Mark Vs 45: ಅಭಿನಯ ಚಕ್ರವರ್ತಿ ಕಿಚ್ಚ? ಕರುನಾಡ ಚಕ್ರವರ್ತಿ ಶಿವಣ್ಣ? ರಿಯಲ್ ಸ್ಟಾರ್ ಉಪ್ಪಿ? ಗೆಲ್ಲೋದ್ಯಾರು?
ಸ್ಯಾಂಡಲ್‌ವುಡಗೆ ಡಿಸೆಂಬರ್ ತಿಂಗಳ ಲಕ್ಕಿ. ಪ್ರತಿ ವರ್ಷ ಕನ್ನಡ ಸಿನಿಮಗಳು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದ್ದು ಇದ ತಿಂಗಳಿನಲ್ಲಿಯೇ. ಈ ವರ್ಷ ಕೂಡ ಡಿಸೆಂಬರ್ ತಿಂಗಳಲ್ಲಿ ಸಿನಿಪ್ರಿಯರಿಗೆ ಮಸ್ತ್ ಮನರಂಜನೆ ಸಿಗೋದು ಗ್ಯಾರಂಟಿ. ತಿಂಗಳ ಆರಂಭದಿಂದಲೇ ಸಿನಿಮಗಳು ರಿಲೀಸ್‌ಗೆ ರೆಡಿಯಾಗಿ ನಿಂತಿವೆ. ಕನ್ನಡದ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿವೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ 'ಡೆವಿಲ್' ಸಿನಿಮಾ ಡಿಸೆಂಬರ್ 12ರಂದು ರಿಲೀಸ್ ಆಗುತ್ತಿದೆ. ಅದಾದ ಎರಡು ವಾರಗಳ ಅಂತರದಲ್ಲಿ ಮತ್ತೆ ಸಿನಿಮಾಗಳು ಬಡುಗಡೆಯಾಗಲಿವೆ. ಅದರಲ್ಲಿ ಒಂದು ಕಿಚ್ಚ ಸುದೀಪ್ ಸಿನಿಮಾ 'ಮಾರ್ಕ್'. ಇನ್ನೊಂದು ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ '45'. ಈ ಎರಡೂ ಸಿನಿಮಾಗಳು ಒಂದೇ ದಿನ ಕ್ರಿಸ್‌ಮಸ್ ಹಬ್ಬಕ್ಕೆ ರಿಲೀಸ್ ಆಗುತ್ತಿರೋದು ವಿಶೇಷ.

ಕಳೆದ ವರ್ಷ ಇದೇ ಹಬ್ಬಕ್ಕೆ ಕನ್ನಡ ಎರಡು ಸಿನಿಮಾಗಳು ಕ್ಲ್ಯಾಶ್ ಆಗಿದ್ದವು. ಆಗಲೂ ಕೂಡ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಮುಖಾಮುಖಿಯಾಗಿದ್ದರು. ಈ ಬಾರಿ ಮತ್ತೆ ಅವರೇ ಎದುರಾಗುತ್ತಿದ್ದಾರೆ. ಕಿಚ್ಚನ 'ಮಾರ್ಕ್' ಹಾಗೂ ಶಿವಣ್ಣ, ಉಪ್ಪಿ ಹಾಗೂ ರಾಜ್ ಬಿ ಶೆಟ್ಟಿಯ '45' ಬಾಕ್ಸಾಫೀಸ್‌ನಲ್ಲಿ ಸೆಣಸಾಡಲಿವೆ. ಹಾಗಿದ್ದರೆ, ಈ ಕ್ಲ್ಯಾಶ್‌ನಿಂದ ಯಾರಿಗೆ ನಷ್ಟ? ಯಾರಿಗೆ ಲಾಭ? ತಿಳಿಯುವುದಕ್ಕೆ ಮುಂದೆ ಓದಿ.
