Su From So Box Office Day 13: 13ನೇ ದಿನ ಬಾಕ್ಸಾಫೀಸ್‌ನಲ್ಲಿ ಕುಸಿದ 'ಸು ಫ್ರಮ್ ಸೋ'; ಆದ್ರೂ ಕಲೆಕ್ಷನ್ ಏನು ಕಮ್ಮಿಯಿಲ್ಲ!
ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ 'ಸು ಫ್ರಮ್ ಸೋ' ಬಗ್ಗೆ ಇಡೀ ದೇಶವೇ ಮಾತಾಡುತ್ತಿದೆ. ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಈ ಸಿನಿಮಾ ಮಲಯಾಳಂ ಭಾಷೆಗೂ ಡಬ್ ಆಗಿ ರಿಲೀಸ್ ಆಗಿದ್ದು, ಅಲ್ಲಿನ ಸಿನಿ ಪ್ರಿಯರಿಗೂ ಇಷ್ಟ ಆಗಿದೆ. ಇನ್ನೊಂದು ಕಡೆ ತೆಲುಗಿನಲ್ಲೂ ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಕಳೆದ 12 ದಿನಗಳಿಂದ ನಿರಂತರವಾಗಿ ಕರ್ನಾಟಕದ ಬಾಕ್ಸಾಫೀಸ್ ಕೋಟಿ ಕೋಟಿ ಲೂಟಿ ಮಾಡುತ್ತಲೇ ಇತ್ತು. ಸಿನಿಮಾ ಮಂದಿಗೆ ಈ ಬಾಕ್ಸಾಫೀಸ್ ನಂಬರ್‌ಗಳನ್ನು ಕೇಳಿ ಖುಷಿ ಪಟ್ಟಿದ್ದರು. ಸೊರಗಿ ಬೆಂಡಾಗಿ ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೆ ಜೋಷ್ ಬಂದಂತಾಗಿದೆ. ಆದರೆ, 12 ದಿನಗಳ ಬಳಿಕ ಇದೇ ಮೊದಲ ಬಾರಿಗೆ, 13ನೇ ದಿನ ಬಾಕ್ಸಾಫೀಸ್‌ನಲ್ಲಿ ಒಂದು ಕೋಟಿಗೂ ಅಧಿಕ ಕಲೆಕ್ಷನ್ ಕಮ್ಮಿಯಾಗಿದೆ.

ಹಾಗಂತ 13ನೇ ದಿನ ಈ ಸಿನಿಮಾ ಕಲೆಕ್ಷನ್ ಏನು ಕಮ್ಮಿಯಿಲ್ಲ. ವೀಕ್ ಡೇಸ್‌ನಲ್ಲೂ ಕೋಟಿಗಳ ಲೆಕ್ಕದಲ್ಲಿಯೇ ಕಲೆಕ್ಷನ್ ಮಾಡಿದೆ. ಆದರೆ, 13ನೇ ಡ್ರಾಪ್ ಆಗಿದೆ ಅನ್ನೋದು ಗೊತ್ತಾಗುತ್ತಿದೆ. ಹಾಗಿದ್ದರೆ, 'ಸು ಫ್ರಮ್ ಸೋ' 13ನೇ ದಿನ ಗಳಿಸಿದ್ದೆಷ್ಟು? ₹50 ಕೋಟಿ ಕ್ಲಬ್ ಸೇರುವುದಕ್ಕೆ ಇನ್ನೆಷ್ಟು ದಿನ ಬೇಕು? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಸು ಫ್ರಮ್ ಸೋ' 13ನೇ ದಿನದ ಕಲೆಕ್ಷನ್
ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' 13ನೇ ದಿನದ ಬಾಕ್ಸಾಫೀಸ್‌ನಲ್ಲಿ ಕೊಂಚ ಮಟ್ಟಿಗೆ ಇಳಿಕೆಯಾಗಿದೆ. ವಿದೇಶದಲ್ಲಿ ರಿಲೀಸ್ ಆಗಿದ್ದರೂ ಬಾಕ್ಸಾಫೀಸ್‌ನಲ್ಲಿ ಡ್ರಾಪ್ ಕಂಡಿದೆ. ಸ್ಯಾಕ್ನಿಲ್ಕ್ ಪ್ರಕಾರ, 'ಸು ಫ್ರಮ್ ಸೋ' 13ನೇ ದಿನ 2.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಆರಂಭದ ಲೆಕ್ಕಾಚಾರ ಆಗಿದ್ದು, ಈ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಆಗುವ ಸಾಧ್ಯತೆಯಿದೆ. ಆದರೂ, ವೀಕ್ ಡೇಸ್‌ನಲ್ಲಿ ಇದು ದೊಡ್ಡ ಕಲೆಕ್ಷನ್ ಅಂತಲೇ ಹೇಳಬಹುದು.
