Dhurandhar: ಹೊಸ ವರ್ಷದಂದು ಬಾಕ್ಸಾಫೀಸ್ ಲೂಟಿ ಮಾಡಿದ 'ಧುರಂಧರ್';'ಕೆಜಿಎಫ್ 2', 'ಪುಷ್ಟ 2'ಗೆ ಢವ ಢವ

ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದ ರಣ್‌ವೀರ್ ಸಿಂಗ್‌ ಭಾರೀ ಯಶಸ್ಸು ಸಿಕ್ಕಿದೆ. 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ಇರೋ ಬರೋ ದಾಖಲೆಗಳನ್ನೆಲ್ಲ ಉಡೀಸ್ ಮಾಡಿ ಮುನ್ನುಗ್ಗುತ್ತಿದೆ. ರಣ್‌ವೀರ್‌ ಸಿಂಗ್‌ಗೆ ಮತ್ತೆ ಮರು ಕೊಟ್ಟ ಜೀವ ಬಾಕ್ಸಾಫೀಸ್‌ನಲ್ಲಿ ತಣ್ಣಗಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ.

2026ರ ಮೊದಲ ದಿನವೇ 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಮಾಡಿದೆ. ರಣ್‌ವೀರ್ ಸಿಂಗ್, ಅಕ್ಷಯ್ ಖನ್ನ, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್ ನಟಿಸಿರುವ ಈ ಸಿನಿಮಾ ಮೊದಲ ದಿನದಿಂದಲೇ ಥಿಯೇಟರ್‌ಗೆ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಈ ಸಿನಿಮಾ ರಿಲೀಸ್ ಆಗಿ ಹೆಚ್ಚು ಕಡಿಮೆ ಒಂದು ತಿಂಗಳಾಗುತ್ತಾ ಬಂದಿದೆ. ಆದರೂ ಇತ್ತೀಚೆಗೆ ತೆರೆಕಂಡ ಸಿನಿಮಾಗಳಿಗೆ ಬಾಕ್ಸಾಫೀಸ್‌ನಲ್ಲಿ ಕಾಂಪಿಟೇಷನ್ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ.

Dhurandhar New Year 2026 Day collection in 17 60 crore eying to beat Yash KGF 2 and Allu Arjun Pushpa 2

'ಧುರಂಧರ್' ಇದೂವರೆಗೆ ತೆರೆಕಂಡಿರುವ ಎಲ್ಲಾ ಬಾಕ್ಸಾಫೀಸ್‌ ದಾಖಲೆಗಳನ್ನು ಉಡೀಸ್ ಮಾಡಿಕೊಂಡು ಮುನ್ನುಗ್ಗುತ್ತಿದೆ. ರಣ್‌ವೀರ್‌ ಸಿಂಗ್ ಸಿನಿಮಾ ಕಲೆಕ್ಷನ್ ಮಾಡುತ್ತಿರೋದು ನೋಡುತ್ತಿದ್ದರೆ, ಯಶ್ ಸಿನಿಮಾ 'ಕೆಜಿಎಫ್ ಚಾಪ್ಟರ್ 2', 'ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2' ದಾಖಲೆಗಳನ್ನು ಉಡೀಸ್ ಮಾಡೋದು ಗ್ಯಾರಂಟಿ ಆಗಿದೆ. ಹಾಗಿದ್ದರೆ, 28ನೇ ದಿನ 'ಧುರಂಧರ್' ಮಾಡಿದ ಗಳಿಕೆ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

