Dhurandhar 2 Box office: ಕರ್ನಾಟಕದಲ್ಲಿ 'ಧುರಂಧರ್ 2' ಕ್ರೇಜ್ ಹೇಗಿದೆ? ಪೇಯ್ಡ್ ಪ್ರಿವ್ಯೂ ಕಲೆಕ್ಷನ್ ಎಷ್ಟು?

ನಿನ್ನೆ (ಮಾರ್ಚ್ 18) ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾದ ಪೇಯ್ಡ್ ಪ್ರೀಮಿಯರ್ ನಡೆದಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಈ ಸಿನಿಮಾದ ಕಲೆಕ್ಷನ್ ಒಂದು ದಾಖಲೆ ಬರೆದಿದೆ. ಪೇಯ್ಡ್‌ ಪ್ರೀಮಿಯರ್‌ಗೆ ಈ ಮಟ್ಟಿಗೆ ರೆಸ್ಪಾನ್ಸ್‌ ಹಿಂದೆಂದೂ ಸಿಕ್ಕಿರಲಿಲ್ಲ. ನಿನ್ನೆ ನಡೆದ ಎರಡು ಶೋಗಳಿಂದಲೇ ಒಂದು ಸ್ಮಾಲ್ ಬಜೆಟ್ ಬಾಲಿವುಡ್ ಸಿನಿಮಾ ನಿರ್ಮಾಣ ಆಗುವಷ್ಟು ಕಲೆಕ್ಷನ್ ಮಾಡಿದೆ.

'ಧುರಂಧರ್ 2' ಕೂಡ ಸಾಕಷ್ಟು ಪೇಯ್ಡ್ ಪ್ರೀವ್ಯೂ ವೇಳೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿತ್ತು. ಕೆಲವೆಡೆ ಶೋಗಳು ಸಂಜೆ 5 ಗಂಟೆಗೆ ಆರಂಭ ಆಗಬೇಕಿತ್ತು. ಆದರೆ, ಶೋಗಳು ತಡವಾಗಿ ಶುರುವಾಗಿತ್ತು. ಇನ್ನು ದಕ್ಷಿಣ ಭಾರತದಲ್ಲಿ ಡಬ್‌ ವರ್ಷನ್ ಶೋಗಳು ರದ್ದಾಗಿದ್ದವು. ಹೀಗಾಗಿ ಆ ಶೋಗಳು ಕ್ಯಾನ್ಸಲ್ ಆಗಿದ್ದವು. ಹೀಗೆ ಸಾಕಷ್ಟು ಅಡೆ-ತಡೆಗಳನ್ನು ಎದುರು 'ಧರಂಧರ್ 2' ಪ್ರದರ್ಶನ ಕಂಡಿತ್ತು.

Dhurandhar 2 The Revenge Karnataka Paid Preview Box office collection report

ಸಿನಿಮಾ ಬಿಡುಗಡೆಗೂ ಮೊದಲೇ ಹೈಪ್ ಕ್ರಿಯೇಟ್ ಮಾಡಿತ್ತು. ಪೇಯ್ಡ್ ಪ್ರೀಮಿಯರ್‌ಗೆ ಭಾರತ ಅಷ್ಟೇ ಅಲ್ಲ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದರಲ್ಲೂ ಬೆಂಗಳೂರಿನಲ್ಲಿ 'ಧುರಂಧರ್ 2' ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ. ಹೀಗಾಗಿ ನಿನ್ನೆಯ ಎಲ್ಲಾ ಪೇಯ್ಡ್ ಪ್ರೀಮಿಯರ್ ಶೋಗಳು ಬಹುತೇಕ ಹೌಸ್‌ಫುಲ್ ಆಗಿದ್ದವು. ಹಾಗಿದ್ದರೆ, 'ಧುರಂಧರ್ 2' ಕರ್ನಾಟಕದಲ್ಲಿ ಗಳಿಸಿದ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