13 ದಿನಗಳಲ್ಲಿ ₹50 ಕೋಟಿ ದಾಟಿತೇ?
ಸ್ಮಾಲ್ ಬಜೆಟ್ ಸಿನಿಮಾವೊಂದು ₹50 ಕೋಟಿ ಕಲೆಕ್ಷನ್ ಮಾಡಿದರೆ ಅದು ಬ್ಲಾಕ್ ಬಸ್ಟರ್ ಲಿಸ್ಟ್ ಸೇರುತ್ತೆ. 'ಸು ಫ್ರಮ್ ಸೋ' ಕನ್ನಡ ಚಿತ್ರರಂಗದ ಆಲ್ ಟೈಮ್ ಹಿಟ್ ಎಂದು ಸಾಬೀತಾಗಿದೆ. ₹3 ಕೋಟಿ ಒಳಗೆ ನಿರ್ಮಿಸಿರುವ ಸಿನಿಮಾ 13 ದಿನಗಳಲ್ಲಿ ₹45 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಕನ್ನಡ ಚಿತ್ರರಂಗದ ಅತೀ ದೊಡ್ಡ ಸಕ್ಸಸ್ ಎಂದು ಹೇಳಬಹುದು. ಈ 13 ದಿನಗಳ ಒಟ್ಟು ಕಲೆಕ್ಷನ್ ಹೀಗಿದೆ.
12 ದಿನಗಳ ಕಲೆಕ್ಷನ್
ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ (ಕನ್ನಡ ₹3.7 ಕೋಟಿ+ ಮಲಯಾಳಂ ₹0.05 ಕೋಟಿ)
9ನೇ ದಿನ ₹5.40 ಕೋಟಿ (ಕನ್ನಡ ₹5.2 ಕೋಟಿ+ ಮಲಯಾಳಂ ₹0.20 ಕೋಟಿ)
10ನೇ ದಿನ ₹6.55 ಕೋಟಿ (ಕನ್ನಡ ₹6.15 ಕೋಟಿ+ ಮಲಯಾಳಂ ₹0.40 ಕೋಟಿ)
11ನೇ ದಿನ ₹3.70 ಕೋಟಿ (ಕನ್ನಡ ₹3.30 ಕೋಟಿ+ ಮಲಯಾಳಂ ₹0.20 ಕೋಟಿ)
12ನೇ ದಿನ ₹3.40 ಕೋಟಿ (ಕನ್ನಡ ₹3.00 ಕೋಟಿ+ ಮಲಯಾಳಂ ₹0.40 ಕೋಟಿ)
13ನೇ ದಿನ ₹2.40 ಕೋಟಿ (ಕನ್ನಡ ₹2.20 ಕೋಟಿ+ ಮಲಯಾಳಂ ₹0.20 ಕೋಟಿ)
ಒಟ್ಟು ₹45.40 ಕೋಟಿ (ಕನ್ನಡ ₹43.85 + ಮಲಯಾಳಂ ₹1.55 ಕೋಟಿ)
ತೆಲುಗು ವರ್ಷನ್ ಮೇಲೆ ಕಣ್ಣು
ನಾಳೆಯಿಂದ (ಆಗಸ್ಟ್ 8) 'ಸು ಫ್ರಮ್ ಸೋ' ತೆಲುಗು ವರ್ಷನ್ ಬಿಡುಗಡೆಯಾಗುತ್ತಿದೆ. ಮಲಯಾಳಂನಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದರು. ನಿರೀಕ್ಷೆಯಂತೆ ಒಂದೂವರೆ ಕೋಟಿ ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ. ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಬಹುದು. ಇನ್ನು ತೆಲುಗಿನಲ್ಲೂ ಅದ್ಭುತ ರೆಸ್ಪಾನ್ಸ್ ಸಿಕ್ಕರೆ, ಆರಾಮಾಗಿ ₹75 ಕೋಟಿ ಕ್ಲಬ್ ಸೇರಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











