ಕಾಂತಾರ Vs ಕಾಂತಾರ ಚಾಪ್ಟರ್ 1; 2ನೇ ವಾರದಲ್ಲಿ ಎರಡೂ ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಹೇಗಿತ್ತು?

'ಕಾಂತಾರ ಚಾಪ್ಟರ್ 1' ಮೂರನೇ ವಾರಕ್ಕೆ ಎಂಟ್ರಿ ಕೊಟ್ಟಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ. 2022ರಲ್ಲಿ ತೆರೆಕಂಡಿದ್ದ 'ಕಾಂತಾರ' ಸಿನಿಮಾದ ಡಬಲ್ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ. ಇದರ ಜೊತೆ ಜೊತೆಗೇನೆ ಭಾರತೀಯ ಚಿತ್ರರಂಗದ ಹಲವು ದಾಖಲೆಗಳನ್ನು ಮುರಿಯುತ್ತಾ ಮುಂದೆ ಸಾಗುತ್ತಿದೆ. ಎರಡನೇ ವಾರ ಮುಗಿಯುವ ವೇಳೆಗೆ ಒಂದೊಂದು ಬಾಕ್ಸಾಫೀಸ್‌ ರೆಕಾರ್ಡ್‌ಗಳು ಪೀಸ್ ಪೀಸ್ ಆಗಿವೆ.

'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಗಳಿಸುತ್ತಿರುವ ವೇಗ ಸಿನಿಮಾ ಮಂದಿಯನ್ನು ಬೆರಗುಗೊಳಿಸಿತ್ತು. ಆದರೆ, ಎರಡನೇ ವಾರದ ಕೊನೆ ಕೊನೆಯಲ್ಲಿ ಕಲೆಕ್ಷನ್‌ ಡ್ರಾಪ್ ಕಾಣಿಸಿಕೊಂಡಿತ್ತು. ಇದನ್ನು ನಿರೀಕ್ಷೆ ಮಾಡಿದ್ದರೂ, 'ಕಾಂತಾರ ಚಾಪ್ಟರ್ 1' ಗಳಿಕೆ ಡಿಸೆಂಟ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಇದೇ ಎರಡನೇ ವಾರದ ವೇಳೆಗೆ 2022ರಲ್ಲಿ ತೆರೆಕಂಡ 'ಕಾಂತಾರ'ದ ಬಾಕ್ಸಾಫೀಸ್ ಕಲೆಕ್ಷನ್ ಏರಿಕೆ ಕಂಡಿತ್ತು.

Kantara 2022 vs Kantara Chapter 1 2025 Karnataka Box Office Comparison and theaters collection

ರಿಷಬ್ ಶೆಟ್ಟಿ ಸಿನಿಮಾ ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ ಟ್ರೇಡ್‌ ಎಕ್ಸ್‌ಪರ್ಟ್‌ಗಳು 'ಕಾಂತಾರ' ಹಾಗೂ 'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಅನ್ನು ಹೋಲಿಕೆ ಮಾಡಲಾಗುತ್ತಿದೆ. ಎರಡನೇ ವಾರದ ಹೊತ್ತಿಗೆ ಈ ಎರಡೂ ಸಿನಿಮಾಗಳ ಬಾಕ್ಸಾಫೀಸ್ ಸ್ಟೇಟಸ್ ಹೇಗಿತ್ತು? ಅನ್ನೋ ಲೆಕ್ಕಾಚಾರ ಹಾಕಲಾಗುತ್ತಿದೆ. ಹಾಗಿದ್ದರೆ, 'ಕಾಂತಾರ' ಹಾಗೂ 'ಕಾಂತಾರ ಚಾಪ್ಟರ್ 1'ರ ಕಲೆಕ್ಷನ್ ಕರ್ನಾಟಕದಲ್ಲಿ ಎರಡನೇ ವಾರದ ಹೊತ್ತಿಗೆ ಹೇಗಿತ್ತು? ಎರಡನೇ ವಾರ ಇಲ್ಲಿನ ಯಾವ್ಯಾವ ಥಿಯೇಟರ್‌ಗಳಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

ಕಾಂತಾರ Vs ಕಾಂತಾರ ಚಾಪ್ಟರ್ 1

ಕರ್ನಾಟಕದಲ್ಲಿ 'ಕಾಂತಾರ ಚಾಪ್ಟರ್ 1' ಈ ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. 'ಕೆಜಿಎಫ್ 2' ಕರ್ನಾಟಕ ರೆಕಾರ್ಡ್ ಅನ್ನು ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ. ಈಗಾಗಲೇ ₹200 ಕೋಟಿ ಹತ್ತಿರ ಸಿನಿಮಾದ ಕಲೆಕ್ಷನ್ ಆಗಿದೆ. ಕೊಯಿಮೊಯ್ ಪ್ರಕಾರ, ಕರ್ನಾಟಕದಲ್ಲಿ 'ಕಾಂತಾರ ಚಾಪ್ಟರ್ 1' ಕೇವಲ 14 ದಿನಗಳಲ್ಲಿ ₹186.05 ಕೋಟಿ ಮಾಡಿದೆ. ಇನ್ನೂ ಹೆಚ್ಚು ಗಳಿಸುವ ಸಾಧ್ಯತೆಯಿದ್ದು, ₹250 ಕೋಟಿವರೆಗೂ ಆಗಬಹುದೆಂಬ ನಿರೀಕ್ಷೆಯಿದೆ. ಅದೇ 2022ರಲ್ಲಿ ತೆರೆಕಂಡ 'ಕಾಂತಾರ' ಲೈಫ್‌ಟೈಮ್ ಕಲೆಕ್ಷನ್ ₹183 ಕೋಟಿ. ಆದರೆ, ಈ ಸಿನಿಮಾ 2ನೇ ವಾರದ ಹೊತ್ತಿಗೆ ಬಾಕ್ಸಾಫೀಸ್‌ ಕಲೆಕ್ಷನ್ ಶೇ.36ರಷ್ಟು ಏರಿಕೆಯೊಂದಿಗೆ ₹46.40 ಕೋಟಿ ಇತ್ತು.

