Devil Box Office Day 3: 3ನೇ ದಿನ ಹೇಗಿದೆ 'ಡೆವಿಲ್' ಬಾಕ್ಸಾಫೀಸ್? ಭಾನುವಾರ ಚಮತ್ಕಾರ ಆಗುತ್ತಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ಈ ವಾರ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾಗಿರುವ ಈ ಸಿನಿಮಾದ ಬಾಕ್ಸಾಫೀಸ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅದಕ್ಕೆ ಕಾರಣ ಹೊಸತೇನು ಅಲ್ಲ. ದರ್ಶನ್ ಜೈಲಿನಲ್ಲಿ ಇರುವುದರಿಂದ 'ಡೆವಿಲ್' ಭವಿಷ್ಯ ಎಲ್ಲರಿಗೂ ಕುತೂಹಲ. ಈ ಸಿನಿಮಾ ಗೆದ್ದರೆ ಏನು? ಗೆಲ್ಲದಿದ್ದರೆ ಏನು? ಅನ್ನೋ ಪ್ರಶ್ನೆ ಎಲ್ಲರ ಕ್ಯೂರಿಯಾಟಿಸಿಗೆ ಪ್ರಮುಖ ಕಾರಣ.
ಈ ಹಿಂದೆ ದರ್ಶನ್ ನಟಿಸಿದ 'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕೇವಲ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿಯೇ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಒಂದು ವೇಳೆ ಎಲ್ಲವೂ ಸರಿಯಿದ್ದಿದ್ದರೆ, 'ಡೆವಿಲ್' ಕೂಡ ಬಾಕ್ಸಾಫೀಸ್‌ನಲ್ಲಿ ಹೆಚ್ಚು ಕಡಿಮೆ ನಿರಾಸವಾಗಿ ₹100 ಕೋಟಿ ಕ್ಲಬ್ ಸೇರುವುದರಲ್ಲಿ ಅನುಮಾನವಿರಲಿಲ್ಲ. ಆದ್ರೀಗ ರೇಣುಕಾಸ್ವಾಮಿ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿದ್ದರಿಂದ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತಾ? ಇಲ್ವಾ? ಅನ್ನೋ ಗೊಂದಲ ಸಿನಿಮಾ ಮಂದಿಯಲ್ಲಿದೆ.

ಮೊದಲ ದಿನ 'ಡೆವಿಲ್'ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದ ವಿತರಕರ ಪ್ರಕಾರ, ಎರಡನೇ ದಿನವೂ ಡಿಸೆಂಟ್ ಕಲೆಕ್ಷನ್ ಆಗಿದೆ. ಆದರೆ, 3ನೇ ದಿನದ ಕಲೆಕ್ಷನ್ 'ಡೆವಿಲ್' ತಂಡ ನಿರೀಕ್ಷೆ ಮಾಡಿದಷ್ಟು ಆಗಿಲ್ಲ ಎನ್ನಲಾಗಿದೆ. ಹಾಗಿದ್ದರೆ, 3ನೇ ದಿನದ 'ಡೆವಿಲ್' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಭಾನುವಾರ 'ಡೆವಿಲ್'ಗೆ ಹೇಗಿದೆ ರೆಸ್ಪಾನ್ಸ್? ತಿಳಿಯುವುದಕ್ಕೆ ಮುಂದೆ ಓದಿ.
3ನೇ ದಿನ 'ಡೆವಿಲ್' ಕಲೆಕ್ಷನ್
3ನೇ ದಿನ 'ಡೆವಿಲ್' ಕಲೆಕ್ಷನ್‌ನಲ್ಲಿ ಇಳಿಕೆಯಾಗಿದೆ. 2ನೇ ದಿನಕ್ಕಿಂತ 3ನೇ ದಿನ ಕೊಂಚ ಮಟ್ಟಿಗೆ ಏರಿಕೆ ಕಂಡಿದೆ. ಆದರೂ, ವೀಕೆಂಡ್‌ನಲ್ಲಿ ಸಿನಿಮಾ ಕಲೆಕ್ಷನ್ ಹೆಚ್ಚಾಗಬೇಕಿತ್ತು ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ಅಭಿಪ್ರಾಯ. ಬಾಕ್ಸಾಫೀಸ್ ಕಲೆಕ್ಷನ್ ಅಂಕಿ ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ಪ್ರಕಾರ, 'ಡೆವಿಲ್' 3ನೇ ದಿನದ ಕಲೆಕ್ಷನ್ ₹3.75 ಕೋಟಿ ಆಗಿದೆ. ಇನ್ನು ಕರ್ನಾಟಕದ ವಿತರಕರ ವಲಯದ ಲೆಕ್ಕಾಚಾರದ ಪ್ರಕಾರ, ₹4.68 ಕೋಟಿ ಆಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್?