'ಮಾರ್ಕ್' Vs '45'
ಕರ್ನಾಟಕದಲ್ಲಿ ಇಬ್ಬರು ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಒಂದೇ ದಿನ ರಿಲೀಸ್ ಆದ ಉದಾಹರಣೆಗಳು ಇವೆ. ಎರಡೂ ಸಿನಿಮಾಗಳು ಗೆದ್ದಿದ್ದೂ ಇದೆ. ಎರಡೂ ಸಿನಿಮಾಗಳು ಸೋತಿದ್ದೂ ಇವೆ. ಎರಡರಲ್ಲಿ ಒಂದು ಗೆದ್ದು, ಇನ್ನೊಂದು ಸೋತ ಉದಾಹರಣೆ ಕೂಡ ಇದೆ. ಹೀಗಾಗಿ 'ಮಾರ್ಕ್' ಹಾಗೂ '45' ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿರೋದ್ರಿಂದ ಏನು ಬೇಕಾದರೂ ಆಗಬಹುದು. ಆದರೆ, ಎರಡೂ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುವುದರಿಂದ ಒಂದಿಷ್ಟು ಸಮಸ್ಯೆಗಳಂತೂ ಆಗೇ ಆಗುತ್ತೆ.
ಬೆಂಗಳೂರು ನಗರದಲ್ಲಿ ಥಿಯೇಟರ್ ಕ್ಲ್ಯಾಶ್
ಎರಡೂ ಬಿಗ್ ಬಜೆಟ್ ಸಿನಿಮಾಗಳಾಗಿರುವುದರಿಂದ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳ ಮೇಲೆ ಎರಡೂ ತಂಡಗಳು ಕಣ್ಣಿಟ್ಟಿರುತ್ತವೆ. ಅಪ್ಪಟ ಕನ್ನಡ ಸೆಂಟರ್‌ಗಳಿಗಾಗಿ ಎರಡೂ ಸಿನಿಮಾಗಳು ಫೈಟ್ ಮಾಡಬೇಕಾಗಿ ಬರಬಹುದು. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಪ್ರಮುಖ ಚಿತ್ರಮಂದಿರಗಳಾದ ಸಂತೋಷ್ ಹಾಗೂ ನರ್ತಕಿ ಚಿತ್ರಮಂದಿರಕ್ಕೆ ಕಾಂಪಿಟೇಷನ್ ಬೀಳುವ ಸಾಧ್ಯತೆಯಿದೆ. ಒಂದೇ ಕಾಂಪೌಂಡ್‌ನಲ್ಲಿ ಎರಡೂ ಸಿನಿಮಾಗಳು ಪ್ರದರ್ಶನ ಕಾಣಬಹುದು. ಇನ್ನು ವೀರೇಶ್ , ವೀರಭದ್ರೇಶ್ಬರ, ನವರಂಗ್, ಪೀಣ್ಯದ ಭಾರತಿ, ಮಾನಸ ಇವೆಲ್ಲ ಅಪ್ಪಟ ಕನ್ನಡ ಥಿಯೇಟರ್‌ಗಳು ಇಲ್ಲಿ ಯಾವ ಸಿನಿಮಾ ಪ್ರದರ್ಶನ ಮಾಡುತ್ತಾರೆ? ಅನ್ನೋದೇ ಪ್ರಶ್ನೆ.
ಮೈಸೂರಿನಲ್ಲೂ ಸಮಸ್ಯೆ
ಇನ್ನು ಮೈಸೂರಿನ ಎರಡು ಚಿತ್ರಮಂದಿರಗಳು ಸಂಗಮ್ ಹಾಗೂ ಗಾಯತ್ರಿ ಚಿತ್ರಮಂದಿರಗಳಿಗೆ ಸಾಮಾನ್ಯವಾಗಿ ಬೇಡಿಕೆ ಇರುತ್ತೆ. ಹೀಗಾಗಿ ಈ ಎರಡು ಚಿತ್ರಮಂದಿರಗಳಲ್ಲಿ ಯಾವ ಸಿನಿಮಾ ಹಾಕಬಹುದು? 'ಮಾರ್ಕ್' ಹಾಗೂ '45' ಎರಡೂ ತಂಡಗಳು ಎರಡೂ ಚಿತ್ರಮಂದಿರಗಳಿಗೆ ಬೇಡಿಕೆ ಇಟ್ಟರೇ ಸಮಸ್ಯೆ ಆಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಎರಡೂ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿರುವುದರಿಂದ ಒಳ್ಳೊಳ್ಳೆ ಚಿತ್ರಮಂದಿರಗಳು ಯಾರಿಗೆ ಸಿಗುತ್ತೆ ಅನ್ನೋದು ಮತ್ತೊಂದು ಕುತೂಹಲ.

