Kantara Chapter 1 Vs KGF 2 Vs Bahubali 2 Vs Salaar Vs Jailer; ಮೊದಲ 6 ದಿನಗಳ ಬಾಕ್ಸಾಫೀಸ್ ಗಳಿಕೆ ಎಷ್ಟು?

'ಕಾಂತಾರ ಚಾಪ್ಟರ್ 1' ಕಳೆದ ಆರು ದಿನಗಳಿಂದ ದೇಶಾದ್ಯಂತ ಸದ್ದು ಮಾಡಿತ್ತು. ಬ್ಯಾಕ್ ಟು ಬ್ಯಾಕ್ ರಜೆಗಳಿಂದ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಆಗಿದೆ. ಜೊತೆ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ದೇಶದ ಉದ್ದಗಲಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ದಕ್ಷಿಣ ಭಾರತ ಅಷ್ಟೇ ಅಲ್ಲ. ಉತ್ತರ ಭಾರತದಲ್ಲಿಯೂ ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.

ರಜೆಗಳು ಮುಗಿದ ಬಳಿಕ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತೆ ಎಂದೇ ಭಾವಿಸಲಾಗಿತ್ತು. ಆದರೆ, ಇಂದು (ಅಕ್ಟೋಬರ್ 8) ಕೂಡ ಸಂಜೆಯ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಕಡೆಯಲ್ಲಿಯೂ ಇವಿಂಗ್ ಶೋಗಳ ಉತ್ತಮ ಕಲೆಕ್ಷನ್ ಮಾಡುತ್ತವೆ. ಅದರಲ್ಲೂ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿದ್ದು, ರಿಲೀಸ್ ಆದ ಮೊದಲ ಆರು ದಿನಗಳಲ್ಲಿ ಮೆಗಾ ಹಿಟ್ ಆದ ಸಿನಿಮಾಗಳ ದಾಖಲೆಯನ್ನು ಬ್ರೇಕ್ ಮಾಡಿದೆ.

Kantara Chapter 1 Vs KGF 2 Vs Bahubali 2 Vs Salaar Vs Jailer First 6 days Box Office Collection

ಹೌದು, 'ಕಾಂತಾರ ಚಾಪ್ಟರ್ 1' ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಎರಡು ಸಿನಿಮಾಗಳ ದಾಖಲೆಯನ್ನು ಕರ್ನಾಟಕದಲ್ಲಿ ಬ್ರೇಕ್ ಮಾಡಿದೆ. ಹಾಗೇ ಪ್ರಭಾಸ್ ನಟಿಸಿದ 'ಬಾಹುಬಲಿ 2', ರಜನಿಕಾಂತ್ ನಟಿಸಿದ 'ಜೈಲರ್' ಸಿನಿಮಾದ ಬಾಕ್ಸಾಫೀಸ್ ಗಳಿಕೆಯನ್ನು ಉಡೀಸ್ ಮಾಡಿದೆ. ಹಾಗಿದ್ದರೆ, ಐದೂ ಸಿನಿಮಾ ಮೊದಲ 6 ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಕಾಂತಾರ ಚಾಪ್ಟರ್ 1' ಮೊದಲ 6 ದಿನಗಳ ಕಲೆಕ್ಷನ್

ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಮೊದಲ ಆರು ದಿನಗಳ ಕಲೆಕ್ಷನ್ ಸಖತ್ ಆಗಿದೆ. ಕರ್ನಾಟಕದಲ್ಲಿ ಈ ಸಿನಿಮಾ ಐದು ಭಾಷೆಗಳಿಂದ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ಆರು ದಿನಗಳಲ್ಲಿ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾದ ಕೆಲಕ್ಷನ್ ರಿಪೋರ್ಟ್ ಹೀಗಿದೆ.

1ನೇ ದಿನ ₹20 ಕೋಟಿ (ಪೇಯ್ಡ್ ಪ್ರೀಮಿಯರ್ ಸೇರಿಸಿ)
2ನೇ ದಿನ ₹17 ಕೋಟಿ
3ನೇ ದಿನ ₹17 ಕೋಟಿ
4ನೇ ದಿನ ₹17 ಕೋಟಿ
5ನೇ ದಿನ ₹14 ಕೋಟಿ
6ನೇ ದಿನ ₹15 ಕೋಟಿ
ಒಟ್ಟು 100 ಕೋಟಿ (ಐದು ಭಾಷೆ)

Kantara Chapter 1 Vs KGF 2 Vs Bahubali 2 Vs Salaar Vs Jailer First 6 days Box Office Collection

ಕೆಜಿಎಫ್ ಚಾಪ್ಟರ್ 2 ಮೊದಲ 6 ದಿನಗಳ ಕಲೆಕ್ಷನ್

ಇನ್ನು ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ ಚಾಪ್ಟರ್ 2' ಕೂಡ ಹೀಗೆ ಸದ್ದು ಮಾಡಿತ್ತು. ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಅಂದು ಕರ್ನಾಟಕದಲ್ಲಿ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾವೊಂದು ಹೊಸ ದಾಖಲೆಯನ್ನು ಬರೆದಿತ್ತು.

