Devil Box Office Day 11: 11ನೇ ದಿನ ಬಾಕ್ಸಾಫೀಸ್‌ನಲ್ಲಿ ದಿಢೀರ್ ಏರಿಕೆ; ಮತ್ತೆ ಕೋಟಿ ಗಳಿಸಿದ 'ಡೆವಿಲ್'
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ರಿಲೀಸ್ ಆಗಿ 12ನೇ ದಿನಕ್ಕೆ ಕಾಲಿಟ್ಟಿದೆ. ದರ್ಶನ್ ಜೈಲಿನಲ್ಲಿ ಇರುವಾಗ ರಿಲೀಸ್ ಆಗುತ್ತಿರುವ 2ನೇ ಸಿನಿಮಾವಿದು. ಹೀಗಾಗಿ ದರ್ಶನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಪರ್ಫಾಮ್ ಮಾಡುತ್ತೆ ಎನ್ನುವುದನ್ನು ನೋಡುವುದಕ್ಕೆ ಸಿನಿಮಾ ಮಂದಿ ತುದಿಗಾಲಲ್ಲಿ ನಿಂತಿದ್ದರು. ಇತ್ತ ದರ್ಶನ್ ಅಭಿಮಾನಿಗಳು ಸಿನಿಮಾವನ್ನು ಗೆಲ್ಲಿಸುವ ಪಣತೊಟ್ಟಿದ್ದರು.
'ಡೆವಿಲ್' ನಿರೀಕ್ಷೆ ಮಾಡಿದಂತೆ ಮೊದಲ ದಿನ ಬಿಗ್ ಓಪನಿಂಗ್ ಪಡೆದುಕೊಂಡಿತ್ತು. ಮೊದಲ ನಾಲ್ಕು ದಿನಗಳು ಸಿನಿಮಾದ ಕಲೆಕ್ಷನ್ ಕೋಟಿಗಳ ಲೆಕ್ಕದಲ್ಲಿಯೇ ಕಲೆಕ್ಷನ್ ಆಗಿತ್ತು. ಆದರೆ, 5ನೇ ದಿನದಿಂದ 'ಡೆವಿಲ್' ಬಾಕ್ಸಾಫೀಸ್ ಕಲೆಕ್ಷನ್ ಕುಸಿಯುತ್ತಾ ಮುಂದೆ ಸಾಗಿತ್ತು. ಆದರೆ, 2ನೇ ಭಾನುವಾರ ಸಿನಿಮಾದ ಕಲೆಕ್ಷನ್‌ನಲ್ಲಿ ದಿಢೀರ್ ಏರಿಕೆಯಾಗಿದೆ.

ದರ್ಶನ್, ರಚನಾ ರೈ, ಅಚ್ಯುತ್ ಕುಮಾರ್, ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಸೇರಿದಂತೆ ದೊಡ್ಡ ಸ್ಟಾರ್ ನಟರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬಿಗ್ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ 11ನೇ ದಿನ ಎಷ್ಟು ಕಲೆಕ್ಷನ್ ಮಾಡಿತು? ದಿಢೀರ್ ಏರಿಕೆ ವೀಕೆಂಡ್ ಒಂದೇ ಕಾರಣವೇ? ಸೋಮವಾರದಿಂದ ಕಲೆಕ್ಷನ್ ಏನಾಗುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
11ನೇ ದಿನ 'ಡೆವಿಲ್' ದಿಢೀರ್ ಏರಿಕೆ
ದರ್ಶನ್ ನಟನೆಯ 'ಡೆವಿಲ್' 11ನೇ ದಿನ ಬಾಕ್ಸಾಫೀಸ್‌ನಲ್ಲಿ ದಿಢೀರ್ ಏರಿಕೆ ಕಂಡಿದೆ. 7ನೇ ದಿನದಿಂದ ಬಾಕ್ಸಾಫೀಸ್ ಕಲೆಕ್ಷನ್ ಲಕ್ಷಗಳಿಗೆ ಕುಸಿದಿತ್ತು. ಈಗ ಮತ್ತೆ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 11ನೇ ₹1.24 ಕೋಟಿ ಕಲೆಕ್ಷನ್ ಮಾಡಿದೆ. 10ನೇ ದಿನವೂ ಕೂಡ ₹71 ಲಕ್ಷ ಕಲೆಕ್ಷನ್ ಮಾಡಿತ್ತು. ಇದು ಚಿತ್ರತಂಡ ಕೊಂಚ ಮಟ್ಟಿಗೆ ರಿಲೀಫ್ ಕೊಟ್ಟಿದೆ.
