3 ಸಿನಿಮಾ.. 3 ದಿನ.. ಒಂದು ಕೋಟಿನೂ ದಾಟಿಲ್ಲ ಬಾಕ್ಸಾಫೀಸ್ ಕಲೆಕ್ಷನ್? ಮತ್ತೇನಾಯ್ತು?

'ಕಾಂತಾರ ಚಾಪ್ಟರ್ 1' ಬಳಿಕ ಮತ್ತೆ ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. ಕಳೆದ ಒಂದು ತಿಂಗಳಿನಿಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದಯ ಮಾಡಿದ್ದೇ ಮಾಡಿದ್ದು. 2025ರ ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನೂ ಉಡೀಸ್ ಮಾಡಿ ಅಚ್ಚರಿ ಮೂಡಿಸಿತ್ತು. ಆದರೆ, 'ಕಾಂತಾರ ಚಾಪ್ಟರ್ 1' ಹವಾ ಕಡಿಮೆಯಾಗುತ್ತಿದ್ದಂತೆ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸೋಲಿನ ರುಚಿ ನೋಡುತ್ತಿದೆ.

ಹೊಸಬರ ಸಿನಿಮಾಗಳು, ಸ್ಮಾಲ್ ಬಜೆಟ್ ಸಿನಿಮಾಗಳು ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಅದಕ್ಕೆ ಒಂದೊಳ್ಳೆ ಉದಾಹರಣ ಅಂದರೆ, ನವೆಂಬರ್ 14ರಂದು ರಿಲೀಸ್ ಆಗಿರುವ ಪ್ರಮುಖ ಮೂರು ಸಿನಿಮಾಗಳು. ಸಿಂಪಲ್ ಸುನಿ ನಿರ್ದೇಶಿಸಿದ 'ಗತ ವೈಭವ', ಅನೀಶ್ ತೇಜೇಶ್ವರ್ ನಟಿಸಿ, ನಿರ್ದೇಶಿಸಿರುವ 'ಲವ್ ಓಟಿಪಿ' ಹಾಗೂ ಯೋಗರಾಜ್ ಭಟ್ ನಿರ್ಮಾಣದ 'ಉಡಾಳ'. ಈ ಮೂರು ಸಿನಿಮಾಗಳಿಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಸಾಧಾರಣ ಪ್ರತಿಕ್ರಿಯೆ ಕಂಡಿದೆ.

Gatha Vaibhava Love OTP and Udaala Kannada movie day 3 box office collection Report

'ಗತ ವೈಭವ', 'ಲವ್ OTP', 'ಉಡಾಳ' ಈ ಮೂರು ಸಿನಿಮಾಗಳಿಗೂ ಒಂದೊಳ್ಳೆ ವಿಮರ್ಶೆ ಸಿಕ್ಕಿದೆ. ಹೀಗಿದ್ದರೂ ಜನರು ಥಿಯೇಟರ್‌ಗೆ ಬಂದು ಸಿನಿಮಾವನ್ನು ನೋಡುತ್ತಿಲ್ಲ. ಹಾಗಿದ್ದರೆ, ಈ ಮೂರು ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಹೇಗಿದೆ? ಯಾವ್ಯಾವ ಸಿನಿಮಾ ಗಲ್ಲಾ ಪಟ್ಟಿಗೆಯಲ್ಲಿ ಎಷ್ಟೆಷ್ಟು ಗಳಿಸಿದೆ? ಈ ಮೂರು ಚಿತ್ರಗಳ ಭವಿಷ್ಯವೇನು? ತಿಳಿಯುವುದಕ್ಕೆ ಮುಂದೆ ಓದಿ.

'ಗತ ವೈಭವ' 3 ದಿನಗಳ ಕಲೆಕ್ಷನ್ ಎಷ್ಟು?