1ನೇ ದಿನ ₹18 ಕೋಟಿ (ಪೇಯ್ಡ್ ಪ್ರೀಮಿಯರ್ ಸೇರಿಸಿ)
2ನೇ ದಿನ ₹15 ಕೋಟಿ
3ನೇ ದಿನ ₹16 ಕೋಟಿ
4ನೇ ದಿನ ₹16 ಕೋಟಿ
5ನೇ ದಿನ ₹14 ಕೋಟಿ
6ನೇ ದಿನ ₹15 ಕೋಟಿ
ಒಟ್ಟು ₹94 ಕೋಟಿ (ಐದು ಭಾಷೆ)

ಬಾಹುಬಲಿ 2 ಮೊದಲ 6 ದಿನಗಳ ಕಲೆಕ್ಷನ್

ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಕಲ್ಪನೆಗೆ ಮರುಜೀವ ಕೊಟ್ಟಿದ್ದೇ 'ಬಾಹುಬಲಿ 2'. ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಇದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಟ್ರೆಂಡ್ ಅನ್ನು ಹುಟ್ಟಾಕಿತ್ತು. ಈ ಸಿನಿಮಾ ತೆಲುಗು ರಾಜ್ಯಗಳಲ್ಲಷ್ಟೇ ಅಲ್ಲ. ಕರ್ನಾಟಕದಲ್ಲೂ ಕೂಡ ಅಷ್ಟೇ ಸದ್ದು ಮಾಡಿತ್ತು.

1ನೇ ದಿನ ₹16 ಕೋಟಿ (ಪೇಯ್ಡ್ ಪ್ರೀಮಿಯರ್ ಸೇರಿಸಿ)
2ನೇ ದಿನ ₹12 ಕೋಟಿ
3ನೇ ದಿನ ₹12 ಕೋಟಿ
4ನೇ ದಿನ ₹14 ಕೋಟಿ
5ನೇ ದಿನ ₹10 ಕೋಟಿ
6ನೇ ದಿನ ₹09 ಕೋಟಿ
ಒಟ್ಟು ₹73 ಕೋಟಿ (ಐದು ಭಾಷೆ)

'ಜೈಲರ್' ಮೊದಲ 6 ದಿನಗಳ ಕಲೆಕ್ಷನ್

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ಕರ್ನಾಟಕದಲ್ಲಿ ಒಳ್ಳೆ ಬ್ಯುಸಿನೆಸ್ ಮಾಡಿತ್ತು. ಕನ್ನಡಿಗರು ಕೂಡ ಈ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ಹೀಗಾಗಿ ಕರ್ನಾಟಕದಲ್ಲಿ ಸುಮಾರು 35 ರಿಂದ 40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದರಲ್ಲಿ ಮೊದಲ ಆರು ದಿನಗಳ ಕಲೆಕ್ಷನ್ ಹೀಗಿದೆ.

1ನೇ ದಿನ ₹11 ಕೋಟಿ (ಪೇಯ್ಡ್ ಪ್ರೀಮಿಯರ್ ಸೇರಿಸಿ)
2ನೇ ದಿನ ₹08 ಕೋಟಿ
3ನೇ ದಿನ ₹10 ಕೋಟಿ
4ನೇ ದಿನ ₹09 ಕೋಟಿ
5ನೇ ದಿನ ₹06 ಕೋಟಿ
6ನೇ ದಿನ ₹6.5 ಕೋಟಿ
ಒಟ್ಟು ₹50.5 ಕೋಟಿ (ಐದು ಭಾಷೆ)

ಸಲಾರ್ ಮೊದಲ 6 ದಿನಗಳ ಕಲೆಕ್ಷನ್

ಇನ್ನು ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದಿರೋ 'ಸಲಾರ್' ಕೂಡ ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಹೊಂಬಾಳೆ ನಿರ್ಮಿಸಿದ ಈ ಸಿನಿಮಾ ಐದು ಭಾಷೆಗಳಿಂದ ದೊಡ್ಡ ಮಟ್ಟದಲ್ಲಿಯೇ ಕಲೆ ಹಾಕಿತ್ತು.

1ನೇ ದಿನ ₹16 ಕೋಟಿ (ಪೇಯ್ಡ್ ಪ್ರೀಮಿಯರ್ ಸೇರಿಸಿ)
2ನೇ ದಿನ ₹13 ಕೋಟಿ
3ನೇ ದಿನ ₹13 ಕೋಟಿ
4ನೇ ದಿನ ₹11 ಕೋಟಿ
5ನೇ ದಿನ ₹09 ಕೋಟಿ
6ನೇ ದಿನ ₹09 ಕೋಟಿ
ಒಟ್ಟು ₹71 ಕೋಟಿ (ಐದು ಭಾಷೆ)

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, ವಿತರಕ ವಲಯ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Kantara Chapter 1 Vs KGF 2 Vs Bahubali 2 Vs Salaar Vs Jailer First 6 days Box Office Collection.
Read more about: kantara chapter 1 kgf 2 bahubali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X