Kuberaa Box Office Day 2: 2ನೇ ದಿನ ಚಿಗುರಿದ 'ಕುಬೇರ'; ಕರ್ನಾಟಕದಲ್ಲಿ ಧನುಷ್ ಸಿನಿಮಾಗೆ ಹೇಗಿದೆ ರೆಸ್ಪಾನ್ಸ್?
ತೆಲುಗು ಹಾಗೂ ತಮಿಳಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕುಬೇರ'. ಈ ಬಹುತಾರಾಗಣದ ಸಿನಿಮಾ ಮೇಲೆ ಎರಡೂ ಚಿತ್ರರಂಗದಲ್ಲಿಯೂ ನಿರೀಕ್ಷೆಗಳು ಇದ್ದವು. ಒಂದ್ಕಡೆ ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಇದೇ ಮೊದಲ ಬಾರಿಗೆ ನಾಗಾರ್ಜುನ ವಿಶಿಷ್ಠ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಮೂವರು ಸ್ಟಾರ್‌ಗಳು ನಟಿಸಿರುವ ಈ ಸಿನಿಮಾ ಜೂನ್ 20ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋ 'ಕುಬೇರ' ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಮೌತ್ ಪಬ್ಲಿಸಿಟಿ ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರುವುದಕ್ಕೆ ಶುರು ಮಾಡಿದೆ. ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ ಎರಡನೇ ದಿನದ ಕಲೆಕ್ಷನ್‌ನಲ್ಲಿ ಗಣನೀಯ ಏರಿಕೆ ಕಂಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಮೂರನೇ ದಿನವೂ ಸಿನಿಮಾದ ಕಲೆಕ್ಷನ್ ಹೆಚ್ಚಾಗಲಿದೆ.

ಭಿಕ್ಷುಕನಾಗಿ ಧನುಷ್ ಮತ್ತೊಂದು ಅವಾರ್ಡ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಮತ್ತೊಂದು ಭಾವನಾತ್ಮಕ ಪಾತ್ರದ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಂತ ಬಾಕ್ಸಾಫೀಸ್‌ನಲ್ಲಿ ಧನುಷ್ ಯಶಸ್ಸು ಕಾಣುತ್ತಾರಾ? ಇಲ್ಲ ಮತ್ತೊಮ್ಮೆ ಪಾತ್ರದಿಂದ ಗಮನ ಸೆಳೆದು, ಬಾಕ್ಸಾಫೀಸ್‌ನಲ್ಲಿ ಸೋಲುತ್ತಾರಾ? ಇನ್ನೊಂದು ವಾರದಲ್ಲಿ ಗೊತ್ತಾಗುತ್ತೆ. ಆದರೆ, ಎರಡನೇ ದಿನ 'ಕುಬೇರ' ಆಶಾದಾಯಕ ಪ್ರತಿಕ್ರಿಯೆ ಸಿಕ್ಕಿದೆ. ಹಾಗಿದ್ದರೆ, 'ಕುಬೇರ' 2ನೇ ದಿನ ಗಳಿಸಿದ್ದೆಷ್ಟು? ಕರ್ನಾಟಕದಲ್ಲಿ ಈ ಸಿನಿಮಾಗೆ ಹೇಗಿದೆ ರೆಸ್ಪಾನ್ಸ್? ತಿಳಿಯುವುದಕ್ಕೆ ಮುಂದೆ ಓದಿ.
2ನೇ ದಿನ 'ಕುಬೇರ' ಕಲೆಕ್ಷನ್ ಎಷ್ಟು?
