Tere Ishk Mein Box Office Day 5:5ನೇ ದಿನ 'ತೇರೆ ಇಷ್ಕ್ ಮೇ' ಬಂಪರ್ ಕಲೆಕ್ಷನ್: ರಣ್‌ವೀರ್ ಸಿನಿಮಾಗೆ ಸಂಕಷ್ಟ?
ಬಹಳ ದಿನಗಳ ಬಳಿಕ ಬಾಲಿವುಡ್‌ನಲ್ಲಿ ಮತ್ತೆ ಗೆಲುವು ಕಾಣಿಸುತ್ತಿದೆ. ಧನುಷ್, ಕೃತಿ ಸನೋನ್ ನಟನೆಯ 'ತೇರೆ ಇಷ್ಕ್ ಮೇ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿದೆ. ಮೊದಲ ಮೂರು ದಿನ ಉತ್ತಮ ಕಲೆಕ್ಷನ್ ಮಾಡಿದ್ದ ಸಿನಿಮಾ, ಸೋಮವಾರದ (ಡಿಸೆಂಬರ್ 1) ಕೊಂಚ ಮಟ್ಟಿಗೆ ಹಿಂದೆ ಬಿದ್ದಿತ್ತು. ಅಲ್ಲಿಗೆ ವೀಕ್‌ಡೇಸ್‌ನಲ್ಲಿ ಸಿನಿಮಾ ಕಲೆಕ್ಷನ್ ಡ್ರಾಪ್ ಆಗುತ್ತೆ ಎಂದೇ ನಿರೀಕ್ಷೆ ಮಾಡಲಾಗಿತ್ತು.
ಆದರೆ, 'ತೇರೆ ಇಷ್ಕ್ ಮೇ' ಟ್ರೇಡ್ ಎಕ್ಸ್‌ಪರ್ಟ್‌ಗಳ ಆ ಲೆಕ್ಕಾಚಾರವನ್ನೆಲ್ಲ ತಲೆ ಕೆಳಗೆ ಮಾಡಿದೆ. 5ನೇ ದಿನ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮತ್ತೆ ಏರಿಕೆಯಾಗಿದೆ. ಧನುಷ್ ಮತ್ತೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಸಕ್ಸಸ್ ಕಾಣುವ ಲಕ್ಷಣಗಳು ಕಾಣುತ್ತಿದೆ. ಒನ್‌ಸೈಡ್ ಲವ್ ಸ್ಟೋರಿಗೆ ಪ್ರೇಕ್ಷಕರು ಫಿದಾ ಆಗಿದ್ದರೆ. ಅದರಲ್ಲೂ ಧನುಷ್ ಹಾಗೂ ಕೃತಿ ಸಮೋನ್ ನಟನೆ ಸಿನಿ ಪ್ರಿಯರನ್ನು ಮನಸ್ಸು ಗೆದ್ದಿದೆ.

'ತೇರೆ ಇಷ್ಕ್ ಮೇ' ಸಿನಿಮಾದ ಸೋಮವಾರದ ಕಲೆಕ್ಷನ್ ಟ್ರೇಡ್ ಎಕ್ಸ್‌ಪರ್ಟ್‌ಗಳನ್ನು ಗೊಂದಲಕ್ಕೆ ಸಿಲುಕಿಸಿತ್ತು. ಶೇ.50ರಷ್ಟು ಡ್ರಾಪ್ ಆಗಿದ್ದ ಸಿನಿಮಾದ ಭವಿಷ್ಯದಲ್ಲಿ ಏನಾಗಬಹುದು ಅನ್ನೋ ಕನ್ಫ್ಯೂಷನ್‌ನಲ್ಲಿ ಇದ್ದರು. ಆದ್ರೀಗ 5ನೇ ದಿನ ಅವರ ನಿರೀಕ್ಷೆಗೂ ಮೀರಿ ಗಳಿಕೆ ಕಾಣುತ್ತಿದೆ. ಹಾಗಿದ್ದರೆ, 5ನೇ ದಿನದ ಕಲೆಕ್ಷನ್ ಎಷ್ಟು? ₹100 ಕೋಟಿ ಕಲೆಕ್ಷನ್‌ಗೆ ಇನ್ನೆಷ್ಟು ಬೇಕು? ರಣ್‌ವೀರ್ ಸಿನಿಮಾಗೆ ಇದೇ ಸಂಕಷ್ಟ ಆಗುತ್ತಾ? ತಿಳಿಯುವುದಕ್ಕೆ ಮುಂದೆ ಓದಿ.
