'ಕೂಲಿ'ಗೂ ಮುನ್ನ ರಜನಿ ನಟಿಸಿದ 6 ಸಿನಿಮಾಗಳ ಬಾಕ್ಸಾಫೀಸ್ ಹಣೆಬರಹವೇನು? ಈ ಸಿನಿಮಾದ ಲೆಕ್ಕಾಚಾರವೇನು?

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ರಿಲೀಸ್ ಆಗ್ತಿದೆ ಅಂದರೇನೆ ಅದೊಂದು ಹಬ್ಬ. ಅಭಿಮಾನಿಗಳಿಗೆ ತಿಂಗಳ ಮುನ್ನವೇ ಸಂಭ್ರಮ. ಮತ್ತೆ ಕೆಲವರಿಗೆ ರಜನಿಯ ಮ್ಯಾನರಿಸಂ, ಸ್ಟೈಲ್ ಮೇಲೆ ಗಮನ. ಇನ್ನು ಕೆಲವರಿಗೆ ದಾಖಲೆಗಳ ಮೇಲೆ ಕಣ್ಣು. ವಯಸ್ಸು 74 ಆದರೂ, ರಜನಿಯನ್ನು ಹಿಂದಿಕ್ಕುವುದಕ್ಕೆ ಇಂದಿನ ಯುವ ಸೂಪರ್‌ಸ್ಟಾರ್‌ಗಳೇ ಪರದಾಡುತ್ತಿದ್ದಾರೆ. ಅದಕ್ಕೆ 'ಕೂಲಿ' ಎದುರು ರಿಲೀಸ್ ಆಗುತ್ತಿರುವ 'ವಾರ್ 2' ಸಿನಿಮಾವೇ ಸಾಕ್ಷಿ.

ಸೂಪರ್‌ಸ್ಟಾರ್ ಖದರ್ ಹಾಗೇ, ಸಿನಿಮಾ ಹಿಟ್ ಆಗುತ್ತೋ ಫ್ಲಾಪ್ ಆಗುತ್ತೋ? ಆದರೆ, ಬಿಡುಗಡೆಗೂ ಮುನ್ನ ರಜನಿಕಾಂತ್ ಸಿನಿಮಾ ಸದ್ದು ಮಾಡುವಂತೆ ಬೇರೆ ಯಾರದ್ದೇ ಸಿನಿಮಾವೂ ಮಾಡುವುದನ್ನು ನೋಡಿಲ್ಲ. ಸಿನಿಮಾ ರಿಲೀಸ್ ಇನ್ನೂ ಎರಡು ಮೂರು ದಿನಗಳು ಬಾಕಿ ಇರುವಾಗಲೇ ಮೊದಲ ದಿನದ ಟಿಕೆಟ್‌ಗಳು ಬಹುತೇಕ ಸೋಲ್ಡ್ ಆಗಿವೆ. ಆ ಮಟ್ಟಿಗೆ ಕ್ರೇಜ್ ಇದೆ. ಕರ್ನಾಟಕದಲ್ಲೂ ಸೂಪರ್‌ಸ್ಟಾರ್ ಸಿನಿಮಾಗೆ ಹಿಂದೆಂದಿಗಿಂತಲೂ ಹೆಚ್ಚು ಬೇಡಿಕೆಯಿದೆ. 'ಕೂಲಿ' ಮುನ್ನ ತೆರೆಕಂಡಿರುವ ರಜನಿಯ 6 ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ? 'ಕೂಲಿ' ಕಲೆಕ್ಷನ್ ಏನಾಗಬಹುದು? ತಿಳಿಯುವುದಕ್ಕೆ ಮುಂದೆ ಓದಿ.

Explore the box office collections of Superstar Rajinikanth s last six films ahead of the Coolie release

ವೆಟ್ಟೈಯಾನ್- 2024

'ಕೂಲಿ'ಗೂ ಮುನ್ನ ತೆರೆಕಂಡಿದ್ದ ಸಿನಿಮಾ 'ವೆಟ್ಟೈಯಾನ್'. ಈ ಸಿನಿಮಾ ಮೇಲೆ ರಜನಿಕಾಂತ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಹೋಪ್ ಇತ್ತು. ಜೈ ಭೀಮ್ ನಿರ್ದೇಶಿಸಿದ ಟಿಜೆ ಜ್ಞಾನವೇಲ್ ನಿರ್ದೇಶನವಿತ್ತು. ರಜನಿಕಾಂತ್ ಜೊತೆ ಬಹಳ ವರ್ಷಗಳ ಬಳಿಕ ಮತ್ತೆ ಅಮಿತಾಭ್ ಬಚ್ಚನ್ ನಟಿಸಿದ್ದರು. ಹೀಗಾಗಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತೆ ಎಂದೇ ನಿರೀಕ್ಷೆಯಿತ್ತು. ₹300 ಕೋಟಿ ಬಜೆಟ್‌ನ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೇವಲ ₹300 ಕೋಟಿ ರೂಪಾಯಿ ಗಳಿಸುವಲ್ಲಿ ಮಾತ್ರ ಸಾಧ್ಯವಾಯ್ತು. ರಜನಿ ಫ್ಯಾನ್ಸ್ ಈ ಸಿನಿಮಾ ನಿರಾಸೆಯನ್ನುಂಟು ಮಾಡಿತ್ತು. ಹೀಗಾಗಿ ಈ ಸಿನಿಮಾ ಅನಿವಾರ್ಯವಾಗಿ ಫ್ಲಾಪ್ ಪಟ್ಟಿಗೆ ಸೇರಬೇಕಾಯ್ತು.

ಜೈಲರ್- 2023

ರಜನಿಕಾಂತ್‌ ಜಮಾನ ಮುಗೀತು ಎಂದು ಆಡಿಕೊಂಡವರಿಗೆ ಟಕ್ಕರ್ ಕೊಟ್ಟ ಸಿನಿಮಾ 'ಜೈಲರ್'. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. 2023ರಲ್ಲಿ ತೆರೆಕಂಡಿದ್ದ ಈ ಸಿನಿಮಾ ರಜನಿ ವೃತ್ತಿ ಬದುಕಿನ ಸಕ್ಸಸ್‌ಫುಲ್ ಸಿನಿಮಾಗಳ ಲಿಸ್ಟ್ ಸೇರಿತ್ತು. ಬಾಕ್ಸಾಫೀಸ್‌ನಲ್ಲಿ 600 ಕೋಟಿಗೂ ಅಧಿಕ ಗಳಿಕೆ ಕಂಡು ಅಲ್‌ ಟೈಮ್ ಹಿಟ್ ಅಂತ ಸಾಬೀತಾಗಿತ್ತು.

ಅಣ್ಣಾತ್ತೆ - 2021

'ಜೈಲರ್' ರಿಲೀಸ್‌ಗೂ ಮುನ್ನ ರಿಲೀಸ್ ಆಗಿದ್ದ ಸಿನಿಮಾ 'ಅಣ್ಣಾತ್ತೆ'. ಈ ಸಿನಿಮಾ ಕೂಡ ರಜನಿಯನ್ನು ಗಮನದಲ್ಲಿಟ್ಟುಕೊಂಡೇ ನಿರ್ಮಾಣ ಮಾಡಲಾಗಿತ್ತು. ಆದರೆ, ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಈ ಸಿನಿಮಾ ಗಳಿಸಿದ್ದು ಕೇವಲ 172 ಕೋಟಿ ರೂಪಾಯಿ ಅಷ್ಟೇ. ಇದು ಆವರೇಜ್‌ ಸಿನಿಮಾ ಎನಿಸಿಕೊಂಡಿತ್ತು.

Explore the box office collections of Superstar Rajinikanth s last six films ahead of the Coolie release

ದರ್ಬಾರ್- 2020

ತಮಿಳಿನ ಜನಪ್ರಿಯ ನಿರ್ದೇಶಕ ಎ.ಆರ್. ಮುರುಗದಾಸ್ ಆಕ್ಷನ್ ಕಟ್ ಹೇಳಿದ್ದ ಸಿನಿಮಾ 'ದರ್ಬಾರ್'. ಈ ಸಿನಿಮಾ ರಜನಿಕಾಂತ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ಇದು ಕೂಡ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಬರೀ 248 ಕೋಟಿ ರೂಪಾಯಿ.

ಪೆಟ್ಟಾ- 2019

ಕಾಲಿವುಡ್‌ನ ಮತ್ತೊಬ್ಬ ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ 'ಪೆಟ್ಟಾ' ಸಿನಿಮಾವನ್ನು ನಿರ್ದೇಶಿಸಿದ್ದರು. ರಜನಿಕಾಂತ್ ನಟಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 233 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ಈ ಸಿನಿಮಾವನ್ನು ಕಾಲಿವುಡ್ ಹಿಟ್ ಎಂದು ಘೋಷಣೆ ಮಾಡಿದೆ.

2.0- 2018

ಪ್ಯಾನ್ ಇಂಡಿಯಾ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳಿದ್ದ ಸಿನಿಮಾ '2.0' ರಜನಿಕಾಂತ್ ವೃತ್ತಿ ಬದುಕಿನ ವಿಶಿಷ್ಟ ಸಿನಿಮಾ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಖಳನಾಯಕನಾಗಿ ನಟಿಸಿದ್ದರು. ಈ ಸಿನಿಮಾ ಕೂಡ ಬಾಕ್ಸಾಫೀಸ್‌ 745 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡು ಸೂಪರ್ ಹಿಟ್ ಅಂತ ಸಾಬೀತಾಗಿತ್ತು.


'ಕೂಲಿ' ಲೆಕ್ಕಾಚಾರವೇನು?

ಈ ಎಲ್ಲಾ ಸಿನಿಮಾಗಳಿಗಿಂತಲೂ 'ಕೂಲಿ' ಕ್ರೇಜ್ ದುಪ್ಪಟ್ಟಿದೆ. ಎಲ್ಲರ ಕಣ್ಣು ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಮೇಲಿದೆ. ಅದರಲ್ಲೂ ಆಮಿರ್ ಖಾನ್, ನಾಗಾರ್ಜುನಾ, ಉಪೇಂದ್ರ ಕೂಡ ಈ ಸಿನಿಮಾದಲ್ಲಿ ನಟಿಸಿರುವುದರಿಂದ ಸಿನಿಮಾ ಬೇರೆ ಎಲ್ಲೋ ಹೋಗಬಹುದೆಂದು ನಿರೀಕ್ಷೆಯಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್‌ನಿಂದ 50 ಕೋಟಿ ರೂಪಾಯಿ ಗಳಿಸಿರುವ 'ಕೂಲಿ' ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಲಿದೆ ಎನ್ನಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X