Budget Vs Box Office: ಸ್ಮಾಲ್ ಬಜೆಟ್.. ಬಾಕ್ಸಾಫೀಸ್‌ನಲ್ಲಿ ಚಿಂದಿ; 'ಕಾಂತಾರ' to 'ಸು ಫ್ರಮ್ ಸೋ' ಸಿನಿಮಾ ಲಿಸ್ಟ್

ಭಾರತೀಯ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿವೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಸ್ಮಾಲ್ ಬಜೆಟ್ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸಿವೆ. ಹತ್ತರಿಂದ ಹದಿನೈದು ಕೋಟಿ ವೆಚ್ಚದಲ್ಲಿ ನಿರ್ಮಾಣ ಸಿನಿಮಾದ ನೂರಾರು ಕೋಟಿ ಲೂಟಿ ಮಾಡಿದ ಉದಾಹರಣೆಗಳು.

ಸ್ಮಾಲ್ ಬಜೆಟ್ ಸಿನಿಮಾಗಳ ಮೆಗಾ ಸಕ್ಸಸ್ ಕಂಡ ಸಿನಿಮಾಗಳ ಪೈಕಿ ಕನ್ನಡ ಚಿತ್ರರಂಗದ ಪಾಲು ದೊಡ್ಡದಿದೆ. ಇಲ್ಲಿ ₹20 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿವೆ. ಹಾಗೇ ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಚಿತ್ರರಂಗದಲ್ಲಿಯೂ ಇಂತಹ ಸ್ಮಾಲ್ ಬಜೆಟ್ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿವೆ. ಇಂತಹ ಸಿನಿಮಾಗಳ ಲಿಸ್ಟ್ ಇಲ್ಲಿವೆ.

Kantara to Su from So Here is the list of small budget films made Box office records

ಕಾಂತಾರ

2022ರಲ್ಲಿ ತೆರೆಕಂಡ 'ಕಾಂತಾರ' ಸಿನಿಮಾ ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿತ್ತು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ್ದ ಸಿನಿಮಾ ಐದು ಭಾಷೆಗಳಲ್ಲಿಯೂ ಸಕ್ಸಸ್ ಕಂಡಿತ್ತು. ₹16 ಕೋಟಿಯಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹411 ಕೋಟಿ ಲೂಟಿ ಮಾಡಿತ್ತು. ಭಾರತೀಯ ಚಿತ್ರರಂಗದಲ್ಲಿಯೇ ಅತೀ ಹೆಚ್ಚು ಲಾಭ ಗಳಿಸಿದ ಸಿನಿಮಾ ಎನಿಸಿಕೊಂಡಿದೆ.


ಸು ಫ್ರಮ್ ಸೋ

ರಾಜ್ ಬಿ ಶೆಟ್ಟಿ ಹಾಗೂ ಸ್ನೇಹಿತರು ನಿರ್ಮಿಸಿದ್ದ ಸಿನಿಮಾ 'ಸು ಫ್ರಮ್ ಸೋ' ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದೆ. ಯಾವುದೇ ಸ್ಟಾರ್‌ಕಾಸ್ಟ್ ಇಲ್ಲದ ಸಿನಿಮಾ ಬಾಕ್ಸಾಫೀಸ್ ದಾಖಲೆ ಬರೆದಿತ್ತು. ಕೇವಲ ಐದಾರು ಕೋಟಿಯಲ್ಲಿ ನಿರ್ಮಾಣ ಮಾಡಿದ್ದ ಸಿನಿಮಾ ವಿಶ್ವದಾದ್ಯಂತ ₹125 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

777 ಚಾರ್ಲಿ

ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ'. ರಕ್ಷಿತ್ ಶೆಟ್ಟಿ ನಟಿಸಿದ ಈ ಸಿನಿಮಾ ಐದು ಭಾಷೆಗಳಲ್ಲಿ ಸದ್ದು ಮಾಡಿತ್ತು. ಇದು ಸಿಂಪಲ್ ಸ್ಟಾರ್ ವೃತ್ತಿ ಬದುಕಿನಲ್ಲಿಯೇ ಅತೀ ಹೆಚ್ಚು ಗಳಿಸಿದ ಸಿನಿಮಾ. ₹20 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಿನಿಮಾ ₹115 ಕೋಟಿ ಲೂಟಿ ಮಾಡಿತ್ತು.

ಮಹಾವತಾರ್ ನರಸಿಂಹ

ಹೊಂಬಾಳೆ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿದ್ದ ಅನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ'. ಇದು ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಚರಿತ್ರೆಯನ್ನು ಬರೆದಿದೆ. ಪೌರಾಣಿಕ ಕಥೆಗೆ ಅನಿಮೇಷನ್ ರೂಪ ಕೊಟ್ಟು ನಿರ್ಮಿಸಿದ್ದ ಈ ಸಿನಿಮಾದ ಬಜೆಟ್ ಕೇವಲ ₹15 ಕೋಟಿ. ಬಾಕ್ಸಾಫೀಸ್‌ನಲ್ಲಿ ₹300 ಕೋಟಿಗೂ ಅಧಿಕ ಹಣವನ್ನು ಲೂಟಿ ಮಾಡಿತ್ತು.

Kantara to Su from So Here is the list of small budget films made Box office records
ದಿ ಕಾಶ್ಮೀರ್ ಫೈಲ್ಸ್

ಭಾರತದಾದ್ಯಂತ ಸದ್ದು ಮಾಡಿದ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್'. ಹಿಂದಿ ಭಾಷೆಯಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾದ ಬಜೆಟ್ ಕೇವಲ ₹25 ಕೋಟಿ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಅನುಪಮ್ ಖೇರ್ ಸೇರಿದಂತೆ ಬಾಲಿವುಡ್ ತಾರೆಯರು ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ ₹340 ಕೋಟಿ ಕಲೆಕ್ಷನ್ ಮಾಡಿತ್ತು.

ದಿ ಕೇರಳ ಸ್ಟೋರಿ

ಕೇರಳದ ಕೆಲವು ಮಹಿಳೆಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎನ್ನುವುದನ್ನೇ ತೆರೆಮೇಲೆ ತಂದಿದ್ದ ಸಿನಿಮಾ 'ದಿ ಕೇರಳ ಸ್ಟೋರಿ'. ಈ ಸಿನಿಮಾಗೆ ಕೇರಳದಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ಹೀಗಿದ್ದರೂ, ನಿರ್ದೇಶಕ ಸುದೀಪ್ತೊ ಸೇನ್ ಆಕ್ಷನ್ ಕಟ್ ಹೇಳಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹302 ಕೋಟಿ ಲೂಟಿ ಮಾಡಿತ್ತು. ಈ ಸಿನಿಮಾದ ಬಜೆಟ್ ಕೇವಲ 15 ರಿಂದ 20 ಕೋಟಿ ಎನ್ನಲಾಗಿದೆ.

ಸೈಯಾರಾ

ಬಾಲಿವುಡ್‌ನ ಮತ್ತೊಂದು ಸಿನಿಮಾ 'ಸೈಯಾರಾ' ಈ ವರ್ಷ ಬಾಕ್ಸಾಫೀಸ್ ಅನ್ನು ಲೂಟಿ ಮಾಡಿತ್ತು. ಭಗ್ನ ಪ್ರೇಮಿಗಳ ಕಥೆಯನ್ನು ತೆರೆ ಮೇಲೆ ತಂದಿದ್ದ ಸಿನಿಮಾದ ಹಾಡುಗಳಿಂದಲೇ ಸೂಪರ್‌ ಹಿಟ್ ಆಗಿತ್ತು. ₹45 ಕೋಟಿ ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹577 ಕೋಟಿ ಲೂಟಿ ಮಾಡಿತ್ತು.

ಲೋಕಾ ಚಾಪ್ಟರ್ 1

ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಠಿಸಿದ ಸಿನಿಮಾ 'ಲೋಕಾ'. ಕಲ್ಯಾಣಿ ಪ್ರಿಯದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಸಿನಿಮಾದ ಬಜೆಟ್ ₹30 ಕೋಟಿ. ಅದೇ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ₹251 ಕೋಟಿ.

ಮಂಜುಮ್ಮಲ್ ವಾಯ್ಸ್

ಪರ ಭಾಷೆಯ ಚಿತ್ರತಂಗ ಮಲಯಾಳಂ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ 'ಮಂಜುಮ್ಮಲ್ ಬಾಯ್ಸ್'. ₹20 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಬರೋಬ್ಬರಿ ₹242 ಕೋಟಿ.

ಕಾರ್ತಿಕೇಯಾ 2

ಸ್ಮಾಲ್ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕಾರ್ತಿಕೇಯಾ 2'. ನಿಖಿಲ್ ಸಿದ್ಧಾರ್ಥ್ ನಟನೆಯ ಈ ಸಿನಿಮಾ ತೆಲುಗು ಹಾಗೂ ಹಿಂದಿ ಬಾಕ್ಸಾಫೀಸ್ ಚಿಂದಿ ಕಲೆಕ್ಷನ್ ಮಾಡಿತ್ತು. ₹17 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ₹121 ಕೋಟಿ. ಹೀಗೆ ಇನ್ನೂ ಹಲವು ಸಿನಿಮಾಗಳು ಕಮ್ಮಿ ಬಜೆಟ್‌ನಲ್ಲಿ ನಿರ್ಮಾಣಗೊಂಡು ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ.

More from Filmibeat

English summary
Kantara to Su from So: Here is the list of small budget films made Box office records.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X