Tere Ishk Mein Box Office Day 4: ಸೋಮವಾರ ಪರೀಕ್ಷೆ ಗೆದ್ದಿತೇ ಧನುಷ್ ಸಿನಿಮಾ? ಎಷ್ಟು ಕಲೆಕ್ಷನ್?

ರಜನಿಕಾಂತ್ ಮಾಜಿ ಅಳಿಯ ನಟಿಸಿದ ಬಾಲಿವುಡ್ ಸಿನಿಮಾ 'ತೇರೆ ಇಷ್ಕ್ ಮೇ'ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡ ಬಳಿಕ ಧನುಷ್ ಸಿನಿಮಾ ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿದೆ. ಧನುಷ್ ನಟಿಸಿದ ಹಿಂದಿನ ಎರಡು ಸಿನಿಮಾಗಳು 'ಕುಬೇರ' ಹಾಗೂ 'ಇಡ್ಲಿ ಕಡಾಯಿ' ಆ ಮಟ್ಟಿಗೆ ಸದ್ದು ಮಾಡಿರಲಿಲ್ಲ.

'ತೇರೆ ಇಷ್ಕ್ ಮೇ' ಧನುಷ್ ಹಾಗೂ ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರಾಯ್ ಕಾಂಬಿನೇಷನ್‌ನಲ್ಲಿ ಬಂದಿರೋ ಮತ್ತೊಂದು ಹಿಟ್ ಸಿನಿಮಾ. ದಕ್ಷಿಣ ಭಾರತದ ನಟನನ್ನು ಇಟ್ಕೊಂಡು ನಿರ್ದೇಶಕ ಆನಂದ್ ಎಲ್‌.ರಾಯ್ ಮತ್ತೆ ಗೆದ್ದಿದ್ದಾರೆ. ಮೊದಲ ಮೂರು ದಿನದಲ್ಲೇ ₹50 ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿತ್ತು. ಆದರೆ, ಅಸಲಿ ಆಟ ಶುರುವಾಗುವುದೇ ಸೋಮವಾರದಿಂದ.

Dhanush Kriti Sanon movie Tere Ishg Mein Day 4 Box office Collection report

ಸೋಮವಾರ ಪರೀಕ್ಷೆಯಲ್ಲಿ ಸಿನಿಮಾ ಗೆದ್ದರೆ, ಇನ್ನೊಂದು ವಾರ ಬಾಕ್ಸಾಫೀಸ್‌ ಬಗ್ಗೆ ಚಿಂತೆ ಮಾಡಬೇಕಿಲ್ಲ. ಹೀಗಾಗಿ ಎಲ್ಲಾ ಸಿನಿಮಾಗಳಿಗೆ ಸೋಮವಾರ ಅನ್ನೋದು ಅಗ್ನಿ ಪರೀಕ್ಷೆಯಾಗಿರುತ್ತೆ. ಹಾಗಿದ್ದರೆ, 'ತೇರೆ ಇಷ್ಕ್ ಮೇ' ಬಾಲಿವುಡ್ ಸಿನಿಮಾ ಸೋಮವಾರ ಪರೀಕ್ಷೆ ಗೆದ್ದಿತೇ? ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಆಯ್ತು? ಸಿನಿಮಾ ಹಿಟ್ ಆಯ್ತಾ? ಪ್ಲಾಪ್ ಆಯ್ತಾ? ತಿಳಿಯುವುದಕ್ಕೆ ಮುಂದೆ ಓದಿ.

ಸೋಮವಾರದ ಪರೀಕ್ಷೆ ಗೆದ್ದಿತೇ 'ತೇರೆ ಇಷ್ಕ್ ಮೇ'?

