ಬಾಕ್ಸಾಫೀಸ್‌ನಲ್ಲಿ ಸಪ್ತಮಿ ಗೌಡ ಚೊಚ್ಚಲ ತೆಲುಗು ಸಿನಿಮಾಗೆ ಹೀನಾಯ ಸೋಲು: ಕೈ ಹಿಡಿಯಲಿಲ್ಲ 'ತಮ್ಮುಡು'
'ಕಾಂತಾರ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಪ್ತಮಿ ಗೌಡ ಸದ್ದು ಮಾಡಿದ್ದರು. ಅಲ್ಲಿಂದ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಅವರಿಗೆ ಅವಕಾಶಗಳು ಹುಡುಕೊಂಡು ಬರುತ್ತಿವೆ. 'ಕಾಂತಾರ' ಮುಗಿಯುತ್ತಿದ್ದಂತೆ ಸಪ್ತಮಿ ಗೌಡ ಬಾಲಿವುಡ್ ಸಿನಿಮಾ 'ವಾಕ್ಸಿನ್ ವಾರ್'ನಲ್ಲಿಯೂ ನಟಿಸಿದ್ದರು. ಆದರೆ, ಸಪ್ತಮಿಗೆ ಆ ಸಿನಿಮಾ ಕೈ ಹಿಡಿಯಲಿಲ್ಲ. ಬಳಿಕ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು.
ಈ ಗ್ಯಾಪ್‌ನಲ್ಲಿಯೇ ತೆಲುಗು ಸಿನಿಮಾಗೆ ಆಫರ್ ಬಂದಿತ್ತು. ಅದುವೇ ತೆಲುಗು ನಿತಿನ್ ನಟನೆ 'ತಮ್ಮುಡು'. ಇದು ಸಪ್ತಮಿ ಗೌಡ ನಟನೆಯ ಮೊದಲ ತೆಲುಗು ಸಿನಿಮಾ. ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದ ಸಪ್ತಮಿ ಗೌಡ ಇಲ್ಲೂ ಡಿ ಗ್ಲಾಮರ್ ರೋಲ್‌ನಲ್ಲಿಯೇ ಕಾಣಿಸಿಕೊಂಡಿದ್ದರು. ಇವರ ಪಾತ್ರ ನೋಡುವುದಕ್ಕೆ ಥೇಟ್ 'ಕಾಂತಾರ'ವನ್ನು ನೆನಪಿಸುವಂತೆಯೇ ಇತ್ತು. ಹಾಗೇ ಸಪ್ತಮಿ ಗೌಡ ಕೂಡ ಈ ಪ್ರಾಜೆಕ್ಟ್ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದರು.

ಟಾಲಿವುಡ್‌ನ ಜನಪ್ರಿಯ ನಿರ್ಮಾಪಕ ದಿಲ್ ರಾಜು 'ತಮ್ಮುಡು' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ನಿತಿನ್ ಜೊತೆ ಸಪ್ತಮಿ ಗೌಡ ಹಾಗೂ ವರ್ಷಾ ಬೊಳಮ್ಮ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಪವನ್ ಕಲ್ಯಾಣ್ ಸಿನಿಮಾ 'ವಕೀಲ್ ಸಾಬ್' ನಿರ್ದೇಶಿಸಿದ್ದ ವೇಣು ಶ್ರೀರಾಮ್ ಈ ಸಿನಿಮಾ ಆಕ್ಷನ್ ಕಟ್ ಹೇಳಿದ್ದರು. ನಾಲ್ಕು ದಿನಗಳ ಹಿಂದೆ, ಅಂದರೆ, ಜುಲೈ 04ರಂದು ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಬಿಡುಗಡೆಯಾದ ಐದು ದಿನಕ್ಕೆ ಬಾಕ್ಸಾಫೀಸ್ ಡಿಸಾಸ್ಟರ್ ಎಂದು ಟಾಲಿವುಡ್ ಮಂದಿ ಡಿಕ್ಲೇರ್ ಮಾಡಿದ್ದಾರೆ.
ಸಪ್ತಮಿ ಗೌಡ 'ತಮ್ಮುಡು' ಗೆಲ್ತಾ?: ಸಪ್ತಮಿ ಗೌಡ ನಟನೆಯ ಚೊಚ್ಚಲ ತೆಲುಗು ಸಿನಿಮಾ 'ತಮ್ಮುಡು' ಬಜೆಟ್ ಎಷ್ಟು? ಐದು ದಿನಗಳಲ್ಲಿ ಈ ಸಿನಿಮಾ ಕಳಿಸಿದ್ದೆಷ್ಟು? ನಿರ್ಮಾಪಕರಿಗೆ ಲಾಭನಾ ನಷ್ಟನಾ? ಅನ್ನೋದನ್ನು ನೋಡುವುದಾರೇ, ಟ್ರೇಡ್ ಎಕ್ಸ್‌ಪರ್ಟ್‌ಗಳು ಡಿಸಾಸ್ಟರ್ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಿನಿಮಾದ ಟೀಸರ್ ಹಾಗೂ ಟ್ರೈಲರ್ ರಿಲೀಸ್ ಬಳಿಕೆ 'ತಮ್ಮುಡು'ಗೆ ಭಾರೀ ನಿರೀಕ್ಷೆಯನ್ನು ಹುಟ್ಟಾಕಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡುವಲ್ಲಿ ಸೋತಿದೆ.
