KD The Devil Box office Day 2:2ನೇ ದಿನ 'ಕೆಡಿ' ಕಲೆಕ್ಷನ್ ಏರಿಕೆ ಆಯ್ತಾ? ಏನಾಯ್ತು ಪ್ರೇಮ್ ಸಿನಿಮಾ?
ಈ ವರ್ಷದ ಕನ್ನಡದ ಬಹು ನಿರೀಕ್ಷೆಯ ಸಿನಿಮಾ 'ಕೆಡಿ ದಿ ಡೆವಿಲ್' ಏಪ್ರಿಲ್ 30ರಂದು ರಿಲೀಸ್ ಆಗಿದೆ. ಇಂದು (ಮೇ 2) ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನವೇ ಮಾಸ್ ಸಿನಿಮಾ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಜೋಗಿ ಪ್ರೇಮ್ ನಿರ್ದೇಶಿಸಿದ 'ಕೆಡಿ' ಕನ್ನಡದಲ್ಲಷ್ಟೇ ರಿಲೀಸ್ ಆಗಿದ್ದು, ಇಲ್ಲಿ ಸಿಗುವ ರೆಸ್ಪಾನ್ಸ್ ಮೇಲೆ ಉಳಿದ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಕೆಡಿ ದಿ ಡೆವಿಲ್' ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಮೊದಲ ಕನ್ನಡದಲ್ಲಿ ಬಿಡುಗಡೆ ಮಾಡಿ, ಇಲ್ಲಿ ಸಿಗುವ ಪ್ರತಿಕ್ರಿಯೆಯನ್ನು ನೋಡಿಕೊಂಡು ಬೇರೆ ಭಾಷೆಗಳಲ್ಲೂ ರಿಲೀಸ್ ಮಾಡುವುದಕ್ಕೆ ನಿರ್ಧರಿಸಲಾಗಿತ್ತು.

ಈ ಕಾರಣಕ್ಕೆ ಕರ್ನಾಟಕದ ಬಾಕ್ಸಾಫೀಸ್‌ದಲ್ಲಿ 'ಕೆಡಿ ದಿ ಡೆವಿಲ್'ಗೆ ಸಿಗುವ ರೆಸ್ಪಾನ್ಸ್ ಮೇಲೆ ಎಲ್ಲವೂ ನಿರ್ಧರಿಸಿರುತ್ತೆ. ಸದ್ಯ 2ನೇ ದಿನದ ಕಲೆಕ್ಷನ್‌ನಲ್ಲಿ ಹೆಚ್ಚಿನ ಬದಲಾವಣೆ ಏನೂ ಇಲ್ಲ. ಹೆಚ್ಚು ಕಡಿಮೆ ಮೊದಲ ದಿನ ಗಳಿಸಿದ್ದಷ್ಟೇ 2ನೇ ದಿನವೂ ಗಳಿಸಿದೆ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ. ಹಾಗಿದ್ದರೆ, 2ನೇ ದಿನದ ಕಲೆಕ್ಷನ್ ಎಷ್ಟು? ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಕೆಡಿ' 2ನೇ ದಿನದ ಕಲೆಕ್ಷನ್
ಜೋಗಿ ಪ್ರೇಮ್-ಧ್ರುವ ಸರ್ಜಾ ನಟನೆಯ 'ಕೆಡಿ ದಿ ಡೆವಿಲ್' ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿ ಮುನ್ನುಗ್ಗುತ್ತಿದೆ. ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಮಾಡುವ ಸ್ಯಾಕ್ನಿಲ್ಕ್ ಪ್ರಕಾರ, 'ಕೆಡಿ ದಿ ಡೆವಿಲ್' 2ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ 3.50 ಕೋಟಿ ರೂಪಾಯಿ (Net) ಎಂದು ವರದಿಯಾಗಿದೆ. ಆದರೆ, ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ, 2ನೇ ದಿನ ಶೋಗಳ ಸಂಖ್ಯೆ 845 ರಿಂದ 817ಕ್ಕೆ ಇಳಿದಿದ್ದರೂ, ಆಕ್ಯೂಪೆನ್ಸಿ ಶೇ.46ರಿಂದ 50ಕ್ಕೆ ಏರಿಕೆಯಾಗಿದೆ.
ವಿತರಕರ ವಲಯದ ಲೆಕ್ಕಾಚಾರ
ಇನ್ನು 'ಕೆಡಿ' ಸಿನಿಮಾದ ಕಲೆಕ್ಷನ್ ಲೆಕ್ಕಾಚಾರ ಕರ್ನಾಟಕದ ವಿತರಕರ ವಲಯದಲ್ಲಿ ಬೇರೆ ಇದೆ. ಮೊದಲ ದಿನ 2.50 ಕೋಟಿ ಕಲೆಕ್ಷನ್ ಆಗಿದೆ ಎಂದು ಲೆಕ್ಕ ಹಾಕಿದ್ದರು. ಅದೇ 2ನೇ ದಿನ ಕೂಡ 2.30 ರಿಂದ 2.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಿದ್ದಾರೆ. ನಿಮ್ಮೆ ಮೇ 1 ಕಾರ್ಮಿಕರ ದಿನ ರಜೆ ಇದ್ದು, ಪ್ರೇಕ್ಷಕರನ್ನು ಇನ್ನಷ್ಟು ಥಿಯೇಟರ್‌ಗಳಿಗೆ ಸೆಳೆಯ ಬಹುದಿತ್ತು ಅನ್ನೋದು ವಿತರಕರ ಲೆಕ್ಕಾಚಾರ.

ಚಿತ್ರಮಂದಿರಗಳ ಕಲೆಕ್ಷನ್
'ಕೆಡಿ ದಿ ಡೆವಿಲ್' ವೀಕೆಂಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಆಗುವ ಸಾಧ್ಯತೆಯಿದೆ. 2ನೇ ದಿನವೂ ಈ ಸಿನಿಮಾ ಅವರೇಜ್ ಕಲೆಕ್ಷನ್ ಆಗಿದೆ. ಇನ್ನು ಕರ್ನಾಟಕದ ಕೆಲವು ಪ್ರಮುಖ ಚಿತ್ರಮಂದಿರಗಳ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.
ನರ್ತಕಿ (ಬೆಂಗಳೂರು) ₹7 ಲಕ್ಷ
ಪ್ರಸನ್ನ (ಬೆಂಗಳೂರು) ₹5.5 ಲಕ್ಷ
ಭಾರತಿ (ಪೀಣ್ಯ) ₹3.5 ಲಕ್ಷ
ವೀರಭದ್ರೇಶ್ವರ (ಕಮಲಾನಗರ) ₹4 ಲಕ್ಷ
ಮಾರುತಿ (ತುಮಕೂರು) ₹1.90 ಲಕ್ಷ
ಗಾಯತ್ರಿ (ತುಮಕೂರು) ₹2.20 ಲಕ್ಷ
ವುಡ್‌ಲ್ಯಾಂಡ್ (ಮೈಸೂರು) ₹4.10 ಲಕ್ಷ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications
