Mark Box Office Day 1: ಕಿಚ್ಚನ 'ಮಾರ್ಕ್' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ದೋಚಿದ್ದೆಷ್ಟು? 'ಮ್ಯಾಕ್ಸ್' ಮೀರಿಸಿತೇ?

2025 ಕ್ರಿಸ್‌ಮಸ್ ಹಬ್ಬಕ್ಕೆ ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ರಿಲೀಸ್ ಆಗಿದೆ. ಇದು ಪಕ್ಕಾ ಔಟ್ ಅಂಡ್ ಔಟ್ ಮಾಸ್ ಸಿನಿಮಾ ಹಾಡು ಹಾಗೂ ದೃಶ್ಯಗಳಿಂದಲೇ ಪ್ರೇಕ್ಷಕರನ್ನು ಸೆಳೆದಿತ್ತು. ಅದರಲ್ಲೂ 'ಮ್ಯಾಕ್ಸ್' ಸಿನಿಮಾ ನಿರ್ದೇಶಕರೇ ಮತ್ತೆ ಕಿಚ್ಚ ಸುದೀಪ್‌ಗೆ ಆಕ್ಷನ್ ಕಟ್ ಹೇಳಿದ್ದರಿಂದ ನಿರೀಕ್ಷೆಗಳು ಗರಿಗೆದರಿವೆ. ವರ್ಷದ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೊಂದು ಮೆಗಾ ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿದ್ದಾರೆ.

'ಮಾರ್ಕ್' ಸಿನಿಮಾದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಮಾಸ್ ಲುಕ್‌ನಲ್ಲಿ ಮತ್ತೆ ತನ್ನ ಅಭಿಮಾನಿಗಳನ್ನು ರಂಜಿಸುವುದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಸಿನಿಮಾ ಮೇಲೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಕಣ್ಣಿಟ್ಟಿದ್ದಾರೆ. ಕಿಚ್ಚ ಸುದೀಪ್‌ ಸಿನಿಮಾ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ಬಾಕ್ಸಾಫೀಸ್‌ನಲ್ಲಿ ಏನೆಲ್ಲ ದಾಖಲೆ ಬರೆಯುತ್ತೆ ಅನ್ನೋ ಕುತೂಹಲವಿದೆ.

Kichcha Sudeep Movie Mark day 1 box office collection report

ಕಳೆದ ವರ್ಷ ತೆರೆಕಂಡಿದ್ದ 'ಮ್ಯಾಕ್ಸ್' ಸಿನಿಮಾವನ್ನು ಈ ವರ್ಷದ 'ಮಾರ್ಕ್' ಹಿಂದಿಕ್ಕುತ್ತಾ? ಅನ್ನೋ ಲೆಕ್ಕಾಚಾರವೂ ನಡೀತಿದೆ. ಹಾಗಿದ್ದರೆ, 'ಮಾರ್ಕ್' ಸಿನಿಮಾ ಫಸ್ಟ್ ಡೇ ಗಳಿಸಿದ ಕಲೆಕ್ಷನ್ ಎಷ್ಟು? ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? 'ಮ್ಯಾಕ್ಸ್' ದಾಖಲೆಯನ್ನು 'ಮಾರ್ಕ್' ಸಿನಿಮಾ ಮೀರಿಸಿತೇ? ತಿಳಿಯುವುದಕ್ಕೆ ಮುಂದೆ ಓದಿ.

'ಮಾರ್ಕ್' ಫಸ್ಟ್‌ ಡೇ ಕಲೆಕ್ಷನ್ ಎಷ್ಟು?

ಕಿಚ್ಚ ಸುದೀಪ್ ಸಿನಿಮಾ 'ಮಾರ್ಕ್' ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದೆ. ಫ್ಯಾನ್ಸ್ ಶೋ ಸೇರಿ ಫಸ್ಟ್ ಡೇ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಗಳಿಕೆಯನ್ನು ಕಂಡಿದೆಯೆಂದು ವರದಿಗಳಾಗಿವೆ. ಬಾಕ್ಸಾಫೀಸ್ ಲೆಕ್ಕ ನೀಡುವ ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ ಮೊದಲ ದಿನ ₹6.25 ಕೋಟಿ ಕಲೆಕ್ಷನ್ ಮಾಡಿದೆಯೆಂದು ವರದಿಯಾಗಿದೆ. ಅದೇ ಕರ್ನಾಟಕದ ವಿತರಕರ ಪ್ರಕಾರ 'ಮಾರ್ಕ್' ಕಲೆಕ್ಷನ್ ₹9.30 ಕೋಟಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ.

