KD The Devil Box office Day 1: 1ನೇ ದಿನ 'ಕೆಡಿ ದಿ ಡೆವಿಲ್' ಕಲೆಕ್ಷನ್ ಎಷ್ಟು? ಪ್ರೇಮ್ ಸಿನಿಮಾ ದಾಖಲೆ ಬರೆಯುತ್ತಾ?

ಕನ್ನಡದ ಬಹು ನಿರೀಕ್ಷೆಯ ಸಿನಿಮಾ 'ಕೆಡಿ ದಿ ಡೆವಿಲ್' ರಾಜ್ಯಾದ್ಯಂತ ರಿಲೀಸ್ ಆಗಿದೆ. ಜೋಗಿ ಪ್ರೇಮ್ ನಿರ್ದೇಶಿಸಿದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಂಚಲನ ಸೃಷ್ಟಿಸಿತ್ತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ರೀಷ್ಮಾ ನಾಣಯ್ಯ ಹೀರೋಯಿನ್ ಆಗಿ ನಟಿಸಿದ್ದಾರೆ. ಇವರೊಂದಿಗೆ ಪ್ರಮುಖ ಪಾತ್ರದಲ್ಲಿ ಚಿತ್ರರಂಗದ ದಿಗ್ಗಜರಾದ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಬಾಲಿವುಡ್ ನಟ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಇರೋದ್ರಿಂದ ಸಿನಿಮಾ ಓಪನಿಂಗ್ ಬಗ್ಗೆ ಚರ್ಚೆ ಮಾಡಲಾಗುತ್ತಿತ್ತು.

'ಕೆಡಿ ದಿ ಡೆವಿಲ್' ಸುಮಾರು 400ಕ್ಕೂ ಅಧಿಕ ಸ್ಕ್ರೀನ್‌ನಲ್ಲಿ ಪ್ರದರ್ಶನ ಕಂಡಿತ್ತು. ಕೆಲವು ಸಮಸ್ಯೆಗಳಿಂದಾಗಿ 6 ಗಂಟೆಗೆ ಹಾಗೂ 6.30ಕ್ಕೆ ನಡೆಯಬೇಕಿದ್ದ ಫ್ಯಾನ್ ಶೋ ರದ್ದಾಗಿತ್ತು. ಒಂದು ವೇಳೆ ಫ್ಯಾನ್ಸ್ ಶೋ ನಡೆದಿದ್ದರೆ, ಸಿನಿಮಾ ಬಾಕ್ಸಾಫೀಸ್ ಕೆಲಕ್ಷನ್ ಇನ್ನೂ ಹೆಚ್ಚಾಗುತ್ತಿತ್ತು ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾಚಾರ ಹಾಕಿದ್ದಾರೆ. ಸದ್ಯ ಮೊದಲ ದಿನದ ಗಳಿಕೆ ಬಗ್ಗೆ ಲೆಕ್ಕಾಚಾರ ಹಾಕಲಾಗುತ್ತಿದೆ.

Dhruva Sarja Ravichandran Sanjay Dutt movie KD The Devil Day 1 Box office Collection report

ಜೋಗಿ ಪ್ರೇಮ್ ಸಿನಿಮಾಗಳು ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಅದರಲ್ಲೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವುದರಿಂದ ನಿರೀಕ್ಷೆಗಳು ಹೆಚ್ಚಾಗಿವೆ. 'ಮಾರ್ಟಿನ್' ಬಳಿಕ ರಿಲೀಸ್ ಆಗುತ್ತಿರುವ ಧ್ರುವ ಸರ್ಜಾಗೆ 'ಕೆಡಿ ದಿ ಡೆವಿಲ್' ಹೇಗೆ ಓಪನಿಂಗ್ ಕೊಡುತ್ತೆ? ಮೊದಲ ದಿನದ ಕಲೆಕ್ಷನ್ ಎಷ್ಟಾಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

'ಕೆಡಿ' ಮೊದಲ ದಿನದ ಕಲೆಕ್ಷನ್ ಎಷ್ಟು?