ವಿತರಕರ ಮೇಲೆ ಸ್ಕ್ರೀನ್ ಹಂಚಿಕೆ
'ಮಾರ್ಕ್' ಹಾಗೂ '45' ಈ ಎರಡೂ ಸಿನಿಮಾಗಳನ್ನು ಯಾರು ವಿತರಣೆ ಮಾಡುತ್ತಾರೆ ಅನ್ನೋದರ ಮೇಲೆ ಯಾವ್ಯಾವ ಸೆಂಟರ್ ಯಾರಿಗೆ ಸಿಗುತ್ತೆ ಅನ್ನೋದು ಗೊತ್ತಾಗುತ್ತೆ. ಸ್ಯಾಂಡಲ್‌ವುಡ್‌ನ ಮೂಲಗಳ ಪ್ರಕಾರ, 'ಮಾರ್ಕ್' ಹಾಗೂ '45' ಎರಡೂ ಸಿನಿಮಾ ತಂಡಗಳೂ ಸುಮಾರು 250ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಿವೆ. 'ಮಾರ್ಕ್' ಸಿನಿಮಾವನ್ನು 'ಕೆಆರ್‌ಜಿ' ಹಾಗೂ '45' ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ವಿತರಣೆ ಮಾಡಬಹುದು ಸುದ್ದಿ ಹರಿದಾಡುತ್ತಿದೆ. ಇವರಿಬ್ಬರೂ ಅಖಾಡಕ್ಕೆ ಇಳಿದರೆ, ಥಿಯೇಟರ್ ವಿಚಾರದಲ್ಲಿ ಪೈಪೋಟಿ ಜೋರಾಗಿಯೇ ಇರುತ್ತೆ.
ಬಾಕ್ಸಾಫೀಸ್ ರೂಲ್ ಮಾಡೋದು ಯಾರು?
ಸಿಂಗಲ್ ಸ್ಕ್ರೀನ್‌ಗಳ ಜೊತೆಗೆ ಮಲ್ಟಿಪ್ಲೆಕ್ಸ್ ಕೂಡ ಮುಖ್ಯ ಪಾತ್ರವಹಿಸುತ್ತೆ. ಈ ಎರಡೂ ಸಿನಿಮಾಗಳಲ್ಲಿ ಯಾವ ಸಿನಿಮಾ ಚೆನ್ನಾಗಿರುತ್ತೋ ಅದಕ್ಕೆ ಮಲ್ಟಿಪ್ಲೆಕ್ಸ್ ವರವಾಗುತ್ತೆ. ಅದರೊಂದಿಗೆ ಅಭಿನಯ ಚಕ್ರವರ್ತಿ, ಕರುನಾಡ ಚಕ್ರವರ್ತಿ, ರಿಯಲ್ ಸ್ಟಾರ್ ಉಪ್ಪಿ, ರಾಜ್ ಬಿ ಶೆಟ್ಟಿ ಇವರಲ್ಲಿ ಯಾರನ್ನು ಜನರು ಮೆಚ್ಚುತ್ತಾರೆ ಅನ್ನೋದೇ ಸದ್ಯದ ಕೂತೂಹಲ. ಇನ್ನೂ ಎರಡೂ ಸಿನಿಮಾಗಳು ಜೋರಾಗಿ ಪ್ರಚಾರ ಶುರು ಮಾಡಿಲ್ಲ. ಒಮ್ಮೆ ಟ್ರೈಲರ್ ಬಂದ್ಮೇಲೆ ಒಂದು ಅಂದಾಜು ಸಿಗಬಹುದು.


Click it and Unblock the Notifications











