ ಮಾಡಿದೆಯೆಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಲೈಫ್ ಟೈಮ್ ಕಲೆಕ್ಷನ್ ₹35 ಕೋಟಿ ಆಗಬಹುದೆಂದು ಹೇಳಲಾಗಿದೆ.

Darshan Devil Movie Day 15 Collection after Kichcha Sudeep Mark and Shivarajkumar Upendra 45 release

'ಮಾರ್ಕ್','45' ಬಳಿಕ 'ಡೆವಿಲ್' ಕಲೆಕ್ಷನ್ ಡ್ರಾಪ್ ಆಯ್ತಾ?

ಕಳೆದ ಎರಡು ವಾರಗಳಿಂದ 'ಡೆವಿಲ್'ಗೆ ಟಕ್ಕರ್ ಕೊಡುವ ಸಿನಿಮಾಗಳು ಇರಲಿಲ್ಲ. ಆದರೆ, ಈ ವಾರದಿಂದ 'ಮಾರ್ಕ್' ಹಾಗೂ '45' ಸಿನಿಮಾಗಳು ರಿಲೀಸ್ ಆಗಿವೆ. ಹೀಗಾಗಿ ಈ ಎರಡೂ ಸಿನಿಮಾಗಳು ತೆರೆಕಂಡ ಬಳಿಕ 'ಡೆವಿಲ್' ಕಲೆಕ್ಷನ್ ಡ್ರಾಪ್ ಆಗಿಲ್ಲ. ಹೆಚ್ಚು ಕಡಿಮೆ 14ನೇ ದಿನ ಕಲೆಕ್ಷನ್ ಆದಂತೆ 15ನೇ ದಿನವೂ ಅಷ್ಟೇ ಕಲೆಕ್ಷನ್ ಮಾಡಿದೆ. ಹೀಗಾಗಿ ವೀಕೆಂಡ್‌ನಲ್ಲಿ ಮೇಲೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಕಣ್ಣಿಟ್ಟಿದ್ದಾರೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Darshan Devil Movie Day 15 Collection after Kichcha Sudeep Mark and Shivarajkumar, Upendra 45 release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X