Tere Ishg Mein Box Office Day 3:₹50 ಕೋಟಿ ಗಳಿಸಿದ ಧನುಷ್ ಸಿನಿಮಾ; ಹಿಂದಿ ಪ್ರೇಕ್ಷಕರ ಮನಸ್ಸು ಗೆದ್ದ ತಮಿಳು ನಟ
ಧನುಷ್ ವೃತ್ತಿ ಬದುಕೇ ವಿಚಿತ್ರವಾಗಿದೆ. ಈ ವರ್ಷ ಧನುಷ್ ನಟಿಸಿದ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲೊಂದು ಬಾಲಿವುಡ್ ಸಿನಿಮಾ 'ತೇರೆ ಇಷ್ಕ್ ಮೇ'. ಕಳೆದ ವಾರವಷ್ಟೇ ಈ ಸಿನಿಮಾ ವಿಶ್ವದಾದ್ಯಂತ ತೆರೆಕಂಡು, ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ಮಾಡಿತ್ತಿದೆ. ಈ ಸಿನಿಮಾಗೂ ಮುನ್ನ ರಿಲೀಸ್ ಆಗಿದ್ದ ಇನ್ನೊಂದು ಸಿನಿಮಾ 'ಇಡ್ಲಿ ಕಡಾಯಿ'.
ಅಪ್ಪಟ ತಮಿಳು ಆಡಿಯನ್ಸ್‌ಗಾಗಿಯೇ ನಿರ್ಮಾಣ ಮಾಡಿದ್ದ 'ಇಡ್ಲಿ ಕಡಾಯಿ' ಪ್ರೇಕ್ಷಕರಿಗೆ ಅಷ್ಟೊಂದು ಹಿಡಿಸಲಿಲ್ಲ. ತಾವೇ ನಿರ್ದೇಶಿಸಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿವುದಕ್ಕೆ ಸೋತಿತ್ತು. ಇದರ ಹಿಂದೆನೇ ಧನುಷ್ ಸಿನಿಮಾ 'ತೇರೆ ಇಷ್ಕ್ ಮೇ' ರಿಲೀಸ್ ಆಗಿದೆ. ಹಿಂದಿ ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ಮೂರು ದಿನದ ಒಳ್ಳೆಯ ಕಲೆಕ್ಷನ್ ಆಗಿದೆ.

ಆನಂದ್ ಎಲ್. ರಾಯ್ ಹಾಗೂ ಧನುಷ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಮತ್ತೊಂದು ಸಿನಿಮಾಗೆ ಪ್ರೇಕ್ಷಕರು ಜೈ ಎಂದಿದ್ದಾರೆ. ಕೇವಲ ಮೂರೇ ದಿನಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ₹50 ಕೋಟಿಯ ಗಡಿ ದಾಟಿದೆ. ಹಾಗಿದ್ದರೆ, ವೀಕೆಂಡ್‌ನಲ್ಲಿ ಈ ಸಿನಿಮಾಗೆ ರೆಸ್ಪಾನ್ಸ್ ಹೇಗಿದೆ? ಮೂರನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
'ತೇರೆ ಇಷ್ಕ್ ಮೇ' 3ನೇ ದಿನದ ಕಲೆಕ್ಷನ್
ಕಳೆದ ಶುಕ್ರವಾರ (ನವೆಂಬರ್ 28) ರಿಲೀಸ್ ಆಗಿದ್ದ 'ತೇರೆ ಇಷ್ಕ್ ಮೇ' ಸಿನಿಮಾ ಬಾಕ್ಸಾಫೀಸ್ ಕಮಾಲ್ ಮಾಡುತ್ತಿದೆ. ಮೊದಲ ಮೂರು ದಿನ ಸಿನಿಮಾ ಕಲೆಕ್ಷನ್ ₹50 ಕೋಟಿ ರೂಪಾಯಿ ದಾಟಿದೆ. ಬಾಕ್ಸಾಫೀಸ್ ಲೆಕ್ಕಾಚಾರಗಳನ್ನು ಕೊಡುವ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಸಿನಿಮಾ ಮೂರನೇ ದಿನ (ನವೆಂಬರ್ 30) ಭಾರತದಾದ್ಯಂತ ₹18.75 ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ದಿನಕ್ಕೆ ಹೋಲಿಸಿದರೆ, ಮೂರನೇ ದಿನದ ಕಲೆಕ್ಷನ್‌ನಲ್ಲಿ ಮತ್ತಷ್ಟು ಏರಿಕೆಯಾಗಿದೆ.
3 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಧನುಷ್ ಸಿನಿಮಾ 'ತೇರೆ ಇಷ್ಕ್ ಮೇ' ಬಿಡುಗಡೆಗೂ ಮುನ್ನವೇ ಸದ್ದು ಮಾಡಿತ್ತು. ಎ.ಆರ್. ರೆಹಮಾನ್ ಕಂಪೋಸ್ ಮಾಡಿದ ಹಾಡುಗಳು, ಸಿನಿಮಾದ ಟ್ರೈಲರ್ ಪ್ರೇಕ್ಷಕರಿಗೆ ಇಷ್ಟ ಆಗಿದ್ದವು. ಹೀಗಾಗಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಅದರಂತೆ ಮೂರು ದಿನಗಳಲ್ಲಿ ಭಾರತದಾದ್ಯಂತ ₹51.75 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂರು ದಿನಗಳ ಕಲೆಕ್ಷನ್ ಹೀಗಿದೆ.
3 ದಿನಗಳ ಕಲೆಕ್ಷನ್
1ನೇ ದಿನ ₹16 ಕೋಟಿ
2ನೇ ದಿನ ₹17 ಕೋಟಿ
3ನೇ ದಿನ ₹18.75 ಕೋಟಿ
ಒಟ್ಟು ₹51.75 ಕೋಟಿ

ಸೋಮವಾರದ ಪರೀಕ್ಷೆ ಗೆಲ್ಲುತ್ತಾ?
ಧನುಷ್ ಸಿನಿಮಾ ಮೊದಲ ಮೂರು ಬಾಕ್ಸಾಫೀಸ್ 50 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ನಾಲ್ಕನೇ ದಿನವಾದ ಇಂದಿನ (ಡಿಸೆಂಬರ್ 1) ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಕಣ್ಣಿಟ್ಟಿದ್ದಾರೆ. ಒಂದು ವೇಳೆ ಸೋಮವಾರದ ಪರೀಕ್ಷೆಯಲ್ಲಿ ಧನುಷ್ ಸಿನಿಮಾ ಗೆದ್ದವರೆ, ಬಾಕ್ಸಾಫೀಸ್‌ನಲ್ಲಿ ಗೆದ್ದಂತೆ. ಸದ್ಯ ಧನುಷ್ ಅವರ ಈ ಒನ್ ಸೈಡ್ ಲವ್ ಸ್ಟೋರಿಗೆ ಹಿಂದಿ ಪ್ರೇಕ್ಷಕರು ಫಿದಾ ಆಗಿದ್ದು, ಸಿನಿಮಾ ಕಲೆಕ್ಷನ್ ಮೇಲೆ ಸಿನಿಮಾದ ಯಶಸ್ಸು ನಿಂತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











