Kuberaa Box Office Day 4: ಮೊದಲ ಸೋಮವಾರ 'ಕುಬೇರ' ಗಳಿಸಿದ್ದೆಷ್ಟು? ಪರೀಕ್ಷೆಯಲ್ಲಿ ಪಾಸಾ? ಫೇಲಾ?

ಧನುಷ್, ರಶ್ಮಿಕಾ ಮಂದಣ್ಣ ಹಾಗೂ ನಾಗಾರ್ಜನ ಮೂವರು ಜನಪ್ರಿಯ ನಟರು ಒಟ್ಟಿಗೆ ಕಾಣಿಸಿಕೊಂಡಿರುವ 'ಕುಬೇರ' ಕಳೆದ ವಾರ ರಿಲೀಸ್ ಆಗಿದೆ. ಇದು ನಿರ್ಮಾಪಕರನ್ನು 'ಕುಬೇರ'ರನ್ನಾಗಿ ಮಾಡುತ್ತಾ? ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಯಾಕಂದ್ರೆ, ಈ ಸಿನಿಮಾ ಸದ್ಯಕ್ಕೆ ವಿಚಿತ್ರ ಸ್ಥಿತಿಯಲ್ಲಿದೆ. ಸಿನಿಮಾಗೆ ಎಲ್ಲಾ ಕಡೆಯಿಂದಲೂ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿಲ್ಲ.

ಧನುಷ್ ಹಾಗೂ ನಾಗಾರ್ಜನ ದಕ್ಷಿಣ ಭಾರತದ ಇಬ್ಬರೂ ದಿಗ್ಗಜರು. ಇವರಿಬ್ಬರಿಗೂ ಅವರದ್ದೇ ಆದ ಫ್ಯಾನ್ ಫಾಲೋವಿಂಗ್ ಇದೆ. ಇನ್ನೊಂದು ಮೆಗಾ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಇದ್ದಾರೆ. ಶೇಖರ್ ಕಮ್ಮುಲ ಅವರಂತಹ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ದಾರೆ. ಇದೆಲ್ಲದರ ಹೊರತಾಗಿಯೂ ಸಿನಿಮಾದಲ್ಲಿ ₹50 ಕೋಟಿಯ ಗಡಿ ದಾಟುವುದಕ್ಕೆ ನಾಲ್ಕು ದಿನಗಳನ್ನು ತೆಗೆದುಕೊಂಡಿದೆ.

Dhanush Rashmika Mandanna Nagarjuna movie Kuberaa Day 4 Box Office collection report

ಅದೆಷ್ಟೇ ದೊಡ್ಡ ಸ್ಟಾರ್ ಸಿನಿಮಾವಿದ್ದರೂ ಮೊದಲ ಮೂರು ದಿನ ಭರ್ಜರಿಯಾಗಿ ಕಲೆಕ್ಷನ್ ಆಗುತ್ತೆ. ಆದರೆ, ಮೊದಲ ಸೋಮವಾರ ಅಂತ ಬಂದಾಗ ಬಾಕ್ಸಾಫೀಸ್‌ನಲ್ಲಿ ಅಸಲಿ ಪರೀಕ್ಷೆಯನ್ನು ಎದುರಿಸಬೇಕಾಗುತ್ತೆ. 'ಕುಬೇರ' ಕೂಡ ಇಂತಹದ್ದೊಂದು ಪರೀಕ್ಷೆ ಎದುರಿಸಿತ್ತು. ಇದರಲ್ಲಿ ಪಾಸ್ ಆಯ್ತಾ? ಇಲ್ಲ ಫೇಲ್ ಆಯ್ತಾ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಕುಬೇರ' 4ನೇ ದಿನದ ಕಲೆಕ್ಷನ್ ಎಷ್ಟು?

