ಕಡಿಮೆ ಹಣ ಹೂಡಿ ಭರ್ಜರಿ ಲಾಭ ಗಳಿಸಿದ ಕನ್ನಡದ ಈ 5 ಸಿನಿಮಾಗಳ ಕಲೆಕ್ಷನ್ ಏಷ್ಟು?

ಕಳೆದ ಐದಾರು ವರ್ಷಗಳಿಂದ ಕನ್ನಡ ಚಿತ್ರರಂಗ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ. ಇನ್ನೇನು ಕನ್ನಡ ಚಿತ್ರರಂಗ ಅಷ್ಟೇ ಅಂದವರೆಲ್ಲ ಈ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಇನ್ನೇನು ಎಲ್ಲರೂ ಪ್ಯಾನ್ ಇಂಡಿಯಾ ಅನ್ನುವಾಗಲೇ ಒಂದೊಂದು ಸಿನಿಮಾಗಳು ನೆಲಕ್ಕಚ್ಚಿದವು. ಆ ಎಫೆಕ್ಟ್‌ನಿಂದ ಹೊರ ಬರುವುದಕ್ಕೆ ಇನ್ನೂ ಪರದಾಡುತ್ತಿದೆ. ಜನರ ನಿರೀಕ್ಷೆಗಳನ್ನು ಗಗನಕ್ಕೇರಿಸಿ ಈಡೇರಿಸದ ಪರಿಸ್ಥಿತಿ ನಿರ್ಮಾಣ ಆಗಿತ್ತು.

ಕನ್ನಡ ಚಿತ್ರರಂಗದಿಂದ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ ಕೊನೆಯ ಸಿನಿಮಾ 'ಕಾಂತಾರ'. ಅಲ್ಲಿಂದ ಹಲವು ಪ್ರಯತ್ನಗಳು ಆದರೂ, ಸೋಲಿನ ರುಚಿ ನೋಡಬೇಕಾಯ್ತು. ದೊಡ್ಡ ದೊಡ್ಡ ಬಜೆಟ್ ಹಾಕಿ ಸಿನಿಮಾ ಮಾಡಿದರೂ ಪ್ರಯೋಜನ ಆಗಲಿಲ್ಲ. ಸಿನಿಮಾಗಳು ಹೀನಾಯವಾಗಿ ಸೋಲುಂಡಿತು. ಮತ್ತೆ ಕನ್ನಡ ಚಿತ್ರರಂಗ ತೀವ್ರ ನಷ್ಟವನ್ನು ಅನುಭವಿಸಬೇಕಾಯ್ತು. ಗ್ಯಾಪ್‌ನಲ್ಲಿ ಸ್ಟಾರ್‌ಗಳ ಕೆಲವು ಸಿನಿಮಾಗಳು ಗೆದ್ದಿದ್ದು ಬಿಟ್ಟರೆ, ಬಾಕ್ಸಾಫೀಸ್‌ನಲ್ಲಿ ಕ್ರಾಂತಿಯೇನು ಆಗಲಿಲ್ಲ.

Kantara to Su from So Top 5 Small Budget Kannada Movies That Became Big Box Office Hits

ಈಗ ಸ್ಯಾಂಡಲ್‌ವುಡ್‌ನ ಸಿನಿಮಾ ಮಂದಿ ಒಂದು ನಿರ್ಧಾರಕ್ಕೆ ಬಂದಂತಿದೆ. ಒಂದು ಸಿನಿಮಾ ಎಲ್ಲಿ ಹಣವನ್ನು ಖರ್ಷು ಮಾಡಬೇಕು, ಎಷ್ಟು ಖರ್ಚು ಮಾಡಬೇಕು ಅನ್ನೋದು ಅರಿತುಕೊಂಡಂತೆ ಇದೆ. ಯಾಕಂದ್ರೆ, 'ಕೆಜಿಎಫ್'‌ ನಿಂದ ಹಿಡಿದು ಇತ್ತೀಚೆಗೆ ತೆರೆಕಂಡ 'ಸು ಫ್ರಮ್ ಸೋ'ವರೆಗೂ ಹಾಕಿದ ಬಂಡವಾಳಕ್ಕೆ ಶೇ.10 ರಿಂದ ಶೇ.200 ಪಟ್ಟು ದುಡಿವೆ. ಅಂತಹ ಟಾಪ್ 5 ಸಿನಿಮಾಗಳು ಹಾಗೂ ಅವುಗಳ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

'ಕೆಜಿಎಫ್'

'ಕೆಜಿಎಫ್' ನಿರ್ಮಾಣ ಆಗುತ್ತಿದ್ದ ಸಮಯದಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಬಿಗ್ ಬಜೆಟ್ ಸಿನಿಮಾನೇ ಆಗಿತ್ತು. ಹೊಂಬಾಳೆ ಫಿಲ್ಮ್ಸ್ ಸುಮಾರು ₹80 ಕೋಟಿ ವೆಚ್ಚದಲ್ಲಿ ಪಾರ್ಟ್ 1 ಅನ್ನು ನಿರ್ಮಾಣ ಮಾಡಿತ್ತು. 30 ಕೋಟಿ ಬಜೆಟ್‌ನಲ್ಲಿ ಹಾಕಿದರೇ ರಿಕವರಿ ಮಾಡೋದು ಕಷ್ಟ ಎನ್ನುವ ಸಮಯದಲ್ಲಿ 'ಕೆಜಿಎಫ್' ಬಜೆಟ್ ದೊಡ್ಡದೇ ಇತ್ತು. ಆದರೆ, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಮಾಡೋಕೆ ಈ ಬಜೆಟ್ ಕಮ್ಮಿನೇ. 80 ಕೋಟಿಯಲ್ಲಿ ಮಾಡಿದ ಸಿನಿಮಾ ಗಳಿಸಿದ್ದು ಬರೋಬ್ಬರಿ ₹250 ಕೋಟಿ. ಅಂದರೆ ಸಿನಿಮಾ ಬಜೆಟ್‌ಗಿಂತ ದುಪ್ಪಟ್ಟು ಅಲ್ಲ, ಮೂರು ಪಟ್ಟು ಹೆಚ್ಚು ಕಲೆಕ್ಷನ್ ಮಾಡಿತ್ತು.