'ಧುರಂಧರ್ 2' ಪೇಯ್ಡ್ ಪ್ರೀಮಿಯರ್ ರೆಸ್ಪಾನ್ಸ್

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಪೇಯ್ಡ್ ಪ್ರೀಮಿಯರ್‌ಗೆ ಕರ್ನಾಟಕದಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಇಲ್ಲಿ ಸುಮಾರು 200ಕ್ಕೂ ಅಧಿಕ ಶೋಗಳು ಪ್ರದರ್ಶನ ಕಂಡಿದ್ದವು. ಅದರಲ್ಲಿ ಬೆಂಗಳೂರಿನಲ್ಲಿ ಸುಮಾರು 140 ರಿಂದ 160 ಶೋಗಳನ್ನು ಪ್ರದರ್ಶನ ಮಾಡಲಾಗಿತ್ತು. ಬಹುತೇಕ ಎಲ್ಲಾ ಶೋಗಳು ಫುಲ್ ಆಗಿದ್ದವು. ಹೀಗಾಗಿ ಟ್ರೇಡ್‌ ಎಕ್ಸ್‌ಪರ್ಟ್‌ಗಳು ಬಾಕ್ಸಾಫೀಸ್ ಲೆಕ್ಕಾಚಾರ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.

Also Read
Dhurandhar 2 ‍‍‍X Review: 'ಧುರಂಧರ್ 2' ನೋಡಿದ ಪ್ರೇಕ್ಷಕರು ಹೇಳಿದ್ದೇನು? ಇಷ್ಟ ಆಯ್ತಾ? ಇಲ್ವಾ?
Dhurandhar 2 ‍‍‍X Review: 'ಧುರಂಧರ್ 2' ನೋಡಿದ ಪ್ರೇಕ್ಷಕರು ಹೇಳಿದ್ದೇನು? ಇಷ್ಟ ಆಯ್ತಾ? ಇಲ್ವಾ?

ಕರ್ನಾಟಕ ಪೇಯ್ಡ್ ಪ್ರೀಮಿಯರ್ ಕಲೆಕ್ಷನ್ ಎಷ್ಟು?

ಕರ್ನಾಟಕದಲ್ಲಿ ಪೇಯ್ಡ್‌ ಪ್ರೀಮಿಯರ್‌ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಬಹುತೇಕ ಮಲ್ಟಿಪ್ಲೆಕ್ಸ್‌ನಲ್ಲಿ ಪೇಯ್ಡ್ ಪ್ರೀಮಿಯರ್ ಶೋ ನಡೆದಿದೆ. ವಿತರಕರ ವಲಯಕ್ಕೆ ಸಿಕ್ಕಿರೋ ಲೆಕ್ಕಾಚಾರದ ಪ್ರಕಾರ, ಕೇವಲ ನಾಲ್ಕು ಸಿಂಗಲ್‌ ಸ್ಕ್ರೀನ್‌ಗಳಲ್ಲಿ 'ಧುರಂಧರ್ 2' ಪ್ರೀಮಿಯರ್ ಆಗಿದೆ. ಹಾಗೇ ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ ಸುಮಾರು ಎರಡು ಶೋಗಳಿಂದ ಸುಮಾರು ₹6 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

Dhurandhar 2 The Revenge Karnataka Paid Preview Box office collection report

ಭಾರತದಾದ್ಯಂತ ಹೇಗಿದೆ ಕಲೆಕ್ಷನ್?

ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ಭಾರತದಾದ್ಯಂತ ಪೇಯ್ಡ್ ಪ್ರೀಮಿಯರ್‌ಗೆ ಸಿನಿಮಾ ಸೂಪರ್ ಕಲೆಕ್ಷನ್ ಆಗಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಪೇಯ್ಡ್ ಪ್ರೀಮಿಯರ್‌ಗೆ ಇಷ್ಟೊಂದು ಕಲೆಕ್ಷನ್ ಮಾಡಿದ ಇತಿಹಾಸವೇ ಇಲ್ಲ. ಬಾಕ್ಸಾಫೀಸ್‌ ಕಲೆಕ್ಷನ್ ಅನ್ನು ವರದಿ ಮಾಡುವ ಸ್ಯಾಕ್ನಿಲ್ಕ್ ಪೇಯ್ಡ್ ಪ್ರೀಮಿಯರ್ ಅಂಕಿ-ಅಂಶಗಳನ್ನು ನೀಡಿದೆ. ಇದರ ಪ್ರಕಾರ, 'ಧುರಂಧರ್ 2' ಭಾರತದಾದ್ಯಂತ ಸುಮಾರು ₹50 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Dhurandhar 2 The Revenge Karnataka Paid Preview Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X