Junior Box Office Day 2; ಜನಾರ್ಧನ್ ರೆಡ್ಡಿ ಪುತ್ರನ 'ಜೂನಿಯರ್' ಕನ್ನಡದಲ್ಲಿ ಗಳಿಸಿದ್ದೆಷ್ಟು? ತೆಲುಗಿನ ಕಲೆಕ್ಷನ್ ಎಷ್ಟು?
ಸಿನಿಮಾರಂಗಕ್ಕೆ ಎಂಟ್ರಿ ಕೊಡಬೇಕು. ಅಲ್ಲಿ ಸ್ಟಾರ್ ಆಗಿ ಮೆರೆಯಬೇಕು ಅನ್ನೋ ಕನಸು ಹೊತ್ತು ಬರೋರಿಗೆ ಏನು ಕಮ್ಮಿ. ಕೆಲವು ನಿಜಕ್ಕೂ ಚಿತ್ರರಂಗದಲ್ಲಿ ನೆಲೆಯೂರುವುದಕ್ಕೆ ಶತ ಪ್ರಯತ್ನ ಮಾಡುತ್ತಾರೆ. ಕೆಲವು ಸೂಕ್ತ ತಯಾರಿನೇ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಮತ್ತೆ ಕೆಲವರು ನಟನೆ, ಡ್ಯಾನ್ಸ್, ಫೈಟ್ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತರಬೇತಿ ಪಡೆದು ಪ್ರವೇಶ ಮಾಡುತ್ತಾರೆ. ಅಂತಹವರಲ್ಲಿ 'ಜೂನಿಯರ್' ಅಲಿಯಾಸ್ ಕಿರೀಟಿ ರೆಡ್ಡಿ ಕೂಡ ಒಬ್ಬರು.
ಗಾಲಿ ಜನಾರ್ಧನ ರೆಡ್ಡಿಯ ಪುತ್ರ ಕಿರೀಟಿ ರಾಜಕೀಯಕ್ಕೆ ಎಂಟ್ರಿ ಕೊಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಕಿರೀಟಿಗೆ ಸಿನಿಮಾ ಕಡೆಗೆ ಒಲುವು. ಮನಸ್ಸು ಮಾಡಿದ್ದರೆ, ದಿಢೀರನೇ ಸಿನಿಮಾಗೆ ಎಂಟ್ರಿ ಕೊಡಬಹುದಿತ್ತು. ಆದರೆ, ಒಬ್ಬ ನಟನಿಗೆ ಬೇಕಿರುವ ಎಲ್ಲಾ ಗುಣಗಳನ್ನು ಕರಗತ ಮಾಡಿಕೊಂಡು, ಶ್ರಮ ಪಟ್ಟು ಸಿನಿಮಾದಲ್ಲಿ ನೆಲೆಯೂರುವುದಕ್ಕೆ ಪ್ರಯತ್ನ ಮಾಡಿದ್ದಾರೆ.

ಜನಾರ್ಧನ ರೆಡ್ಡಿ ಪುತ್ರನ ಸಿನಿಮಾ 'ಜೂನಿಯರ್' ಕೇವಲ ಕನ್ನಡದಲ್ಲಷ್ಟೇ ರಿಲೀಸ್ ಆಗಿಲ್ಲ. ತೆಲುಗು ಭಾಷೆಯಲ್ಲಿ ಆಂಧ್ರ ಹಾಗೂ ತೆಲಂಗಾಣದಲ್ಲಿಯೂ ಬಿಡುಗಡೆಯಾಗಿದೆ. ತೆಲುಗಿನ ನಿರ್ಮಾಣ ಸಂಸ್ಥೆ, ಕನ್ನಡದ ನಿರ್ದೇಶಕ, ಕನ್ನಡದ ನಟ, ನಟಿಯರು, ತೆಲುಗು ತಂತ್ರಜ್ಞರು ಎಲ್ಲರೂ ಸೇರಿ 'ಜೂನಿಯರ್' ಸಿನಿಮಾವನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡಲಾಗಿದೆ. ಹಾಗಿದ್ದರೆ, ಈ ಸಿನಿಮಾ ಎರಡನೇ ದಿನ ಗಳಿಸಿದ್ದೆಷ್ಟು? ಯಾವ್ಯಾವ ಭಾಷೆಯಲ್ಲಿ ಕಲೆಕ್ಷನ್ ಎಷ್ಟಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಜೂನಿಯರ್' 2ನೇ ದಿನದ ಕಲೆಕ್ಷನ್ ಎಷ್ಟು?
