Devil Box Office Day 9: 9ನೇ ದಿನ 'ಡೆವಿಲ್' ಕಲೆಕ್ಷನ್‌ ಏರಿಕೆ ಆಯ್ತಾ? ಮೊದಲ ವಾರ ನಿರ್ಮಾಪಕ ಜೇಬು ಸೇರಿದ್ದೆಷ್ಟು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬಾರಿಗೆ ಜೈಲಿನಲ್ಲಿ ಇದ್ದಾಗ 'ಸಾರಥಿ' ರಿಲೀಸ್ ಆಗಿತ್ತು. ಸಿನಿ ಪ್ರೇಮಿಗಳು ಎಲ್ಲವನ್ನೂ ಮರೆತು ದರ್ಶನ್ ಕೈ ಹಿಡಿದಿದ್ದರು. ಅದರಲ್ಲೂ ಮಹಿಳೆಯರೇ ದರ್ಶನ್ ಬೆಂಬಲಕ್ಕೆ ನಿಂತು ಸಪೋರ್ಟ್ ಮಾಡಿದ್ದರು. 'ಸಾರಥಿ' ಮೆಗಾ ಬ್ಲಾಕ್‌ಬಸ್ಟರ್ ಆಗಿತ್ತು. ಈಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ದರ್ಶನ್‌ಗೆ 'ಡೆವಿಲ್' ಕೈ ಹಿಡಿಯುತ್ತಾ? ಈ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಿದೆ.

'ಡೆವಿಲ್' ರಿಲೀಸ್ ಆಗಿ ಇಂದಿಗೆ (ಡಿಸೆಂಬರ್ 20) 10ನೇ ದಿನ. ಕಳೆದ 9 ದಿನಗಳ ಬಾಕ್ಸಾಫೀಸ್‌ ಕಲೆಕ್ಷನ್ 'ಡೆವಿಲ್' ಬಾಕ್ಸಾಫೀಸ್‌ ರಿಸಲ್ಟ್ ಏನು ಅನ್ನೋದನ್ನು ಹೇಳಿ ಬಿಟ್ಟಿದೆ. ಆರಂಭದಲ್ಲಿ ಭರ್ಜರಿ ಓಪನಿಂಗ್ ಪಡೆದಿದ್ದ ಸಿನಿಮಾ ನಂತರದ ದಿನಗಳಲ್ಲಿ ಕುಸಿಯುತ್ತಾ ಹೋಗುತ್ತಿದೆ. ಮೊದಲ ದಿನದ ಕಲೆಕ್ಷನ್‌ ಅನ್ನು ಇದೂವರೆಗೂ ಹಿಂದಿಕ್ಕುವುದಕ್ಕೆ ಆಗಿಲ್ಲ.

Darshan Rachana Rai Devil Movie Day 9 and first week box office collection report

ಆರಂಭದ ನಾಲ್ಕು ದಿನಗಳು ಕೋಟಿಯಲ್ಲಿ ಕಲೆಕ್ಷನ್ ಆಗುತ್ತಿದ್ದ ಸಿನಿಮಾ, ನಂತರದ ದಿನಗಳಲ್ಲಿ ಲಕ್ಷಗಳಲ್ಲಿ ಗಳಿಕೆ ಆಗುತ್ತಿದೆ. 'ಡೆವಿಲ್' ಈಗ ಎರಡನೇ ವೀಕೆಂಡ್‌ಗೆ ಕಾಲಿಟ್ಟಿದೆ. ಈ ಎರಡು ದಿನಗಳಲ್ಲಿ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ಏರಿಕೆಯಾಗಬಹುದೇ? ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಎದುರು ನೋಡುತ್ತಿದ್ದಾರೆ. ಹಾಕಿದ್ದರೆ, 9ನೇ ದಿನ ಸಿನಿಮಾ ಗಳಿಸಿದ್ದೆಷ್ಟು? ಮೊದಲನೇ ವಾರ ನಿರ್ಮಾಪಕ ಜೇಬು ಸೇರಿದ ಹಣವೆಷ್ಟು? ಯಾವ್ಯಾವ ಏರಿಯಾದಿಂದ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

9ನೇ ದಿನದ 'ಡೆವಿಲ್' ಕಲೆಕ್ಷನ್

'ಡೆವಿಲ್'ಗೆ ವೀಕ್‌ಡೇಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಿಲ್ಲ. ಆರಂಭದ ನಾಲ್ಕು ದಿನಗಳು ಕಲೆಕ್ಷನ್ ಆಗಿದ್ದು ಬಿಟ್ಟರೆ, 5ನೇ ದಿನದಿಂದ ಕುಸಿಯುವುದಕ್ಕೆ ಶುರುವಾಗಿತ್ತು. ಹೀಗಾಗಿ 9ನೇ ದಿನವೂ ನಿರೀಕ್ಷೆಗೆ ಮೀರಿದ ಕಲೆಕ್ಷನ್ ಆಗಿಲ್ಲ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಸಿನಿಮಾ 9ನೇ ದಿನ ₹47 ಲಕ್ಷ ಕಲೆಕ್ಷನ್ ಆಗಿದೆ. ಈ ಮೂಲಕ ಸಿನಿಮಾದ ಕಲೆಕ್ಷನ್ ₹25 ಕೋಟಿ ದಾಟಿದೆ. ಭಾರತದ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ₹25.58 ಕೋಟಿ (Net) ಕಲೆಕ್ಷನ್ ಆಗಿದೆ ಎಂದು ವರದಿ ಮಾಡಿದೆ.

