Hayagreeva Box Office: ಮೊದಲ 3 ದಿನಗಳಲ್ಲಿ ಧನ್ವೀರ್ 'ಹಯಗ್ರೀವ' ಗಳಿಸಿದ್ದೆಷ್ಟು?
ಕಳೆದ ವಾರ ಕನ್ನಡದಲ್ಲಿ ಮೂರು-ನಾಲ್ಕು ಸಿನಿಮಾಗಳು ತೆರೆಕಂಡಿದ್ದವು. ಅದರಲ್ಲಿ ಒಂದು ಧನ್ವೀರ್ ನಟನೆಯ 'ಹಯಗ್ರೀವ' ಸಿನಿಮಾ ಕೂಡ ಒಂದು. ಫೆಬ್ರವರಿ 27ರಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಆರಂಭದಲ್ಲಿ ಸೆನ್ಸಾರ್ ಸಮಸ್ಯೆಯನ್ನು ಎದುರಿಸಿದ್ದ ಸಿನಿಮಾ ಮೊದಲ ಎರಡು ಶೋಗಳು ಪ್ರದರ್ಶನ ಕಂಡಿರಲಿಲ್ಲ. ಸಿನಿಮಾ ತಂಡದ ಕೈಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ ಇದ್ದಿದ್ದರಿಂದ ಮೊದಲೆರಡು ಶೋಗಳನ್ನು ಮಿಸ್ ಮಾಡಿಕೊಂಡಿತ್ತು.
ಆರಂಭದಲ್ಲಿಯೇ ವಿಘ್ನಗಳನ್ನು ಕಂಡರೂ ಧನ್ವೀರ್ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಈ ಬಾರಿ ಧನ್ವೀರ್ ಕ್ರೈಂ ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಮಾಸ್ ಎಲಿಮೆಂಟ್ಸ್ ಜೊತೆಗೆ ಕಂಟೆಂಟ್ ಕಡೆಗೂ ಗಮನ ಹರಿಸಿದ್ದ ಧನ್ವೀರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿಯೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಧನ್ವೀರ್‌ಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಇವರೊಂದಿಗೆ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಕೆಲವು ಪ್ರಮುಖ ನಟರು ಕೂಡ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಕಥೆಯೊಂದಿಗೆ ಬಂದಿರೋ ಧನ್ವೀರ್‌ಗೆ ಈ ಬಾರಿ ಒಳ್ಳೆಯ ಗೆಲವು ಸಿಗುವ ನಿರೀಕ್ಷೆಯಿದೆ. ಕಳೆದ ಮೂರು ದಿನಗಳಲ್ಲಿ 'ಹಯಗ್ರೀವ' ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಸಿಕ್ಕಿರೋ ರೆಸ್ಪಾನ್ಸ್ ಏನು? ಎಷ್ಟು ಕೋಟಿ ಕಲೆಕ್ಷನ್ ಆಗಿದೆ? ಕರ್ನಾಟಕದ ವಿತರಕರ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಹಯಗ್ರೀವ'ಗೆ ರೆಸ್ಪಾನ್ಸ್ ಹೇಗಿದೆ?
ಧನ್ವೀರ್ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬೆಂಬಲವಿದೆ. ದರ್ಶನ್ ಜೈಲಿನಲ್ಲಿ ಇದ್ದರೂ, ಅವರ ಪುತ್ನಿ ವಿಜಯಲಕ್ಷ್ಮಿ ದರ್ಶನ್, ವಿನೀಶ್ ಖುದ್ದಾಗಿ ಬಂದು 'ಹಯಗ್ರೀವ' ಸಿನಿಮಾಗೆ ಬೆಂಬಲವನ್ನು ನೀಡಿದ್ದರು. ಹೀಗಾಗಿ ದರ್ಶನ್ ಫ್ಯಾನ್ಸ್ ಸೇರಿದಂತೆ ಸಿನಿಪ್ರಿಯರು ಥಿಯೇಟರ್‌ಗೆ ನುಗ್ಗಬಹುದೆಂಬ ನಿರೀಕ್ಷೆಯಿತ್ತು. ಅದರಂತೆಯೇ ಬೆಂಗಳೂರು, ಮಂಡ್ಯ, ಮೈಸೂರು ಭಾಗಗಳಲ್ಲಿ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
'ಹಯಗ್ರೀವ' 3 ದಿನಗಳ ಕಲೆಕ್ಷನ್ ಎಷ್ಟು?