ಕಿರೀಟಿ ರೆಡ್ಡಿಯ 'ಜೂನಿಯರ್'ಗೆ ಕನ್ನಡಕ್ಕಿಂತ ತೆಲುಗು ಭಾಷೆಯಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹೊಸ ಪ್ರತಿಭೆಯ ಸಿನಿಮಾ ಆಗಿದ್ದರಿಂದ ದೊಡ್ಡ ಮಟ್ಟದ ಓಪನಿಂಗ್ ಸಿಗಲಿಲ್ಲ. ಆದರೂ, ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಜೂನಿಯರ್' ಕಲೆಕ್ಷನ್ ಉತ್ತಮ ಎನ್ನುವ ಅಭಿಪ್ರಾಯ ಮೂಡುತ್ತಿದೆ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ ಎರಡನೇ ದಿನ ತೆಲುಗು ರಾಜ್ಯಗಳಲ್ಲಿ 1.54 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲನೇ ದಿನಕ್ಕೆ ಹೋಲಿಸಿದರೆ, ಎರಡನೇ ದಿನದ ಗಳಿಕೆಯಲ್ಲಿ ಏರಿಕೆಯಾಗಿದೆ. ಕನ್ನಡದಲ್ಲಿ 2ನೇ ದಿನದ ಕಲೆಕ್ಷನ್‌ನಲ್ಲಿ ಇನ್ನೂ ಏರಿಕೆಯಾಗಿಲ್ಲ.
ಎರಡು ದಿನಗಳ ಕಲೆಕ್ಷನ್ ಎಷ್ಟು?
ಸಿನಿಮಾ ಟ್ರೇಡ್‌ಗಳ ವರದಿ ನೀಡುವ 'ಜೂನಿಯರ್' ಸಿನಿಮಾದ ಕಲೆಕ್ಷನ್ ಕನ್ನಡದಲ್ಲಿ ಅಷ್ಟಕ್ಕಷ್ಟೇ. ಮೊದಲನೇ ದಿನ ಕೇವಲ 20 ರಿಂದ 40 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ ಮೊದಲನೇ ದಿನಕ್ಕಿಂತ ಎರಡನೇ ದಿನ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಎರಡು ದಿನಗಳ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.
ಮೊದಲನೇ ದಿನ ₹1.54 ಕೋಟಿ ( ತೆಲುಗು) ₹20 ಲಕ್ಷ (ಕನ್ನಡ)
ಎರಡನೇ ದಿನ ₹1.30 ಕೋಟಿ (ತೆಲುಗು) ಇಲ್ಲ
ಒಟ್ಟು ₹3.04 ಕೋಟಿ (ತೆಲುಗು+ ಕನ್ನಡ)

ವೀಕೆಂಡ್ ಕಲೆಕ್ಷನ್ ಮೇಲೆ ಕಣ್ಣು
'ಜೂನಿಯರ್' ತಂಡ ಅದ್ಧೂರಿಯಾಗಿ ಪ್ರಚಾರ ಮಾಡಿತ್ತು. ತೆಲುಗು ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ರಿಲೀಸ್ ಮಾಡುತ್ತಿದ್ದರಿಂದ ಸುಮಾರು 240 ಸ್ಕ್ರೀನ್‌ಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಹೀಗಾಗಿ ವೀಕೆಂಡ್‌ನಲ್ಲಿ ಸಿನಿಮಾ ದೊಡ್ಡ ಮೊತ್ತವನ್ನು ಕಲೆಕ್ಷನ್ ಮೇಲೆ ಗುರಿ ಇಟ್ಟಿದೆ. ಇಂದು ಭಾನುವಾರ (ಜುಲೈ 20) ಈ 'ಜೂನಿಯರ್' ಕಲೆಕ್ಷನ್ ಸಖತ್ತಾಗಿ ಆಗಿದ್ದೇ ಆದರೆ, ಸೋಮವಾರದ ಪರೀಕ್ಷೆಯನ್ನು ಗೆಲ್ಲಬಹುದು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