'ಡೆವಿಲ್' ಸಿನಿಮಾ ಬೆಂಗಳೂರು, ಕೋಲಾರ, ತುಮಕೂರು ಏರಿಯಾಗಳಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗಿದೆ. ಈ ಏರಿಯಾಗಳು ಬಿಟ್ಟರೆ, ಮಂಡ್ಯ, ಮೈಸೂರು ಏರಿಯಾಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇನ್ನು 'ಡೆವಿಲ್' ಸಿನಿಮಾ ಯಾವ್ಯಾವ ಏರಿಯಾಗಳಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಎಂದು ನೋಡುವುದಾರೇ,
ಬೆಂಗಳೂರು, ಕೋಲಾರ, ತುಮಕೂರು - ₹2.2 ಕೋಟಿ
ಮಂಡ್ಯ, ಮೈಸೂರು, ಕೊಡಗು, ಹಾಸನ - ₹80 ಲಕ್ಷ
ಚಿತ್ರದುರ್ಗ-ದಾವಣಗೆರೆ - ₹45 ಲಕ್ಷ
ಶಿವಮೊಗ್ಗ-ಮಂಗಳೂರು - ₹38 ಲಕ್ಷ
ಹುಬ್ಬಳ್ಳಿ - ₹55 ಲಕ್ಷ
ಹೈದರಾಬಾದ್ ಕರ್ನಾಟಕ - ₹30 ಲಕ್ಷ
ಒಟ್ಟು - ₹4.68 ಕೋಟಿ (ವಿತರಕರ ವಲಯದ ಲೆಕ್ಕಾಚಾರ)

ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಮೂರು ದಿನಗಳ ಒಟ್ಟು ಕಲೆಕ್ಷನ್ ಸ್ಯಾಕ್ನಿಲ್ಕ್ ಲೆಕ್ಕಾಚಾರ ಹಾಗೂ ಕರ್ನಾಟಕದ ವಿತರಕರ ಲೆಕ್ಕಾಚಾರದಲ್ಲಿ ವ್ಯತ್ಯಾಸವಿದೆ. ಈ ಎರಡೂ ಮೂಲಗಳಿಂದ ಸಿಕ್ಕಿರುವ ಬಾಕ್ಸಾಫೀಸ್ ಅಂಕಿ-ಅಂಶಗಳು ಹೀಗಿವೆ.
3 ದಿನಗಳ ಕಲೆಕ್ಷನ್ (ವಿತರಕರ ಲೆಕ್ಕ)
ಮೊದಲ ದಿನ ₹13.8 ಕೋಟಿ
2ನೇ ದಿನ ₹5.4 ಕೋಟಿ
3ನೇ ದಿನ ₹4.68 ಕೋಟಿ
ಒಟ್ಟು ₹23.88 ಕೋಟಿ
3 ದಿನಗಳ ಕಲೆಕ್ಷನ್ (ಸ್ಯಾಕ್ನಿಲ್ಕ್)
ಮೊದಲ ದಿನ ₹10 ಕೋಟಿ
2ನೇ ದಿನ ₹3.4 ಕೋಟಿ
3ನೇ ದಿನ ₹3.75 ಕೋಟಿ
ಒಟ್ಟು ₹17.15 ಕೋಟಿ
ಭಾನುವಾರದ ಲೆಕ್ಕಾಚಾರವೇನು?
'ಡೆವಿಲ್' ಭಾನುವಾರದ ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಮಾಡುತ್ತೆಂಬ ನಿರೀಕ್ಷೆಯಿದೆ. ಮೊದಲ ವೀಕೆಂಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆದರೆ, ಮುಂದಿನ ದಿನಗಳಲ್ಲೂ ಡಿಸೆಂಟ್ ನಂಬರ್‌ಗಳನ್ನು ಎಕ್ಸ್‌ಪೆಕ್ಟ್ ಮಾಡಬಹುದು. ಹೀಗಾಗಿ ಭಾನುವಾರ ಕಲೆಕ್ಷನ್ 'ಡೆವಿಲ್' ಸಿನಿಮಾಗೆ ತುಂಬಾನೇ ಮುಖ್ಯ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











