Devil Advance Booking:'ಡೆವಿಲ್' ಅಡ್ವಾನ್ಸ್ ಬುಕಿಂಗ್.. 3 ದಿನದ ಕಲೆಕ್ಷನ್ ಎಷ್ಟಾಯ್ತು? ದರ್ಶನ್‌ಗೆ ಗೆಲುವು ಪಕ್ಕಾನಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡೆವಿಲ್' ಸಿನಿಮಾ ರಿಲೀಸ್‌ಗೆ ಇನ್ನು ಎರಡು ದಿನ ಬಾಕಿ ಉಳಿದಿದೆ. 'ಕಾಟೇರ'ದಂತಹ ಮೆಗಾ ಹಿಟ್ ಸಿನಿಮಾ ನೀಡಿದ ಬಳಿಕ 'ಡೆವಿಲ್' ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಆದರೆ, ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿರುವುದರಿಂದ 'ಡೆವಿಲ್' ಹಿನ್ನೆಡೆಯಾಗಿರುವುದಂತೂ ನಿಜ. ಹೀಗಾಗಿ ಟ್ರೇಡ್ ಎಕ್ಸ್‌ಪರ್ಟ್‌ಗಳಿಗೇ ಈ ಸಿನಿಮಾ ದೊಡ್ಡ ಸವಾಲಾಗಿ ಕಂಡಿದೆ.

'ಡೆವಿಲ್' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಇರುವಾಗಲೇ ದರ್ಶನ್ ಜೈಲಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಇದು ಸಿನಿಮಾದ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸ್ಯಾಂಡಲ್‌ವುಡ್ ಮಂದಿ ಕೂಡ ಈ ಸಂದರ್ಭದಲ್ಲಿ ಇದೆಲ್ಲವೂ ಬೇಡವಾಗಿತ್ತು ಎಂದೇ ಅಭಿಪ್ರಾಯ ಪಟ್ಟಿದ್ದಾರೆ. ಹೀಗಿದ್ದರೂ ಮೂರು ದಿನಗಳ ಹಿಂದೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಅದಕ್ಕೆ ಪ್ರತಿಕ್ರಿಯೆ ಹೇಗೆ ಸಿಗುತ್ತಿದೆ? ಅನ್ನೋ ಕುತೂಹಲವಿದೆ.

Darshan Devil The Hero movie Advance Booking Day 3 Box office collection report

ದರ್ಶನ್ ಸಿನಿಮಾ 'ಡೆವಿಲ್'ಗೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸಿದ್ದರು. ಮೊದಲ ದಿನ ಸಿನಿಮಾ ಅಡ್ವಾನ್ಸ್ ಬುಕಿಂಗ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಇನ್ನು ಎರಡನೇ ದಿನ ಹಾಗೂ ಮೂರನೇ ದಿನ ಅಡ್ವಾನ್ಸ್ ಬುಕಿಂಗ್‌ಗೆ ಹೇಗಿದೆ ಪ್ರತಿಕ್ರಿಯೆ? ಎಷ್ಟು ಕಲೆಕ್ಷನ್ ಆಗಿದೆ? ಮೊದಲ ದಿನ ಎಷ್ಟು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತೆ? ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಆಗುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಡೆವಿಲ್' ಅಡ್ವಾನ್ಸ್ ಬುಕಿಂಗ್ 3ನೇ ದಿನದ ಕಲೆಕ್ಷನ್ ಏನು?

ಮಿಲನ ಪ್ರಕಾಶ್ ನಿರ್ದೇಶಿಸಿದ 'ಡೆವಿಲ್' ಸಿನಿಮಾ ಅಡ್ವಾನ್ಸ್ ಬುಕಿಂಗ್‌ನಲ್ಲಿ ಎಷ್ಟು ಕಲೆಕ್ಷನ್ ಆಗಬಹುದೆಂದು ಎದುರು ನೋಡುತ್ತಿದ್ದಾರೆ. ಸದ್ಯ ಸಿಂಗಲ್ ಸ್ಕ್ರೀನ್‌ಗಳಲ್ಲಷ್ಟೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿರುವುದರಿಂದ 'ಡೆವಿಲ್' ಸಿನಿಮಾ 3ನೇ ದಿನವೂ ಸುಮಾರು ₹60 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯ ಹೇಳುತ್ತಿದೆ. ಇಂದು (ಡಿಸೆಂಬರ್ 8) ರಾತ್ರಿ 12 ಗಂಟೆವರೆಗೆ ಈ ಅಂಕಿ-ಅಂಶಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

3 ದಿನಗಳ ಅಡ್ವಾನ್ಸ್ ಬುಕಿಂಗ್ ಎಷ್ಟು?

'ಡೆವಿಲ್' ಸಿನಿಮಾ ಮೂರು ದಿನಗಳಲ್ಲಿ ಡಿಸೆಂಟ್ ಆಗಿ ಕಲೆಕ್ಷನ್ ಮಾಡಿದೆ. ಮೊದಲನೇ ದಿನ ಮಧ್ಯಾಹ್ನದಿಂದ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿತ್ತು. ಆಗ ದರ್ಶನ್ ಅಭಿಮಾನಿಗಳು ಮುಗಿಬಿದ್ದು ಟಿಕೆಟ್‌ಗಳನ್ನು ಖರೀದಿ ಮಾಡಿದ್ದರು. ಎರಡನೇ ದಿನದಿಂದ ಸಹಜವಾಗಿ ಬುಕಿಂಗ್‌ಗಳು ಕಡಿಮೆಯಾಗುತ್ತಾ ಹೋಗುತ್ತೆ. ರಿಲೀಸ್‌ಗೆ ಒಂದು ದಿನ ಬಾಕಿಯಿದೆ ಎನ್ನುವಾಗ ಮತ್ತೆ ಹೆಚ್ಚಾಗುತ್ತೆ. ಈಗ ಮೂರು ದಿನಗಳಿಂದ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಏನು?

3 ದಿನಗಳ ಅಡ್ವಾನ್ಸ್ ಬುಕಿಂಗ್

ಮೊದಲನೇ ದಿನ ₹79 ಲಕ್ಷ
2ನೇ ದಿನ ₹75 ಲಕ್ಷ
3ನೇ ದಿನ ₹60 ಲಕ್ಷ
ಒಟ್ಟು ₹2.14 ಕೋಟಿ (Net)

Darshan Devil The Hero movie Advance Booking Day 3 Box office collection report
ಫಸ್ಟ್ ಡೇ ಸ್ಕ್ರೀನ್ ಲೆಕ್ಕಾಚಾರವೇನು?

ದರ್ಶನ್ 'ಡೆವಿಲ್' ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವುದಕ್ಕೆ ಪ್ಲ್ಯಾನಿಂಗ್ ನಡೆಯುತ್ತಿದೆ. ಅದರಲ್ಲೂ ಮೊದಲ ದಿನ ಕರ್ನಾಟಕದಲ್ಲಿ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ವಿತರಕರ ವಲಯದಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಮೊದಲ ದಿನ 290 ರಿಂದ 310 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಹೆಚ್ಚು ಕಡಿಮೆ 550 ರಿಂದ 580 ಸ್ಕ್ರೀನ್‌ಗಳಲ್ಲಿ 'ಡೆವಿಲ್' ಸಿನಿಮಾ ಪ್ರದರ್ಶನ ಕಾಣಬಹುದೆಂದು ಅಂದಾಜು ಮಾಡಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಹಾಗೂ ಅಡ್ವಾನ್ಸ್ ಬುಕಿಂಗ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, ವಿತರಕರ ವಲಯ, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Darshan Devil The Hero movie Advance Booking Day 3 Box office collection report.
Read more about: darshan devil kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X