ಸಿಂಪಲ್ ಸುನಿ ನಿರ್ದೇಶಿಸಿದ ಮತ್ತೊಂದು ವಿಭಿನ್ನ ಸಿನಿಮಾ ಗತ ವೈಭವ. ಯುವ ಪ್ರತಿಭೆ ದುಷ್ಯಂತ್‌ರನ್ನು ನಾಯಕನಾಗಿ ಪರಿಚಯಿಸಿದ್ದರು. ಇವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಸಿನಿಮಾದ ಹಾಡುಗಳು, ಮೇಕಿಂಗ್ ಹಾಗೂ ವಿಎಫ್‌ಎಕ್ಸ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಿದ್ದರೂ ಕಳೆದ ಮೂರು ದಿನಗಳಲ್ಲಿ ಅರ್ಥ ಕೋಟಿ ದಾಟುವುದಕ್ಕೂ ಸಾಧ್ಯವಾಗಿಲ್ಲ ಎನ್ನಲಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ, 'ಗತ ವೈಭವ' ಮೊದಲ ಮೂರು ದಿನಗಳಲ್ಲಿ ₹43 ಲಕ್ಷ ಕಲೆಕ್ಷನ್ ಮಾಡಿದೆ ಎಂದು ಹೇಳಾಗಿದೆ.

Gatha Vaibhava Love OTP and Udaala Kannada movie day 3 box office collection Report

'ಲವ್ OTP' 3 ದಿನಗಳ ಕಲೆಕ್ಷನ್ ಎಷ್ಟು?

ಅನೀಶ್ ತೇಜೇಶ್ವರ್ ನಟಿಸಿ, ನಿರ್ದೇಶಿಸಿರುವ ಸಿನಿಮಾ 'ಲವ್ OTP' ಬಗ್ಗೆನೂ ಒಳ್ಳೆಯ ಅಭಿಪ್ರಾಯವಿದೆ. ಆದರೂ, ಸಿನಿಮಾ ನೋಡುವುದಕ್ಕೆ ಜನರು ಥಿಯೇಟರ್‌ ಕಡೆಗೆ ಬರುತ್ತಿಲ್ಲ. ಇದರಿಂದ ನೊಂದು ಭಾವುಕರಾಗಿ ಅನೀಶ್ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಸಿನಿಮಾ ಚೆನ್ನಾಗಿದ್ದರೂ, ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿಲ್ಲವೆಂದು ಬೇಸರ ಹೊರ ಹಾಕಿದ್ದರು. ಕರ್ನಾಟಕದ ವಿತರಕರ ಪ್ರಕಾರ ಈ ಸಿನಿಮಾ ₹20 ರಿಂದ ₹25 ಲಕ್ಷ ಕಲೆಕ್ಷನ್ ಮಾಡಿದೆ. 'ಲವ್ OTP' ತೆಲುಗಿನಲ್ಲೂ ರಿಲೀಸ್ ಆಗಿದೆ. ಅಲ್ಲಿ ₹26 ಲಕ್ಷ ಕಲೆಕ್ಷನ್ ಮಾಡಿದೆಯೆಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

'ಉಡಾಳ' 3 ದಿನಗಳ ಬಾಕ್ಸಾಫೀಸ್ ಕಲೆಕ್ಷನ್?

ಯೋಗರಾಜ್ ಭಟ್ ನಿರ್ಮಾಣದ ಸಿನಿಮಾ 'ಉಡಾಳ' ನವೆಂಬರ್ 14ರಂದು ರಿಲೀಸ್ ಆಗಿತ್ತು. ಅಪ್ಪಟ ಉತ್ತರ ಕರ್ನಾಟಕದ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯವಿದೆ. ಹೀಗಿದ್ದರೂ ಉತ್ತರ ಕರ್ನಾಟಕದ ಮಂದಿನೇ ಸಿನಿಮಾ ನೋಡುತ್ತಿಲ್ಲ. ಸ್ಯಾಕ್ನಿಲ್ಕ್ ಕೊಟ್ಟಿರುವ ವರದಿ ಪ್ರಕಾರ, 'ಉಡಾಳ' ಮೂರು ದಿನಗಳ ಕಲೆಕ್ಷನ್ ಕೇವಲ ₹19 ಲಕ್ಷ ಎನ್ನಲಾಗಿದೆ. ಆದರೆ, ಅಧಿಕೃತವಾಗಿ ಈ ಮೂರು ಸಿನಿಮಾ ತಂಡಗಳಿಂದ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಇನ್ನೂ ಹೊರ ಬಿದ್ದಿಲ್ಲ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Gatha Vaibhava, Love OTP and Udaala Kannada movie day 3 box office collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X