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ 'ಕೆಡಿ ದಿ ಡೆವಿಲ್' ಮೊದಲ ದಿನ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ವರದಿ ಮಾಡುವ ಸ್ಯಾಕ್ನಿಲ್ಕ್ ಮೊದಲ ದಿನದ ರಿಪೋರ್ಟ್ ನೀಡಿದೆ. ಇದರ ಪ್ರಕಾರ, 'ಕೆಡಿ ದಿ ಡೆವಿಲ್' ಸಿನಿಮಾಗೆ ಮೊದಲ ಶೇ. 46ರಷ್ಟು ಆಕ್ಯೂಪೆನ್ಸಿ ಸಿಕ್ಕಿತ್ತು. ಸುಮಾರು 845 ಶೋಗಳಿಂದ ಫಸ್ಟ್ ಡೇ 3.50 ಕೋಟಿ ರೂಪಾಯಿ (Net) ಎಂದು ಹೇಳಿದೆ.

Also Read
KD Review: ಅದ್ಧೂರಿ 'ಪ್ರೇಮ್‌'ಲೋಕದಲ್ಲಿ 'ಕೆಡಿ' ಧ್ರುವ ಬರೆದ ರಕ್ತಚರಿತ್ರೆ
KD Review: ಅದ್ಧೂರಿ 'ಪ್ರೇಮ್‌'ಲೋಕದಲ್ಲಿ 'ಕೆಡಿ' ಧ್ರುವ ಬರೆದ ರಕ್ತಚರಿತ್ರೆ

ವಿತರಕರ ವಲಯದ ಲೆಕ್ಕಾಚಾರವೇನು?

'ಕೆಡಿ' ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿತ್ತು. ಮೂವರು ವರ್ಷಗಳ ಕಾಲ ಚಿತ್ರೀಕರಣಗೊಂಡಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡಲೇ ಬೇಕಿದೆ. ಹೀಗಾಗಿ ಎಲ್ಲರ ಕಣ್ಣು 'ಕೆಡಿ ದಿ ಡೆವಿಲ್' ಮೇಲೆ ನಿಂತಿದೆ. ಸದ್ಯ ವಿತರಕರ ವಲಯದಿಂದ ಬಂದಿರೊ ಮಾಹಿತಿ ಪ್ರಕಾರ, ಮೊದಲ ದಿನ 2.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇಂದಿನಿಂದ (ಮೇ 1) ಸಿನಿಮಾದ ಕಲೆಕ್ಷನ್‌ನಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

Dhruva Sarja Ravichandran Sanjay Dutt movie KD The Devil Day 1 Box office Collection report

ಕೆಲ ಚಿತ್ರಮಂದಿರಗಳ ಕಲೆಕ್ಷನ್

'ಕೆಡಿ ದಿ ಡೆವಿಲ್' ಸಿನಿಮಾ ಕರ್ನಾಟಕದ ಕೆಲವು ಚಿತ್ರ ಮಂದಿರಗಳಲ್ಲಿ ಉತ್ತಮ ಕಲೆಕ್ಷನ್ ಆಗಿದೆ. ಮೊದಲ ದಿನ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಬೆಂಗಳೂರು, ತುಮಕೂರು, ಮಂಡ್ಯ ಸೇರಿದಂತೆ ಹಲವು ಚಿತ್ರಮಂದಿಗಳಲ್ಲಿ ಕಲೆಕ್ಷನ್ ಉತ್ತಮವಾಗಿದೆ. ವಿತರಕರ ವಲುದಲ್ಲಿ ಚರ್ಚೆಯಾಗುತ್ತಿರುವಂತೆ ಕೆಲವು ಥಿಯೇಟರ್‌ಗಳ ಕಲೆಕ್ಷನ್ ಹೀಗಿದೆ.

ಮೋಹನ್ (ಸುಂಕದ ಕಟ್ಟೆ) ₹4 ಲಕ್ಷ
ಭಾರತಿ (ಪೀಣ್ಯ) ₹5 ಲಕ್ಷ
ನರ್ತಕಿ (ಬೆಂಗಳೂರು) ₹8 ಲಕ್ಷ
ಪ್ರಸನ್ನ (ಬೆಂಗಳೂರು) ₹6 ಲಕ್ಷ
ಗಾಯತ್ರಿ (ತುಮಕೂರು) ₹2.30 ಲಕ್ಷ
ಮಾರುತಿ (ತುಮಕೂರು) ₹2.30 ಲಕ್ಷ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Dhruva Sarja, Ravichandran, Sanjay Dutt movie KD The Devil Day 1 Box office Collection report.
Read more about: dhruva sarja boxoffice report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X