Devil Box Office Day 13: 13ನೇ ದಿನವೂ 'ಡೆವಿಲ್‌' ಕಲೆಕ್ಷನ್ ಡ್ರಾಪ್.. ಕೈ ಹಿಡೀತಾರಾ ದರ್ಶನ್ ಫ್ಯಾನ್ಸ್?

ದರ್ಶನ್ ಸಿನಿಮಾ 'ಡೆವಿಲ್' ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿತ್ತು. ಬಿಡುಗಡೆ ಮುನ್ನ ಹಾಡುಗಳು ಹಾಗೂ ತುಣುಕುಗಳು ಕ್ರೇಜ್ ಹುಟ್ಟಿಸಿದ್ದವು. ಈ ಆಧಾರದ ಮೇಲೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ದರ್ಶನ್‌ಗೆ 'ಡೆವಿಲ್' ಬಿಗ್ ರಿಲೀಫ್ ಕೊಡಬಹುದೆಂಬ ನಿರೀಕ್ಷೆಯಿತ್ತು. ಮೊದಲ ವಾರ ಬಿಟ್ಟರೆ, ಎರಡನೇ ವಾರದಿಂದ ಕಲೆಕ್ಷನ್‌ ಡ್ರಾಪ್ ಆಗುತ್ತಿದೆ.

'ಡೆವಿಲ್' ರಿಲೀಸ್ ಆಗಿ ಎರಡು ವಾರಗಳನ್ನು ಪೂರೈಸಿದೆ. ಮೂರನೇ ವಾರಕ್ಕೆ ಕಾಲಿಟ್ಟಿದೆ. ಸುಮಾರು 13 ದಿನಗಳಲ್ಲಿ 'ಡೆವಿಲ್' ತಕ್ಕ ಮಟ್ಟಿಗೆ ಕಲೆಕ್ಷನ್ ಆಗಿದೆ. ಆದರೆ, ಸಿನಿಮಾ ಮಂದಿಯ ನಿರೀಕ್ಷೆ ಈಗ ಗಳಿಸಿದ್ದಕ್ಕಿಂತ ಹೆಚ್ಚಿತ್ತು. ಅಲ್ಲದೆ 'ಸಾರಥಿ' ಸಿನಿಮಾದಂತೆಯೇ 'ಡೆವಿಲ್' ಕೂಡ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತೆಂಬ ಆಸೆಯಿತ್ತು. ಅದು ಹುಸಿಯಾಗಿದೆ.

Darshan Rachana Rai Devil Movie Day 13 box office collection report witnessed fall

ಇನ್ನು ಈ ವಾರ 'ಡೆವಿಲ್' ಕಲೆಕ್ಷನ್ ಇನ್ನಷ್ಟು ಕಂಟಕ ಆಗುವ ಸಾಧ್ಯತೆಯಿದೆ. ಯಾಕಂದ್ರೆ, ಕಿಚ್ಚ ಸುದೀಪ್ ಸಿನಿಮಾ 'ಮಾರ್ಕ್' ಹಾಗೂ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿಯ '45' ಸಿನಿಮಾಗಳು ರಿಲೀಸ್ ಆಗಲಿವೆ. ಹೀಗಾಗಿ ಸಿನಿಮಾ 'ಡೆವಿಲ್' ಮತ್ತಷ್ಟು ಕುಸಿತ ಕಾಣಬಹುದೆಂಬ ನಿರೀಕ್ಷೆಯಿದೆ. ಅದೇನೇ ಇದ್ದರೂ, 13ನೇ ದಿನ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

13ನೇ ದಿನ 'ಡೆವಿಲ್' ಕಲೆಕ್ಷನ್ ಎಷ್ಟು?

ದರ್ಶನ್ ಸಿನಿಮಾ 'ಡೆವಿಲ್' 13ನೇ ದಿನವೂ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವಲ್ಲಿ ಹಿಂದೆ ಬಿದ್ದಿದೆ. ಭಾನುವಾರ ₹1.24 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ಭರವಸೆಯನ್ನು ನೀಡಿತ್ತು. ಆದರೆ, 12ನೇ ದಿನದಿಂದಲೇ ಶೇ.70ರಷ್ಟು ಕುಸಿತ ಕಂಡಿತ್ತು. ಈಗ 13ನೇ ದಿನ ಕೂಡ ಅಷ್ಟೇ ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಸಿನಿಮಾ 13ನೇ ದಿನ ₹32 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.

13 ದಿನಗಳ ಕಲೆಕ್ಷನ್ ಎಷ್ಟು?

ಹಾಗಂತ 'ಡೆವಿಲ್' ಕಲೆಕ್ಷನ್ ಏನು ಕಳಪೆಯಾಗಿಲ್ಲ. ಆದರೆ, ನಿರೀಕ್ಷೆ ಮಾಡಿದಷ್ಟು ನಿರ್ಮಾಪಕ ಜೇಬು ಸೇರಿಲ್ಲ. ಹಾಗೇ 3ನೇ ವಾರದಿಂದ ಥಿಯೇಟರ್‌ಗಳ ಸಂಖ್ಯೆ ಕಡಿಮೆ ಆಗುವುದರಿಂದ ಕಲೆಕ್ಷನ್‌ನಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಇನ್ನು 13 ದಿನಗಳಲ್ಲಿ 'ಡೆವಿಲ್' ಸಿನಿಮಾ ₹28.25 ಕೋಟಿ (Net) ಕಲೆಕ್ಷನ್ ಮಾಡಿದೆ. ಅದೇ Gross ಕಲೆಕ್ಷನ್ ₹33.26 ಕೋಟಿ ಆಗಿದೆ.

Darshan Rachana Rai Devil Movie Day 13 box office collection report witnessed fall

ಲೈಫ್ ಟೈಮ್ ಕಲೆಕ್ಷನ್ ಎಷ್ಟಾಗುತ್ತೆ?

ಟ್ರೇಡ್ ಎಕ್ಸ್‌ಪರ್ಟ್‌ಗಳು ಹಾಗೂ ಕರ್ನಾಟಕದ ವಿತರಕರ ಪ್ರಕಾರ, 'ಡೆವಿಲ್' ಸಿನಿಮಾ ಇನ್ನು ಎರಡರಿಂದ ಮೂರು ಕೋಟಿ ಕಲೆಕ್ಷನ್ ಮಾಡಬಹುದು. ಅಂದರೆ, ₹35 ರಿಂದ ₹36 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದೆಂದು ಅಂದಾಜು ಮಾಡಲಾಗಿದೆ. ಒಂದು ವೇಳೆ 'ಮಾರ್ಕ್' ಹಾಗೂ '45' ಎರಡೂ ಸಿನಿಮಾಗಳ ಉತ್ತಮ ಪ್ರದರ್ಶನ ಕಾಣದೇ ಹೋದರೆ, ಕಲೆಕ್ಷನ್‌ನಲ್ಲಿ ಇನ್ನು ಸ್ವಲ್ಪ ಏರಿಕೆಯಾಗುವ ಸಾಧ್ಯತೆಯಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Darshan Rachana Rai Devil Movie Day 13 box office collection report witnessed fall.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X