Kuberaa Karnataka Box Office:3 ದಿನಗಳಲ್ಲಿ ಕುಬೇರ ಗಳಿಸಿದ್ದೆಷ್ಟು? ಕನ್ನಡ ಡಬ್ ವರ್ಷನ್ ಕಲೆಕ್ಷನ್ ಹೇಗಿದೆ?

ಧನುಷ್, ರಶ್ಮಿಕಾ ಮಂದಣ್ಣ ಹಾಗೂ ನಾಗಾರ್ಜುನ ಸಿನಿಮಾ 'ಕುಬೇರ' ಕಳೆದ ವಾರ ರಿಲೀಸ್ ಆಗಿತ್ತು. ಈ ಮಲ್ಟಿಸ್ಟಾರರ್‌ ಸಿನಿಮಾ ಮೇಲೆ ಪ್ರಮುಖ ಪಾತ್ರ ತೆಲುಗು ಹಾಗೂ ತಮಿಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿತ್ತು. ಥಿಯೇಟರ್‌ನಲ್ಲಿ ಧನುಷ್ ಹಾಗೂ ನಾಗಾರ್ಜುನ ಇಬ್ಬರೂ ಪ್ರೇಕ್ಷಕರನ್ನು ಮನಗೆಲ್ಲುತ್ತಾರೆ. ರಶ್ಮಿಕಾ ಮಂದಣ್ಣ ನೋಡುವುದಕ್ಕೆ ಜನರು ಕಾತುರರಾಗಿದ್ದಾರೆ ಎನ್ನುವ ಲೆಕ್ಕಾಚಾರ ಹಾಕಲಾಗಿತ್ತು.

ಮೊದಲ ದಿನ 'ಕುಬೇರ' ಕಲೆಕ್ಷನ್ ನಿರೀಕ್ಷೆ ಮಾಡಿದಷ್ಟು ಆಗಿರಲಿಲ್ಲ. ಧನುಷ್, ನಾಗಾರ್ಜುನ, ರಶ್ಮಿಕಾ ಮಂದಣ್ಣರಂತಹ ಸ್ಟಾರ್‌ಗಳಿದ್ದರೂ ಗಳಿಕೆಯಲ್ಲಿ ಹಿಂದುಳಿದಿತ್ತು. ಆದರೆ, ಪ್ರೇಕ್ಷಕರಿಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ ಬೆನ್ನಲ್ಲೇ ಎರಡನೇ ದಿನದಿಂದ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಅದರಲ್ಲೂ ಕರ್ನಾಟಕದಲ್ಲಿ 'ಕುಬೇರ' ಹವಾ ಇರಲಿಲ್ಲ. ಆದ್ರೀಗ ಇಲ್ಲೂ ಕೂಡ ಎರಡನೇ ದಿನದಿಂದ ಏರಿಕೆ ಕಂಡಿದೆ.

Dhanush Rashmika Mandanna Nagarjuna movie Kuberaa Karnataka Box Office collection Day 3 report

'ಕುಬೇರ' ಎಮೋಷನಲ್, ಡ್ರಾಮಾ ಶೈಲಿಯ ಸಿನಿಮಾ. ಭಾವನಾತ್ಮಕ ಸನ್ನಿವೇಶಗಳಲ್ಲಿ ನಟಿಸುವುದರಲ್ಲಿ ಧನುಷ್ ಎತ್ತಿದ ಕೈ. ಇನ್ನು ನಾಗಾರ್ಜುನ ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾದ ಸ್ಟಾರ್‌ ನಟರಾಗಿದ್ದರು. ಹಾಗಿದ್ದರೆ, ಮೂರನೇ ದಿನ 'ಕುಬೇರ' ಕಲೆಕ್ಷನ್ ಎಷ್ಟು? ಮೂರು ದಿನಗಳಲ್ಲಿ ಒಟ್ಟು ಕಲೆಕ್ಷನ್ ಆಗಿದೆ? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.

₹50 ಕೋಟಿ ದಾಟಿತೇ?

ಶೇಖರ್ ಕಮ್ಮುಲ ನಿರ್ದೇಶನದ 'ಕುಬೇರ' ಸಿನಿಮಾದ ಮೊದಲ ಮೂರು ದಿನಗಳಿಸಿದ ಕಲೆಕ್ಷನ್ ₹48.6 ಕೋಟಿ ಆಗಿದೆ. ಟ್ರೇಡ್ ವೆಬ್ ಸೈಟ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಕುಬೇರ' ಸಿನಿಮಾದ ಕಲೆಕ್ಷನ್ ಭಾರತದಾದ್ಯಂತ ₹50 ಕೋಟಿ ದಾಟಿಲ್ಲ. ಒಂದೂವರೆ ಕೋಟಿಯ ಅಂತರವಿದೆ. ಆದರೆ, ಮೊದಲನೇ ದಿನದಿಂದ ಮೂರನೇ ದಿನದವರೆಗೂ ಗಳಿಕೆಯನ್ನು ಏರಿಕೆಯಾಗುತ್ತಲೇ ಇದೆ.