ಸಿನಿಮಾ ಬಜೆಟ್ ಎಷ್ಟು?: ದಿಲ್ ರಾಜ್ ನಿರ್ಮಾಣ ಆಗಿದ್ದರಿಂದ ಬಜೆಟ್ ಏನು ಕಮ್ಮಿಯಿರಲಿಲ್ಲ. ಫಿಲ್ಮಿಬೀಟ್ ತೆಲುಗು ವರದಿ ಮಾಡಿದಂತೆ, ಈ ಸಿನಿಮಾಗೆ ದಿಲ್ ರಾಜು ಸುಮಾರು 75 ಕೋಟಿ ಖರ್ಚು ಮಾಡಿದ್ದಾರೆ. ಇದರಲ್ಲಿ ತಾರೆಯರ ಸಂಭಾವನೆ, ತಂತ್ರಜ್ಞರ ಸಂಭಾವನೆ, ಮೇಕಿಂಗ್‌ಗೆ ಖರ್ಚು, ಪ್ರಚಾರದ ವೆಚ್ಚ ಎಲ್ಲವೂ ಸೇರಿ 75 ಕೋಟಿ ರೂಪಾಯಿ ಖರ್ಚು ಆಗಿದೆ ಎಂದು ಹೇಳಲಾಗುತ್ತಿದೆ. ನಿತಿನ್, ಸಪ್ತಮಿ ಗೌಡ, ಜೊತೆಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕೆ.ವಿ. ಗುಹಾನ್, ಸಮೀರ್ ರೆಡ್ಡಿ, ಸೇತು ಛಾಯಾಗ್ರಹಣ, ಪ್ರವೀಣ್ ಪುಡಿ ಎಡಿಟಿಂಗ್, ವಿಕ್ರಮ್ ಮೋರ್, ರಿಯಲ್ ಸತೀಶ್, ರವಿವರ್ಮ, ರಾಮ್ ಕಿಶನ್ ಸಾಹಸ ನಿರ್ದೇಶನ ಮಾಡಿದ್ದಾರೆ.

'ತಮ್ಮುಡು' ಕಲೆಕ್ಷನ್ಸ್ ಎಷ್ಟು?: 'ತಮ್ಮುಡು' ಓಪನಿಂಗ್ ಉತ್ತಮವಾಗಿದ್ದರೂ, ನಂತರದ ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಎದ್ದೇಳಲೇ ಇಲ್ಲ. ಸ್ಯಾಕ್ನಿಲ್ಕ್ ವರದಿ ಪ್ರಕಾರ ಈ ಸಿನಿಮಾ ಮೊದಲ ಐದು ದಿನಗಳಲ್ಲಿ ಗಳಿಸಿದ್ದು ಕೇವಲ 5.35 ಕೋಟಿ ರೂಪಾಯಿ. ಇಷ್ಟು ಗಳಿಸುವುದಕ್ಕೆ ಈ ಸಿನಿಮಾ ಪರದಾಡಿದೆ ಎಂದು ಟಾಲಿವುಡ್ ಮಂದಿ ಅಭಿಪ್ರಾಯ ಪಟ್ಟಿದ್ದಾರೆ. ಐದು ದಿನಗಳ ಕಲೆಕ್ಷನ್ ಹೀಗಿದೆ.
ಮೊದಲ ದಿನ ₹1.90 ಕೋಟಿ
ಎರಡನೇ ದಿನ ₹1.20 ಕೋಟಿ
ಮೂರನೇ ದಿನ ₹1.15 ಕೋಟಿ
ನಾಲ್ಕನೇ ದಿನ ₹0.60 ಕೋಟಿ
ಐದನೇ ದಿನ ₹0.50 ಕೋಟಿ
ಒಟ್ಟು ₹5.35 ಕೋಟಿ
ದಿಲ್ ರಾಜು ಭಾರೀ ನಷ್ಟ?: ಒಂದು ಕಾಲದಲ್ಲಿ ದಿಲ್ ರಾಜು ಮುಟ್ಟಿದ ಸಿನಿಮಾಗಳು ಭಾರೀ ಸದ್ದು ಮಾಡುತ್ತಿದ್ದವು. ಅವರ ಬಾಕ್ಸಾಫೀಸ್ ಲೆಕ್ಕಾಚಾರ ಮಿಸ್ ಆಗಿದ್ದೇ ಇರಲಿಲ್ಲ. ಆದರೆ, ಇತ್ತೀಚೆಗೆ ಅವರಿಗೆ ಸೋಲಿನ ಮೇಲೆ ಸೋಲಾಗುತ್ತಿದೆ. ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್ ಸಿನಿಮಾ 'ಗೇಮ್ ಚೇಂಜರ್' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಅದರ ಬೆನ್ನಲ್ಲೇ ಈಗ 'ತಮ್ಮುಡು' ಕೂಡ ಸೋಲುಂಡಿದೆ. ಟಾಲಿವುಡ್ ಮೂಲಗಳ ಪ್ರಕಾರ ದಿಲ್ ರಾಜು ಕಮ್ಮಿ ಅಂದರೂ 70 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಆದರೆ, ಓಟಿಟಿ, ಸ್ಯಾಟಲೈಟ್, ಡಬ್ಬಿಂಗ್ ರೈಟ್ಸ್ ರಿಕವರಿ ಮಾಡುತ್ತಾರೆಂದು ಸಿನಿಮಾ ಮಂದಿ ಅಭಿಪ್ರಾಯ ಪಟ್ಟಿದ್ದಾರೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











