Kantara Chapter 1 Box Office Day 24: ಬಾಕ್ಸಾಫೀಸ್‌ನಲ್ಲಿ ಮತ್ತೆ ಜಿಗಿದ 'ಕಾಂತಾರ 1'; ಹಿಂದಿಯಲ್ಲಿ ದಾಖಲೆ
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ಬ್ಯಾಕ್ ಟು ಬ್ಯಾಕ್ ಮೆಗಾ ಹಿಟ್ ಸಿನಿಮಾಗಳನ್ನು ದಾಖಲಿಸುತ್ತಿದೆ. ಇತ್ತೀಚೆಗೆ ತೆರೆಕಂಡದ 'ಕಾಂತಾರ ಚಾಪ್ಟರ್ 1' ಹೊಸ ಸೇರ್ಪಡೆ. ರಿಷಬ್ ಶೆಟ್ಟಿ ಮತ್ತೊಮ್ಮೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಗ್ಲೋಬಲ್ ಮಾರ್ಕೆಟ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅಲ್ಲಿ ಹೇಗೆ ರೆಸ್ಪಾನ್ಸ್ ಸಿಗುತ್ತೋ ಅನ್ನೋದನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ಎದುರು ನೋಡುತ್ತಿದ್ದಾರೆ.
'ಕಾಂತಾರ ಚಾಪ್ಟರ್ 1' ಮೊದಲು ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಈ ಐದು ಭಾಷೆಗಳಲ್ಲಿಯೂ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಐದೂ ಭಾಷೆಗಳಲ್ಲಿಯೂ ಒಂದೊಂದು ದಾಖಲೆಗಳನ್ನು ಸೃಷ್ಟಿಸುತ್ತಾ ಮುನ್ನಡೆಯುತ್ತಲೇ ಇದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಜನರು ಮೆಚ್ಚಿಕೊಂಡಿದ್ದಾರೆ. ಮೊದಲ ಮೂರು ವಾರ ಬಾಕ್ಸಾಫೀಸ್ ದೋಚಿಸಿದ್ದ ಸಿನಿಮಾ ನಾಲ್ಕನೇ ವಾರದ ಹೊತ್ತಿಗೆ ಬಾಕ್ಸಾಫೀಸ್‌ನಲ್ಲಿ ಕೊಂಚ ಇಳಿಕೆ ಕಂಡಿತ್ತು.

ಆದರೆ, ವೀಕೆಂಡ್‌ನಲ್ಲಿ ಮತ್ತೆ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಈ ವಾರಾಂತ್ಯದಲ್ಲಿ 'ಕಾಂತಾರ ಚಾಪ್ಟರ್ 1' 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಹಾಗಿದ್ದರೆ, 24ನೇ ದಿನ 'ಕಾಂತಾರ ಚಾಪ್ಟರ್ 1' ಗಳಿಸಿದ್ದೆಷ್ಟು? ಹಿಂದಿ ಏರಿಯಾಗಳಿಂದ ಸಿನಿಮಾದ ಕಲೆಕ್ಷನ್ ಏನು? ಸೃಷ್ಟಿಸಿದ ದಾಖಲೆಯೇನು? ತಿಳಿಯುವುದಕ್ಕೆ ಮುಂದೆ ಓದಿ.
24ನೇ ದಿನ 'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಏರಿಕೆ?
'ಕಾಂತಾರ ಚಾಪ್ಟರ್ 1' ಟ್ರೇಡ್ ಎಕ್ಸ್‌ಪರ್ಟ್‌ಗಳಿಗೆ ಅಚ್ಚರಿ ಎನಿಸಿದೆ. ಇನ್ನೇನು ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿತ್ತು. ಆದರೆ, ವೀಕೆಂಡ್‌ನಲ್ಲಿ ಮತ್ತೆ ದಿಢೀರನೇ ಏರಿಕೆ ಕಂಡಿದೆ. ಸ್ಯಾಕ್ನಿಲ್ಕ್ ಅಂಕಿ ಅಂಶಗಳ ಪ್ರಕಾರ, ರಿಷಬ್ ಶೆಟ್ಟಿಯ ಈ ಸಿನಿಮಾ 24ನೇ ದಿನ ಬರೋಬ್ಬರು 9 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಇನ್ನಷ್ಟು ಏರಿಕೆ ಆದರೂ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ.
ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?
ಹೊಂಬಾಳೆ ಫಿಲ್ಮ್ಸ್ ಅವರ 'ಕಾಂತಾರ ಚಾಪ್ಟರ್ 1' ಓವರ್‌ಸೀಸ್ ಕಲೆಕ್ಷನ್ ₹120 ಕೋಟಿ ದಾಟಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ವರ್ಲ್ಡ್‌ವೈಡ್ ಕಲೆಕ್ಷನ್ ₹830 ಕೋಟಿ ಅಸು-ಪಾಸಿನಲ್ಲಿದೆ ಎನ್ನಲಾಗಿದೆ. ಇನ್ನು ಅಕ್ಟೋಬರ್ 31ರಿಂದ ಇಂಗ್ಲಿಷ್ ವರ್ಷನ್ ಕೂಡ ರಿಲೀಸ್ ಆಗುತ್ತಿದ್ದು, ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ಹೊಂಬಾಳೆ ಫಿಲ್ಮ್ಸ್ ವರ್ಲ್ಡ್‌ವೈಡ್ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ನೀಡಿಬೇಕಿದೆ. ಇನ್ನು ಭಾರತದಾದ್ಯಂತ 24 ದಿನಗಳಲ್ಲಿ ಗಳಿಸಿದ ಕಲೆಕ್ಷನ್ ಹೀಗಿದೆ.
'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)
1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.35 ಕೋಟಿ
13ನೇ ದಿನ ₹14.15 ಕೋಟಿ
14ನೇ ದಿನ ₹10.5 ಕೋಟಿ
15ನೇ ದಿನ ₹8.85 ಕೋಟಿ
16ನೇ ದಿನ ₹8.5 ಕೋಟಿ
17ನೇ ದಿನ ₹12.75 ಕೋಟಿ
18ನೇ ದಿನ ₹17 ಕೋಟಿ
19ನೇ ದಿನ ₹12.37 ಕೋಟಿ
20ನೇ ದಿನ ₹13 ಕೋಟಿ
21ನೇ ದಿನ ₹10.25 ಕೋಟಿ
22ನೇ ದಿನ ₹6.60 ಕೋಟಿ
23ನೇ ದಿನ ₹6.1 ಕೋಟಿ
24ನೇ ದಿನ ₹9 ಕೋಟಿ
ಒಟ್ಟು ₹ 579.20 ಕೋಟಿ (Net)

200 ಗಡಿ ದಾಟಿದ ಹಿಂದಿ ವರ್ಷನ್
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಾಂತಾರ ಚಾಪ್ಟರ್ 1'ಗೆ ಹಿಂದಿ ಏರಿಯಾಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 24 ದಿನಗಳಲ್ಲಿ ಹಿಂದಿ ವರ್ಷನ್ ₹200 ಕೋಟಿಯ ಗಡಿ ದಾಟಿದೆ. 24ನೇ ದಿನ ಅಂದಾಜು ₹4.25 ಕೋಟಿ ಕೇವಲ ಹಿಂದಿ ವರ್ಷನ್‌ನಿಂದಲೇ ಬಂದಿದೆ ಎಂದು ವರದಿಯಾಗಿದೆ. ಈ ಮೂಲಕ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ₹200 ಕೋಟಿಯ ಗಡಿ ದಾಟಿದ ದಕ್ಷಿಣ ಭಾರತದ 6ನೇ ಸಿನಿಮಾ ಎನಿಸಿಕೊಂಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