ಧನುಷ್ ಹಾಗೂ ಕೃತಿ ಸನೋನ್ ಜೋಡಿ ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿತ್ತು. 'ತೇರೆ ಇಷ್ಕ್ ಮೇ' ಬಿಡುಗಡೆಗೂ ಮುನ್ನವೇ ಎ.ಆರ್‌ ರೆಹಮಾನ್ ಕಂಪೋಸ್ ಮಾಡಿದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈ ಹಾಡುಗಳು ಮೊದಲ ಮೂರು ದಿನ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆದುಕೊಂಡು ಬರುತ್ತೆ ಅನ್ನೋದು ಗೊತ್ತಿತ್ತು. ಆದರೆ, 4ನೇ ದಿನ ಅಂದರೆ, ಸೋಮವಾರದ ಪರೀಕ್ಷೆಯಲ್ಲಿ ಸಿನಿಮಾ ಗೆದ್ದಿತೇ ಅನ್ನೋದಕ್ಕೆ ಸ್ಯಾಕ್ನಿಲ್ಕ್ ವರದಿಗನ್ನು ಕೊಟ್ಟಿದೆ. ಇದರ ಪ್ರಕಾರ ಸೋಮವಾರ ₹8.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

4 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ಧನುಷ್ ಸಿನಿಮಾ 'ತೇರೆ ಇಷ್ಕ್ ಮೇ' ಒನ್ ಸೈಡ್ ಲವ್‌ ಸ್ಟೋರಿ. ಆನಂದ್ ಎಲ್. ರಾಯ್ ನಿರ್ದೇಶಿಸಿದ ಈ ಎಮೋಷನಲ್, ರಗಡ್ ಲವ್ ಸ್ಟೋರಿ ಕಳೆದ ನಾಲ್ಕು ದಿನಗಳಿಂದ ಸದ್ದು ಮಾಡುತ್ತಿದೆ. ನಾಲ್ಕನೇ ದಿನ ಬಾಕ್ಸಾಫೀಸ್‌ನಲ್ಲಿ ಶೇ. 50ರಷ್ಟು ಡ್ರಾಪ್ ಕಂಡಿದೆ. ಹೀಗಿದ್ದರೂ, ಸಿನಿಮಾದ ಕಲೆಕ್ಷನ್ ₹60 ಕೋಟಿ ದಾಟಿದೆ. ಮೊದಲ ನಾಲ್ಕು ದಿನಗಳ ಒಟ್ಟು ಕಲೆಕ್ಷನ್ ಹೀಗಿದೆ.

3 ದಿನಗಳ ಕಲೆಕ್ಷನ್

1ನೇ ದಿನ ₹16 ಕೋಟಿ
2ನೇ ದಿನ ₹17 ಕೋಟಿ
3ನೇ ದಿನ ₹18.75 ಕೋಟಿ
4ನೇ ದಿನ ₹8.25 ಕೋಟಿ
ಒಟ್ಟು ₹60.25 ಕೋಟಿ

Dhanush Kriti Sanon movie Tere Ishg Mein Day 4 Box office Collection report

ಮೊದಲ ವಾರದ ಲೆಕ್ಕಾಚಾರವೇನು?

'ತೇರೆ ಇಷ್ಕ್ ಮೇ' ತಮಿಳು ವರ್ಷನ್ ಕೂಡ ರಿಲೀಸ್ ಆಗಿದೆ. ಆದರೆ, ಧನುಷ್ ನಟಿಸಿದ ಬಾಲಿವುಡ್ ಸಿನಿಮಾಗೆ ತಮಿಳರು ಅಷ್ಟೊಂದು ಆಸಕ್ತಿ ತೋರಿಲ್ಲ. ಮೂರು ದಿನಗಳಲ್ಲಿ ಕೇವಲ ₹2.25 ಕೋಟಿ ಕಲೆಕ್ಷನ್ ಮಾಡಿದೆಯಷ್ಟೇ. ಓಳ್ಳೆಯ ಓಪನಿಂಗ್ ಪಡೆದುಕೊಂಡಿರುವ ಈ ಸಿನಿಮಾ ಇನ್ನೂ ಒಂದು ವಾರ ಹೀಗೆ ಕಲೆಕ್ಷನ್ ಮಾಡಬೇಕಿದೆ. ಹಾಗಿದ್ದರೆ, ಸಿನಿಮಾ ₹100 ಕೋಟಿ ಕ್ಲಬ್ ಸೇರಬಹುದು. ಆದರೆ, ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್' ಇದೇ ವಾರ ರಿಲೀಸ್ ಆಗುತ್ತಿದ್ದು, 'ತೇರೆ ಇಷ್ಕ್ ಮೇ' ಸಿನಿಮಾ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Dhanush, Kriti Sanon movie Tere Ishg Mein Day 4 Box office Collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X