KD The Devil; ವಿಜಯಯಾತ್ರೆಗೂ ಮುನ್ನ ಪ್ರಮುಖ ಚಿತ್ರಮಂದಿರಗಳಲ್ಲಿ 'ಕೆಡಿ' ಗಳಿಸಿದ್ದೆಷ್ಟು?
ಕನ್ನಡದ ದುಬಾರಿ ಸಿನಿಮಾ 'ಕೆಡಿ ದಿ ಡೆವಿಲ್' ರಿಲೀಸ್ ಆಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಪ್ಯಾನ್ ಇಂಡಿಯಾ ರಿಲೀಸ್ ಆಗಬೇಕಿದ್ದ ಸಿನಿಮಾ ಕೊನೆಯ ಕ್ಷಣದಲ್ಲಿ ಕನ್ನಡ ವರ್ಷನ್ ಮಾತ್ರ ರಿಲೀಸ್ ಮಾಡಲಾಗಿತ್ತು. ಜೋಗಿ ಪ್ರೇಮ್, ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿತ್ತು. ಈ ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ ದಾಟಿದೆ ಎಂದು ಹೇಳಲಾಗುತ್ತಿದೆ.
ಆರಂಭದಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಅಂತ ಕೆವಿಎನ್ ಅನೌನ್ಸ್ ಮಾಡಿದ್ದರೂ, ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ರಿಲೀಸ್ ಮಾಡುವ ಮನಸ್ಸು ಮಾಡಿಲ್ಲ. ಇದೂವರೆಗೂ ಉಳಿದ ನಾಲ್ಕು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸಿನಿಮಾ ಪಂಡಿತರ ಪ್ರಕಾರ, 'ಕೆಡಿ ದಿ ಡೆವಿಲ್' ಕನ್ನಡದ ಅತ್ಯಂತ ದುಬಾರಿ ಸಿನಿಮಾ. ಅದೇ ಒಂದು ವೇಳೆ ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದರೆ, ಅದರ ಲೆಕ್ಕಾಚಾರವೇ ಬೇರೆ ಆಗಿರುತ್ತಿತ್ತು.

ಈ ಕಾರಣಕ್ಕೆ ಕೆವಿಎಲ್ ತಾನು ಹಾಕಿದ ಬಜೆಟ್ ಅನ್ನು ಕನ್ನಡ ಮಾರ್ಕೆಟ್‌ನಲ್ಲಿಯೇ ರಿಕವರಿ ಮಾಡಿಕೊಳ್ಳಬೇಕಿದೆ. ಒಂದು ವೇಳೆ ಪ್ಯಾನ್ ಇಂಡಿಯಾ ರಿಲೀಸ್ ಆಗದೇ ಹೋದರೂ ಕೆವಿಎನ್ ಲಾಭ ಮಾಡುತ್ತಾ? ಇಲ್ಲ ನಷ್ಟವನ್ನು ಅನುಭವಿಸುತ್ತಾ? ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ಸದ್ಯಕ್ಕೆ 'ಕೆಡಿ' ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿದಾಡುತ್ತಿದೆ. ನಿಜಕ್ಕೂ ಅಷ್ಟು ಕಲೆಕ್ಷನ್ ಆಗಿದೆಯೇ? ಅನ್ನೋ ಅನುಮಾನ ಟ್ರೇಡ್ ಎಕ್ಸ್‌ಪರ್ಟ್‌ಗಳ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ, 'ಕೆಡಿ' ಕಲೆಕ್ಷನ್ ಹೇಗಿದೆ? ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರೋ ಲೆಕ್ಕವೇನು? ಪ್ರಮುಖ ಚಿತ್ರಮಂದಿರಗಳ ಕಲೆಕ್ಷನ್ ಏನಾಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
8 ದಿನಗಳ 'ಕೆಡಿ' ಕಲೆಕ್ಷನ್ ಹೇಗಿದೆ?
ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾ 'ಕೆಡಿ ದಿ ಡೆವಿಲ್' ಕಲೆಕ್ಷನ್ ಬಗ್ಗೆ ಒಂದೊಂದು ಮೂಲಗಳು ಒಂದು ಲೆಕ್ಕ ನೀಡುತ್ತಿವೆ. ಕೆವಿಎನ್ ಪ್ರೊಡಕ್ಷನ್ ಇದೂವರೆಗೂ ಅಧಿಕೃತವಾಗಿ ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕವನ್ನು ನೀಡಿಲ್ಲ. ಕರ್ನಾಟಕದ ವಿತರಕ ವಲಯದಲ್ಲಿ ಈ ಸಿನಿಮಾ ಕಲೆಕ್ಷನ್ ಬಗ್ಗೆ ಚರ್ಚೆಯಾಗುತ್ತಿದೆ. ಈ ಎಂಟು ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿದೆಯೇ?
ಕರ್ನಾಟಕದ ವಿತರಕರಿಗೆ ಸಿಕ್ಕಿದ ಲೆಕ್ಕಾಚಾರದ ಪ್ರಕಾರ 'ಕೆಡಿ' ಸಿನಿಮಾ 8 ದಿನಗಳಲ್ಲಿ 21 ಕೋಟಿ ರೂಪಾಯಿ (Net) ಕಲೆಕ್ಷನ್ ಆಗಿದೆ. 12 ಕೋಟಿ ರೂಪಾಯಿ ಶೇರ್ ಬಂದಿದೆ. ಆದರೆ, ಇನ್ನು ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ 15.32 ಕೋಟಿ ರೂಪಾಯಿ (Net) ಕಲೆಕ್ಷನ್ ಆಗಿದೆ. ಹಾಗಿದ್ದರೆ, ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರೋ 8 ದಿನಗಳ 'ಕೆಡಿ' ಸಿನಿಮಾದ ಶೇರ್ ಲೆಕ್ಕಾಚಾರ ಹೀಗಿದೆ.