ವಿಜಯಲಕ್ಷ್ಮಿ ಥಿಯೇಟರ್ ವಿಸಿಟ್ ಎಫೆಕ್ಟ್
'ಡೆವಿಲ್' ಸಿನಿಮಾ ಆದ ಎರಡನೇ ವಾರ ವಿಜಯಲಕ್ಷ್ಮಿ ದರ್ಶನ್ ಅಖಾಡಕ್ಕೆ ಇಳಿದಿದ್ದಾರೆ. ಭಾನುವಾರ ಕೆಲವೆಡೆ ಥಿಯೇಟರ್‌ಗಳಿಗೆ ವಿಸಿಟ್ ಹಾಕಿದ್ದರು. ವಿಜಯಲಕ್ಷ್ಮಿ ಯಾತ್ರೆ ಸಿನಿಮಾ ಕಲೆಕ್ಷನ್ ಮೇಲೆ ಪ್ರಭಾವ ಬೀರಿದೆ. ಇದೂ ಕೂಡ ಬಾಕ್ಸಾಫೀಸ್‌ನಲ್ಲಿ 11ನೇ ದಿನ 'ಡೆವಿಲ್' ಏರಿಕೆ ಕಾಣುವುದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಎರಡನೇ ವಾರದಲ್ಲಿ ಥಿಯೇಟರ್ ವಿಸಿಟ್ ಹಾಕಿದ್ದು ಗಳಿಕೆಯಲ್ಲಿ ಏರಿಕೆ ಆಗುತ್ತಾ? ಅನ್ನೋದು ನೋಡಬೇಕಿದೆ.

11 ದಿನಗಳ ಕಲೆಕ್ಷನ್ ಎಷ್ಟು?
'ಡೆವಿಲ್' ಮೊದಲ ಎರಡು ವಾರಗಳಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ ಉಲ್ಟಾ ಆಗಿದೆ. ನಿನ್ನೆ ಅಂದರೆ 2ನೇ ಭಾನುವಾರ (ಡಿಸೆಂಬರ್ 22) 'ಡೆವಿಲ್' ಕಲೆಕ್ಷನ್ ಕೋಟಿಗೆ ಬಂದಿದ್ದು ಚಿತ್ರತಂಡದಲ್ಲಿ ಆಶಾ ಭಾವನೆ ಮೂಡಿಸಿದೆ. ಈ 11 ದಿನಗಳಲ್ಲಿ 'ಡೆವಿಲ್' ಸಿನಿಮಾ ಬರೋಬ್ಬರಿ ₹27.6 ಕೋಟಿ ಕಲೆಕ್ಷನ್ ಆಗಿದೆ. ಆದರೆ, ಸೋಮವಾರದಿಂದ ಕಲೆಕ್ಷನ್ ಹೇಗಾಗುತ್ತೆ? '45' ಹಾಗೂ 'ಮಾರ್ಕ್' ರಿಲೀಸ್ ಕಲೆಕ್ಷನ್ ಮೇಲೆ ಹೇಗೆಲ್ಲ ಪರಿಣಾಮವನ್ನು ಬೀರಬಹುದು? ಅನ್ನೋ ಸಿನಿಮಾ ಮಂದಿಯನ್ನು ಕಾಡುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