ಮೊದಲ ದಿನ ₹14.75 ಕೋಟಿ
ಎರಡನೇ ದಿನ ₹16.5 ಕೋಟಿ
ಮೂರನೇ ದಿನ ₹17.35 ಕೋಟಿ
ಒಟ್ಟು ₹48.6 ಕೋಟಿ

ಕರ್ನಾಟಕದಲ್ಲಿ ಹೇಗಿದೆ ಕಲೆಕ್ಷನ್?

'ಕುಬೇರ' ಆರಂಭದ ದಿನಗಳಲ್ಲಿ ಕರ್ನಾಟಕದಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಆಗಿರಲಿಲ್ಲ. ತೆಲುಗು ಹಾಗೂ ತಮಿಳು ಭಾಷಿಗರು ಕರ್ನಾಟಕದಲ್ಲಿ ಈ ಸಿನಿಮಾವನ್ನು ಹೆಚ್ಚಾಗಿ ನೋಡಿದ್ದಾರೆ. ಮೊದಲ ದಿನಕ್ಕಿಂತ ಎರಡು ಹಾಗೂ ಮೂರನೇ ದಿನವೇ ಹೆಚ್ಚು ಗಳಿಕೆ ಕಂಡಿದೆ. ಅದರಲ್ಲೂ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಕುಬೇರ ಸಿನಿಮಾವನ್ನು ಹೆಚ್ಚು ಮಂದಿ ನೋಡಿದ್ದಾರೆ. ಕರ್ನಾಟಕದ ವಿತರಕರ ವಲಯದಲ್ಲಿ ಹರಿದಾಡುತ್ತಿರುವ ಲೆಕ್ಕಾಚಾರದ ಪ್ರಕಾರ ಮೂರು ದಿನಗಳಲ್ಲಿ 'ಕುಬೇರ' ₹3.17 ಕೋಟಿ ಕಲೆಕ್ಷನ್ ಆಗಿದೆ.

Dhanush Rashmika Mandanna Nagarjuna movie Kuberaa Karnataka Box Office collection Day 3 report

3 ದಿನಗಳ ಕರ್ನಾಟಕ ಕಲೆಕ್ಷನ್

ತೆಲುಗು ₹1.9 ಕೋಟಿ
ತಮಿಳು ₹64 ಲಕ್ಷ
ಹಿಂದಿ ₹28 ಲಕ್ಷ
ಕನ್ನಡ ₹35 ಲಕ್ಷ
ಒಟ್ಟು ₹3.17 ಕೋಟಿ

ಕನ್ನಡ ಡಬ್ಬಿಂಗ್‌ಗೆ ಹೇಗಿದೆ ರೆಸ್ಪಾನ್ಸ್

'ಕುಬೇರ' ಕನ್ನಡದಲ್ಲೂ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ರಜನಿಕಾಂತ್ ಸಿನಿಮಾಗಳು ಕನ್ನಡದಲ್ಲಿ ಡಬ್ ಆದರೆ, ಹೆಚ್ಚು ಗಳಿಕೆ ಆಗುತ್ತೆ. ಉಳಿದ ತಮಿಳು ನಟರ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಓಡಿದ ಉದಾಹರಣೆಗಳು ಅಷ್ಟಕ್ಕಷ್ಟೇ. ಆದರೆ, 'ಕುಬೇರ' ಕಳೆದ ಮೂರು ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಏರಿಕೆ ಕಾಣುತ್ತಿದೆ. ಮೂರನೇ ದಿನ ಅತೀ ಹೆಚ್ಚು ಅಂದರೆ, 16 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ.

'ಕುಬೇರ' ಕನ್ನಡ ಡಬ್ ವರ್ಷನ್

ಮೊದಲ ದಿನ ₹7 ಲಕ್ಷ
2ನೇ ದಿನ ₹12 ಲಕ್ಷ
3ನೇ ದಿನ ₹16 ಲಕ್ಷ
ಒಟ್ಟು ₹35 ಲಕ್ಷ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Dhanush, Rashmika Mandanna, Nagarjuna movie Kuberaa Karnataka Box Office collection Day 3 report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X