ಧನ್ವೀರ್ ನಟನೆಯ 'ಹಯಗ್ರೀವ' ಸಿನಿಮಾ ಮೊದಲ ಎರಡು ಶೋಗಳನ್ನು ಮಿಸ್ ಮಾಡಿಕೊಂಡಿತ್ತು. ಹೀಗಿದ್ದರೂ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿತ್ತು ಎಂದು ವಿತರಕರು ಹೇಳುತ್ತಾರೆ. 2ನೇ ದಿನದಿಂದ ಸಿನಿಮಾದ ಕಲೆಕ್ಷನ್ ಉತ್ತಮವಾಗಿ ಆಗಿದೆ ಎನ್ನಲಾಗಿದೆ. ಚಿತ್ರತಂಡವೇ ಬಿಡುಗಡೆ ಮಾಡಿರುವ ಲೆಕ್ಕಾಚಾರದ ಪ್ರಕಾರ, 'ಹಯಗ್ರೀವ' ಸಿನಿಮಾ ಮೊದಲ ಮೂರು ದಿನ ಕರ್ನಾಟಕದಾದ್ಯಂತ ₹2.78 ಕೋಟಿ ರೂಪಾಯಿ (Gross) ಕಲೆಕ್ಷನ್ ಆಗಿದೆ. ಇದು ಉತ್ತಮ ಗಳಿಕೆ ಅಂತಾರೆ ಕರ್ನಾಟಕದ ವಿತರಕರು.

ಸೋಮವಾರದ ಪರೀಕ್ಷೆಯಲ್ಲಿ ಗೆಲ್ಲುತ್ತಾನಾ 'ಹಯಗ್ರೀವ'?
ಮೊದಲ ಮೂರು ದಿನ ಸಹಜವಾಗಿ ಒಳ್ಳೆಯ ಕಲೆಕ್ಷನ್ ಆಗುತ್ತೆ. ಮೊದಲ ವೀಕೆಂಡ್‌ನಲ್ಲಿ ಜನರು ಥಿಯೇಟರ್ ಕಡೆಗೆ ನುಗ್ಗುತ್ತಾರೆ. ಆದರೆ, ಮೊದಲ ಸೋಮವಾರ ಹೊಸ ಸಿನಿಮಾಗಳು ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಾರೆ. 'ಹಯಗ್ರೀವ' ಸಿನಿಮಾ ಕೂಡ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆಗಬೇಕಿದೆ. ಒಂದು ವೇಳೆ ಈ ಸೋಮವಾರದಿಂದ 2ನೇ ವೀಕೆಂಡ್‌ವರೆಗೂ ಕಲೆಕ್ಷನ್ ಸ್ಟಡಿಯಾಗಿದ್ದರೆ, ಬಾಕ್ಸಾಫೀಸ್‌ನಲ್ಲಿ ಗೆದ್ದಂತೆ. ಸದ್ಯ ಸಿನಿಮಾ ಟ್ರೇಡ್ ಲೆಕ್ಕ ಕೊಡುವ ಸ್ಯಾಕ್ನಿಲ್ಕ್ ಬೇರೆ ಲೆಕ್ಕವೇ ಕೊಟ್ಟಿದ್ದು, 'ಹಯಗ್ರೀವ' ಮೂರು ದಿನಗಳಲ್ಲಿ ₹83 ಲಕ್ಷ (net) ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











