Tere Ishk Mein Box Office Day 7: 7ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ₹100 ಕೋಟಿ ದಾಟಿತೇ?
ಧನುಷ್ ಮತ್ತೊಂದು ಬಾಲಿವುಡ್ ಸಿನಿಮಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರಾಯ್ ಹಾಗೂ ಧನುಷ್ ಕಾಂಬಿನೇಷನ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ನಂತರ ವೀಕೆಂಡ್‌ನಲ್ಲೂ 'ತೇರೆ ಇಷ್ಕ್ ಮೇ' ಸಿನಿಮಾದ ಗಳಿಕೆಯಲ್ಲಿ ಸ್ಟಡಿಯಾಗಿಯೇ ಮುಂದಕ್ಕೆ ಸಾಗುತ್ತಿದೆ.
ಇತ್ತೀಚೆಗೆ ಬಾಲಿವುಡ್‌ನಲ್ಲಿ ಮತ್ತೆ ಲವ್ ಸ್ಟೋರಿಗಳ ಜಮಾನ ನಡೆಯುತ್ತಿದೆ. ಮೋಹಿತ್ ಸೂರಿಯ 'ಸಯ್ಯಾರಾ' ಮೆಗಾ ಸಕ್ಸಸ್ ಬಳಿಕ ಹಿಂದಿ ಸಿನಿಮಾ ಪ್ರಿಯರನ್ನು ಸೆಳೆಯುತ್ತಿರುವ ಮತ್ತೊಂದು ಲವ್ ಸ್ಟೋರಿ ಇದೇನೆ. ಅದರಲ್ಲೂ ಎ ಆರ್ ರೆಹಮಾನ್ ಕಂಪೋಸ್ ಮಾಡಿರುವ ಹಾಡುಗಳು ಬಿಡುಗಡೆಗೂ ಮುನ್ನವೇ ಮೋಡಿ ಮಾಡಿತ್ತು. ಈಗ ಸಿನಿಮಾ ರಿಲೀಸ್ ಆಗಿ ಒಂದು ವಾರವಾಗಿದ್ದು, ಕಲೆಕ್ಷನ್ ಡಿಸೆಂಟ್ ಆಗಿದೆ.

ದಕ್ಷಿಣ ಭಾರತದ ನಟ ಧನುಷ್ ಹೀರೋ ಆಗಿ ನಟಿಸಿರುವ ಸಿನಿಮಾ 'ತೇರೆ ಇಷ್ಕ್ ಮೇ'ಗೆ ಇದೂವರೆಗೂ ಒಳ್ಳೆಯ ಓಪಿನಿಯನ್ ಸಿಕ್ಕಿದೆ. ಈ ವಾರ ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್' ರಿಲೀಸ್ ಆಗುತ್ತಿದೆ. ಇದು ಧನುಷ್ ಸಿನಿಮಾಗೆ ದೊಡ್ಡ ಮಟ್ಟಕ್ಕೆ ಏಟು ಕೊಡಬಹುದು. ಇನ್ನೊಂದು ಕಡೆ ಬಾಲಯ್ಯನ ಸಿನಿಮಾ 'ಅಖಂಡ 2' ಪೋಸ್ಟ್‌ಪೋನ್ ಆಗಿದ್ದರಿಂದ ದಕ್ಷಿಣ ಭಾರತದಲ್ಲಿ ಲಾಭನೂ ಆಗಬಹುದು. ಹಾಗಿದ್ದರೆ, 7ನೇ ದಿನ 'ತೇರೆ ಇಷ್ಕ್ ಮೇ' ಸಿನಿಮಾದ ಕಲೆಕ್ಷನ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ತೇರೆ ಇಷ್ಕ್ ಮೇ' 7ನೇ ದಿನ ಕಲೆಕ್ಷನ್
ಧನುಷ್ ಹಾಗೂ ಕೃತಿ ಸನೋನ್ ನಟನೆಯ 'ತೇರೆ ಇಷ್ಕ್ ಮೇ' ವೀಕ್‌ಡೇಸ್ ಗಳಿಕೆಯಲ್ಲಿ ಹಿಂದೆ-ಮುಂದೆ ಆಗುತ್ತಿದೆ. 5ನೇ ದಿನದ ಕಲೆಕ್ಷನ್ ದಿಢೀರನೇ ಏರಿಕೆಯಾಗಿತ್ತು. ಬಳಿಕ 6ನೇ ದಿನ ಬಾಕ್ಸಾಫೀಸ್‌ನಲ್ಲಿ ಕುಸಿತ ಕಂಡಿತ್ತು. ಇನ್ನು 7ನೇ ದಿನ ಗಳಿಕೆಯಲ್ಲಿ ಡ್ರಾಪ್ ಕಂಡಿದೆ. ಬಾಕ್ಸಾಫೀಸ್ ಕಲೆಕ್ಷನ್‌ಗಳನ್ನು ವರದಿ ಮಾಡುವ ಸ್ಯಾಕ್ನಿಲ್ಕ್ 7ನೇ ದಿನದ ರಿಪೋರ್ಟ್ ಕೊಟ್ಟಿದ್ದು, ಈ ಸಿನಿಮಾ ₹5.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
₹100 ಕೋಟಿ ಕ್ಲಬ್ ಸೇರಿತೆ 'ತೇರೆ ಇಷ್ಕ್ ಮೇ'?
ಧನುಷ್-ಕೃತಿ ಸನೋನ್ ಜೋಡಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ಸಿಯಾಗಿದೆ. 'ತೇರೆ ಇಷ್ಕ್ ಮೇ' ಭಾರತದ ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿಯೇ ಮುನ್ನುಗ್ಗುತ್ತಿದೆ. ಸಿನಿಮಾ ರಿಲೀಸ್ ಆಗಿ ಒಂದು ವಾರದಲ್ಲಿ ವಿಶ್ವದಾದ್ಯಂತ ₹100 ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿದೆ. ಆದರೆ, ಭಾರತದ ಬಾಕ್ಸಾಫೀಸ್‌ನಲ್ಲಿ ಇನ್ನೂ ₹100 ಕೋಟಿ ಕಲೆಕ್ಷನ್ ಆಗಿಲ್ಲ. ಹಾಗಿದ್ದರೆ, 7 ದಿನಗಳ ಭಾರತದ ಕಲೆಕ್ಷನ್ ರಿಪೋರ್ಟ್ ಹೀಗಿದೆ.
7 ದಿನಗಳ ಕಲೆಕ್ಷನ್ (Net)
1ನೇ ದಿನ ₹16 ಕೋಟಿ
2ನೇ ದಿನ ₹17 ಕೋಟಿ
3ನೇ ದಿನ ₹18.75 ಕೋಟಿ
4ನೇ ದಿನ ₹8.25 ಕೋಟಿ
5ನೇ ದಿನ ₹10.25 ಕೋಟಿ
6ನೇ ದಿನ ₹6.85 ಕೋಟಿ
7ನೇ ದಿನ ₹5.75 ಕೋಟಿ
ಒಟ್ಟು ₹83.60 ಕೋಟಿ
'ಧುರಂಧರ್' ಎಫೆಕ್ಟ್ ಆಗುತ್ತಾ?
ಇನ್ನು ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿಉ ಮುನ್ನುಗ್ಗುತ್ತಿರುವ 'ತೇರೆ ಇಷ್ಕ್ ಮೇ' ಸಿನಿಮಾಗೆ ಈ ವಾರ ರಿಲೀಸ್ ಆಗುತ್ತಿರುವ 'ಧುರಂಧರ್' ಟಕ್ಕರ್ ಕೊಡುವ ಸಾಧ್ಯತೆಯಿದೆ. ಆದರೆ, 'ಧುರಂಧರ್' ಅಡ್ವಾನ್ಸ್ ಬುಕಿಂಗ್ ಕ್ರೇಜ್ ಕಾಣುತ್ತಿಲ್ಲ. ಹೀಗಾಗಿ ವೀಕೆಂಡ್‌ನಲ್ಲಿ ಧನುಷ್ ಸಿನಿಮಾಗೆ ಟಕ್ಕರ ಕೊಡಬಹುದು. ಹೀಗಿದ್ದರೂ, ಈ ವೀಕೆಂಡ್‌ನಲ್ಲಿ 'ತೇರ ಇಷ್ಕ್ ಮೇ' ಭಾರತ ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ಕಲೆಕ್ಷನ್ ಮಾಡೋದು ಪಕ್ಕಾ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











