Mahavatar Narsimha Box Office Day 10: ಭಾನುವಾರ ಬಾಕ್ಸಾಫೀಸ್‌ನಲ್ಲಿ ನರಸಿಂಹ ಬಿಂದಾಸ್; ಹೊಂಬಾಳೆಗೆ ಖಜಾನೆಗೆ ₹100 ಕೋಟಿ

ಜುಲೈ ತಿಂಗಳು ಸಿನಿಮಾ ಮಂದಿಗೆ ನೆಮ್ಮದಿ ಕೊಟ್ಟಿದೆ. ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿವೆ. ಕರ್ನಾಟಕದಲ್ಲಿ ಪ್ರೇಕ್ಷಕರು 'ಸು ಫ್ರಮ್ ಸೋ' ಸಿನಿಮಾದ ಗುಂಗಿನಿಂದ ಇನ್ನೂ ಹೊರ ಬಂದಿಲ್ಲ. ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್ ನಿರ್ಮಿಸಿದ 'ಕೊತ್ತಲವಾಡಿ' ಕೂಡ ತೆರೆಕಂಡು ಮುನ್ನುಗ್ಗುತ್ತಿದೆ. ಅತ್ತ ತೆಲುಗಿನಲ್ಲಿ ವಿಜಯ್‌ ದೇವರಕೊಂಡ 'ಕಿಂಗ್‌ಡಮ್' ರಿಲೀಸ್ ಆಗಿದೆ. ಇವೆಲ್ಲದ ಜೊತೆಗೆ ಹೊಂಬಾಳೆ ಸಹ ನಿರ್ಮಾಣ ಮಾಡಿರುವ 'ಮಹಾವತಾರ್ ನರಸಿಂಹ' ಕೂಡ ಬಿಡುಗಡೆಯಾದ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ.

ದೇಶದೆಲ್ಲೆಡೆ ಬಾಲಿವುಡ್ ಸಿನಿಮಾ 'ಸೈಯರಾ', ಕನ್ನಡ ಸಿನಿಮಾ 'ಸು ಫ್ರಮ್ ಸೋ'ನದ್ದೇ ಟಾಕ್. ಇದರ ಜೊತೆಗೆ ಹೊಂಬಾಳೆ ಫಿಲ್ಮ್ಸ್ ಅವರ ಅನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ' ನೋಡುವುದಕ್ಕೆ ಜನರು ಥಿಯೇಟರ್‌ಗೆ ನುಗ್ಗುತ್ತಿದ್ದಾರೆ. ಅದರಲ್ಲೂ ಭಾನುವಾರವಾದ ನಿನ್ನೆ (ಆಗಸ್ಟ್ 4) ಬಾಕ್ಸಾಫೀಸ್‌ ದಾಖಲೆ ಕಲೆಕ್ಷನ್ ಮಾಡಿದೆ. ಅಬ್ಬರ ಮಾಡದೇ ಸೈಲೆಂಟ್ ಆಗಿ ರಿಲೀಸ್ ಮಾಡಿದ್ದ ಮತ್ತೊಂದು ಸಿನಿಮಾ ಬ್ಲಕ್ ಬಸ್ಟರ್ ಆಗಿದೆ.

Hombale Films Animated mythological Mahavatar Narsimha Day 10 Box Office Collection is record braking

ಪೌರಾಣಿಕ ಸಿನಿಮಾಗಳು ಬಂದಾಗ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಆದರೆ, 'ಮಹಾವತಾರ್ ನರಸಿಂಹ' ಮೂಲಕ ಪ್ರಯೋಗವನ್ನು ಮಾಡಲಾಗಿತ್ತು. ಅದಕ್ಕೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ದಕ್ಷಿಣ ಭಾರತಕ್ಕಿಂತ ಹೆಚ್ಚಾಗಿ ಈ ಸಿನಿಮಾವನ್ನು ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಹೆಚ್ಚು ಮಂದಿ ನೋಡಿದ್ದಾರೆ. ಹಾಗಿದ್ರೆ, ಕನ್ನಡ ವರ್ಷನ್‌ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? 10ನೇ ದಿನದ ಗಳಿಕೆ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

10ನೇ ದಿನದ ಕಲೆಕ್ಷನ್ ಎಷ್ಟು?