'ಮಾರ್ಕ್' ಯಾವ್ಯಾವ ಥಿಯೇಟರ್‌ನಲ್ಲಿ ಎಷ್ಟು ಕಲೆಕ್ಷನ್?

'ಮಾರ್ಕ್' ಕರ್ನಾಟಕದಾದ್ಯಂತ ಸುಮಾರು 330ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತೆರೆಕಂಡಿದೆ. ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ ಸೇರಿದಂತೆ ಹಲವು ಭಾಗಗಳಲ್ಲಿ ಈ ಸಿನಿಮಾಗೆ ಸೂಪರ್ ರೆಸ್ಪಾನ್ಸ್‌ ಸಿಕ್ಕಿದೆ. ಕೆಲವು ಚಿತ್ರಮಂದಿರಗಳಲ್ಲಿ 'ಮಾರ್ಕ್' ಮ್ಯಾಕ್ಸಿಮಂ ಕಲೆಕ್ಷನ್ ಆಗಿವೆ. ಕ್ರಿಸ್‌ಮಸ್ ರಜೆಯ ಲಾಭವನ್ನು ಪಡೆದುಕೊಂಡಿದೆ. ಹಾಗಿದ್ದರೆ, ಪ್ರಮುಖ ಚಿತ್ರಮಂದಿರಗಳ ಕಲೆಕ್ಷನ್ ಹೀಗಿದೆ.

ಬೆಂಗಳೂರು
ಸಂತೋಷ್ ₹10 ಲಕ್ಷ
ಸಿದ್ದಲಿಂಗೇಶ್ವರ ₹13 ಲಕ್ಷ
ವೀರೇಶ ₹9 ಲಕ್ಷ
ಊರ್ವಶಿ ₹7.30 ಲಕ್ಷ (3 ಶೋ)

ಮಂಡ್ಯ
ಗುರುಶ್ರೀ ₹4.60 ಲಕ್ಷ

ಹಾಸನ
ಶ್ರೀ ಗುರು ₹5.30 ಲಕ್ಷ

ದಾವಣಗೆರೆ
ತ್ರಿಶೂಲ್-ತ್ರಿನೇತ್ರ- ₹13.80 ಲಕ್ಷ

ಬಳ್ಳಾರಿ
ನಟರಾಜ ಕಾಂಪ್ಲೆಕ್ಸ್ ₹11 ಲಕ್ಷ

ಶಿವಮೊಗ್ಗ
ಮಲ್ಲಿಕಾರ್ಜುನ ₹8 ಲಕ್ಷ

Kichcha Sudeep Movie Mark day 1 box office collection report

'ಮ್ಯಾಕ್ಸ್' ಮೀರಿಸಿತೇ 'ಮಾರ್ಕ್'

ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಮೊದಲ ದಿನ ಕಲೆಕ್ಷನ್ ರಿಪೋರ್ಟ್ ಹೊರ ಬಿದ್ದಿದೆ. ಕರ್ನಾಟಕದ ವಿತರಕರ ವಲಯದಿಂದ ಒಂದು ರಿಪೋರ್ಟ್, ಹಾಗೂ ಸ್ಯಾಕ್ನಿಲ್ಕ್‌ನಿಂದ ಒಂದು ರಿಪೋರ್ಟ್ ಇದೆ. ಹಾಗಿದ್ದರೂ, 'ಮ್ಯಾಕ್ಸ್' ದಾಖಲೆಯನ್ನು ಸ್ವಲ್ಪದಲ್ಲಿ ಹಿಂದಿಕ್ಕಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಮ್ಯಾಕ್ಸ್' ಮೊದಲ ದಿನ ₹8.7 ಕೋಟಿ ಕಲೆಕ್ಷನ್ ಮಾಡಿತ್ತು. ಅದೇ 'ಮಾರ್ಕ್' ₹9.30 ಕೋಟಿ ( ವಿತರಕರ ಪ್ರಕಾರ) ಕಲೆಕ್ಷನ್ ಆಗಿದೆ ಎನ್ನಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Kichcha Sudeep Movie Mark day 1 box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X