ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಅತೀ ಗಳಿಕೆ ಕಂಡ 4 ಸಿನಿಮಾಗಳು ಇವೇನೆ; ಎಲ್ಲವೂ ಹೊಂಬಾಳೆಯದ್ದೇ!
ಕಳೆದ ಎರಡೂವರೆ ವರ್ಷಗಳಿಂದ ಕನ್ನಡ ಚಿತ್ರರಂಗ ಸೊರಗಿ ಹೋಗಿತ್ತು. ಆಗೊಂದು ಈಗೊಂದು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದು ಬಿಟ್ಟರೆ, ಸೋತ ಸಿನಿಮಾಗಳೇ ಹೆಚ್ಚಿದ್ದವು. ಇನ್ನೊಂದು ಕಡೆ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡ ಸಿನಿಮಾಗಳ ಕಲೆಕ್ಷನ್‌ಗಿಂತ ಸೋಲಿನಿಂದ ಕಳೆದುಕೊಂಡಿದ್ದೇ ಹೆಚ್ಚಿತ್ತು. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗ ಇತ್ತು. ಆದ್ರೀಗ ದಿಢೀರನೇ ಮತ್ತೆ ದೇಶದ ಗಮನ ಸೆಳೆಯುತ್ತಿದೆ.
'ಕೆಜಿಎಫ್ ಚಾಪ್ಟರ್ 2' ಬಳಿಕ ಮತ್ತೊಂದು ಸಿನಿಮಾ ವಿಶ್ವದಾದ್ಯಂತ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಲಕ್ಷಣಗಳು ಕಾಣುತ್ತಿವೆ. ಕನ್ನಡ ಸಿನಿಮಾಗಳಿಗೆ ಮತ್ತೆ ದೊಡ್ಡ ಮಾರ್ಕೆಟ್ ಕ್ರಿಯೇಟ್ ಆಗಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರು ಸೇರಿದಂತೆ ಭಾರತೀಯರು 'ಕಾಂತಾರ ಚಾಪ್ಟರ್ 1'ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿವೆ.

2025 ಸೆಕೆಂಡ್ ಹಾಫ್‌ನಲ್ಲಿ ಕನ್ನಡ ಚಿತ್ರರಂಗದ ಅದೃಷ್ಟ ಖುಲಾಯಿಸಿದೆ. ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ದೇಶಾದ್ಯಂತ ದೊಡ್ಡ ಮಟ್ಟಕ್ಕೆ ಸಂಚಲನ ಸೃಷ್ಟಿಸುವಂತೆ ಮಾಡಿವೆ. ಇಲ್ಲಿ ಇನ್ನೊಂದು ವಿಶೇಷವಿದೆ. ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ಹೊರಟ ದಿನದಿಂದ ಇಲ್ಲಿವರೆಗೂ ಬಾಕ್ಸಾಫೀಸ್ ಕೊಳ್ಳೆ ಹೊಡೆದ ಟಾಪ್ 4 ಸಿನಿಮಾಗಳನ್ನೂ ಹೊಂಬಾಳೆಯೇ ನಿರ್ಮಾಣ ಮಾಡಿರೋದು ವಿಶೇಷ. ಆ ಸಿನಿಮಾಗಳು ಯಾವುವು? ಅವುಗಳ ಕಲೆಕ್ಷನ್ ಏನು? ಅನ್ನೋದನ್ನು ನೋಡುವುದಾರೇ,
'ಕೆಜಿಎಫ್ ಚಾಪ್ಟರ್ 2'
ಹೊಂಬಾಳೆ ಫಿಲ್ಮ್ಸ್ ತೆಗೆದುಕೊಂಡ ಅತೀ ದೊಡ್ಡ ನಿರ್ಧಾರಗಳಲ್ಲಿ 'ಕೆಜಿಎಫ್' ಸೀರಿಸ್ ಕೂಡ ಒಂದು. ಕನ್ನಡ ಸಿನಿಮಾವನ್ನು ಪ್ಯಾನ್ ಇಂಡಿಯಾ ರಿಲೀಸ್ ಮಾಡಿ ಗೆದ್ದ ಬಳಿಕ ಒಂದು ಕಾನ್ಫಿಡೆನ್ಸ್ ಬಂದಿತ್ತು. ಆ ಜೋಷ್‌ನಲ್ಲಿಯೇ ರಿಲೀಸ್ ಮಾಡಿದ್ದ ಸಿನಿಮಾ 'ಕೆಜಿಎಫ್ ಚಾಪ್ಟರ್ 2' ಇದು ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ₹1230 ಕೋಟಿ ಕಲೆಕ್ಷನ್ ಮಾಡಿತ್ತು. ಕನ್ನಡ ಚಿತ್ರರಂಗ ಇದೂವರೆಗೂ ನಿರ್ಮಾಣ ಮಾಡಿದ್ದ ಸಿನಿಮಾಗಳಲ್ಲಿ ಅತೀ ಹೆಚ್ಚು ಗಳಿಕೆ ಕಂಡಿರೋದು 'ಕೆಜಿಎಫ್ ಚಾಪ್ಟರ್ 2'. ಕರ್ನಾಟಕದ ವಿತರಕರ ಪ್ರಕಾರ ಈ ಸಿನಿಮಾ ಇಲ್ಲಿ ಗಳಿಸಿದ್ದು ಬರೋಬ್ಬರಿ ₹250 ಕೋಟಿ. ಇನ್ನೂ ದಾಖಲೆಯನ್ನು ಕನ್ನಡದ ಪ್ಯಾನ್ ಸಿನಿಮಾಗಳು ಮುರಿಯೋದಕ್ಕೆ ಸಾಧ್ಯವಾಗಿಲ್ಲ.
'ಕಾಂತಾರ ಚಾಪ್ಟರ್ 1'
ವಿಶ್ವದೆಲ್ಲಡೆ 'ಕಾಂತಾರ ಚಾಪ್ಟರ್ 1' ಜೋರಾಗಿ ಸದ್ದು ಮಾಡುತ್ತಿದೆ. ಕನ್ನಡದ ಮತ್ತೊಂದು ಸಿನಿಮಾ ವಿಶ್ವದ ಬಾಕ್ಸಾಫೀಸ್ ಅನ್ನೇ ಅಲ್ಲಾಡಿಸುತ್ತಿದೆ. ಸಿನಿಮಾ ಬಿಡುಗಡೆಯಾದ 9 ದಿನಗಳಲ್ಲಿ ವಿಶ್ವದಾದ್ಯಂತ ಈ ಸಿನಿಮಾ ₹540 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತೀ ಹೆಚ್ಚು ಗಳಿಕೆ ಕಂಡ ಎರಡನೇ ಸಿನಿಮಾ ಏನಿಸಿಕೊಂಡಿದೆ. ಇನ್ನೂ ಥಿಯೇಟರ್‌ನಲ್ಲಿ ರನ್ನಿಂಗ್ ಇರುವುದರಿಂದ 'ಕೆಜಿಎಫ್ ಚಾಪ್ಟರ್ 2' ದಾಖಲೆಯನ್ನು ಮುರಿಯುತ್ತಾ? ಅನ್ನೋದು ನೋಡಬೇಕಿದೆ.

'ಕಾಂತಾರ'
ಇನ್ನು ಮೂರನೇ ಸ್ಥಾನದಲ್ಲಿರೋದು 'ಕಾಂತಾರ'. 'ಕೆಜಿಎಫ್ 2' ಬಳಿಕ ಹೊಂಬಾಳೆ ಫಿಲ್ಮ್ಸ್ ಪ್ಯಾನ್ ಇಂಡಿಯಾ ರಿಲೀಸ್ ಮಾಡಿದ ಸಿನಿಮಾ 'ಕಾಂತಾರ'. ಆರಂಭದಲ್ಲಿ ಇದು ಕೇವಲ ಕರ್ನಾಟಕದಲ್ಲಷ್ಟೇ ರಿಲೀಸ್ ಆಗಿತ್ತು. ಆದರೆ, ಒಂದು ವಾರದ ಅಂತರದಲ್ಲಿ 'ಕಾಂತಾರ'ವನ್ನು ಬೇರೆ ಭಾಷೆಗಳಲ್ಲೂ ರಿಲೀಸ್ ಮಾಡಲಾಯ್ತು. ಇದು ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಸುಮಾರು ₹450 ಕೋಟಿ ಕಲೆಕ್ಷನ್ ಮಾಡಿತ್ತು.
'ಕೆಜಿಎಫ್ ಚಾಪ್ಟರ್ 1'
ವಿಶ್ವದಾದ್ಯಂತ ಅತೀ ಕಲೆಕ್ಷನ್ ಮಾಡಿದ ನಾಲ್ಕನೇ ಸಿನಿಮಾ 'ಕೆಜಿಎಫ್ ಚಾಪ್ಟರ್ 1'. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಿದು. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದ್ದ ಸಿನಿಮಾ ₹250 ಕೋಟಿ ಕಲೆಕ್ಷನ್ ಮಾಡಿತ್ತು. ಈ ನಾಲ್ಕು ಸಿನಿಮಾಗಳನ್ನೂ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದು, ಟಾಪ್ ನಾಲ್ಕೂ ಸ್ಥಾನಗಳಲ್ಲಿ ತಾನೇ ನಿರ್ಮಾಣ ಮಾಡಿದ ಸಿನಿಮಾಗಳಿವೆ.


Click it and Unblock the Notifications