ಧನುಷ್ ಒಪ್ಪಿಕೊಳ್ಳುವ ಸಿನಿಮಾಗಳ ಮೇಲೆ ಸಿನಿಪ್ರಿಯರಿಗೆ ಒಂದು ನಂಬಿಕೆ. ಆ ನಂಬಿಕೆ ಇಲ್ಲಿ ಹುಸಿಯಾಗಿಲ್ಲ. ಈ ಬಾರಿ ಭಿಕ್ಷುಕನ ಪಾತ್ರದಲ್ಲಿ ಧನುಷ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಗಳಿಕೆಯಲ್ಲಿ ಯಾಕೋ ಈ ಸಿನಿಮಾ ಹಿಂದೆ ಬಿದ್ದಿದೆ ಎಂದು ಎನಿಸುತ್ತಿದೆ. ಟ್ರೇಡಿಂಗ್ ವೆಬ್ ಸೈಟ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ನಾಲ್ಕನೇ ದಿನವಾದ ನಿನ್ನೆ (ಜೂನ್ 23) 'ಕುಬೇರ' ಸಿನಿಮಾ ಭಾರತದಾದ್ಯಂತ ₹6.50 ಕೋಟಿ ಗಳಿಕೆ ಮಾಡಿದೆ.

ಸೋಮವಾರದ ಬಾಕ್ಸಾಫೀಸ್‌ನಲ್ಲಿ ಪಾಸಾ? ಫೇಲಾ?

'ಕುಬೇರ' ವೀಕೆಂಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಭಾನುವಾರ (ಜೂನ್ 22) ಅತೀ ಹೆಚ್ಚು ಅಂದರೆ, ₹17.35 ಕೋಟಿ ಕಲೆಕ್ಷನ್ ಮಾಡಿತ್ತು. ಸೋಮವಾರ ಎಷ್ಟೇ ದೊಡ್ಡ ಸ್ಟಾರ್ ಸಿನಿಮಾಗಳಿದ್ದರೂ ಕಲೆಕ್ಷನ್ ಡ್ರಾಪ್ ಆಗೇ ಆಗುತ್ತೆ. ಆದರೆ, ಕುಬೇರ ನಿರೀಕ್ಷೆಗಿಂತ ಹೆಚ್ಚು ಇಳಿಕೆ ಕಂಡಿದೆ. ಸೋಮವಾರ ಈ ಸಿನಿಮಾ ಶೇ.65ರಷ್ಟು ಇಳಿಕೆ ಕಂಡಿದೆ. ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದರೂ ಇಷ್ಟೊಂದು ಯಾಕೆ ಎನ್ನು ಪ್ರಶ್ನೆ ಸಿನಿಮಾ ಮಂದಿಯನ್ನು ಕಾಣುತ್ತಿದೆ.

Dhanush Rashmika Mandanna Nagarjuna movie Kuberaa Day 4 Box Office collection report

₹50 ಕೋಟಿ ದಾಟಿದ 'ಕುಬೇರ'

ಧನುಷ್, ರಶ್ಮಿಕಾ ಮಂದಣ್ಣ, ನಾಗರ್ಜುನ ಅವರ 'ಕುಬೇರ' ನಾಲ್ಕು ದಿನಗಳಲ್ಲಿ ₹50 ಕೋಟಿ ಗಡಿ ದಾಟಿದೆ. ಆದರೆ, ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲೂ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡಬಹುದಾಗಿದ್ದ ಈ ಸಿನಿಮಾ ಕೊಂಚ ಮಟ್ಟಿಗೆ ಹಿನ್ನೆಡೆ ಕಂಡಿದೆ. ಮೌತ್ ಪಬ್ಲಿಸಿಟಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕಲೆಕ್ಷನ್ ಮಾಡುತ್ತಾ? ನೋಡಬೇಕಿದೆ. ಮೊದಲ ನಾಲ್ಕು ದಿನಗಳ ಕಲೆಕ್ಷನ್ ಹೀಗಿದೆ.

ಮೊದಲ ದಿನ ₹14.75 ಕೋಟಿ
2ನೇ ದಿನ ₹16.50 ಕೋಟಿ
3ನೇ ದಿನ ₹17.35 ಕೋಟಿ
4ನೇ ದಿನ ₹06.50 ಕೋಟಿ
ಒಟ್ಟು ₹50.10 ಕೋಟಿ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Dhanush, Rashmika Mandanna, Nagarjuna movie Kuberaa Day 4 Box Office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X