Devil Box Office Day 4: ಮೊದಲ ಭಾನುವಾರ 'ಡೆವಿಲ್' ಸಿನಿಮಾದ ಕಲೆಕ್ಷನ್ ಏನು? ದರ್ಶನ್ ಸಿನಿಮಾ ಗೆಲ್ತಾ?
ದರ್ಶನ್ 'ಡೆವಿಲ್' ರಿಲೀಸ್ ನಿಜಕ್ಕೂ ಚಾಲೆಂಜಿಂಗ್ ಆಗಿತ್ತು. ಜೈಲಿನಲ್ಲಿ ಇರುವಾಗ ರಿಲೀಸ್ ಆಗುತ್ತಿರುವ ಎರಡನೇ ಸಿನಿಮಾವಿದೆ. ಮೊದಲ ಬಾರಿ 'ಸಾರಥಿ' ರಿಲೀಸ್ ಆದಾಗ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಮೆಗಾ ಬ್ಲಾಕ್‌ಬಸ್ಟರ್ ಆಗಿತ್ತು. ದರ್ಶನ್‌ಗೆ ಮರು ಜನ್ಮ ನೀಡಿತ್ತು. ಆದರೆ, ಎರಡನೇ ಬಾರಿಗೂ ಹಾಗೇ ಆಗುತ್ತಾ? ಈ ಪ್ರಶ್ನೆ ಉತ್ತರ ಸಿಗುವುದಕ್ಕೆ ಇನ್ನೂ ಕೆಲವು ದಿನಗಳು ಹೋಗಬೇಕು.
'ಡೆವಿಲ್' ರಿಲೀಸ್ ಆಗಿ ಇಂದಿಗೆ (ಡಿಸೆಂಬರ್ 15) 5ನೇ ದಿನ. ಮೊದಲ ಸೋಮವಾರದ ಅಗ್ನಿ ಪರೀಕ್ಷೆಯನ್ನು ಗೆಲ್ಲಬೇಕಿದೆ. ಇನ್ನೊಂದು ಕಡೆ ಕಳೆದ ನಾಲ್ಕು ದಿನ ಕಲೆಕ್ಷನ್‌ನಲ್ಲಿ ದೊಡ್ಡ ಮಟ್ಟದ ಏರಿಳಿತಗಳೇನು ಕಾಣಿಸುತ್ತಿಲ್ಲ. ವೀಕೆಂಡ್‌ನಲ್ಲಿ 'ಡೆವಿಲ್' ಸಿನಿಮಾ ಹೆಚ್ಚು ಕಡಿಮೆ ₹8.50 ಕೋಟಿಯಿಂದ ₹9 ಕೋಟಿವರೆಗೂ ಕಲೆಕ್ಷನ್ ಮಾಡಿದೆ. ಇದೇ ದರ್ಶನ್ ಹೊರಗಿದ್ದಿದ್ದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಬಹುದಿತ್ತು.

ಪ್ರಕಾಶ್ ವೀರ್ (ಮಿಲನ ಪ್ರಕಾಶ್) ನಿರ್ದೇಶಿಸಿರುವ 'ಡೆವಿಲ್' ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಆದರೆ, ನಂತರದ ದಿನಗಳಲ್ಲಿ ಶೇ.50ರಷ್ಟು ಡ್ರಾಪ್ ಆಗಿದೆಯೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ. ಹಾಗಿದ್ದರೆ, ನಾಲ್ಕನೇ ದಿನವಾದ ಭಾನುವಾರ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ಸಿನಿಮಾ ಇಲ್ಲಿವರೆಗೂ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ? ತಿಳಿಯುವುದಕ್ಕೆ ಮುಂದೆ ಓದಿ.
4ನೇ ದಿನ 'ಡೆವಿಲ್' ಕಲೆಕ್ಷನ್ ಎಷ್ಟು?
'ಡೆವಿಲ್' ಕಲೆಕ್ಷನ್ 4ನೇ ದಿನ ಕೊಂಚ ಏರಿಕೆ ಕಂಡಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ ಭಾನುವಾರ ಶೇ.12 ರಷ್ಟು ಏರಿಕೆಯಾಗಿದೆ. ಆದರೆ, ನಿರೀಕ್ಷೆ ಇನ್ನೂ ಹೆಚ್ಚು ಇತ್ತು ಅನ್ನೋದು ಅಷ್ಟೇ ಸತ್ಯ. ಬಾಕ್ಸಾಫೀಸ್ ಕಲೆಕ್ಷನ್ ಅಂಕಿ ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ಪ್ರಕಾರ, 'ಡೆವಿಲ್' ನಾಲ್ಕನೇ ದಿನ ₹4.25 ಕೋಟಿ ಆಗಿದೆ ಎಂದಿದೆ. ಇದು ಆರಂಭದ ಲೆಕ್ಕಾಚಾರ ಆಗಿದ್ದರೂ ಅಂತಿಮ ಅಂಕಿ ಅಂಶಗಳು ಹೆಚ್ಚೇನು ಏರಿಕೆ ಆಗುವ ಸಾಧ್ಯತೆಯಿಲ್ಲ.
4 ದಿನಗಳ ಒಟ್ಟು ಕಲೆಕ್ಷನ್
ದರ್ಶನ್ ಸಿನಿಮಾ 'ಡೆವಿಲ್' ಸಿನಿಮಾ ಮೊದಲ ನಾಲ್ಕು ದಿನಗಳ ಕಲೆಕ್ಷನ್ ಡಿಸೆಂಟ್ ಆಗಿದೆ. ಸ್ಯಾಕ್ನಿಲ್ಕ್ ಲೆಕ್ಕಾಚಾರ ಹಾಗೂ ಕರ್ನಾಟಕದ ವಿತರಕರ ವಲಯದ ಅಂಕಿ-ಅಂಶಗಳನ್ನು ವಿಭಿನ್ನವಾಗಿದೆ. ಹೀಗಾಗಿದ್ದರೂ, ಮೊದಲ ನಾಲ್ಕು ದಿನಗಳಲ್ಲಿ ₹25 ಕೋಟಿ ಕ್ಲಬ್ ಸೇರಲು 'ಡೆವಿಲ್' ಹಿಂದೆ ಬಿದ್ದಿದೆ. ನಾಲ್ಕು ದಿನಗಳಲ್ಲಿ ₹21.45 ಕೋಟಿ ಕಲೆಕ್ಷನ್ ಆಗಿದ್ದಾಗಿ ಸ್ಯಾಕ್ನಿಲ್ಕ್ ವರದಿ ಮಾಡಿದೆ.
4 ದಿನಗಳ ಕಲೆಕ್ಷನ್ (ಸ್ಯಾಕ್ನಿಲ್ಕ್)
ಮೊದಲ ದಿನ ₹10 ಕೋಟಿ
2ನೇ ದಿನ ₹3.4 ಕೋಟಿ
3ನೇ ದಿನ ₹3.80 ಕೋಟಿ
4ನೇ ದಿನ ₹4.25 ಕೋಟಿ
ಒಟ್ಟು ₹21.45 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