₹25 ಕೋಟಿಯಲ್ಲಿ ನಿರ್ಮಾಪಕ ಕೈ ಸೇರಿದ್ದೆಷ್ಟು?

ದರ್ಶನ್ 'ಡೆವಿಲ್' ನಿರ್ಮಾಪಕ ಕಮ್ ನಿರ್ದೇಶಕ ಪ್ರಕಾಶ್ ವೀರ್‌ಗೆ ಬಿಗ್ ಸಕ್ಸಸ್ ಕೊಡುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಒಂದು ವೇಳೆ ದರ್ಶನ್ ಜೈಲಿನಿಂದ ಹೊರಗೆ ಇದ್ದಿದ್ದರೆ, ಬಹುಶ: ಇನ್ನೂ ಹೆಚ್ಚು ಕಲೆಕ್ಷನ್ ಆಗುತ್ತಿತ್ತೋ ಏನೋ? ಆದರೆ, 'ಡೆವಿಲ್'ಗೆ ದರ್ಶನ್ ಜೈಲು ವಾಸ ಸಹಾಯ ಮಾಡಿಲ್ಲ. ಬಾಕ್ಸಾಫೀಸ್‌ನಲ್ಲಿ ಗಳಿಕೆ ಕಂಡ ₹25 ಕೋಟಿಯಲ್ಲಿ ಥಿಯೇಟರ್‌ಗಳಿಂದ ಶೇರು ಅಂತ ನಿರ್ಮಾಪಕರಿಗೆ ₹17 ಕೋಟಿಯಷ್ಟು ಸೇರಿದೆ ಎಂದು ವಿತರಕರ ವಲಯ ಅಭಿಪ್ರಾಯ ಪಟ್ಟಿದೆ.

Darshan Rachana Rai Devil Movie Day 9 and first week box office collection report

ಯಾವ್ಯಾವ ಏರಿಯಾದಿಂದ ಎಷ್ಟೆಷ್ಟು ಶೇರ್?

ದರ್ಶನ್ ಕರಿಯರ್‌ಗೆ 'ಡೆವಿಲ್' ಸಿನಿಮಾ ಗೆಲ್ಲಲೇ ಬೇಕಿತ್ತು. ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದು ಅವರ ವೃತ್ತಿ ಬದುಕಿಗೆ ದೊಡ್ಡ ಏಟು. 'ಡೆವಿಲ್' ಈ ಸಂಕಷ್ಟದಿಂದ ಪಾರು ಮಾಡುತ್ತೆಂದು ನಂಬಲಾಗಿತ್ತು. ಆದರೆ, ಇಲ್ಲಿವರೆಗೂ ಹಾಗೆ ಆಗಿಲ್ಲ. ಒಂದು ವಾರದಲ್ಲಿ ಕಮ್ಮಿ ಅಂದರೂ ₹25 ಕೋಟಿ ಶೇರ್ ನಿರ್ಮಾಪಕ ಕೈ ಸೇರಿದ್ದರೆ ಇನ್ನೊಂದು ವಾರದಲ್ಲಿ ಲಾಭದಲ್ಲಿ ಇರುತ್ತಿತ್ತು. ಆದರೆ, ಹಾಗಾಗಲಿಲ್ಲ. ಹಾಗಿದ್ದರೆ, ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಇಲ್ಲಿದೆ ರಿಪೋರ್ಟ್.

'ಡೆವಿಲ್' ಮೊದಲ ವಾರದ ಶೇರ್ (ಏರಿಯಾ ಆಧಾರದಲ್ಲಿ)

ಬಿಕೆಟಿ ₹8 ಕೋಟಿ
ಎಎಂಸಿಎಚ್ ₹3 ಕೋಟಿ
ಶಿವಮೊಗ್ಗ-ದಕ್ಷಿಣ ಕನ್ನಡ ₹1.25 ಕೋಟಿ
ಚಿತ್ರದುರ್ಗ-ದಾವಣಗೆರೆ ₹1.5 ಕೋಟಿ
ಹುಬ್ಬಳ್ಳಿ ₹2.25 ಕೋಟಿ
ಹೈದರಾಬಾದ್ ಕರ್ನಾಟಕ ₹1 ಕೋಟಿ
ಒಟ್ಟು ₹17 ಕೋಟಿ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Darshan Rachana Rai Devil Movie Day 9 and first week box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X