'ಧುರಂಧರ್' 28ನೇ ದಿನದ ಕಲೆಕ್ಷನ್

ರಣ್‌ವೀರ್ ಸಿಂಗ್, ಅಕ್ಷಯ್ ಖನ್ನ ಈ ಸಿನಿಮಾದಿಂದ ಅವರ ವೃತ್ತಿ ಬದುಕಿಗೆ ಮತ್ತೊಂದು ತಿರುವು ಸಿಕ್ಕಂತಾಗಿದೆ. ಅದರಲ್ಲೂ ರಣ್‌ವೀರ್ ಸಿಂಗ್ ಮತ್ತೆ ಬಹುಬೇಡಿಕೆಯ ನಟನಾಗಿದ್ದಾರೆ. ಅದಕ್ಕೆ 'ಧುರಂಧರ್' ಸಿನಿಮಾ ಕಾರಣ. ನಿನ್ನೆ 2026ರ ಮೊದಲ ದಿನವೇ (ಜನವರಿ 1) ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ. ಟ್ರೇಡ್ ಎಕ್ಸ್‌ಪರ್ಟ್ ತರಾನ್ ಆದರ್ಶ್ 28ನೇ ದಿನ 17.60 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. 28ನೇ ದಿನ ಇಷ್ಟು ಕಲೆಕ್ಷನ್ ಮಾಡಿದ್ದು ದೊಡ್ಡ ಸಾಧನೆಯೇ. ಇನ್ನು ಸ್ಯಾಕ್ನಿಲ್ಕ್ ಪ್ರಕಾರ 'ಧುರಂಧರ್' ₹15.60 ಕೋಟಿ ಕಲೆಕ್ಷನ್ ಆಗಿದೆ ಎಂದು ಹೇಳಿದೆ.

Dhurandhar New Year 2026 Day collection in 17 60 crore eying to beat Yash KGF 2 and Allu Arjun Pushpa 2

'ಕೆಜಿಎಫ್ 2', 'ಪುಷ್ಪ 2' ಕಥೆಯೇನು?

'ಧುರಂಧರ್' ಕಳೆದ 28 ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಸಖತ್ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. 28 ದಿನಗಳ ಬಳಿಕವೂ ಈ ಸಿನಿಮಾ 8800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇಷ್ಟೇ ಅಲ್ಲದೆ ವಿಶ್ವದಾದ್ಯಂತ ₹1141 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಒಂದೊಂದೇ ದಾಖಲೆಗಳನ್ನು ಹಿಂದಿಕ್ಕುತ್ತಿದೆ. ಈಗಾಗಲೇ ಹಿಂದಿ ವರ್ಷನ್‌ನಲ್ಲಿ ಶಾರುಖ್ ಖಾನ್ ನಟಿಸಿದ 'ಜವಾನ್' ಸಿನಿಮಾವನ್ನು ಬೀಟ್ ಮಾಡಿದೆ. ಈಗ ಯಶ್ ಸಿನಿಮಾ 'ಕೆಜಿಎಫ್ 2' ವಿಶ್ವದಾದ್ಯಂತ ಗಳಿಸಿದ್ದ ₹1250 ಕೋಟಿ ದಾಖಲೆಯನ್ನು ಸುಲಭವಾಗಿ ಹಿಂದಿಕ್ಕಲಿದೆ. ಇದಾದ ಬಳಿಕ ಅಲ್ಲು ಅರ್ಜುನ್ 'ಪುಷ್ಪ 2' ಮೇಲೆ ಕಣ್ಣಿಟ್ಟಿದೆ.

'ಟಾಕ್ಸಿಕ್' Vs 'ಧುರಂಧರ್ 2'

ಯಶ್ ಸಿನಿಮಾ 'ಟಾಕ್ಸಿಕ್' ಇದೇ ವರ್ಷ ಮಾರ್ಚ್ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಟಕ್ಕರ್ ಕೊಡುವುದಕ್ಕೆ ಯಾರೂ ಇಲ್ಲವೇನೋ ಎಂದು ಭಾವಿಸಲಾಗಿತ್ತು. ಆದರೆ, 'ಟಾಕ್ಸಿಕ್' ರಿಲೀಸ್ ಆಗುತ್ತಿರುವ ದಿನವೇ 'ಧುರಂಧರ್ 2' ಬಿಡುಗಡೆಯಾಗುತ್ತಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಬಿಗ್ ಕ್ಲ್ಯಾಶ್ ಆಗೋದು ನೂರು ನೂರು ಪಕ್ಕ. ಎರಡು ಬಿಗ್ ಸ್ಟಾರ್‌ಗಳ ಸಿನಿಮಾಗಳು ಗಲ್ಲಾಪಟ್ಟಿಗೆಯಲ್ಲಿ ಧೂಳೆಬ್ಬಿಸಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Dhurandhar New Year 2026 Day collection in 17.60 crore. Eying to beat Yash KGF 2 and Allu Arjun Pushpa 2;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X