ಧನುಷ್, ನಾಗಾರ್ಜುನ ಹಾಗೂ ರಶ್ಮಿಕಾ ಮಂದಣ್ಣ ಮೂವರು ಸ್ಟಾರ್‌ಗಳು ಒಟ್ಟಿಗೆ ನಟಿಸಿರುವ 'ಕುಬೇರ'ಗೆ ಬಿಗ್ ಓಪನಿಂಗ್ ಸಿಕ್ಕಿರಲಿಲ್ಲ. ಆದರೆ, ಫಸ್ಟ್ ಡೇ ರೆಸ್ಪಾನ್ಸ್ 2ನೇ ದಿನಕ್ಕೆ ಪಾಸಿಟಿವ್ ಆಗಿದೆ. ತೆಲುಗು ಹಾಗೂ ತಮಿಳು ಏರಿಯಾಗಳಲ್ಲಿ ಈ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ಟ್ರೇಡ್ ವೆಬ್ ಸೈಟ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಕುಬೇರ' 2ನೇ ದಿನ ಭಾರತದಾದ್ಯಂತ ₹17.61 ಕೋಟಿ (Net) ಕಲೆಕ್ಷನ್ ಮಾಡಿದೆ. ಇದರಲ್ಲಿ ತೆಲುಗಿನಿಂದ ₹12.77 ಕೋಟಿ, ತಮಿಳಿನಿಂದ ₹4.5 ಕೋಟಿ ಕಲೆಕ್ಷನ್ ಆಗಿದೆ.
ಕರ್ನಾಟಕದಲ್ಲಿ ಹೇಗಿದ ಕುಬೇರ ಕಲೆಕ್ಷನ್?
ಕರ್ನಾಟಕದಲ್ಲಿ 'ಕುಬೇರ'ಗೆ ಹೇಳಿಕೊಳ್ಳುವಂತಹ ಕಲೆಕ್ಷನ್ ಇಲ್ಲ. ಕೇವಲ ತೆಲುಗು ಹಾಗೂ ತಮಿಳು ಮಂದಿಯಷ್ಟೇ ಈ ಸಿನಿಮಾ ನೋಡುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ ಕೇಳಿಕೊಳ್ಳುವಂತಹ ಕಲೆಕ್ಷನ್ ಕರ್ನಾಟಕದಲ್ಲಿ ಆಗಿಲ್ಲ ಎನ್ನುತ್ತೆ ಪ್ರದರ್ಶಕರ ವಲಯದ ಮೂಲಗಳು. ಹೀಗಾಗಿ ಕರ್ನಾಟಕದಲ್ಲಿ ಆರಂಭದಲ್ಲಿ ಸಾಧಾರಣ ಪ್ರತಿಕ್ರಿಯೆ ಸಿಕ್ಕಿದೆ.
ಕರ್ನಾಟಕ ಕಲೆಕ್ಷನ್
ಮೊದಲ ದಿನ - ₹84 ಲಕ್ಷ
2ನೇ ದಿನ - ₹89 ಲಕ್ಷ
ಒಟ್ಟು ₹1.73 ಕೋಟಿ

ಒಟ್ಟು ಕಲೆಕ್ಷನ್ ಎಷ್ಟು?
'ಕುಬೇರ' ಎರಡನೇ ದಿನದಿಂದ ಬಾಕ್ಸಾಫೀಸ್‌ನಲ್ಲಿ ಚೇತರಿಸಿಕೊಂಡಿದೆ. ಧನುಷ್, ನಾಗಾರ್ಜುನ, ರಶ್ಮಿಕಾ ಮಂದಣ್ಣ ಸಿನಿಮಾ ಪಿಕಪ್ ಆಗುತ್ತಿದೆ. ಭಾರತದಾದ್ಯಂತ 'ಕುಬೇರ' ಎರಡು ದಿನಗಳಲ್ಲಿ ₹32.36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಲ್ಲಿ ತೆಲುಗು ಭಾಷೆಯಿಂದ ₹22.77 ಕೋಟಿ ಕಲೆಕ್ಷನ್ ಆಗಿದ್ದರೆ, ತಮಿಳು ಭಾಷೆಯಿಂದ ₹9 ಕೋಟಿ ಕಲೆಕ್ಷನ್ ಆಗಿದೆ. ಉಳಿದಿದ್ದು ಕನ್ನಡ ಹಾಗೂ ಹಿಂದಿಯಿಂದ ಬಂದಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