1ನೇ ದಿನ ₹2.7 ಕೋಟಿ
2ನೇ ದಿನ ₹2.4 ಕೋಟಿ
3ನೇ ದಿನ ₹2.0 ಕೋಟಿ
4ನೇ ದಿನ ₹1.6 ಕೋಟಿ
5ನೇ ದಿನ ₹1.0 ಕೋಟಿ
6ನೇ ದಿನ ₹90 ಲಕ್ಷ
7ನೇ ದಿನ ₹70 ಲಕ್ಷ
8ನೇ ದಿನ ₹70 ಲಕ್ಷ
ಒಟ್ಟು ₹12 ಕೋಟಿ
ಪ್ರಮುಖ ಚಿತ್ರಮಂದಿರಗಳ ಕಲೆಕ್ಷನ್
ಧ್ರುವ ಸರ್ಜಾ, ಜೋಗಿ ಪ್ರೇಮ್ ಸಿನಿಮಾ 'ಕೆಡಿ ದಿ ಡೆವಿಲ್' ಸೈಲೆಂಟ್ ಆಗಿದ್ದ ಚಿತ್ರಮಂದಿರಗಳು ವೈಲೆಂಟ್ ಆಗುವಂತೆ ಮಾಡಿದ್ದೇನೋ ಸರಿ. ಆದರೆ, ಬರಬರುತ್ತಾ? ಈ ಸಿನಿಮಾದ ಕಲೆಕ್ಷನ್ ನಿಧಾನವಾಗಿ ಡ್ರಾಪ್ ಆಗುತ್ತಿದೆ. 2ನೇ ವೀಕೆಂಡ್‌ನಲ್ಲಿ ಮತ್ತೆ ಈ ಸಿನಿಮಾದ ಕಲೆಕ್ಷನ್ ಏರಿಕೆಯಾಗುತ್ತಾ? ಅನ್ನೋದು ಸದ್ಯಕ್ಕೆ ಇರುವ ಕುತೂಹಲ.
'ಕೆಡಿ' ಪ್ರಮುಖ ಚಿತ್ರಮಂದಿರಗಳಲ್ಲಿ ಇದೂವರೆಗೂ ಉತ್ತಮ ಕಲೆಕ್ಷನ್ ಆಗಿದೆ. ಬೆಂಗಳೂರಿನ ನರ್ತಕಿ, ಪ್ರಸನ್ನ, ಮೋಹನ್, ವೀರಭದ್ರೇಶ್ವರ, ಭಾರತಿ, ಸಿದ್ದೇಶ್ವರ, ವಜ್ರೇಶ್ವರಿ, ಶ್ರೀನಿವಾಸ ಎಸ್‌ಜಿ ಪಾಳ್ಯದಂತಹ ಚಿತ್ರಮಂದಿರಗಳಲ್ಲಿ ಸಿನಿಮಾ ಕಲೆಕ್ಷನ್ ಭರ್ಜರಿಯಾಗಿ ಆಗಿದೆ. ಹಾಗೇ ತುಮಕೂರಿನ ಗಾಯತ್ರಿ, ಮಾರುತಿ, ಮೈಸೂರಿನ ವುಡ್‌ಲ್ಯಾಂಡ್, ಗಾಯತ್ರಿ ಚಿತ್ರಮಂದಿರ, ಮಂಡ್ಯ, ದಾವಣಗೆರೆಯಂತಹ ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಚೆನ್ನಾಗಿ ಆಗಿದೆ.

ಪ್ರಮುಖ ಚಿತ್ರಮಂದಿರಗಳ ಕಲೆಕ್ಷನ್ ಹೀಗಿದೆ
ನರ್ತಕಿ ₹27 ಲಕ್ಷ
ಪ್ರಸನ್ನ ₹33 ಲಕ್ಷ
ಮೋಹನ್ ₹20 ಲಕ್ಷ
ವೀರಭದ್ರೇಶ್ವರ ₹21 ಲಕ್ಷ
ಭಾರತಿ ₹22 ಲಕ್ಷ
ಸಿದ್ದೇಶ್ವರ ₹24 ಲಕ್ಷ
ವಜ್ರೇಶ್ವರಿ ₹20 ಲಕ್ಷ
ಶ್ರೀನಿವಾಸ ₹19 ಲಕ್ಷ
ತುಮಕೂರು
ಗಾಯತ್ರಿ ₹17 ಲಕ್ಷ
ಮಾರುತಿ ₹11 ಲಕ್ಷ
ಮೈಸೂರು
ವುಡ್‌ಲ್ಯಾಂಡ್ ₹21 ಲಕ್ಷ
ಗಾಯತ್ರಿ ₹17 ಲಕ್ಷ
ಮಂಡ್ಯ ₹13 ಲಕ್ಷ
ದಾವಣಗೆರೆ ₹19 ಲಕ್ಷ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications
