Dhurandhar 2: ಕನ್ನಡದಲ್ಲೂ ಗೆದ್ದು ಬೀಗಿದ 'ಧುರಂಧರ್ 2'; 4 ದಿನಗಳಲ್ಲಿ ಎಷ್ಟಾಯ್ತು ಕಲೆಕ್ಷನ್?
ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆದ ಸಿನಿಮಾ 'ಧುರಂಧರ್ 2' ಈಗ ಕನ್ನಡದಲ್ಲಿ ಲಭ್ಯವಿದೆ. ಮಾರ್ಚ್ 19 ರಂದು ಯುಗಾದಿ ಸಮಯದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ದೇಶ-ವಿದೇಶದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಅದರಲ್ಲೂ ಭಾರತದ ಬಾಕ್ಸಾಫೀಸ್‌ನಲ್ಲಿಯೂ ಹೊಸ ದಾಖಲೆಯನ್ನು ಬರೆದಿತ್ತು. ಆದರೆ, ಏಕಕಾಲಕ್ಕೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿರಲಿಲ್ಲ.
ಹೀಗಾಗಿ ಕನ್ನಡಿಗರು 'ಧುರಂಧರ್ 2' ಸಿನಿಮಾವನ್ನು ಕನ್ನಡದಲ್ಲಿ ನೋಡುವ ಅವಕಾಶವನ್ನು ಕಳೆದುಕೊಂಡಿದ್ದರು. ಹಿಂದಿ ಭಾಷೆಯಲ್ಲಿಯೇ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ಒಂದು ವಾರದ ಬಳಿಕ ರಣ್‌ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್‌ನ ಈ ಸಿನಿಮಾ ಕನ್ನಡ ವರ್ಷನ್ ರಿಲೀಸ್ ಆಗಿದೆ. ಒಂದು ವಾರ ತಡವಾಗಿ ತೆರೆಕಂಡರೂ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

'ಧುರಂಧರ್ 2' ಕನ್ನಡ ವರ್ಷನ್‌ಗೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡಕ್ಕೆ ಡಬ್ ಆಗಿ ಇದೂವರೆಗೂ ಬಿಡುಗಡೆಯಾಗಿರುವ ಪರಭಾಷೆಯ ಸಿನಿಮಾಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮಾರ್ಚ್ 23ರಿಂದ ಕನ್ನಡ ವರ್ಷನ್ ಅನ್ನು ರಿಲೀಸ್ ಮಾಡಲಾಗಿದೆ. ಇದೂವರೆಗೂ ಕರ್ನಾಟಕದಲ್ಲಿ ಸುಮಾರು 150ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ನಾಲ್ಕು ದಿನಗಳಲ್ಲಿ ಪ್ರಮುಖ ಚಿತ್ರಮಂದಿರಗಳ ಕಲೆಕ್ಷನ್ ಹೀಗಿದೆ.
'ಧುರಂಧರ್ 2' ಕನ್ನಡ ಕಲೆಕ್ಷನ್
ಕರ್ನಾಟಕದಲ್ಲಿ ಡಬ್ ವರ್ಷನ್‌ಗಳು ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮಾಡುವುದು ತೀರಾ ವಿರಳ. ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಕ್ಕೆ ಡಬ್ ಆದ ಸಿನಿಮಾದ ಕಲೆಕ್ಷನ್ ಮಾಡಿದ್ದು ಬೆರಳೆಣಿಕೆಯಷ್ಟು ಮಾತ್ರ. ಆದರೆ, ಈ ಹಿಂದೆ 'ಬಾಹುಬಲಿ 2', ರಜನಿಕಾಂತ್ ಸಿನಿಮಾ 'ಜೈಲರ್' ಬಳಿಕ 'ಧುರಂಧರ್ 2'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದ ವಿತರಕರ ವಲಯದಿಂದ ಸಿಕ್ಕಿರುವ ಅಂಕಿ-ಅಂಶಗಳ ಪ್ರಕಾರ, ಮಾರ್ಚ್ 23 ರಿಂದ ಮಾರ್ಚ್ 26ರವರೆಗೆ ಕನ್ನಡ ವರ್ಷನ್ ಕಲೆಕ್ಷನ್ 1.5 ಕೋಟಿಯಿಂದ 2 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಚಿತ್ರಮಂದಿರಗಳ ಕಲೆಕ್ಷನ್
ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಮಂಡ್ಯದ ಚಿತ್ರಮಂದಿರಗಳಲ್ಲಿ 'ಧುರಂಧರ್ 2' ಕನ್ನಡ ವರ್ಷನ್ ಕಲೆಕ್ಷನ್ ಉತ್ತಮವಾಗಿದೆ. ಕೆಲವು ಚಿತ್ರಮಂದಿರಗಳು ಕನ್ನಡ ವರ್ಷನ್ ರಿಲೀಸ್ ಮಾಡಿದ್ದು, ಆ ಥಿಯೇಟರ್‌ಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರು, ಮಂಡ್ಯ, ತುಮಕೂರು, ದಾವಣಗೆರೆಯ ಚಿತ್ರಮಂದಿರಗಳ ರಿಪೋರ್ಟ್ ಹೀಗಿದೆ.
ಮಾರ್ಚ್ 23- ಮಾರ್ಚ್ 26ರ ಕಲೆಕ್ಷನ್
ಬೆಂಗಳೂರು
ನರ್ತಕಿ - ₹4.5 ಲಕ್ಷ (2 ಶೋ) (ಕನ್ನಡ ವರ್ಷನ್)
ಸಿದ್ಧಲಿಂಗೇಶ್ವರ - ₹9 ಲಕ್ಷ (ಕನ್ನಡ ವರ್ಷನ್)
ಮಂಡ್ಯ
ಗುರುಶ್ರೀ - ₹5.10 ಲಕ್ಷ (9 ಶೋ) (ಕನ್ನಡ ವರ್ಷನ್)
ತುಮಕೂರು
ಮಾರುತಿ ₹4 ಲಕ್ಷ (9 ಶೋ) (ಕನ್ನಡ ವರ್ಷನ್)
ದಾವಣಗೆರೆ
ತ್ರಿಶುಲ್ ₹11 ಲಕ್ಷ (11 ಶೋ) (ಕನ್ನಡ ವರ್ಷನ್)

ಹಿಂದಿ ವರ್ಷನ್ ಕಲೆಕ್ಷನ್
ಇನ್ನು ಇದೇ ಚಿತ್ರಮಂದಿರಗಳಲ್ಲಿ 'ಧುರಂಧರ್ 2' ಹಿಂದಿ ವರ್ಷನ್ ಕೂಡ ದೊಡ್ಡ ಮಟ್ಟದಲ್ಲಿಯೇ ಕಲೆಕ್ಷನ್ ಆಗಿದೆ. ಮಾರ್ಚ್ 19 ರಿಂದ ಮಾರ್ಚ್ 26ರವರೆಗಿನ ಈ ಸಿನಿಮಾದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.
ಮಾರ್ಚ್ 19-ಮಾರ್ಚ್ 26
ಬೆಂಗಳೂರು
ಊರ್ವಶಿ - ₹46 ಲಕ್ಷ (ಹಿಂದಿ ವರ್ಷನ್)
ನರ್ತಕಿ - ₹17 ಲಕ್ಷ (2 ಶೋ) (ಹಿಂದಿ ವರ್ಷನ್)
ಅಭಿನಯ್ - ₹26 ಲಕ್ಷ (ಹಿಂದಿ ವರ್ಷನ್)
ಸಿದ್ಧಲಿಂಗೇಶ್ವರ - ₹16 ಲಕ್ಷ (ಹಿಂದಿ ವರ್ಷನ್)
ಮಂಡ್ಯ
ಗುರುಶ್ರೀ - ₹6 ಲಕ್ಷ (ಹಿಂದಿ ವರ್ಷನ್)
ತುಮಕೂರು
ಮಾರುತಿ ₹4.9 ಲಕ್ಷ (ಹಿಂದಿ ವರ್ಷನ್)
ದಾವಣಗೆರೆ
ತ್ರಿಶುಲ್ ₹16 ಲಕ್ಷ (ಹಿಂದಿ ವರ್ಷನ್)
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications















