Devil Box Office Day 2: ಫಸ್ಟ್ ಡೇ ಜಾಕ್‌ಪಾಟ್.. 2ನೇ ದಿನ 'ಡೆವಿಲ್' ಕಲೆಕ್ಷನ್ ಎಷ್ಟು? ಕೈ ಹಿಡಿದರೇ ಸೆಲೆಬ್ರೆಟೀಸ್?

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನಿಜಕ್ಕೂ ಈಗ ಅಗ್ನಿ ಪರೀಕ್ಷೆ ಶುರುವಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರಿಂದ ವೃತ್ತಿ ಬದುಕಿಗೆ ದೊಡ್ಡ ಮಟ್ಟದಲ್ಲಿ ಹಿನ್ನಡೆಯಾಗಿದೆ. ತನ್ನ ಖದರ್ ಅನ್ನು ಹಾಗೇ ಉಳಿಸಿಕೊಳ್ಳುವುದಕ್ಕೆ ಇರುವುದೊಂದು 'ಡೆವಿಲ್'. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಬೇಕು. 'ಸಾರಥಿ'ಯಂತೆಯೇ ಬಾಕ್ಸಾಫೀಸ್‌ನಲ್ಲಿ ಸಿನಿಮಾವೇನಾದರೂ ಮೋಡಿ ಮಾಡಿದರೆ, ಮತ್ತೊಂದು ಹೊಸ ಇನ್ನಿಂಗ್ ಶುರುವಾದಂತೆ.

ದರ್ಶನ್ ಅಭಿಮಾನಿಗಳು 'ಡೆವಿಲ್' ಸಿನಿಮಾವನ್ನು ಗೆಲ್ಲಿಸುವುದಕ್ಕೆ ಪಣ ತೊಟ್ಟು ನಿಂತಿದ್ದಾರೆ. ಅವರೇ ಮುಂದೆ ನಿಂತು ಥಿಯೇಟರ್‌ಗಳ ಮುಂದೆ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಮೊದಲ ದಿನ ಬಹುತೇಕ ಚಿತ್ರಮಂದಿರಗಳು ತುಂಬಿದ ಪ್ರದರ್ಶನವನ್ನು ಕಂಡಿತ್ತು. ಚಿತ್ರತಂಡ ಕೊಟ್ಟ ಅಂಕಿ-ಅಂಶಗಳಂತೆ ಈ ಸಿನಿಮಾ ₹13.8 ಕೋಟಿ ಆಗಿದೆ. ಇದು ಎರಡನೇ ದಿನವೂ ಮುಂದುವರೆದಿಯೇ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. 'ಡೆವಿಲ್' ಎರಡನೇ ದಿನ ಕಲೆಕ್ಷನ್ ಕೊಂಚ ಮಟ್ಟಿಗೆ ಡ್ರಾಪ್ ಕಂಡಿದೆ.

Darshan Rachana Rai starrer Devil Movie day 2 Box office collection report

ದರ್ಶನ್, ರಚನಾ ರೈ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ರಿಲೀಸ್ ಆಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನ ವೀಕ್‌ಡೇಸ್ ಆಗಿದ್ದರಿಂದ ಜನರು ಥಿಯೇಟರ್‌ ಕಡೆಗೆ ಮುಖ ಮಾಡಿದಂತೆ ಕಾಣುತ್ತಿಲ್ಲ. ಆದರೆ, ವೀಕೆಂಡ್‌ನಲ್ಲಿ 'ಡೆವಿಲ್' ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕುತ್ತಿದ್ದಾರೆ. ಅಸಲಿಗೆ 'ಡೆವಿಲ್' 2ನೇ ದಿನ ಗಳಿಸಿದ್ದೆಷ್ಟು? ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ವೀಕೆಂಡ್ ಲೆಕ್ಕಾಚಾರವೇನು? ತಿಳಿಯುವುದಕ್ಕೆ ಮುಂದೆ ಓದಿ.

2ನೇ ದಿನ 'ಡೆವಿಲ್' ಗಳಿಸಿದ್ದೆಷ್ಟು?

ಮೊದಲ ದಿನ ಫ್ಯಾನ್ಸ್ ಶೋಗಳಿತ್ತು. ಬಹುತೇಕ ಚಿತ್ರಮಂದಿಗಳು ದಿನಗ ಐದಾರು ಶೋಗಳನ್ನು ಪ್ರದರ್ಶನ ಮಾಡಿದ್ದರು. ಹೀಗಾಗಿ ಫಸ್ಟ್ ಡೇ ಕಲೆಕ್ಷನ್ ಸಖತ್ತಾಗಿಯೇ ಆಗಿತ್ತು. ಅದೇ 2ನೇ ದಿನಕ್ಕೆ ಫ್ಯಾನ್ಸ್ ಶೋಗಳು ಇರೋದಿಲ್ಲ. ಹೀಗಾಗಿ ಸಹಜವಾಗಿಯೇ ಕಲೆಕ್ಷನ್‌ ಹಿಂದೆ-ಮುಂದೆ ಆಗುತ್ತೆ. ಕರ್ನಾಟಕದ ವಿತರಕರ ಪ್ರಕಾರ 2ನೇ ದಿನಕ್ಕೆ 'ಡೆವಿಲ್' ಸಿನಿಮಾ ₹5 ರಿಂದ ₹5.5 ಕೋಟಿ ಕೋಟಿ ಕಲೆಕ್ಷನ್ ಆಗಿದೆ. ಬಾಕ್ಸಾಫೀಸ್ ಕಲೆಕ್ಷನ್ ಅಂಕಿ ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ನೀಡಿದ ಆರಂಭದ ಕಲೆಕ್ಷನ್ 3.50 ಕೋಟಿ.

ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್?

ದರ್ಶನ್ 'ಡೆವಿಲ್'ಗೆ ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಮೈಸೂರು ಭಾಗಗಳಲ್ಲಿ ಒಳ್ಳೆಯ ಕಲೆಕ್ಷನ್ ಆಗಿದೆ. ಅದರಲ್ಲೂ ಬೆಂಗಳೂರು, ಕೋಲಾರ, ತುಮಕೂರು ಏರಿಯಾಗಳಲ್ಲಿ ಹೆಚ್ಚು ಕಲೆಕ್ಷನ್ ಹೆಚ್ಚು ಕಲೆಕ್ಷನ್ ಆಗಿದೆ. ಕರ್ನಾಟಕದ ವಿತರಕರ ವಲಯದಿಂದ ಹೊರ ಬಿದ್ದಿರುವ 'ಡೆವಿಲ್' ಸಿನಿಮಾದ 2ನೇ ದಿನದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

2ನೇ ದಿನ ಕಲೆಕ್ಷನ್ (Area Wise) (ಅಂದಾಜು)

ಬೆಂಗಳೂರು, ಕೋಲಾರ, ತುಮಕೂರು - ₹2.5 ಕೋಟಿ (470 ಶೋ)
ಮಂಡ್ಯ, ಮೈಸೂರು, ಕೊಡಗು, ಹಾಸನ- ₹80 ಲಕ್ಷ (180 ಶೋ)
ಚಿತ್ರದುರ್ಗ-ದಾವಣಗೆರೆ - ₹50 ಲಕ್ಷ (140 ಶೋ)
ಶಿವಮೊಗ್ಗ-ಮಂಗಳೂರು - ₹50 ಲಕ್ಷ (170 ಶೋ)
ಹುಬ್ಬಳ್ಳಿ - ₹75 ಲಕ್ಷ (240 ಶೋ)
ಹೈದರಾಬಾದ್ ಕರ್ನಾಟಕ - ₹35 ಲಕ್ಷ (140 ಶೋ)
ಒಟ್ಟು - ₹5.4 ಕೋಟಿ

Darshan Rachana Rai starrer Devil Movie day 2 Box office collection report
2 ದಿನಗಳ ಒಟ್ಟು ಕಲೆಕ್ಷನ್ ?

ದರ್ಶನ್ ಸಿನಿಮಾ 'ಡೆವಿಲ್' ಫಸ್ಟ್ ಡೇ ಬಂಪರ್ ಕಲೆಕ್ಷನ್ ಆಗಿದೆ. ಅದೇ 2ನೇ ದಿನ ಈ ಸಿನಿಮಾ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ಆದರೆ, ವೀಕ್‌ಡೆಸ್ ಹಾಗೂ ಶೋಗಳ ಸಂಖ್ಯೆ ಕಡಿಮೆ ಆಗಿದ್ದರಿಂದ ಈ ಇಳಿಕೆ ಕಂಡಿದೆ. ಒಟ್ಟು ಎರಡು ದಿನಗಳ ಕಲೆಕ್ಷನ್ ಎಷ್ಟು ಅಂತ ನೋಡುವುದಾರೇ,

2 ದಿನಗಳ ಕಲೆಕ್ಷನ್ (ಅಂದಾಜು)

ಮೊದಲ ದಿನ ₹13.8 ಕೋಟಿ
2ನೇ ದಿನ ₹5.4 ಕೋಟಿ
ಒಟ್ಟು ₹19.20 ಕೋಟಿ

ವೀಕೆಂಡ್‌ ಲೆಕ್ಕಾಚಾರವೇನು?

ದರ್ಶನ್ 'ಡೆವಿಲ್' ಸಿನಿಮಾ ಕಳೆದ ಎರಡು ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಆಗಿದೆ. ವೀಕೆಂಡ್‌ನಲ್ಲೂ ಇನ್ನೂ ಹೆಚ್ಚು ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಮೊದಲೆರಡು ದಿನ ಹೆಚ್ಚು-ಕಡಿಮೆ ₹20 ಕೋಟಿ ಕಲೆ ಹಾಕಿದೆ. ಶನಿವಾರ ಹಾಗೂ ಭಾನುವಾರ ಈ ಎರಡು ದಿನಗಳಲ್ಲಿ ₹15 ರಿಂದ ₹20 ಕೋಟಿ ಕಲೆಕ್ಷನ್ ಮಾಡಿದರೆ, ಹೆಚ್ಚು ಕಡಿಮೆ ₹50 ಕೋಟಿ ಹತ್ತಿರ ಗಳಿಕೆ ಆದಂತಾಗುತ್ತೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Darshan Rachana Rai starrer Devil Movie day 2 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X