'ಕೆಜಿಎಫ್ 2'

'ಕೆಜಿಎಫ್' ಅಂದುಕೊಂಡಂತೆ ದೊಡ್ಡ ಸಕ್ಸಸ್ ಆಗಿತ್ತು. ಹೀಗಾಗಿ 'ಕೆಜಿಎಫ್ 2'ಗೆ ಬಜೆಟ್ ಸ್ವಲ್ಪ ಏರಿಕೆ ಆಯ್ತು. ಆದರೆ, ಈ ಸಿನಿಮಾಗಿದ್ದ ಕ್ರೇಜ್‌ಗೆ ₹100 ಕೋಟಿ ಕೂಡ ಕಮ್ಮಿನೇ ಆಗಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಬರೋಬ್ಬರಿ ₹1200 ಕೋಟಿ. ಅಂದರೆ, ಬಜೆಟ್‌ಗಿಂತ 12 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಮಾಡಿತ್ತು. ಕನ್ನಡದ ಚಿತ್ರರಂಗಕ್ಕೆ ಅತೀ ದೊಡ್ಡ ಯಶಸ್ಸು ತಂದು ಕೊಟ್ಟಿತ್ತು.

Kantara to Su from So Top 5 Small Budget Kannada Movies That Became Big Box Office Hits

'777 ಚಾರ್ಲಿ'

'ಕೆಜಿಎಫ್' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದ್ದಂತೆ ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾ ಮಾಡಿದ್ದರು. ಈ ಸಿನಿಮಾವನ್ನು ₹20 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ್ದರು. ಶ್ವಾನ ಪ್ರಿಯರು ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದರಿಂದ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆಗಿತ್ತು. ದೇಶಾದ್ಯಂತ ಈ ಸಿನಿಮಾ ₹115 ಕೋಟಿ ಗಳಿಸಿತ್ತು. ಅಂದರೆ, ಸಿನಿಮಾದ ಬಜೆಟ್‌ಗಿಂತ 6 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿತ್ತು.

'ಕಾಂತಾರ'

'ಕೆಜಿಎಫ್ 2' ಬಳಿಕ ಹೊಂಬಾಳೆ ಫಿಲ್ಮ್ಸ್‌ಗೆ ದೊಡ್ಡ ಸಕ್ಸಸ್ ಕೊಟ್ಟ ಸಿನಿಮಾ 'ಕಾಂತಾರ'. ಇಷ್ಟು ದೊಡ್ಡ ಸಕ್ಸಸ್‌ ಸಿಗಬಹುದೆಂಬ ನಿರೀಕ್ಷೆನೇ ಇಲ್ಲದೆ ರಿಲೀಸ್ ಆಗಿದ್ದ ಸಿನಿಮಾ ₹400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ₹16 ಕೋಟಿಯಲ್ಲಿ ನಿರ್ಮಾಣ ಆಗಿದ್ದ ಸಿನಿಮಾ 25 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿತ್ತು. ಇದೇ ಜೋಷ್‌ನಲ್ಲಿ 'ಕಾಂತಾರ ಚಾಪ್ಟರ್ 1' ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಅನ್ನೋದು ನೋಡಬೇಕಿದೆ.

'ಸು ಫ್ರಮ್ ಸೋ'

ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ ಅಸಲಿ ಜಾಕ್‌ಪಾಟ್‌ ಅಂದರೆ ಇದೇನೆ. 'ಸು ಫ್ರಮ್ ಸೋ' ₹4 ಕೋಟಿಯಿಂದ ₹5 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದ್ದು, ಗಳಿಸಿದ್ದು ₹122 ಕೋಟಿ. ಈ ಸಿನಿಮಾದ ಬಜೆಟ್‌ಗಿಂತ 25 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿದೆ. ಸಿನಿಮಾದಲ್ಲಿ ಎಂಟರ್‌ಟೈನಿಂಗ್ ಕಂಟೆಂಟ್ ಇದ್ದರೆ, ವೀಕ್ಷಕರು ಸಿನಿಮಾ ನೋಡುತ್ತಾರೆ ಅನ್ನೋದನ್ನು ಈ ಸಿನಿಮಾ ಪ್ರೂವ್ ಮಾಡಿದೆ. ಕೆಜಿಎಫ್‌ಗೂ ಮುನ್ನ ಕೆಲವು ಕಮ್ಮಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಸಿನಿಮಾಗಳು ದಾಖಲೆ ಕಲೆಕ್ಷನ್ ಮಾಡಿವೆ. ಇಲ್ಲಿ ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ದಾಟಿದ ಸಿನಿಮಾಗಳನ್ನು ತೆಗೆದುಕೊಳ್ಳಲಾಗಿದೆ.

More from Filmibeat

English summary
Su from So to Kantara: These top 5 small budget Kannada movies proved that strong storytelling can beat big budget Films. Check out the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X