Kantara 2022 vs Kantara Chapter 1 2025 Karnataka Box Office Comparison and theaters collection

'ಕಾಂತಾರ ಚಾಪ್ಟರ್ 1' 2 ವಾರಗಳಲ್ಲಿ ಆಗಿದ್ದೇನು?

'ಕಾಂತಾರ ಚಾಪ್ಟರ್ 1' ರಿಲೀಸ್ ಆಗಿ ಯಶಸ್ವಿಯಾಗಿ 15 ದಿನಗಳನ್ನು ಪೂರೈಸಿದೆ. ರಿಷಬ್ ಶೆಟ್ಟಿ ನಟಿ, ನಿರ್ದೇಶಿಸಿರುವ ಈ ಸಿನಿಮಾ ಕನ್ನಡ ಚಿತ್ರರಂಗದ ತಾಕತ್ತನ್ನು ಮತ್ತೆ ದೇಶಾದ್ಯಂತ ತೋರಿಸಿದೆ. ಸಿನಿಮಾ ರಿಲೀಸ್ ಆದ 15 ದಿನಗಳ ಹೈಲೈಟ್ ಹೀಗಿದೆ.

1. ಚಾಪ್ಟರ್ 1 ಕರ್ನಾಟಕದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ
2. ಕೇವಲ 2 ವಾರಗಳಲ್ಲಿ 'ಕಾಂತಾರ'ದ ಲೈಫ್ ಟೈಮ್ ಕಲೆಕ್ಷನ್
3. 'ಕಾಂತಾರ 1' 2ನೇ ವಾರ ಕುಸಿದರೆ, 'ಕಾಂತಾರ' ಕಲೆಕ್ಷನ್ ಏರಿಕೆಯಾಗಿತ್ತು
4. 'ಕಾಂತಾರ' ಕರ್ನಾಟಕದ ಹಾಗೂ ಹಿಂದಿ ಏರಿಯಾಗಳಲ್ಲಿ ಸದ್ದು ಮಾಡಿತ್ತು
5. 'ಕಾಂತಾರ ಚಾಪ್ಟರ್ 1' ಪ್ಯಾನ್ ಇಂಡಿಯಾ ಹಾಗೂ ವಿದೇಶದಲ್ಲಿ ಸದ್ದು ಮಾಡಿದೆ.

ಯಾವ್ಯಾವ ಥಿಯೇಟರ್‌ನಲ್ಲಿ ಎಷ್ಟೆಷ್ಟು ಕಲೆಕ್ಷನ್?

ರಿಷಬ್ ಶೆಟ್ಟಿ ನಟನೆಯ 'ಕಾಂತಾರ ಚಾಪ್ಟರ್ 1' ಕರ್ನಾಟಕದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಆಗಿ ಹೊರಹೊಮ್ಮಿದೆ. ಮೊದಲ 15 ದಿನಗಳಲ್ಲಿ ಈ ಸಿನಿಮಾ ₹200 ಕೋಟಿ ಹತ್ತಿರ ಕಲೆಕ್ಷನ್ ಮಾಡಿದೆ. ಕರ್ನಾಟಕದ ಕೆಲವು ಥಿಯೇಟರ್‌ಗಳು ಅದ್ಬುತ ಕಲೆಕ್ಷನ್ ಮಾಡಿದೆ. ಯಾವ್ಯಾವ ಚಿತ್ರಮಂದಿರ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನೋದರ ಡಿಟೈಲ್ಸ್ ಇಲ್ಲಿದೆ.

ಕಾಂತಾರ ಚಾಪ್ಟರ್ 1 2ನೇ ವಾರದ ಥಿಯೇಟರ್‌ಗಳ ಕಲೆಕ್ಷನ್

ಊರ್ವಶಿ ₹27 ಲಕ್ಷ
ಸಂತೋಷ್ ₹27 ಲಕ್ಷ
ವೀರೇಶ್ ₹31 ಲಕ್ಷ
ಪ್ರಸನ್ನ ₹21 ಲಕ್ಷ
ಸಿದ್ದೇಶ್ವರ+ಸಿದ್ದಲಿಂಗೇಶ್ವರ ₹26 ಲಕ್ಷ
ಗುರುಶ್ರೀ (ಮಂಡ್ಯ) ₹26 ಲಕ್ಷ
ಮಹಾವೀರ್ (ಮಂಡ್ಯ) ₹13 ಲಕ್ಷ
ಸಂಗಮ್ (ಮೈಸೂರು) ₹20 ಲಕ್ಷ
ಗಾಯತ್ರಿ (ಮೈಸೂರು) ₹20 ಲಕ್ಷ
ವುಡ್‌ಲ್ಯಾಂಡ್ (ಮೈಸೂರು) ₹15 ಲಕ್ಷ
ಎಸ್‌ಬಿಜಿ (ಹಾಸನ) ₹14 ಲಕ್ಷ
ಶ್ರೀಗುರು (ಹಾಸನ) ₹19 ಲಕ್ಷ
ತ್ರಿಶುಲ್+ತ್ರಿನೇತ್ರ (ದಾವಣಗೆರೆ) ₹16 ಲಕ್ಷ

More from Filmibeat

English summary
Kantara 2022 vs Kantara Chapter 1 2025 Karnataka Box Office Comparison and Theaters collection;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X