'ತೇರೆ ಇಷ್ಕ್ ಮೇ' 5ನೇ ದಿನ ಕಲೆಕ್ಷನ್
ಧನುಷ್, ಕೃತಿ ಸನೋನ್ ಜೋಡಿ ತೆರೆಮೇಲೆ ಮೋಡಿ ಮಾಡಿದೆ. ಆನಂದ್ ಎಲ್ ರಾಯ್ ನಿರ್ದೇಶನ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಬಾಲಿವುಡ್‌ನಲ್ಲಿ ಮತ್ತೊಂದು ಲವ್‌ಸ್ಟೋರಿ ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡುವ ಲಕ್ಷಣಗಳು ಕಾಣುತ್ತಿವೆ. ಬಾಕ್ಸಾಫೀಸ್ ಅಂಕಿ ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ 5ನೇ ದಿನದ ಕಲೆಕ್ಷನ್ ಅನ್ನು ವರದಿ ಮಾಡಿದೆ. ಇದರ ಪ್ರಕಾರ, 'ತೇರೆ ಇಷ್ಕ್ ಮೇ' ಸಿನಿಮಾ 5ನೇ ದಿನ ₹10.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ₹100 ಕೋಟಿಯತ್ತ ಮುನ್ನುಗ್ಗುತ್ತಿದೆ.
5 ದಿನಗಳ ಕಲೆಕ್ಷನ್ ಎಷ್ಟು?
'ತೇರೆ ಇಷ್ಕ್ ಮೇ' ಬಾಲಿವುಡ್‌ನ ಮತ್ತೊಂದು ರಗಡ್ ಲವ್ ಸ್ಟೋರಿ. ಪ್ರೀತಿ, ಪ್ರೇಮ, ಬ್ರೇಕಪ್ ವಿಷಯಗಳನ್ನು ಇಟ್ಟುಕೊಂಡು ಹೆಣೆದ ಕಥೆಯನ್ನು ಮತ್ತೆ ಇಷ್ಟ ಪಟ್ಟಿದ್ದಾರೆ. ಅದರಲ್ಲೂ ಸಿನಿಮಾದ ಹಾಡುಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿದ್ದವು. ಎ.ಆರ್.ರೆಹಮಾನ್ ಮ್ಯೂಸಿಕ್ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಹೀಗಾಗಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಆದರೆ, ಇದು ಎಲ್ಲಿವರೆಗೆ ಮುಂದುವರೆಯುತ್ತೆ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳಿಗೂ ಕ್ಲಾರಿಟಿ ಇಲ್ಲ. 'ತೇರೆ ಇಷ್ಕ್ ಮೇ' ಮೊದಲ ಐದು ದಿನಗಳ ಕಲೆಕ್ಷನ್ ಹೀಗಿದೆ.
5 ದಿನಗಳ ಕಲೆಕ್ಷನ್ (Net)
1ನೇ ದಿನ ₹16 ಕೋಟಿ
2ನೇ ದಿನ ₹17 ಕೋಟಿ
3ನೇ ದಿನ ₹18.75 ಕೋಟಿ
4ನೇ ದಿನ ₹8.25 ಕೋಟಿ
5ನೇ ದಿನ ₹10.25 ಕೋಟಿ
ಒಟ್ಟು ₹71 ಕೋಟಿ

ರಣ್‌ವೀರ್ ಸಿನಿಮಾಗೆ ಸಂಕಷ್ಟ?
ರಣ್‌ವೀರ್ ಸಿಂಗ್ ನಟಿಸಿರುವ 'ಧುರಂಧರ್' ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಬಿಡುಗಡೆಗೂ ಮುನ್ನ ಸಿನಿಮಾ ಬಗ್ಗೆ ಅಷ್ಟೊಂದು ಕ್ರೇಜ್ ಕಾಣಿಸುತ್ತಿಲ್ಲ. ಈ ಮಧ್ಯೆ 'ತೇರೆ ಇಷ್ಕ್ ಮೇ' ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ದಿಢೀರ್ ಏರಿಕೆಯಾಗಿದೆ. ಹೀಗಾಗಿ ರಣ್‌ವೀರ್ ಸಿಂಗ್ ಸಿನಿಮಾಗೆ 'ತೇರೆ ಇಷ್ಕ್ ಮೇ' ಬಾಕ್ಸಾಫೀಸ್‌ನಲ್ಲಿ ಟಕ್ಕರ್ ಕೊಡಬಹುದಾ? ಎಂಬ ಲೆಕ್ಕಾಚಾರಗಳು ಕೂಡ ನಡೆಯುತ್ತಿವೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











