ರಾಜಮೌಳಿಯ 'ಬಾಹುಬಲಿ 2' ದಾಖಲೆ ಮುರಿಯೋಕೆ 'ಧುರಂಧರ್ 2'ಗೆ ಬರೀ ₹6 ಕೋಟಿ ಸಾಕು; ಎಷ್ಟಾಗಿದೆ ಕಲೆಕ್ಷನ್?
ಭಾರತದ ಬಾಕ್ಸಾಫೀಸ್‌ನಲ್ಲಿ ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ 2' ಹೊಸ ದಾಖಲೆಯನ್ನು ಸೃಷ್ಟಿಸಿತ್ತು. ದಕ್ಷಿಣ ಭಾರತದ ಸಿನಿಮಾವೊಂದು ಬಾಲಿವುಡ್ ಸಿನಿಮಾಗಳ ದಾಖಲೆಗಳನ್ನು ಲೆಕ್ಕಕ್ಕೆ ಇಲ್ಲದಂತೆ ಉಡೀಸ್ ಮಾಡಿತ್ತು. ಈ ಬಾಕ್ಸಾಫೀಸ್ ದಾಖಲೆಯನ್ನು ಬ್ರೇಕ್ ಮಾಡೋಕೆ ಅಷ್ಟು ಸುಲಭಕ್ಕೆ ಸಾಧ್ಯವೇ ಇಲ್ಲ ಅಂತ ಟ್ರೇಡ್ ಎಕ್ಸ್‌ಪರ್ಟ್‌ಗಳು ಕಡ್ಡಿ ಮುರಿದಂತೆ ಹೇಳಿದ್ದರು.
ಆದರೆ, 'ಬಾಹುಬಲಿ 2' ಲೈಫ್ ಟೈಮ್ ಬಾಕ್ಸಾಫೀಸ್ ಕಲೆಕ್ಷನ್ ಹತ್ತಿರ ಬಂದಿದ್ದು ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2'. ಇಲ್ಲಿಂದ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರಗಳೆಲ್ಲವೂ ತಲೆ ಕೆಳಗಾಗಿತ್ತು. ಭಾರತದ ಬಾಕ್ಸಾಫೀಸ್ ಕದನ ಬೇರೆಯದ್ದೇ ದಾರಿಯಲ್ಲಿ ಸಾಗುತ್ತಿದೆ ಅನ್ನೋದು ಕನ್ಫರ್ಮ್ ಆಗಿತ್ತು. ಕಳೆದ ಕೆಲವು ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಗದ್ದಲ ಎಬ್ಬಿಸಿರುವ 'ಧುರಂಧರ್ 2' ರಾಜಮೌಳಿಯ 'ಬಾಹುಬಲಿ 2' ದಾಖಲೆಯನ್ನು ಉಡೀಸ್ ಮಾಡುವ ಸನಿಹದಲ್ಲಿದೆ.

ಆದಿತ್ಯ ಧರ್ ನಿರ್ದೇಶಿಸಿದ 'ಧುರಂಧರ್ 2' ಬಾಕ್ಸಾಫೀಸ್‌ನಲ್ಲಿ ಇನ್ನೂ ಧೂಳೆಬ್ಬಿಸುತ್ತಲೇ ಇದೆ. ರಣ್‌ವೀರ್ ಸಿಂಗ್, ಸಾರಾ ಅರ್ಜುನ್, ಆರ್.ಮಾಧವನ್, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್ ನಟಿಸಿರುವ ಈ ಸಿನಿಮಾ ಭಾರತ ಬಾಕ್ಸಾಫೀಸ್‌ನಲ್ಲೇ ಅತೀ ಹೆಚ್ಚು ಗಳಿಸಿದ ಸಿನಿಮಾ ಎನಿಸಿಕೊಳ್ಳುವುದಕ್ಕೆ ಒಂದು ಹೆಜ್ಜೆ ಮುಂದಿದೆ ಅಷ್ಟೇ. ಹಾಗಿದ್ದರೆ, 'ಬಾಹುಬಲಿ 2' ಮಾಡಿದ ಲೈಫ್ ಟೈಮ್ ಕಲೆಕ್ಷನ್ ಎಷ್ಟು? ಅದನ್ನು ಬ್ರೇಕ್ ಮಾಡುವುದಕ್ಕೆ 'ಧುರಂಧರ್ 2'ಗೆ ಇನ್ನೆಷ್ಟು ಬೇಕು? ತಿಳಿಯುವುದಕ್ಕೆ ಮುಂದೆ ಓದಿ.
ಭಾರತದ ಬಾಕ್ಸಾಫೀಸ್ ಹಿಂದಿನಂತೆ ಇಲ್ಲ. ಈಗೀಗ ಸಿನಿಮಾಗಳು ಹಾಲಿವುಡ್ ಸಿನಿಮಾಗಳಂತೆ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಿವೆ. ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿವೆ. ಇದೂವರೆಗೂ ಭಾರತದ ಬಾಕ್ಸಾಫೀಸ್‌ನಲ್ಲಿ ಕೆಲವು ಸಿನಿಮಾಗಳು ದಾಖಲೆ ಬರೆದಿವೆ. ಅವುಗಳಲ್ಲಿ ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ 2' ಮೊದಲ ಸ್ಥಾನದಲ್ಲಿ ಇದೆ. ನಂತರ ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2', ಬಾಲಿವುಡ್ ಸಿನಿಮಾ 'ಧುರಂಧರ್', 'ಧುರಂಧರ್ 2', ಯಶ್ ನಟನೆಯ 'ಕೆಜಿಎಫ್ 2', RRR ಸಿನಿಮಾಗಳಿವೆ. ಈ ಸಿನಿಮಾಗಳ ಕಲೆಕ್ಷನ್ ನೋಡುವುದಾರೇ,
ಕೆಜಿಎಫ್ 2 ₹1215 ಕೋಟಿ
ಧುರಂಧರ್ ₹1307 ಕೋಟಿ
ಪುಷ್ಪ 2 ₹1742 ಕೋಟಿ
ಬಾಹುಬಲಿ 2 ₹1788 ಕೋಟಿ

ಇದೂವರೆಗೂ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ 'ಬಾಹುಬಲಿ 2' ಎನಿಸಿಕೊಂಡಿದೆ. 'ಪುಷ್ಪ 2'ಗೆ 'ಬಾಹುಬಲಿ 2' ದಾಖಲೆಯನ್ನು ಮುರಿಯುವ ಅವಕಾಶವಿತ್ತು. ಅದು ಜಸ್ಟ್ ಮಿಸ್ ಆಯ್ತು. ಆದರೆ, ಆದಿತ್ಯ ಧರ್ ನಿರ್ದೇಶಿಸಿದ 'ಧುರಂಧರ್ 2'ಗೆ ಆ ಎಲ್ಲಾ ಅವಕಾಶಗಳು ಇವೆ. ಇಲ್ಲಿವರೆಗೂ ₹1782 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಗಳಾಗಿವೆ. ಹೀಗಾಗಿ 'ಬಾಹುಬಲಿ 2' ಲೈಫ್ ಟೈಮ್ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಹಿಂದಿಕ್ಕಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
'ಧುರಂಧರ್ 2' 43ನೇ ದಿನವೂ 1 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. 'ಬಾಹುಬಲಿ 2' ಕಲೆಕ್ಷನ್ ಹಿಂದಿಕ್ಕುವುದಕ್ಕೆ 'ಧುರಂಧರ್ 2'ಗೆ ಕೇವಲ 6 ಕೋಟಿ ರೂಪಾಯಿ ಬೇಕು ಅಷ್ಟೇ. ಅದನ್ನು ಇನ್ನು ಐದಾರು ದಿನಗಳಲ್ಲಿ ಕಲೆಕ್ಷನ್ ಮಾಡಬಹುದು. ಬ್ಯಾಕ್ ಟು ಬ್ಯಾಕ್ ರಜೆ ಹಾಗೂ ವೀಕೆಂಡ್ ಇರುವುದರಿಂದ ಮುಂದಿನ ವಾರ 'ಬಾಹುಬಲಿ 2' ಉಡೀಸ್ ಮಾಡಬಹುದು.


Click it and Unblock the Notifications