ಭಾರತೀಯ ಚಿತ್ರರಂಗದ ಮಟ್ಟಿಗೆ 'ಮಹಾವತಾರ್ ನರಸಿಂಹ' ಒಂದೊಳ್ಳೆ ಎಕ್ಸ್‌ಪೆರಿಮೆಂಟ್ ಸಿನಿಮಾ. ಭಾರತದ ಪೌರಾಣಿಕ ಕಥೆಯನ್ನೇ ಇಟ್ಟುಕೊಂಡು ಅನಿಮೇಷನ್ ಸಿನಿಮಾ ಮಾಡಲಾಗಿತ್ತು. ಅದಕ್ಕೀಗ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ಸಿನಿಮಾ ತೆರೆಕಂಡ ಎರಡನೇ ವೀಕೆಂಡ್‌ನಲ್ಲೂ ಭರ್ಜರಿ ಕಲೆಕ್ಷನ್ ಆಗಿದೆ. ಸ್ಯಾಕ್ನಿಲ್ಕ್ ಪ್ರಕಾರ, 'ಸು ಫ್ರಮ್ ಸೋ' ಸಿನಿಮಾದ ಅಬ್ಬರದ ಮಧ್ಯೆ ಕರ್ನಾಟಕದಲ್ಲಿ ಸೈಲೆಂಟ್ ಆಗಿದ್ದ ಸಿನಿಮಾ ಭಾರತದಾದ್ಯಂತ 10ನೇ ದಿನ (ಆಗಸ್ಟ್ 3) 23 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದ ಅನಿಮೇಷನ್ ಸಿನಿಮಾ ಇತಿಹಾಸದಲ್ಲಿಯೇ ಅತೀ ದೊಡ್ಡ ಕಲೆಕ್ಷನ್ ಮಾಡಿದ ಸಿನಿಮಾ.

ಕನ್ನಡ ವರ್ಷನ್ ಗಳಿಸಿದ್ದೆಷ್ಟು?

'ಮಹಾವತಾರ್ ನರಸಿಂಹ' ಕನ್ನಡ ವರ್ಷನ್‌ ಸಾಧಾರಣ ಕಲೆಕ್ಷನ್ ಮಾಡಿದೆ. 'ಸು ಫ್ರಮ್ ಸೋ' ಸಿನಿಮಾದ ಆರ್ಭಟದ ಮಧ್ಯೆ ಕನ್ನಡಿಗರು 'ಮಹಾವತಾರ್ ನರಸಿಂಹ' ನೋಡುವುದನ್ನು ಮರೆತಂತೆ ಇದೆ. ಸ್ಯಾಕ್ನಿಲ್ಕ್ ಪ್ರಕಾರ, ಕರ್ನಾಟಕದಲ್ಲಿ ಕನ್ನಡದ ವರ್ಷನ್ ಸಿನಿಮಾ ಕಳೆದ 10 ದಿನಗಳಲ್ಲಿ 2.23 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಖುಷಿ ವಿಷಯ ಅಂದರೆ, ದಿನದಿಂದ ದಿನಕ್ಕೆ ಕನ್ನಡ ಅವತರಣೆಯ ಕಲೆಕ್ಷನ್‌ನಲ್ಲಿ ಏರಿಕೆ ಕಾಣುತ್ತಿದೆ.

Hombale Films Animated mythological Mahavatar Narsimha Day 10 Box Office Collection is record braking

₹100 ಕೋಟಿ ಕ್ಲಬ್ ಸೇರಿತೇ?

ಹಿರಣ್ಯ ಕಶ್ಯಪು, ಭಕ್ತಪ್ರಹ್ಲಾದ ಹಾಗೂ ನರಸಿಂಹನ ಕಥೆಯ ಅನಿಮೇಷನ್ ರೂಪಕ್ಕೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ. ಭಾರತದಾದ್ಯಂತ ಈ ಸಿನಿಮಾ ಇನ್ನು ಒಂದೆರಡು ದಿನಗಳಲ್ಲಿ ₹100 ಕೋಟಿ ಕ್ಲಬ್ ಸೇರಲಿದೆ. ಹಾಗಿದ್ದರೆ, ಕಳೆದ 10 ದಿನಗಳಲ್ಲಾದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಯಾವ್ಯಾವ ಭಾಷೆಯಿಂದ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

10 ದಿನಗಳ 'ಮಹಾವತಾರ್ ನರಸಿಂಹ' ಕಲೆಕ್ಷನ್ ₹91.35 ಕೋಟಿ
'ಮಹಾವತಾರ್ ನರಸಿಂಹ' ಹಿಂದಿ ವರ್ಷನ್ ₹67.45 ಕೋಟಿ
'ಮಹಾವತಾರ್ ನರಸಿಂಹ' ಕನ್ನಡ ವರ್ಷನ್ ₹2.23 ಕೋಟಿ
'ಮಹಾವತಾರ್ ನರಸಿಂಹ' ತೆಲುಗು ವರ್ಷನ್ ₹20.37 ಕೋಟಿ
'ಮಹಾವತಾರ್ ನರಸಿಂಹ' ತಮಿಳು ವರ್ಷನ್ ₹1.06 ಕೋಟಿ
'ಮಹಾವತಾರ್ ನರಸಿಂಹ' ಮಲಯಾಳಂ ವರ್ಷನ್ ₹24 ಲಕ್ಷ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Hombale Films Animated mythological Mahavatar Narsimha Day 10 Box Office Collection is record braking.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X